ಬದ್ರಿನಾಥ-ಕೇದರನಾಥ ದರ್ಶನ ಪಡೆದು ತಿಜೋರಿ ಬೀಗ ತೆರೆದು ಮುಕೇಶ್ ಅಂಬಾನಿ ದೇಣಿಗೆ ನೀಡಿದೆಷ್ಟು?

By Mahmad RafikFirst Published Oct 20, 2024, 1:34 PM IST
Highlights

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಬದ್ರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಭೇಟಿ ನೀಡಿ ದೇಣಿಗೆ ನೀಡಿದ್ದಾರೆ. ಈ ಹಣವನ್ನು ದೇವಾಲಯಗಳ ಅಭಿವೃದ್ಧಿ ಮತ್ತು ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಳಸಲಾಗುವುದು.

ಡೆಹರಾಡೂನ್: ರಿಲಯನ್ಸ್ ಇಂಡಸ್ಟ್ರಿಯ ಮುಖ್ಯಸ್ಥ, ಭಾರತದ ನಂಬರ್ ಒನ್ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅಕ್ಟೋಬರ್ 20ರಂದು ಉತ್ತರಾಖಂಡದಲ್ಲಿರುವ ಎರಡು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಬದರೀನಾಥ ಮತ್ತು ಕೇದರನಾಥ ಧಾಮಗಳಿಗೆ ಮುಕೇಶ್ ಅಂಬಾನಿ ಭೇಟಿ ನೀಡಿದ್ದಾರೆ. ಈ ಧಾರ್ಮಿಕ ಯಾತ್ರೆಯಲ್ಲಿ ಎರಡು ಧಾಮಗಳಿಗೆ 5 ಕೋಟಿ ರೂಪಾಯಿ ಹಣವನ್ನು ದೇಣಿಗೆ ರೂಪದಲ್ಲಿ ನೀಡಿ ತಮ್ಮ ಭಕ್ತ ಸಮರ್ಪಿಸಿದರು. ಇಂದು ಬೆಳಗ್ಗೆ ಶ್ರೀ ಬದರೀನಾಥ ದೇವಸ್ಥಾನಕ್ಕೆ ಆಗಮಿಸಿದ ಮುಕೇಶ್ ಅಂಬಾನಿ ಅವರನ್ನು ದೇಗುಲದ ಅರ್ಚಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಸ್ವಾಗತಿಸಿದರು. 

ಶ್ರೀ ಬದರೀನಾಥ ಧಾಮವನ್ನು ವಿಷ್ಣು ದೇವರ ನಿವಾಸ ಎಂದು ನಂಬಲಾಗಿದೆ. ಹಾಗಾಗಿ ದೇಶದ ಪ್ರಮುಖ ಹಿಂದೂ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಉತ್ತರಾಖಂಡ ನಾಲ್ಕು ಧಾಮಗಳಲ್ಲಿ ಇದು ಸಹ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಬದರೀನಾಥಕ್ಕೆ ಭೇಟಿ ನೀಡುತ್ತಾರೆ. ಧಾರ್ಮಿಕ ವಿಧಿವಿಧಾನಗಳನ್ನು ಪೊರೈಸಿದ ಮುಕೇಶ್ ಅಂಬಾನಿ, ದೇಶದ ಅಭಿವೃದ್ಧಿ, ಶಾಂತಿ ಮತ್ತು ಸುಖ-ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದು ಉತ್ತರಾಖಂಡದ ನಾಲ್ಕು ಧಾಮಗಳಲ್ಲಿ ಒಂದಾಗಿದೆ. ಬದರೀನಾಥ ವಿಷ್ಣುವಿನ ನಿವಾಸವಾಗಿದೆ. ಕೇದಾರನಾಥ ದೇವರು ಶಿವನ ಪುಣ್ಯಕ್ಷೇತ್ರವಾಗಿದೆ. ಈ ಧಾಮವು ಹಿಮಾಲಯದ ಎತ್ತರದಲ್ಲಿದ್ದು, ಧಾರ್ಮಿಕ ನಂಬಿಕೆ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ ಎಂದರು. ಈ ಎರಡು ಕ್ಷೇತ್ರಗಳಲ್ಲಿ ಮುಕೇಶ್ ಅಂಬಾನಿ ವಿಶೇಷ ಪೂಜೆಯನ್ನು ಸಲ್ಲಿಸಿದರು. 

Latest Videos

ಮುಕೇಶ್ ಅಂಬಾನಿಯವರನ್ನು ಸ್ವಾಗತಿಸಿ ಮಾತನಾಡಿದ ಬದರೀ-ಕೇದಾರ ದೇವಸ್ಥಾನ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್ ಮಾತನಾಡಿ, ಅಂಬಾನಿಯವರ ಆಗಮನದಿಂದ ಧಾಮದ ಮಹತ್ವ ಮತ್ತಷ್ಟು ಹೆಚ್ಚಾಗಿದೆ ಎಂದರು. ಅಂಬಾನಿ ತಮ್ಮ ಕುಟುಂಬದ ಪರವಾಗಿ ಎರಡೂ ದೇಗುಲಕ್ಕೆ ಸೇರಿಸಿ ಐದು ಕೋಟಿ ರೂ. ಹಣವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಈ ಮೊತ್ತವನ್ನು ದೇವಸ್ಥಾನದ ಅಭಿವೃದ್ಧಿಯ ಕೆಲಸಗಳಲ್ಲಿ ಬಳಕೆ ಮಾಡಲಾಗುವುದು ಎಂದು ಹೇಳಿ ಅಂಬಾನಿಯವರ ಉದಾರತೆಗೆ  ದೇವಸ್ಥಾನ ಆಡಳಿತ ಮಂಡಳಿ ಹಾಗೂ ಭಕ್ತರ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು. 

ಶೀಘ್ರದಲ್ಲೇ ಜಿಯೋ ಸಿನಿಮಾ ಸ್ಥಗಿತ? ಮುಕೇಶ್ ಅಂಬಾನಿ ಕಂಪನಿಯಲ್ಲಿ ಮಹತ್ವದ ಬೆಳವಣಿಗೆ!

ಎರಡು ಧಾಮಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಮುಕೇಶ್ ಅಂಬಾನಿ, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಧಾರ್ಮಿಕ ನಂಬಿಕೆ ದೇಶದ ನಿಜವಾದ ಶಕ್ತಿಯಾಗಿದೆ ಎಂದರು. ಬದರೀನಾಥ ಮತ್ತು ಕೇದಾರನಾಥ ಧಾಮಗಳು ಕೇವಲ ಧಾರ್ಮಿಕ ಕ್ಷೇತ್ರಗಳಲ್ಲ, ಬದಲಾಗಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿವೆ. ಎಲ್ಲಾ ಭಕ್ತಾದಿಗಳು ಕ್ಷೇತ್ರದ ಪಾವಿತ್ರತ್ಯೆಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ಮನವಿ ಮಾಡಿಕೊಂಡರು.

ಮುಕೇಶ್ ಅಂಬಾನಿ ದೇಣಿಗೆ ನೀಡಿರುವ 5 ಕೋಟಿ ಹಣವನ್ನು ದೇವಾಲಯದ ಅಭಿವೃದ್ಧಿ ಕೆಲಸಗಳಲ್ಲಿ ಬಳಕೆಯಾಗಲಿದೆ. ಧಾಮದ ಪೂರ್ಣನಿರ್ಮಾಣ, ಭಕ್ತಾದಿಗಳಿಗೆ ಸೌಲಭ್ಯ, ರಕ್ಷಣಾ ವ್ಯವಸ್ಥೆ ಮತ್ತು ಸ್ವಚ್ಛತಾ ಕಾರ್ಯಗಳಲ್ಲಿ ದೇಣಿಗೆ ಮೊತ್ತ ನಿಯೋಜನೆಯಾಗಲಿದೆ. ಎರಡು ಪುಣ್ಯಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಹಣ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಕ್ಕಾಗಿ ಸದ್ಬಳಕೆಯಾಗಲಿದೆ ಎಂದು ಆಡಳಿತ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ.

ಇದ್ದಕ್ಕಿದ್ದಂತೆಯೇ 10.9 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡ ಜಿಯೋ! ಕಾರಣ ಇದು

click me!