ಮಾನವೀಯತೆ ಮಾತನಾಡಿದ್ದ Zomato: ಮನುಷ್ಯರನ್ನೇ ಹೊರ ದಬ್ಬಿದ್ದೇಕೋ?

By Web Desk  |  First Published Sep 8, 2019, 12:35 PM IST

541 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ Zomato| ಉದ್ಯೋಗ ಕಡಿತಗೊಳಿಸುವ ಹಿಂದಿನ ಕಾರಣವೂ ಬಹಿರಂಗ| ಉದ್ಯೋಗಿಗಳಿಗೆ ಸೌಲಭ್ಯವ್ನನೂ ಕಲ್ಪಿಸಿದ ಸಂಸ್ಥೆ


ನವದೆಹಲಿ[ಸೆ.08]: ಆನ್ ಲೈನ್ ಫುಡ್ ಡೆಲಿವರಿ ಸಂಸ್ಥೆ Zomato ಶನಿವಾರದಂದು ಮಹತ್ತರ ನಿರ್ಧಾರವನ್ನು ಪ್ರಕಟಿಸಿದ್ದು, ತನ್ನ 541 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಗ್ರಾಹಕ, ವ್ಯಾಪಾರಿ ಹಾಗೂ ಡೆಲಿವರಿ ಸಪೋರ್ಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆಗೆದು ಹಾಕಲಾಗಿದೆ. ಕಂಪೆನಿಯ ಈ ನಿರ್ಧಾರ Zomatoನಲ್ಲಿ ಕೆಲಸ ಮಾಡಿಕೊಂಡಿದ್ದ ಶೇ. 10ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬಿದ್ದಿದೆ.

Zomato ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ತಂತ್ರಜ್ಞಾನ ವಿಭಾಗದಲ್ಲಿ ತಂದ ಬದಲಾವಣೆಯೇ ಕಾರಣ ಎನ್ನಲಾಗಿದೆ. ಕಂಪೆನಿ ನೀಡಿರುವ ಪ್ರಕಟಣೆ ಅನ್ವಯ ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ಇದು ಗ್ರಾಹಕರ ದೂರು, ಸಮಸ್ಯೆ, ಗೊಂದಲ ಮೊದಲಾದವುಗಳನ್ನ ಅತ್ಯಂತ ಸುಲಭವಾಗಿ ಪರಿಹರಿಸುತ್ತದೆ ಎನ್ನಲಾಗಿದೆ.

Tap to resize

Latest Videos

'ಇಂತಹ ನಿರ್ಧಾರ ತೆಗೆದುಕೊಳ್ಳಲು ನಮಗೆ ತುಂಬಾ ಕಷ್ಟವಾಯ್ತು. ಆದರೆ ಈ ಉದ್ಯೋಗಿಗಳಿಗೆ 2 ರಿಂದ ನಾಲ್ಕು ತಿಂದಳ ವೇತನ, 2020ರವರೆಗೆ ಈ ಉದ್ಯೋಗಿಗಳ ಕುಟುಂಬಸ್ಥರಿಗೆ ವಿಮೆ ಮೊದಲಾದ ಸೌಲಭ್ಯಗಳನ್ನು ನೀಡುತ್ತೇವೆ ಎಂದು Zomato ತಿಳಿಸಿದೆ. 

click me!