
ನವದೆಹಲಿ (ಮೇ 07) ಮದ್ಯ ಪ್ರಿಯರಿಗೆ ಮತ್ತೊಂದು ಶುಭ ಸುದ್ದಿ ಇದೆ. ಮದ್ಯ ಮಾರಾಟಕ್ಕೆ ಮುಕ್ತ ಅವಕಾಶ ಸಿಕ್ಕ ನಂತರ ಈಗ ಮತ್ತೊಂದು ಸುದ್ದಿ ಬಂದಿದೆ. ಫುಡ್ ಡಿಲೆವರಿ ಮಾಡುತ್ತಿದ್ದ ಝೋಮ್ಯಾಟೋ ಈಗ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲಿದೆ. ಆದರೆ ಇದಕ್ಕೆ ಸರ್ಕಾರದ ಅನುಮತಿ ಸಿಗಬೇಕಿದೆ.
ಕಂಪನಿ ಲಾಕ್ ಡೌನ್ ಹಿನ್ನೆಲೆಯಲ್ಲಿ ದಿನಸಿ ಪದಾರ್ಥಗಳನ್ನು ಗ್ರಾಹಕರಿಗೆ ಪೂರೈಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮದ್ಯಕ್ಕೆ ಭರಿ ಡಿಮ್ಯಾಂಡ್ ಇರುವುದರಿಂದ ಮದ್ಯವನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸಲು ನಿರ್ಧರಿಸಿದೆ.
ಅಪ್ಪನ ಜತೆ ಕುಳಿತು ಎಣ್ಣೆ ಹೊಡೆಯುವ ಬೆಂಗಳೂರಿನ ಮಗಳು
ಕೊರೋನಾ ಸೋಂಕು ಕಡಿಮೆ ಹೊಂದಿರುವ ಪ್ರದೇಶಗಳಲ್ಲಿ ಮದ್ಯ ವಿತರಿಸಲು ಝೊಮ್ಯಾಟೊ ಪ್ಲ್ಯಾನ್ ಮಾಡಿದ್ದು, ಈ ಕುರಿತು ಝೊಮ್ಯಾಟೊ ಸಿಇಒ ಮೋಹಿತ್ ಗುಪ್ತಾ ಅವರು ಐಎಸ್‍ಡಬ್ಲ್ಯೂಎಐಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಛತ್ತೀಸ್ ಘಡವನ್ನು ಕಂಪನಿ ಮೊದಲ ಟಾರ್ಗೆಟ್ ಮಾಡಿಕೊಂಡಿದೆ.
ಯಾವ ಯಾವ ಮಹಾನಗರದಲ್ಲಿ ಮದ್ಯ ಡಿಲೆವರಿ ಮಾಡಬಹುದು ಎಂಬುದನ್ನು ಸರ್ಕಾರ ತೀರ್ಮಾನ ಮಾಡಬೇಕಿದೆ.ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಬಹುದೆ? ಇಲ್ಲವೇ? ಎಂಬ ಬಗ್ಗೆ ಕಾನೂನಿನಲ್ಲಿ ಯಾವ ಸ್ಪಷ್ಟ ನಿರ್ದೇಶನ ಇಲ್ಲ
ಕೇರಳದಲ್ಲಿ ಮನೆ ಬಾಗಿಲಿಗೆ ಮದ್ಯ, ಪಶ್ಚಿಮ ಬಂಗಾಳದಲ್ಲಿ ಮದ್ಯ ಎಂದೂ ಚರ್ಚೆಗಳಾಗಿದ್ದವು. ಮದ್ಯ ವ್ಯಸನಿಗಳಿಗೆ ವೈದ್ಯರ ಸಲಹೆ ಮೇರೆಗೆ ಮದ್ಯ ನೀಡಬೇಕು ಎಂದು ಹೇಳಲಾಗಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.