ಪುಟ್ಟ ಉತ್ತರಾಧಿಕಾರಿಣಿ ಆಗಮನದ ಖುಷಿಯಲ್ಲಿ ಅಂಬಾನಿ ಕುಟುಂಬ; ಆಕಾಶ್, ಶ್ಲೋಕಾ ದಂಪತಿ ಮಗಳ ಹೆಸರೇನು?

Published : Jun 03, 2023, 12:11 PM ISTUpdated : Jun 03, 2023, 12:17 PM IST
ಪುಟ್ಟ ಉತ್ತರಾಧಿಕಾರಿಣಿ  ಆಗಮನದ ಖುಷಿಯಲ್ಲಿ ಅಂಬಾನಿ ಕುಟುಂಬ; ಆಕಾಶ್, ಶ್ಲೋಕಾ ದಂಪತಿ ಮಗಳ ಹೆಸರೇನು?

ಸಾರಾಂಶ

ಸುಮಾರು 88 ಬಿಲಿಯನ್ ಡಾಲರ್ ಮೌಲ್ಯದ  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ ಕಿರಿಯ ಉತ್ತರಾಧಿಕಾರಿಣಿ ಆಗಮನವಾಗಿದೆ. ಮುಖೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಅಂಬಾನಿ ದಂಪತಿಗೆ ಮೇ 31ರಂದು ಹೆಣ್ಣು ಮಗು ಜನಿಸಿದೆ. ಈ ಮಗುವಿನ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ.ಆದರೆ, ಮುಖೇಶ್ ಹಾಗೂ ನೀತಾ ಅಂಬಾನಿ ಈ ಮಗುವಿಗೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಹೆಸರಿಡುವುದು ಪಕ್ಕಾ ಎನ್ನಲಾಗುತ್ತಿದೆ. 

ನವದೆಹಲಿ (ಜೂ.3):ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತೊಮ್ಮೆ ಅಜ್ಜ ಆಗಿರುವ ಸುದ್ದಿ ಗೊತ್ತೇ ಇದೆ. ಮುಖೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಅಂಬಾನಿ ದಂಪತಿಗೆ ಮೇ 31ರಂದು ಹೆಣ್ಣು ಮಗು ಜನಿಸಿದೆ. ಈ ಮಗು ಈಗ ಸುಮಾರು 88 ಬಿಲಿಯನ್ ಡಾಲರ್ ಮೌಲ್ಯದ  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಕಿರಿಯ ವಾರಸುದಾರಳು. ಆಕಾಶ್ ಹಾಗೂ ಶ್ಲೇಕ್ ದಂಪತಿಗೆ ಈಗಾಗಲೇ ಪೃಥ್ವಿ ಎಂಬ 2 ವರ್ಷದ ಗಂಡು ಮಗುವಿದೆ. ಇದೀಗ ಎರಡನೇ ಬಾರಿಗೆ ತಂದೆ-ತಾಯಿಯಾಗಿರುವ ಇವರು, ಮಗುವಿನ ಹೆಸರನ್ನು ಇನ್ನಷ್ಟೇ ಬಹಿರಂಗಪಡಿಸಬೇಕಿದೆ. ಆದರೆ, ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯದ ಬಗ್ಗೆ ಅಪಾರ ಒಲವು ಹೊಂದಿರುವ ಕಾರಣ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಹೆಸರನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಮುಖೇಶ್ ಅಂಬಾನಿ ಅವರ ಏಕೈಕ ಪುತ್ರಿ ಇಶಾ ಅಂಬಾನಿ ಕೂಡ ತಮ್ಮ ಅವಳಿ ಮಕ್ಕಳಿಗೆ ಕೃಷ್ಣ ಹಾಗೂ ಆದ್ಯ ಎಂಬ ಭಾರತೀಯ ಹೆಸರನ್ನೇ ಇಟ್ಟಿದ್ದಾರೆ. ಆದಷ್ಟು ತಮ್ಮ ಕುಟುಂಬಕ್ಕೆ ಸೇರ್ಪಡೆಯಾಗಿರುವ ಪುಟ್ಟ ಹೊಸ ಸದಸ್ಯಳ ಹೆಸರನ್ನು ಅಂಬಾನಿ ಶೀಘ್ರವೇ ಬಹಿರಂಗಪಡಿಸುವ ಸಾಧ್ಯತೆಯಿದೆ. 

ಇನ್ನು ಬುಧವಾರ ಆಕಾಶ್ ಅಂಬಾನಿ ಅವರ ತಮ್ಮ ಅನಂತ್ ಅಂಬಾನಿ ತಾನು ವಿವಾಹವಾಗಲಿರುವ ಹುಡುಗಿ ರಾಧಿಕಾ ಮರ್ಚೆಂಟ್ ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿ ಆಕಾಶ್ ಹಾಗೂ ಶ್ಲೋಕಾ ಅವರಿಗೆ ಅಭಿನಂದನೆ ತಿಳಿಸಿದ್ದರು. ಅಂಬಾನಿ ಕುಟುಂಬಕ್ಕೆ ಹೊಸ ಸದಸ್ಯಳ ಆಗಮನದ ಸುದ್ದಿಯನ್ನು ರಿಲಯನ್ಸ್ ನ್ಯೂ ಎನರ್ಜಿ ಲಿಮಿಟೆಡ್  ನಿರ್ದೇಶಕ ಧನ್ ರಾಜ್ ನಥ್ವಾನಿ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದರು. 'ಪುಟ್ಟ ರಾಜಕುಮಾರಿಯ ಸಂತಸದ ಆಗಮನಕ್ಕೆ ಆಕಾಶ್ ಹಾಗೂ ಶ್ಲೋಕಾ ಅಂಬಾನಿ ಅವರಿಗೆ ಹೃದಯಸ್ಪರ್ಶಿ ಅಭಿನಂದನೆಗಳು. ಈ ಅಮೂಲ್ಯದ ಆಶೀರ್ವಾದ ನಿಮ್ಮ ಬದುಕಿನಲ್ಲಿ ಅಪಾರ ಸಂತಸ ಹಾಗೂ ಪ್ರೀತಿ ತರಲಿ' ಎಂದು ಅವರು ಬರೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮುಕೇಶ್‌  ಅಂಬಾನಿ ಜೊತೆಗೆ ದಂಪತಿಗಳು ಮಗ ಪೃಥ್ವಿಯೊಂದಿಗೆ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. 

ಅಂಬಾನಿ ಮನೆಯಲ್ಲಿದ್ದಾರೆ 600 ಕೆಲಸಗಾರರು, ಹೈಲಿ ಎಜುಕೇಟೆಡ್ ಆಗಿರೋ ಇವ್ರ ಸ್ಯಾಲರಿ ಎಷ್ಟ್‌ ಗೊತ್ತಾ?

ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ವಿಶ್ವದಲ್ಲೇ ಅತೀ ದುಬಾರಿ ಖಾಸಗಿ ಮನೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಇವರ ದುಬಾರಿ ಖಾಸಗಿ ಮನೆಯನ್ನು ಆಂಟಿಲಿಯಾ ಎಂದು ಕರೆಯಲಾಗುತ್ತದೆ. 27 ಅಂತಸ್ತಿನ ಕಟ್ಟಡದಲ್ಲಿ ಮುಕೇಶ್ ಅಂಬಾನಿ ಕುಟುಂಬವು ವಾಸಿಸುತ್ತದೆ. ಇದರಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ ಮತ್ತು ಪೃಥ್ವಿ ಅಂಬಾನಿ ಇದ್ದಾರೆ. ಅಂಬಾನಿ ಕುಟುಂಬವು 2012 ರಲ್ಲಿ ಆಂಟಿಲಿಯಾಕ್ಕೆ ಸ್ಥಳಾಂತರಗೊಂಡಿತು ಮತ್ತು ಪ್ರಸ್ತುತ ಮನೆಯ ಬೆಲೆ 15,000 ಕೋಟಿ ರೂ. ಆಂಟಿಲಿಯಾ ತನ್ನ ವೈಶಿಷ್ಟ್ಯಗಳು, ಗ್ರ್ಯಾಂಡ್ ಪಾರ್ಟಿಗಳು, ಭದ್ರತೆ ಮತ್ತು ಹಲವಾರು ಇತರ ಕಾರಣಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತದೆ.

ಅಂಬಾನಿ ಸೊಸೆಯಲ್ಲಿದೆ ಜಗತ್ತಿನ ಅತೀ ದುಬಾರಿ ಡೈಮಂಡ್‌ ನೆಕ್ಲೇಸ್, ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ?

ಐಷಾರಾಮಿ ಬಂಗಲೆ ಅಂಟಿಲಿಯಾದಲ್ಲಿ 600 ಮಂದಿ ಕೆಲಸಗಾರರಿದ್ದಾರೆ. ಇವರೆಲ್ಲಾ ಸಾಮಾನ್ಯ ಕೆಲಸದವರು ಅಲ್ಲ. ಹೈಲೀ ಎಜುಕೇಟೆಡ್‌. ಒಟ್ಟು 600 ಮಂದಿ 27 ಫ್ಲೋರ್‌ನ ಅಂಟಿಲಾ ಬಂಗಲೆಯಲ್ಲಿ ಕೆಲಸ ಮಾಡುತ್ತಾರೆ. ಕಸ ಗುಡಿಸಲು, ಒರೆಸಲು, ಬಟ್ಟೆ ಒಗೆಯಲು, ಅಡುಗೆ ಮಾಡಲು ಇಲ್ಲಿ ಪ್ರತ್ಯೇಕವಾಗಿ ಹಲವು ಮಂದಿ ನಿಯೋಜಿಸಲ್ಪಟ್ಟಿದ್ದಾರೆ. ಅಂಬಾನಿ ಮನೆ ಅಂಟಿಲಿಯಾದ ಕೆಲಸಗಾರರು ವೆಲ್‌ ಟ್ರೈನ್‌ಡ್ ಆಗಿದ್ದಾರೆ. ಇವರು ತಿಂಗಳಿಗೆ ಬರೋಬ್ಬರಿ 2 ಲಕ್ಷ ರೂ. ವೇತನ ಪಡೆಯುತ್ತಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!