ಚಿನ್ನ ನೀ ಅದೆಷ್ಟು ಚೆನ್ನ: ಚಿನ್ನದಂತ ಸುದ್ದಿ ಓದೊಮ್ಮೆ ಜಾಣ!

Published : Sep 07, 2019, 03:35 PM ISTUpdated : Sep 07, 2019, 03:50 PM IST
ಚಿನ್ನ ನೀ ಅದೆಷ್ಟು ಚೆನ್ನ: ಚಿನ್ನದಂತ ಸುದ್ದಿ ಓದೊಮ್ಮೆ ಜಾಣ!

ಸಾರಾಂಶ

ಏರುತ್ತಿರುವ ಚಿನ್ನದ ಬೆಲೆಗೆ ಯಾವಾಗ ಬೀಳುತ್ತೆ ಬ್ರೇಕ್?| ಚಿನ್ನದ ಬೆಲೆ ಏರಿಕೆ ನಡುವೆ ಸಂತಸದ ಸುದ್ದಿ| ಭಾರತದ ಮೀಸಲು ಚಿನ್ನದ ಪ್ರಮಾಣದಲ್ಲಿ ಹೆಚ್ಚಳ | ಭಾರತದಲ್ಲಿ 618.2 ಮೆಟ್ರಿಕ್ ಟನ್ ಚಿನ್ನದ ಸಂಗ್ರಹ| ವಿಶ್ವ ಚಿನ್ನದ ಮಂಡಳಿ  ಅಂಕಿ ಅಂಶ ಬಿಡುಗಡೆ|  ಚಿನ್ನದ ಸಂಗ್ರಹದಲ್ಲಿ ಭಾರತಕ್ಕೆ ಇಡೀ ವಿಶ್ವದಲ್ಲೇ 9ನೇ ಸ್ಥಾನ| 

ನವದೆಹಲಿ(ಸೆ.07): ಆರ್ಥಿಕ ಕುಸಿತ ಮತ್ತು ಚಿನ್ನದ  ಬೆಲೆ ಆಕಾಶ ಮುಟ್ಟಿರುವ ನಡುವೆಯೇ, ಭಾರತದ ಮೀಸಲು ಚಿನ್ನದ ಪ್ರಮಾಣ ಹೆಚ್ಚಾಗಿರುವ ಸಂತಸದ ಸುದ್ದಿ ಹೊರ ಬಿದ್ದಿದೆ.

ಈ ಕುರಿತು ವಿಶ್ವ ಚಿನ್ನದ ಮಂಡಳಿ  ಅಂಕಿ ಅಂಶ ಬಿಡುಗಡೆಗೊಳಿಸಿದ್ದು, ಭಾರತದಲ್ಲಿ 618.2 ಮೆಟ್ರಿಕ್ ಟನ್ ಚಿನ್ನದ ಸಂಗ್ರಹವಿದೆ ಎಂದು ವರದಿ ಮಾಡಿದೆ. 

ಅಲ್ಲದೇ ಚಿನ್ನದ ಸಂಗ್ರಹದಲ್ಲಿ ಭಾರತ ಇಡೀ ವಿಶ್ವದಲ್ಲೇ 9ನೇ ಸ್ಥಾನದಲ್ಲಿದ್ದು, ಕಳೆದೆರಡು ದಶಕಗಳಲ್ಲಿ ಭಾರತದ ಚಿನ್ನದ ಮೀಸಲು ದ್ವಿಗುಣಗೊಂಡಿದೆ ಎಂದು ವರದಿ ತಿಳಿಸಿದೆ. 

2000ರ ಮೊದಲ ತ್ರೈಮಾಸಿಕದಲ್ಲಿ 357.8 ಮೆಟ್ರಿಕ್ ಟನ್ ಇದ್ದ ಭಾರತದ ಚಿನ್ನದ ಮೀಸಲು, ಪ್ರಸಕ್ತ 618.2 ಮೆಟ್ರಿಕ್ ಟನ್’ಗೆ ಹೆಚ್ಚಳವಾಗಿದೆ.

ಇನ್ನು ಅಮೆರಿಕ 8,134 ಮೆಟ್ರಿಕ್ ಟನ್ ಚಿನ್ನದ ಸಂಗ್ರಹದೊಂದಿಗೆ ಅಗ್ರಸ್ಥಾನದಲ್ಲಿದ್ದು 3,367 ಮೆಟ್ರಿಕ್ ಟನ್ ಮೀಸಲು ಚಿನ್ನ ಹೊಂದಿರುವ ಜರ್ಮನಿ ಎರಡನೇ ಸ್ಥಾನದಲ್ಲಿದೆ.

ಸದ್ಯ ಭಾರತ ಮೀಸಲು ಚಿನ್ನದ ಪ್ರಮಾಣದಲ್ಲಿ ನೆದರ್‌’ಲ್ಯಾಂಡ್ ರಾಷ್ಟ್ರವನ್ನು ಹಿಂದಿಕ್ಕಿದ್ದು, ಒಟ್ಟಾರೆ ಮೀಸಲು ಚಿನ್ನದ ಅಗ್ರ 100 ರಾಷ್ಟ್ರಗಳ ಪಟ್ಟಿಗೆ  ಸೇರಿದೆ.

ಮ್ಯೂಚುಯಲ್ ಫಂಡ್, ರಿಯಲ್ ಎಸ್ಟೇಟ್, ನಿಶ್ಚಿತ ಠೇವಣಿಗಿಂತ ಚಿನ್ನದ ಹೂಡಿಕೆ ಇದೀಗ ಉತ್ತಮ ಆಯ್ಕೆಯಾಗಿ ಹೊರಹೊಮ್ಮುತ್ತಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನದ ಬೆಲೆ ಇಳಿಮುಖವಾಗುವುದಿಲ್ಲ ಎಂಬುದು ಸಾಮಾನ್ಯ ನಂಬಿಕೆ. 

ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅದಾಗ್ಯೂ ಆರ್ಥಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಚಿನ್ನ ಅತಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!