ಭಾರತದ ಆರ್ಥಿಕ ಬೆಳವಣಿಗೆ ದರ ಪರಿಷ್ಕರಿಸಿದ ವಿಶ್ವಬ್ಯಾಂಕ್, ಇತರ ರಾಷ್ಟ್ರಗಳಿಗಿಂತ ಅತ್ಯಧಿಕ ವೇಗದಲ್ಲಿ ಚೇತರಿಕೆ!

By Suvarna NewsFirst Published Oct 6, 2022, 8:27 PM IST
Highlights

ಭಾರತದ ಆರ್ಥಿಕತೆಯ ಬೆಳವಣಿ ದರವನ್ನು ವಿಶ್ವಬ್ಯಾಂಕ್ ಪರಿಷ್ಕರಿಸಿದೆ. ಆದರೆ  6.5 ಶೇಕಡಾಕ್ಕೆ ಪರಿಷ್ಕರಿಸಿದ ವಿಶ್ವಬ್ಯಾಂಕ್, ಮಹತ್ವದ ಸೂಚನೆಯೊಂದನ್ನು ನೀಡಿದೆ.
 

ನವದೆಹಲಿ(ಅ.06): ಕೋವಿಡ್‌ನಿಂದ ಸಂಪೂರ್ಣವಾಗಿ ಹದಗೆಟ್ಟ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಹಲವು ರಾಷ್ಟ್ರಗಳು ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದರೆ, ಭಾರತ ಚೇತರಿಕೆ ಹಾದಿಯಲ್ಲಿ ಸಾಗುತ್ತಿದೆ. ಈ ಮಾತನ್ನು ವಿಶ್ವಬ್ಯಾಂಕ್ ಮತ್ತೆ ಮತ್ತೆ ಉಲ್ಲೇಖಿಸಿದೆ. ಇತರ ಪ್ರಬಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಚೇತರಿಕೆ ಹಾದಿಯಲ್ಲಿದೆ. ಇತರ ಎಲ್ಲಾ ರಾಷ್ಟ್ರಕ್ಕಿಂತ ಅತೀ ವೇಗದಲ್ಲಿ ಚೇಕರಿಕೆ ಕಾಣುತ್ತಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. 2022-23ರ ಆರ್ಥಿಕ ವರ್ಷಕ್ಕೆ ಭಾರತೀಯ ಆರ್ಥಿಕತೆಯ ಯೋಜಿತ ಬೆಳವಣಿಗೆಯ ದರವನ್ನು 6.5 ಶೇಕಡಾಕ್ಕೆ ವಿಶ್ವಬ್ಯಾಂಕ್ ಪರಿಷ್ಕರಿಸಿದೆ. 2022ರ ಜೂನ್ ತಿಂಗಳ ಯೋಜಿದ ಬೆಳವಣಿಗೆ ದರಕ್ಕೆ ಹೋಲಿಸಿದರೆ ಈ ಬಾರಿ ಕಡಿತಗೊಂದಿದೆ. ಜೂನ್ 2022ರರಲ್ಲಿ ಯೋಜಿತ ದರ 7.5 ಆಗಿತ್ತು. 

ಅಂತಾರಾಷ್ಟ್ರೀಯ ಮಟ್ಟದಲ್ಲಿನ ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದ ಎಲ್ಲಾ ದೇಶಗಳ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಆದರೆ ಚೇತರಿಕೆ ವಿಚಾರದಲ್ಲಿ ಭಾರತ ಮಿಂಚಿನಂತೆ ಪುಟಿದೆದ್ದಿದೆ. ಹಿಂದಿನ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.8.7ರಷ್ಟು ಬೆಳವಣಿಗೆ ಕಂಡಿತ್ತು.

COVID-19 ಬಿಕ್ಕಟ್ಟು ವೇಳೆ ಬಡವರಿಗೆ ಭಾರತದ ಬೆಂಬಲ ಅದ್ಭುತ: World Bank ಅಧ್ಯಕ್ಷ ಡೇವಿಡ್ ಮಾಲ್ಪಾಸ್

ದಕ್ಷಿಣ ಏಷ್ಯಾಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಉತ್ತಮವಾಗಿದೆ. ಮೊದಲ ಕೋವಿಡ್ ಅಲೆಯಲ್ಲಿ ತತ್ತರಿಸಿದ ಆರ್ಥಿಕತೆ ಅಷ್ಟೇ ವೇಗದಲ್ಲಿ ಚೇತರಿಕೆ ಕಂಡಿತ್ತು. ಇದರ ಬೆನ್ನಲ್ಲೇ ಎರಡನೇ ಕೋವಿಡ್ ಅಲೆ ಭಾರತ ಮಾತ್ರವಲ್ಲ ಇತರ ಎಲ್ಲಾ ದೇಶಗಳಿಗೆ ಹೊಡೆತ ನೀಡಿತು. ಎರಡೂ ಅಲೆಗಳ ಬಳಿಕ ಇತರ ರಾಷ್ಟ್ರಗಳು ಚೇತರಿಕೆ ಹಾದಿ ಕಾಣಲು ಹೆಚ್ಚಿನ ಸಮಯ ತೆಗೆದುಕೊಂಡಿತ್ತು. ಆದರೆ ಭಾರತ ತ್ವರಿತಗತಿಯಲ್ಲಿ ಚೇತರಿಕೆ ಕಾಣುವ ಮೂಕ ಇತಿಹಾಸ ರಚಿಸಿದೆ.

ಭಾರತ ಆರ್ಥಿಕತೆಯಲ್ಲಿನ ಮತ್ತೊಂದು ಉತ್ತಮ ಬೆಳವಣಿಗೆ ಅಂದರೆ ಭಾರತ ದೊಡ್ಡ ಮೊತ್ತದ ಬಾಹ್ಯ ಸಾಲ ಹೊಂದಿಲ್ಲ. ಇದು ಭಾರತಕ್ಕೆ ಅನೂಕೂಲ ನೀಡುತ್ತಿದೆ. ಭಾರತದ ವಿತ್ತೀಯ ನೀತಿಯು ವಿವೇಕಯುತವಾಗಿದೆ ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಆರ್ಥಿಕತೆಯು ವಿಶೇಷವಾಗಿ ಸೇವಾ ವಲಯದಲ್ಲಿ ಉತ್ತಮ ಸಾಧನೆ ಮಾಡಿದೆ 

ಜಗತ್ತಿನಲ್ಲಿ ಮತ್ತೆ Economic Recession ಪರ್ವ ಆರಂಭ..?
 
ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳ ಆರ್ಥಿಕತೆ ಹದಗೆಡುತ್ತಿದೆ. ಇದರಿಂದ ಭಾರತದ ಆರ್ಥಿಕ ವರ್ಷ ಡೌನ್‌ಗ್ರೇಡ್ ಮೂನ್ಸೂಚನೆ ಹೆಚ್ಚಿಸಿದೆ.  ಆದರೆ ಭಾರತದ ಆರ್ಥಿಕತೆಯನ್ನು ಮೇಲಕ್ಕೆತ್ತಲು ನಡೆಯುತ್ತಿರುವ ಪ್ರಯತ್ನಗಳು ಮತ್ತಷ್ಟು ಚುರುಕಾಗಬೇಕು ಅನ್ನೋ ಸಂದೇಶವೂ ಭಾರತಕ್ಕೆ ನೀಡಲಾಗಿದೆ.   ಸಾಮಾಜಿಕ ಸುರಕ್ಷತಾ ಜಾಲ, ಡಿಜಿಟಲ್ ಕ್ರಾಂತಿಗಳ ಮೂಲಕ ಆರ್ಥಿಕತೆ ಹರಿವು ಸ್ಥಾಪಿಸಿದೆ. ಇದು ಇದರ ದೇಶಗಳಿಗೆ ಮಾದರಿಯಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.  

click me!