
ಮುಂಬೈ (ಮೇ.21): ಭಾರತದ ಸ್ಟಾರ್ಟ್‌ಅಪ್ ಜಗತ್ತಿನಲ್ಲಿ ಸಾಕಷ್ಟು ಕಂಪನಿಗಳು ಹುಟ್ಟಿಕೊಂಡಿದ್ದರೂ ಯಶಸ್ಸಿನ ಮುಖ ಕಂಡಿರುವ ಕಂಪನಿಗಳು ಬೆರಳಣಿಕೆಯಷ್ಟು ಮಾತ್ರ. ಅದರಲ್ಲಿ ಫುಡ್ ಡೆಲಿವರಿ ಅಪ್ಲಿಕೇಶನ್ ಜೊಮಾಟೋ ಕೂಡ ಒಂದು. 16 ವರ್ಷಗಳ ಹಿಂದೆ ಅಂದರೆ, 2008ರಲ್ಲಿ ಪುಟ್ಟ ಕಂಪನಿಯಾಗಿ ಆರಂಭಗೊಂಡಿದ್ದ Zomato ಇಂದು ದೇಶದ ಅತ್ಯಂತ ಪ್ರಮುಖ ಫುಡ್ ಅಗ್ರಿಗೇಟರ್ ಅಪ್ಲಿಕೇಶನ್ ಎನಿಸಿಕೊಂಡಿದೆ. ಸ್ವಿಗ್ಗಿಯ ದೊಡ್ಡ ಮಟ್ಟದ ಪ್ರತಿರೋಧದ ನಡುವೆಯೂ ವರ್ಷದಿಂದ ವರ್ಷಕ್ಕೆ Zomato ಪ್ರಗತಿ ಪಥದಲ್ಲಿ ಸಾಗುತ್ತಿದೆ. ಇದಕ್ಕೆ ಮೂಲ ಕಾರಣ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ದೀಪೇಂದರ್ ಗೋಯೆಲ್, ಇತ್ತೀಚೆಗೆ Zomato ದ ಆರಂಭಿಕ ದಿನಗಳ ಬಗ್ಗೆ ಅವರು ಮಾತನಾಡಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಆಯೋಜನೆ ಮಾಡಿದ್ದ ವಿಶೇಷ ಸಂಪರ್ಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೊಟ್ಟಮೊದಲ ಬಾರಿಗೆ ನಾನು Zomato ಸ್ಟಾರ್ಟ್‌ಅಪ್ ಅನ್ನು ಆರಂಭ ಮಾಡ್ತೀನಿ ಎಂದಾಗ, ನಮ್ಮ ತಂದೆಯೇ ಅನುಮಾನಪಟ್ಟಿದ್ರು ಎಂದು ಹೇಳಿದ್ದಾರೆ.
ದೀಪೇಂದರ್ ಗೋಯೆಲ್ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಈ ಕ್ಲಿಪ್‌ನಲ್ಲಿ 16 ವರ್ಷಗಳ ಹಿಂದೆ Zomato ಆರಂಭ ಮಾಡಿದ ದಿನಗಳನ್ನು ನೆನೆಸಿಕೊಂಡಿದ್ದಾರೆ. ತಮ್ಮ ಸ್ಟಾರ್ಟ್‌ಅಪ್ ಐಡಿಯಾದ ಬಗ್ಗೆ ತಂದೆ ಯಾವ ರೀತಿ ಅನುಮಾನ ಪಟ್ಟಿದ್ದರು ಎಂದೂ ತಿಳಿಸಿದ್ದಾರೆ. 'Zomato ಆರಂಭ ಮಾಡ್ತೀನಿ ಎಂದು ನಾನು ತಂದೆಗೆ ತಿಳಿಸಿದಾಗ, ಅವರು ಹೇಳಿದ್ದು ಒಂದೇ ಮಾತು, 'ಜಾನ್ತಾ ಹೇ ತೇರಾ ಬಾಪ್ ಕೌನ್ ಹೇ?' (ನಿನಗೆ ಗೊತ್ತಾ ನಿನ್ನಪ್ಪ ಯಾರೂ ಅಂತಾ) ಇದರರ್ಥ, ಸ್ಟಾರ್ಟ್‌ಅಪ್ ಸ್ಟಾರ್ಟ್ ಮಾಡೋದು ಬೇಡ ಅನ್ನೋದಾಗಿತ್ತು. ಪಂಜಾಬ್‌ನ ಪುಟ್ಟ ಹಳ್ಳಿಯಿಂದ ಬಂದವರಾಗಿದ್ದ ಕಾರಣಕ್ಕೆ ಇದು ಅವರ ಮೈಂಡ್‌ಸಟ್ ಕೂಡ ಆಗಿತ್ತು ಎಂದು ಗೋಯೆಲ್ ಹೇಳಿದ್ದಾರೆ.
2008ರಲ್ಲಿ ನಾನು ಆರಂಭ ಮಾಡ್ತಾಗ ತಂದೆ ಈ ಮಾತನ್ನ ಹೇಳಿದ್ರು. ಯಾಕೆಂದ್ರ ನಮ್ಮದು ಮಧ್ಯಮವರ್ಗದ ಕುಟುಂಬ. ನಾವು ಇಂಥ ಸಾಹಸಕ್ಕೆ ಕೈಹಾಕಬಾರದು ಅನ್ನೋದು ಅವರ ಯೋಚನೆಯಾಗಿತ್ತು. ಆದರೆ, ಈ ಸರ್ಕಾರ ಹಾಗೂ ಸರ್ಕಾರದ ಕೆಲವು ಯೋಜನೆಗಳು ನನ್ನಂಥ ಚಿಕ್ಕ ಹಳ್ಳಿಯ ಹುಡುಗನಿಂದ Zomatoದಂಥ ಕಂಪನಿ ಆರಂಭಿಸಿ, ಇಂದು ಲಕ್ಷಗಟ್ಟಲೆ ಮಂದಿಗೆ ಉದ್ಯೋಗ ನೀಡುವಂಥ ಸ್ಥಾನದಲ್ಲಿ ಇರಿಸಿದೆ ಎಂದು ಹೇಳಿದರು.
ಗರ್ಭಿಣಿ ಪತ್ನಿಗಾಗಿ ವೆಜ್ ಆಹಾರ ಆರ್ಡರ್ ಮಾಡಿದ ವ್ಯಕ್ತಿ, ನಾನ್‌ವೆಜ್ ಥಾಲಿ ಡೆಲಿವರಿ ಮಾಡಿದ ಝೊಮೇಟೋ!
ಮೇ 20 ರಂದು ಸಚಿವ ಹರ್ದೀಪ್ ಸಿಂಗ್ ಪುರಿಯವರ ನಿವಾಸದಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದರಲ್ಲಿ ದೇಶದ ಸಂಶೋಧಕರು, ಬುದ್ಧಿಜೀವಿಗಳು, ಸ್ಟಾರ್ಟ್‌ಅಪ್‌ಗಳ ನಾಯಕರು ಹಾಗೂ ಐಟಿ ವೃತ್ತಿಪರರ ಭಾಗವಹಿಸಿದ್ದರು. ದೀಪಿಂದರ್ ಗೋಯಲ್ ಈ ವರ್ಷ ಮಾಡೆಲ್ ಗ್ರೀಸಿಯಾ ಮುನೋಜ್ ಅವರನ್ನು ವಿವಾಹವಾದರು ಮತ್ತು ಶಾರ್ಕ್ ಟ್ಯಾಂಕ್ ಇಂಡಿಯಾದ ಮೂರನೇ ಸೀಸನ್‌ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು. ಅವರ ಕಥೆಗಳು ಮತ್ತು ಸಾಧನೆಗಳು ಉದ್ಯಮಶೀಲ ಸಮುದಾಯದಲ್ಲಿ ಅನೇಕರಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ.
ರೀಫಂಡ್ ಮಾಡಿದ್ರೆ ಪಾಪ ಹೋಗುತ್ತಾ? ಪನೀರ್ ಬಿರಿಯಾನಿಯಲ್ಲಿ ಚಿಕನ್ ಪೀಸ್ ಕಳುಹಿಸಿದ ಜೊಮ್ಯಾಟೋಗೆ ತರಾಟೆ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.