'ಬಾಡಿಗೆ ಮನೆಯೇ ಬೆಸ್ಟ್‌..' ಎಂದಿದ್ದ ನಿಖಿಲ್‌ ಕಾಮತ್‌ ಯು-ಟರ್ನ್‌, ಸ್ವಂತ ಮನೆ ಖರೀದಿ ಮಾಡಿದ ಜೀರೋದಾ ಮಾಲೀಕ

By Santosh Naik  |  First Published Oct 21, 2024, 1:06 PM IST

ಸ್ವಂತ ಮನೆ ಖರೀದಿ ಮಾಡೋದಕ್ಕಿಂತ ಬಾಡಿಗೆ ಮನೆಯಲ್ಲಿರೋದೇ ಬೆಸ್ಟ್‌ ಎಂದಿದ್ದ ಜೀರೋಧಾ ಬಿಲಿಯನೇರ್‌ ನಿಖಿಲ್‌ ಕಾಮತ್‌ ಕೊನೆಗೂ ಯು ಟರ್ನ್‌ ಹೊಡೆದಿದ್ದಾರೆ. ಸ್ವಂತ ಮನೆ ಖರೀದಿ ಮಾಡಿರುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.


ಬೆಂಗಳೂರು (ಅ.21): ಸ್ವಂತ ಮನೆ ಖರೀದಿ ಮಾಡೋದಕ್ಕಿಂತ ಬಾಡಿಗೆ ಮನೆಯಲ್ಲಿರೋದೆ ಬೆಸ್ಟ್‌ ಎಂದಿದ್ದ ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಕೊನೆಗೂ ತಮ್ಮ ಯೋಚನೆಯಿಂದ ಹಿಂದೆ ಸರಿದಿದ್ದಾರೆ. ತಮ್ಮ ಹಿಂದಿನ ಮಾತಿನಿಂದ ಅವರು ಯುಟರ್ನ್‌ ಹೊಡೆದಿದ್ದಾರೆ. ತಾವು ಹೊಸ ಮನೆಯನ್ನು ಖರೀದಿ ಮಾಡಿರುವುದಾಗಿ ನಿಖಿಲ್‌ ಕಾಮತ್‌ ಪಾಡ್‌ಕಾಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. "WTF is with Nikhil Kamath" ಎಂಬ ಅವರ ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ, ಕಾಮತ್ ಅವರು ಪ್ರೆಸ್ಟೀಜ್ ಗ್ರೂಪ್‌ನ ಅಧ್ಯಕ್ಷ ಮತ್ತು MD ಇರ್ಫಾನ್ ರಜಾಕ್, ಬ್ರಿಗೇಡ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ನಿರೂಪಾ ಶಂಕರ್ ಮತ್ತು WeWork ಇಂಡಿಯಾದ CEO ಕರಣ್ ವಿರ್ವಾನಿ ಅವರೊಂದಿಗೆ ಸ್ವಂತ ಮನೆ ಖರೀದಿ ಹಾಗೂ ಬಾಡಿಗೆ ಮನೆಯ ಕುರಿತಾದ ಚರ್ಚೆಯನ್ನು ಮತ್ತೊಮ್ಮೆ ಮಾಡಿದರು.

ಬಾಡಿಗೆ ಮನೆಯಲ್ಲಿರುವ ಬಗ್ಗೆ ಒಲವು ಹೊಂದಿರುವ 37 ವರ್ಷದ ನಿಖಿಲ್‌ ಕಾಮತ್‌,ಬಾಡಿಗೆ ಮನೆಯಿಂದ ಆಗಬಹುದಾದ ಒಂದು ಅನಾನುಕೂಲತೆಯೊಂದನ್ನೂ ಕೂಡ ಹಂಚಿಕೊಂಡಿದ್ದಾರೆ. 'ಬಾಡಿಗೆ ಮನೆ ಎಲ್ಲಾ ರೀತಿಯ ಅನುಕೂಲಗಳಲ್ಲ. ಅದರಲ್ಲಿ ಒಂದು ಅನಾನುಕೂಲವೂ ಇದೆ.ನೀವು ಯಾವಾಗ ಮನೆಯಿಂದ ಹೊರಗೆ ಹೋಗಬಹುದು ಎಂಬುದರ ಕುರಿತು ನಿಮಗೆ ಇಲ್ಲಿ ದೂರದೃಷ್ಟಿ ಇರೋದಿಲ್ಲ. ಒಂದು ಮನೆಯಲ್ಲಿ ಇನ್ನಷ್ಟು ವರ್ಷಗಳ ಕಾಲ ಇರಬೇಕು ಎಂದು ನಾನು ಇಚ್ಛೆಪಟ್ಟರೂ, ಮನೆಯಲ್ಲಿ ಖಾಲಿ ಮಾಡಬೇಕಾದ ಸಂದರ್ಭ ಬಾಡಿಗೆ ಮನೆಯಲ್ಲಿ ಬರುತ್ತದೆ' ಎಂದು ಅವರು ಹೇಳಿದ್ದಾರೆ.

Latest Videos

undefined

ಮನೆಯನ್ನು ಖರೀದಿಸುವುದರಿಂದ ಅವರ ಆರ್ಥಿಕ ಬಲವನ್ನು ಹೆಚ್ಚಿಸಬಹುದು ಎಂದು ನೀವು ಭಾವಿಸುತ್ತೀರಾ ಎಂದು ಕೇಳಿದಾಗ, ಕಾಮತ್ ಅವರು ರಿಯಲ್ ಎಸ್ಟೇಟ್‌ನಲ್ಲಿರುವ ಇಲ್ಲಿಕ್ವಿಡ್‌ (ಹಣ ತಕ್ಷಣಕ್ಕೆ ಸಿಗದೇ ಇರುವುದು) ಸ್ವಭಾವ ನನಗೆ ಇಷ್ಟವಾಗೋದಿಲ್ಲ ಎಂದು ಹೇಳಿದ್ದಾರೆ.

ಕೇವಲ 250 ರೂಪಾಯಿಗೆ ಕೆಲಸ ಮಾಡ್ತಿದ್ದ ಹುಡುಗ 25 ಸಾವಿರ ಕೋಟಿಗೆ ಒಡೆಯನಾಗಿದ್ದು ಹೇಗೆ?

ರಿಯಲ್‌ ಎಸ್ಟೇಟ್‌ ಇಲ್ಲಿಕ್ವಿಡ್‌: ರಿಯಲ್‌ ಎಸ್ಟೇಟ್‌ಗಿಂತ ಚಿನ್ನದಂಥದನ್ನು ನನಗೆ ನೀಡಬಹುದು ಎಂದು ಭಾವಿಸುತ್ತೇನೆ. ರಿಯಲ್‌ ಎಸ್ಟೇಟ್‌ನ ಇಲ್ಲಿಕ್ವಿಡ್‌ ಸ್ವಭಾವ ನನಗೆ ಇಷ್ಟವಾಗೋದಿಲ್ಲ.ಒಂದು ಸ್ಥಳದಲ್ಲಿ ರಿಯಲ್‌ ಎಸ್ಟೇಟ್‌ಗೆ ಕಡಿಮೆ ಖರೀದಿದಾರರಿದ್ದಾರೆ ಎಂದುಕೊಳ್ಳಿ, 10 ಜನರು ಮಾರಾಟ ಮಾಡಲು ನಿರ್ಧರಿಸಿದರೆ, ಬೆಲೆಗಳು ಎಲ್ಲೆಲ್ಲಿಗೋ ಹೋಗುತ್ತದೆ. ಬೆಲೆ ತುಂಬಾ ಅನಿಯಂತ್ರಿತವಾಗಿರುತ್ತದೆ.ಅದಕ್ಕೆ ಹೋಲಿಸಿದರೆ ಷೇರು ಮಾರುಕಟ್ಟೆ ಒಂದು ನಿರ್ದಿಷ್ಟ ಕಂಪನಿಯಲ್ಲಿ ಹೆಚ್ಚು ಜನರನ್ನು ಹೊಂದಿರುತ್ತದೆ. ಒಂದು ಮಿಲಿಯನ್ ಜನರು ಮಾರಾಟ ಮಾಡಲು ನಿರ್ಧರಿಸಿದರೆ, ಅದು ಗಮನಾರ್ಹ ಬದಲಾವಣೆಯನ್ನು ತರುತ್ತದೆ' ಎಂದು ಹೇಳಿದ್ದಾರೆ.

ನನ್ನ ಬಳಿ 3 ಕೋಟಿ ಇದೆ, ಎಲ್ಲಿ ಹೂಡಿಕೆ ಮಾಡಲಿ ಎಂದು ಬಾದ್‌ಶಾ ಕೇಳಿದ ಪ್ರಶ್ನೆಗೆ ನಿಖಿಲ್‌ ಕಾಮತ್‌ ಉತ್ತರ ಹೀಗಿತ್ತು..!

ಆಸ್ತಿಯ ಬೆಲೆಯ ಮೇಲೆ ಸರ್ಕಾರ ವಿಧಿಸುವ ಸ್ಟ್ಯಾಂಪ್ ಡ್ಯೂಟಿ ಪಾವತಿಸುವ ಬಗ್ಗೆ ಜೆರೋಧಾ ಬಿಲಿಯನೇರ್ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ. ಶೇರು ಮಾರುಕಟ್ಟೆಯಲ್ಲಿ ಶೇ.5ರಿಂದ ಶೇ.6ರ ಸ್ಟ್ಯಾಂಪ್ ಡ್ಯೂಟಿ ಪಾವತಿಸದೇ ಖರೀದಿ ಮತ್ತು ಮಾರಾಟ ಮಾಡಬಹುದಾಗಿದೆ ಎಂದರು. ಭಾರತದ ಅತ್ಯಂತ ಕಿರಿಯ ಬಿಲಿಯನೇರ್‌ಗಳಲ್ಲಿ ಒಬ್ಬರಾಗಿರುವ ನಿಖಿಲ್ ಕಾಮತ್, ಫೋರ್ಬ್ಸ್ ಪ್ರಕಾರ $3.1 ಬಿಲಿಯನ್ ನಿವ್ವಳ ಸಂಪತ್ತನ್ನು ಹೊಂದಿದ್ದಾರೆ.

click me!