Viral News: ₹6ಗೆ ಆಟೋ ರೈಡ್; ಉಬರ್ ಆಫರ್ ನೋಡಿ ದಂಗಾದ ನೆಟ್ಟಿಗರು!

By Suvarna NewsFirst Published Aug 18, 2023, 1:26 PM IST
Highlights

ಸಾಮಾನ್ಯ ಆಟೋ ಕೈ ಮಾಡಿದ್ರೆ ಬರೋದು ಕಷ್ಟ. ಅಪ್ಲಿಕೇಷನ್ ಆಟೋ ಬುಕ್ ಮಾಡಿದ್ರೆ 30 ರೂಪಾಯಿ ಬದಲು 40 ರೂಪಾಯಿ ಕೊಡ್ಬೇಕು ಅಂತಾ ಜನರು ಹೇಳೋದನ್ನು ನೀವು ಕೇಳಿರಬಹುದು. ಬೆಲೆ ಏರಿಕೆ ಮಧ್ಯೆ ಈ ಮಹಿಳೆ ಪೋಸ್ಟ್ ಮಾಡಿದ ಸ್ಕ್ರೀನ್ ಶಾಟ್, ಶಾಕ್ ನೀಡಿದೆ. 
 

ಸ್ವಂತ ಕಾರು, ವಾಹನ ಇಲ್ಲವೆಂದಾಗ ನಾವು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡ್ತೇವೆ. ಕೆಲವು ಬಾರಿ ಸ್ವಂತ ವಾಹನವಿದ್ರೂ ದೂರದ ಪ್ರದೇಶಕ್ಕೆ ಅದನ್ನು ತೆಗೆದುಕೊಂಡು ಹೋಗೋದಿಲ್ಲ. ಈಗ ಕರ್ನಾಟಕದಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ. ಹಾಗಂತ ಎಲ್ಲ ಕಡೆ ಬಿಎಂಟಿಸಿ ಬಸ್ ಸೌಲಭ್ಯವಿಲ್ಲ. ಮನೆಯಿಂದ ಬಸ್ ನಿಲ್ದಾಣಕ್ಕಾದ್ರೂ ನಾವು ನಡೆದು ಹೋಗ್ಬೇಕು. ವಯಸ್ಸಾದವರಿಗೆ ಅಲ್ಲಿಯವರೆಗೆ ಹೋಗೋದು ಕಷ್ಟವಾಗುತ್ತದೆ. ತುರ್ತು ಸಂದರ್ಭದಲ್ಲಿ ಅಥವಾ ಅಗತ್ಯವೆನ್ನಿಸಿದ್ರೆ ಆಟೋ, ಕಾರ್ ನಲ್ಲಿ ಜನರು ಹೋಗ್ತಾರೆ. ಈಗ ಅಪ್ಲಿಕೇಷನ್ ವಾಹನಗಳು ಹೆಚ್ಚು ಪ್ರಸಿದ್ದಿ ಪಡೆದಿವೆ. ಓಲಾ, ಉಬರ್, ರ್ಯಾಪಿಡೋ ಸೇರಿದಂತೆ ಕೆಲ ಅಪ್ಲಿಕೇಷನ್ ಮೂಲಕ ನಾವು ನಮಗೆ ಅನುಕೂಲವಿರುವ ಕಾರ್, ಆಟೋ, ಬೈಕ್ ಬುಕ್ ಮಾಡ್ಬಹುದು. 

ಈ ಹಿಂದೆ ಮೂರು ನಾಲ್ಕು ಕಿಲೋಮೀಟರ್ ಪ್ರಯಾಣ ಬೆಳೆಸಲು ಅಪ್ಲಿಕೇಷನ್ (Application) ಆಧಾರಿತ ವಾಹನಗಳು ಕಡಿಮೆ ಜಾರ್ಜ್ ಮಾಡ್ತಿದ್ವು. ಆದ್ರೆ ಈಗ ಬೆಲೆ ಹೆಚ್ಚಾಗಿದೆ. ಬೆಂಗಳೂರಿ (Bangalore) ನಲ್ಲಿ 10 – 12 ಕಿಲೋಮೀಟರ್ ಪ್ರಯಾಣ ಬೆಳೆಸಲು 200 ರಿಂದ 400 ರೂಪಾಯಿ ಪಾವತಿಸುವ ಸ್ಥಿತಿ ನಿರ್ಮಾಣವಾಗಿದೆ. ಹಾಗಿರುವಾಗ  ಸ್ಥಳೀಯ ಬಸ್ ಟಿಕೆಟ್‌ಗಿಂತ ಕಡಿಮೆ ದರದಲ್ಲಿ ಉಬರ್ (Uber) ಆಟೋವನ್ನು ಬುಕ್ ಮಾಡಿದ ಅನುಭವವನ್ನು ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ. 

Latest Videos

ಸಾಲದ ಮೇಲೆ ಬ್ಯಾಂಕ್ ದಂಡ ರೂಪದಲ್ಲಿ ಹೆಚ್ಚುವರಿ ಬಡ್ಡಿ ವಿಧಿಸುವಂತಿಲ್ಲ; ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ RBI

ಮಹಿಮಾ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದು ಉಬರ್ ಸ್ಕ್ರೀನ್ ಶಾಟ್. ಅದ್ರಲ್ಲಿ ಉಬರ್ ಪ್ರಯಾಣದ ಬೆಲೆ ಅಚ್ಚರಿ ಮೂಡಿಸಿದೆ. ಸ್ಕ್ರೀನ್ ಶಾಟ್ ನಲ್ಲಿ ಇಂದಿರಾನಗರ ಪ್ರದೇಶ ಎಂದು ಬರೆದಿರುವುದು ಗೋಚರಿಸುತ್ತದೆ. ಇದು ಬೆಂಗಳೂರಿನ ಮ್ಯಾಪ್ ಎನ್ನುವುದು ನಮಗೆ ಸ್ಪಷ್ಟವಾಗ್ತಿದೆ. ಅಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಉಬರ್ ನಮೂದಿಸಿರುವ ಬೆಲೆ ಆಶ್ಚರ್ಯಹುಟ್ಟಿಸಿದೆ. ಫೋಟೋದಲ್ಲಿ 46 ರೂಪಾಯಿ ಕಡಿತಗೊಳಿಸಿ 6 ರೂಪಾಯಿ ದರ ತೋರಿಸಲಾಗಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ 6 ರೂಪಾಯಿಗೆ ಉಬರ್ ಪ್ರಯಾಣ ತುಂಬಾ ಅಚ್ಚರಿ ಮೂಡಿಸುತ್ತದೆ. ಯಾಕೆಂದ್ರೆ ನೀವು ಸಣ್ಣ ನಗರಗಳಲ್ಲೂ ಇಷ್ಟು ಕಡಿಮೆ ದರಕ್ಕೆ ಒಂದು ಕಿಲೋಮೀಟರ್ ಹೋಗಲು ಸಾಧ್ಯವಿಲ್ಲ. ಹಾಗಿರುವಾಗ ಆರು ರೂಪಾಯಿ ಪ್ರಯಾಣ ದರ ಎಲ್ಲರನ್ನು ದಂಗಾಗಿಸಿದೆ. 

ಕರ್ನಾಟಕದಲ್ಲಿ ಹೆಚ್ಚು ಬೆಳೆಯುವ ಬೆಳೆಗಳು ಯಾವ್ಯಾವು? ಯಾವ್ಯಾವ ಬೆಳೆಗೆ ನಂ. 1 ಸ್ಥಾನ?

ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿದ ಮಹಿಮಾ, ಇದು ದೋಷವಾಗಿರಬೇಕು ಎಂದು ಶೀರ್ಷಿಕೆ ಹಾಕಿದ್ದಾರೆ. ಟ್ವಿಟರ್ ನಲ್ಲಿ ಈ ಪೋಸ್ಟ್ ವೈರಲ್ ಆಗಿದೆ. 42 ಸಾವಿರಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ. ಬಳಕೆದಾರರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಇಂತಹ ದೋಷ ನಮ್ಮ ಅಪ್ಲಿಕೇಶನ್‌ನಲ್ಲಿ ಏಕೆ ಬರುವುದಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನೀವು ಕೊನೆಯದಾಗಿ ಆಟೋ ಬುಕ್ ಮಾಡಿದ್ರಾ ಎಂದು ಅನೇಕ ಬಳಕೆದಾರರು ಪ್ರಶ್ನೆ ಮಾಡಿದ್ದಾರೆ. ಕೆಲವರು ಇಷ್ಟು ಬೆಲೆಯಾದರೆ 10 ಆಟೋ ಬುಕ್ ಮಾಡಬಹುದು ಅಂದ್ರೆ ಮತ್ತೊಬ್ಬರು ವೆಲ್ ಕಂ 2014 ಎಂದು ಕಮೆಂಟ್ ಮಾಡಿದ್ದಾರೆ. ನನಗೂ ಹೀಗೆ ಆಗಿತ್ತು ಎಂದು ಒಬ್ಬರು ಕಮೆಂಟ್ ಮಾಡಿದ್ರೆ ಮತ್ತೊಬ್ಬರು ಝಿರೋ ಬೆಲೆ ತೋರಿಸಿದ ಉಬರ್ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು 0.6 ಪೈಸೆ ತೋರಿಸಿತ್ತು, ಉಬರ್ ಆಟೋ ಚಾಲಕ ಇದನ್ನು ತೆಗೆದುಕೊಳ್ಳಲು ಮನಸ್ಸು ಮಾಡ್ಲಿಲ್ಲ ಎಂದು ಇನ್ನೊಬ್ಬ ಹೇಳಿದ್ದಾನೆ. ಕೆಲವೊಂದು ಕೂಪನ್ ಗಳಿದ್ರೆ ಇದು ಸಾಧ್ಯ ಎಂದು ಬಳಕೆದಾರನೊಬ್ಬ ಹೇಳಿದ್ರೆ ಮತ್ತೊಬ್ಬರು ಬೆಲೆ ಝಿರೋ ತೋರಿಸಿದ್ದಲ್ಲದೆ ಶೇಕಡಾ 35ರಷ್ಟು ಆಫ್ ಅಂತಾ ಇತ್ತು. ಹಾಗಾಗಿ ಯಾವುದೇ ಚಾಲಕ ನನ್ನ ರೈಡ್ ಒಪ್ಪಿಕೊಳ್ಳಲಿಲ್ಲವೆಂದು ಇನ್ನೊಬ್ಬರು ಹೇಳಿದ್ದಾರೆ.   
 

This has to be a bug pic.twitter.com/X2gyUCLLNU

— Mahima Chandak (@mahima_chandak)
click me!