ರಾಜ್ಯದ ಮಹಿಳಾ ಕಾರ್ಮಿಕರಿಗೆ ತಲಾ 500 ರೂ. ಸಹಾಯಧನ ಹಾಗೂ ಉಚಿತ ಬಸ್ ಪಾಸ್ ನೀಡಲಾಗುವುದು. ಮತ್ತೊಂದೆಡೆ ಎಲ್ಲ ಶಾಲಾ- ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಬಸ್ ಪಾಸ್ ನೀಡಲಾಗುವುದು.
ಬೆಂಗಳೂರು (ಫೆ.17): ರಾಜ್ಯದ ಎಲ್ಲ ಮಹಿಳಾ ಕಾರ್ಮಿಕರಿಗೆ ತಲಾ 500 ರೂ. ಸಹಾಯಧನ ನೀಡಲಾಗುವುದು. ರಾಜ್ಯದಲ್ಲಿ ಕೆಲಸ ಮಾಡುವ ಎಲ್ಲ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಮತ್ತೊಂದೆಡೆ ಎಲ್ಲ ಶಾಲಾ- ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಈಗಾಗಲೇ ದೆಹಲಿ ಸೇರಿ ಕೆಲವು ರಾಜ್ಯಗಳಿದ್ದ ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಇದ್ದ ಕೊಡುಗೆಗಳನ್ನು ರಾಜ್ಯದಲ್ಲಿಯೂ ಅಳವಡಿಕೆ ಮಾಡಲಾಗಿದೆ. ಎಲ್ಲ ಶಾಲಾ- ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡುತ್ತಿರುವುದು ಪ್ರಮುಖ ಘೋಷಣೆಯಾಗಿದೆ. ಇನ್ನು ಮತ್ತೊಂದೆಡೆ ಎಲ್ಲ ಕಾರ್ಮಿಕ ಮಹಿಳೆಯರಿಗೂ ಉಚಿತ ಬಸ್ ಪಾಸ್ ನೀಡುತ್ತಿರುವುದು ಕಾರ್ಮಿಕರಿಗೆ ಉಂಟಾಗುತ್ತಿದ್ದ ಆರ್ಥಿಕ ಹೊರೆಯನ್ನು ತಗ್ಗಿಸಲಾಗುತ್ತಿದೆ. ಜೊತೆಗೆ, ರಾಜ್ಯದ 1 ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ ಎಂದು ಹೇಳುವ ಮೂಲಕ ಬೊಮ್ಮಾಯಿ ಬಜೆಟ್‌ನಲ್ಲಿ ಸ್ತ್ರೀ ಸಬಲೀಕರಣಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ.
undefined
ಫೆ.17ರಂದು ಬಿಜೆಪಿ ಸರ್ಕಾರದ ಕೊನೆ ಬಜೆಟ್: ಎಲೆಕ್ಷನ್ ಬಂಪರ್ ನಿರೀಕ್ಷೆ
ಅಂಗನವಾಡಿ ಸಿಬ್ಬಂದಿಗೆ ಭರ್ಜರಿ ಬಂಪರ್: ರಾಜ್ಯದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಾಯಧನ ಏರಿಕೆ ಮಾಡಲಾಗಿದೆ. ಈ ಹಿಂದೆ ಇದ್ದ ಅಂಗನವಾಡಿ ಕಾರ್ಯಕರ್ತರಿಗೆ ಇದ್ದ ಗೌರವಧನವನ್ನು 1 ಸಾವಿರ ರೂ.ಗಳಿಂದ 1,500 ರೂ. ಹೆಚ್ಚಳ ಮಾಡಲಾಗಿದೆ. ಸಹಾಯಧನ ಏರಿಕೆಯಿಂದ ಭಾರಿ ಅನುಕೂಲ ಆಗಿದೆ. ಅಂಗನವಾಡಿ ಸಹಾಯಕರಿಗೆ ಗ್ರ್ಯಾಚುಟಿ ಕೊಡಲು ನಿರ್ಧಾರ ಮಾಡಲಾಗಿದ್ದು, ಇದಕ್ಕಾಗಿ 40 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. 25 ವರ್ಷ ಸೇವೆಯನ್ನು ಸಲ್ಲಿಸಿದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಂಗನವಾಡಿ ಕಾರ್ಯಕರ್ತರಿಗೆ 50 ಸಾವಿರ ರೂ. ಸಹಾಯಧನ ನೀಡಲಾಗುವುದು. ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೆ ಅವರಿಗೆ 30 ಸಾವಿರ ರೂ. ಸಹಾಯಧನ ನೀಡಲಾಗುವುದು. ಈ ವೇಳೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದಾದರೆ ಸ್ವಯಂ ನಿವೃತ್ತಿಗೂ ಅವಕಾಶ ನೀಡಲಾಗುತ್ತದೆ.
ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ 10 ಸಾವಿರ ರೂ. ಮಾಶಾಸನ: ಆಸಿಡ್ ದಾಳಿಗೆ ಒಳಗಾದವರಿಗೆ ಇನ್ನು ಮುಂದೆ 3 ಸಾವಿರ ರೂ. ಗಳಿಂದ ಬರೋಬ್ಬರಿ 10 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇನ್ನು ಇವರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಯನ್ನು ಮಂಜೂರು ಮಾಡಲಾಗುವುದು. ಜೊತೆಗೆ, ಅವರು ಔದ್ಯೋಗಿಕವಾಗಿ ಅಭಿವೃದ್ಧಿಯನ್ನು ಹೊಂದಲು ಉದ್ಯಮ ಸ್ಥಾಪನೆಗೆ ಬಡ್ಡಿರಹಿತ ಸಾಲ ನೀಡಲಾಗುವುದು.
ಸಿಎಂ ಬೊಮ್ಮಾಯಿ ಬಜೆಟ್‌ನತ್ತ ಬೆಟ್ಟದಷ್ಟುನಿರೀಕ್ಷೆ: ಸಿಗುವುದೇ ಧಾರವಾಡಕ್ಕೆ ವಿಶೇಷ ಅನುದಾನ?
ಕೋಳಿ ಸಾಕಾಣಿಕೆಗೆ ಕೊಡುಗೆ: ರೈತ ಮಹಿಳೆಯರಲ್ಲಿ ಕೋಳಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು 2022-23ನೇ ಸಾಲಿನಲ್ಲಿ 16,642 ಫಲಾನುಭವಿಗಳಿಗೆ 3.33 ಲಕ್ಷ ಕೋಳಿಮರಿಗಳನ್ನು ವಿತರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಈ ಸಾಲಿನಲ್ಲಿ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರತ್ಯೇಕ:
ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಎರಡೂ ವಿಭಾಗಗಳನ್ನು ಪ್ರತ್ಯೇಕಿಸಸಲಾಗಿದೆ. ಈ ಮೂಲಕ ಇನ್ನು ಮುಂದೆ ಮಹಿಳಾ ಸಬಲೀಕರಣ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸಲಿವೆ. ಇದರಿಂದ ಸಮರ್ಪಕವಾಗಿ ಅಭಿವೃದ್ಧಿ ಮಾಡಲು ಅನುಕೂಲ ಆಗುತ್ತದೆ. ಮಕ್ಕಳಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡಲು ಮತ್ತು ಅದಕ್ಕೆ ಪ್ರತ್ಯೇಕವಾಗಿ ಅನುದಾನ ಮೀಸಲಿಡಲು ಅನುಕೂಲ ಆಗಲಿದೆ ಎಂದು ಸರ್ಕಾರ ನಿರ್ಧರಿಸಿದೆ.