Volkswagen SUV ನೆಕ್ಸಾನ್, ಬ್ರೆಜ್ಜಾಗೆ ಪೈಪೋಟಿ ನೀಡಲು ವೋಕ್ಸ್‌ವ್ಯಾಗನ್ ರೆಡಿ, ಕೈಗೆಟುಕುವ ದರದ SUV ಶೀಘ್ರದಲ್ಲೇ ಬಿಡುಗಡೆ!

By Suvarna News  |  First Published Mar 2, 2022, 3:47 PM IST
  • ಭಾರತದಲ್ಲಿ ಸಬ್‌ಕಾಂಪಾಕ್ಟ್ SUV ಕಾರಿಗೆ ಹೆಚ್ಚಾಗುತ್ತಿದೆ ಬೇಡಿಕೆ
  • ನೆಕ್ಸಾನ್, ಕಿಯಾ ಸೊನೆಟ್ ಸೇರಿ ಹಲವು ಕಾರುಗಳಿಗೆ ಪೈಪೋಟಿ
  • ಭಾರತದಲ್ಲಿ ಬಿಡುಗಡೆಯಾಗಲಿದೆ ವೋಕ್ಸ್‌ವ್ಯಾಗನ್ SUV ಕಾರು
     

ನವದೆಹಲಿ(ಮಾ.02): ಭಾರತದಲ್ಲಿ ವೋಕ್ಸ್‌ವ್ಯಾಗನ್(Volkswagen) ಕಂಪನಿ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಪೋಲೋ(VW Polo) ಹಾಗೂ ವೆಂಟೋ(VW Vento) ಕಾರುಗಳನ್ನು ಸ್ಥಗಿತಗೊಳಿಸಿ, 2.0 ಸ್ಟಾರ್ಟರ್ಜಿ ಅಡಿಯಲ್ಲಿ ಹೊಚ್ಚ ಹೊಸ ಕಾರು(Cars) ಬಿಡಗಡೆ ಮಾಡುತ್ತಿದೆ. ಇದೀಗ ವೋಕ್ಸ್‌ವ್ಯಾಗನ್ ಇಂಡಿಯಾ ನೂತನ 4 ಮೀಟರ್ ಸಬ್‌ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡಲು ಮುಂದಾಗಿದೆ.

ಟಾಟಾ ನೆಕ್ಸಾನ್, ಮಾರುತಿ ಬ್ರಿಜ್ಜಾ, ಮಹೀಂದ್ರ XUV300, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್ ಸೇರಿದಂತೆ ಮಾರುಕಟ್ಟೆಯಲ್ಲಿರುವ ಅತ್ಯಂತ ಜನಪ್ರಿಯ SUV ಕಾರಿಗೆ ಪೈಪೋಟಿ ನೀಡಲು ವೋಕ್ಸ್‌ವ್ಯಾಗನ್ ಸಜ್ಜಾಗಿದೆ. ಸ್ಥಗಿತಗೊಳ್ಳುತ್ತಿರುವ ವೆಂಟೋ ಕಾರಿನ ಬದಲು ಪ್ರಿಮಿಯಂ ಸೆಡಾನ್ ವರ್ಚಸ್ ಕಾರನ್ನು ಬಿಡುಗಡೆ ಮಾಡುತ್ತಿದೆ. ಆದರೆ ಪೋಲೋ ಕಾರಿಗೆ ಪ್ರತಿಯಾಗಿ ಬೇರೆ ಕಾರಿನ ಕುರಿತು ವೋಕ್ಸ್‌ವ್ಯಾಗನ್ ಮೌನ ವಹಿಸಿತ್ತು. ಇದೀಗ ಪೋಲೋ ಬದಲು ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡುತ್ತಿದೆ.

Latest Videos

undefined

Volkswagen Cars ಭಾರತದ 12 ವರ್ಷಗಳ ಪಯಣಕ್ಕೆ ಫುಲ್‌ಸ್ಟಾಪ್, ಉತ್ಪಾದನೆ ನಿಲ್ಲಿಸುತ್ತಿದೆ VW ಪೋಲೋ ಹಾಗೂ ವೆಂಟೋ!

ಪೋಲೋ ರೀತಿಯಲ್ಲೇ ಕೈಗೆಟುಕವ ದರದಲ್ಲಿ ನೂತನ ಸಬ್ ಕಾಂಪಾಕ್ಟ್ SUV ಕಾರನ್ನು ಬಿಡುಗಡೆ ಮಾಡಲು ವೋಕ್ಸ್‌ವ್ಯಾಗನ್ ಮುಂದಾಗಿದೆ. ಇದಕ್ಕಾಗಿ ನೂತನ SUV ಕಾರನ್ನು ಭಾರತಕ್ಕೆ ಉತ್ಪಾದನೆ ಮಾಡಲಿದೆ. ಸ್ಥಳೀಯವಾಗಿ ಉತ್ಪಾದನೆ ಮಾಡುವ ಮೂಲಕ ವೆಚ್ಚವನ್ನು ಕಡಿಮೆ ಮಾಡಲು ಮುಂದಾಗಿದೆ.

ಸ್ಕೋಡಾ ಈಗಾಗಲೇ 4 ಮೀಟರ್ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದೇ ವೇಳೆ ವೋಕ್ಸ್‌ವ್ಯಾಗನ್ ಕೂಡ ಸಬ್‌ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡುತ್ತಿದೆ. ಈಗಾಗಲೇ ವೋಕ್ಸ್‌ವ್ಯಾಗನ್ ಟೈಗನ್ SUV ಕಾರನ್ನು ಬಿಡುಗಡೆ ಮಾಡಿದೆ. 20,000 ಬುಕಿಂಗ್ ಕಂಡಿರುವ ನೂತನ ಕಾರು ಭಾರತದ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡಲು ಮುಂದಾಗಿದೆ.

Volkswagen Tiguan Facelift:ಸೆಲ್ಟೋಸ್, ಕಂಪಾಸ್ ಪ್ರತಿಸ್ಪರ್ಧಿ, VW ಟೈಗೂನ್ SUV ಫೇಸ್‌ಲಿಫ್ಟ್ ಕಾರು ಬಿಡುಗಡೆ!

ಫೋಕ್ಸ್‌ವ್ಯಾಗನ್‌ ಪೋಲೋ 
ಆಟೋಮೊಬೈಲ್‌ ಮಾರುಕಟ್ಟೆನೆಲೆಕಚ್ಚಿರುವ ಸಂದರ್ಭದಲ್ಲಿಯೇ ಫೋಕ್ಸ್‌ವ್ಯಾಗನ್‌ ಪೋಲೋ ಭಾರತಕ್ಕೆ ಕಾಲಿಟ್ಟು 13 ವರ್ಷ ಉರುಳಿದೆ. ಹ್ಯಾಚ್‌ಬ್ಯಾಕ್‌ ಕಾರುಗಳ ಸರಣಿಯಲ್ಲಿ ಅತ್ಯುತ್ತಮ ಅಂತ ಅನೇಕರಿಗೆ ಮೆಚ್ಚುಗೆ ಗಳಿಸಿರುವ ಪೋಲೋ, ಫೋಕ್ಸ್‌ವ್ಯಾಗನ್‌ ಬ್ರಾಂಡ್‌ನಲ್ಲೇ ಅತ್ಯಂತ ಹೆಚ್ಚು ಮಾರಾಟ ಕಂಡ ಕಾರು ಕೂಡ ಹೌದು. 2009ರಲ್ಲಿ ತಯಾರಿಕೆ ಆರಂಭಿಸಿದ ಪೋಲೋ, ಬಹಳ ಕಾಲದ ತನಕ ಎರಡು ಏರ್‌ಬ್ಯಾಗ್‌ ಹೊಂದಿರುವ, ಎಬಿಎಸ್‌ ಇರುವ ಹ್ಯಾಚ್‌ ಕಾರು ಅನ್ನಿಸಿಕೊಂಡಿತ್ತು. ಭಾರದಲ್ಲಿ ವೋಕ್ಸ್‌ವ್ಯಾಗನ್ ಫೋಲೋ  ಹಾಗೂ ವೆಂಟೋ ಕಾರನ್ನು ಸ್ಥಗಿತಗೊಳಿಸಲು ವೋಕ್ಸ್‌ವ್ಯಾಗನ್ ನಿರ್ಧರಿಸಿದೆ.

ನಂತರದ ವರ್ಷಗಳಲ್ಲಿ ಪೋಲೋದ ಅನೇಕ ವರ್ಷನ್‌ಗಳು ಬಂದವು. ಎಂಟು ವಿವಿಧ ಇಂಜಿನ್‌ಗಳ ಕಾರುಗಳು ಮಾರುಕಟ್ಟೆಗೆ ಕಾಲಿಟ್ಟವು. ಸದ್ಯಕ್ಕೆ ನಾಲ್ಕು ವರ್ಷನ್‌ಗಳು ಗ್ರಾಹಕರಿಗೆ ಲಭ್ಯವಿವೆ. ಹತ್ತು ವರ್ಷದ ಪಯಣ ಮುಗಿಸಿದ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಸ್ಟೀಫನ್‌ ನ್ಯಾಪ್‌ ‘ಪೋಲೋ ಎಲ್ಲರ ಮೆಚ್ಚುಗೆ, ಪ್ರೀತಿ ಗಳಿಸಿದ ಕಾರಾಗಿತ್ತು. ಡಿಎಸ್‌ಜಿ ಗೇರ್‌ಬಾಕ್ಸ್‌ ಹೊಂದಿರುವ ಕಾರು ಇದು. ಹೆಣ್ಮಕ್ಕಳಿಗೆ ಇದು ಅಚ್ಚುಮೆಚ್ಚು ಕೂಡ. ಶೇಕಡಾ 31ರಷ್ಟುಮಹಿಳೆಯರು ಪೋಲೋ ಪರವಾಗಿದ್ದರು. 13 ವರ್ಷಗಳಲ್ಲಿ ಪೋಲೋ ಅನೇಕ ಪ್ರಶಸ್ತಿಗಳನ್ನೂ ಗಳಿಸಿದೆ. ಇದೀಗ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ.

ವೋಕ್ಸ್‌ವ್ಯಾಗನ್‌ ಕಾರು ಸಾಗಿಸುತ್ತಿದ್ದ ಹಡಗಿಗೆ ಬೆಂಕಿ
1,100 ಪೋರ್ಷೆ ಕಾರು ಗಳನ್ನು ಸೇರಿದಂತೆ 4000 ವಾಹನಗಳನ್ನು ಹೊತ್ತ ಹಡಗು ಉತ್ತರ ಅಟ್ಲಾಂಟಿಕ್‌ ಮಹಾಸಾಗರದಲ್ಲಿ ಪೋರ್ಚುಗಲ್‌ನ ಅಝೋರಸ್‌ ಕರಾವಳಿ ತೀರದಲ್ಲಿ ಬುಧವಾರದಿಂದಲೂ ಹೊತ್ತಿ ಉರಿಯುತ್ತಿದೆ. ಹಡಗಿನಲ್ಲಿದ್ದ 22 ಸಿಬ್ಬಂದಿಯನ್ನು ಹೆಲಿಕಾಪ್ಟರ್‌ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಫೆಲಿಸಿಟಿ ಏಸ್‌ ಎಂಬ ಹಡಗು ಫೆ. 10 ರಂದು ಜರ್ಮನಿಯ ಎಂಡೆನ್‌ನಿಂದ ಹೊರಟು ಬುಧವಾರ ಅಮೆರಿಕದ ರೋಡ್‌ ದ್ವೀಪದ ಡೇವಿಸ್‌ವಿಲ್ಲೆಗೆ ಆಗಮಿಸಬೇಕಾಗಿತ್ತು. ಆದರೆ ಪೋರ್ಚುಗಲ್‌ನ ಟೆರ್ಸೀರಿಯಾ ದ್ವೀಪದ ಬಳಿ ಬೆಂಕಿ ಅನಾಹುತ ಸಂಭವಿಸಿತು. ಈ ಹಡಗಿನಲ್ಲಿ ವೋಕ್ಸ್‌ವ್ಯಾಗನ್‌, 189 ಬೆಂಟ್ಲೀ ಹಾಗೂ 1100 ಪೋರ್ಷೆ ಕಾರುಗಳಿದ್ದು, ಈಗಲೂ ಹೊತ್ತಿ ಉರಿಯುತ್ತಿವೆ ಎಂದು ಆಟೋಮೋಟಿವ್‌ ವೆಬ್‌ಸೈಟ್‌ ತಿಳಿಸಿವೆ

click me!