ಆಂಧ್ರಕ್ಕೆ ಶಾಕ್: ಅಮರಾವತಿ ಪ್ರಾಜೆಕ್ಟ್ ಕೈಬಿಟ್ಟ ವಿಶ್ವ ಬ್ಯಾಂಕ್!

Published : Jul 19, 2019, 03:14 PM IST
ಆಂಧ್ರಕ್ಕೆ ಶಾಕ್: ಅಮರಾವತಿ ಪ್ರಾಜೆಕ್ಟ್ ಕೈಬಿಟ್ಟ ವಿಶ್ವ ಬ್ಯಾಂಕ್!

ಸಾರಾಂಶ

ಆಂಧ್ರದ ಅಮರಾವತಿ ಯೋಜನೆಯ ಕನಸಿಗೆ ವಿಘ್ನ| ಅಮರಾವತಿ ಯೋಜನೆಯಿಂದ ಹೊರಬಂದ ವಿಶ್ವ ಬ್ಯಾಂಕ್| ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆ| 300 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದ್ದ ವಿಶ್ವ ಬ್ಯಾಂಕ್| ಕಾರಣ ತಿಳಿಸದೇ ಯೋಜನೆಯಿಂದ ಹೊರಬಂದ ವಿಶ್ವ ಬ್ಯಾಂಕ್| ವಿಶ್ವ ಬ್ಯಾಂಕ್ ನಿರ್ಧಾರದ ಹಿಂದೆ ಅಮರಾವತಿ ವಿರುದ್ಧದ ರೈತರ ದೂರು ಕಾರಣ ಎಂಬ ಶಂಕೆ| 

ಅಮರಾವತಿ(ಜು.19): ಮಹತ್ವದ ಬೆಳವಣಿಗೆಯೊಂದರಲ್ಲಿ ಅಮರಾವತಿ ಯೋಜನೆಯಿಂದ ವಿಶ್ವ ಬ್ಯಾಂಕ್ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದೆ.

ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಯಲ್ಲಿ 300 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದ್ದ ವಿಶ್ವ ಬ್ಯಾಂಕ್, ಇದೀಗ ಈ ನಿರ್ಧಾರದಿಂದ ಹಿಂದೆ ಸರಿದಿದೆ.

ಈ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿರುವ ವಿಶ್ವಬ್ಯಾಂಕ್, ಅಮರಾವತಿ ಯೋಜನೆಯಿಂದ ಹಿಂದೆ ಸರಿಯುವ ತನ್ನ ನಿರ್ಧಾರಕ್ಕೆ ಸೂಕ್ತ ಕಾರಣವನ್ನೂ ತಿಳಿಸಿಲ್ಲ.

ಮೂಲಗಳ ಪ್ರಕಾರ, ಅಮರಾವತಿ ಯೋಜನೆ ವಿರುದ್ಧ ರೈತರು ಭಾರೀ ಪ್ರಮಾಣದಲ್ಲಿ ದೂರು ನೀಡುತ್ತಿರುವದರಿಂದ, ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವವರೆಗೂ ಯೋಜನೆಗೆ ಹೂಡಿಕೆ ಮಾಡದಿರಲು ವಿಶ್ವ ಬ್ಯಾಂಕ್ ನಿರ್ಧರಿಸಿದೆ ಎನ್ನಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?
ಸೊಂಟಕ್ಕಿಂತ ಕೆಳಗೆ ಮಹಿಳೆಯರು ಚಿನ್ನ ಧರಿಸಬಾರದು ಅಂತಾ ಹೇಳೋದು ಯಾಕೆ? ಶೇ. 99ರಷ್ಟು ಜನರಿಗೆ ಇದು ಗೊತ್ತಿಲ್ಲ!