
ಬೀಜಿಂಗ್/ ಲಂಡನ್(ಸೆ. 29) ಉದ್ಯಮಿ ಅನಿಲ್ ಅಂಬಾನಿಯವರ ವಿಶ್ವಾದ್ಯಂತ ಇರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಚೀನಾ ಮೂಲದ ಮೂರು ಬ್ಯಾಂಕುಗಳು ಸಜ್ಜಾಗಿವೆ ಎಂಬ ಮಾಹಿತಿಗಳು ಲಭ್ಯವಾಗಿದೆ.
ಈ ಬ್ಯಾಂಕುಗಳಲ್ಲಿ ಅನಿಲ್ ಅಂಬಾನಿ ಸುಮಾರು 5,300 ಕೋಟಿ ರೂ. ಸಾಲ ಪಡೆದಿದ್ದು ಬಂಡವಾಳ ವಾಪಸ್ ಪಡೆಯಲು ಚೀನಿ ಬ್ಯಾಂಕುಗಳು ಅನಿಲ್ ಅಂಬಾನಿ ಆಸ್ತಿ ವಶ ಪಡೆಸಿಕೊಳ್ಳಲು ಮುಂದಾಗಿವೆ.
ಆಭರಣಗಳನ್ನೇ ಮಾರುವ ಸ್ಥಿತಿ ಅನಿಲ್ ಗೆ ಬಂದಿದ್ದು ಯಾಕೆ?
ಚೀನಾ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್ , ಚೀನಾ ರಫ್ತು-ಆಮದು ಬ್ಯಾಂಕ್ ಮತ್ತು ಚೀನಾ ಅಭಿವೃದ್ಧಿ ಬ್ಯಾಂಕ್ ಸಾಲ ಹಿಂದಕ್ಕೆ ಪಡೆಯಲು ಲಭ್ಯವಿರುವ ಕಾನೂನು ಮಾರ್ಗಗಳ ಚಿಂತನೆ ನಡೆಸಿವೆ.
ಇನ್ನೊಂದು ಕಡೆ ವಿಚಾರ ಯುಕೆ ಕೋರ್ಟ್ ನಲ್ಲಿ ಇದ್ದು ಅನೀಲ್ ಅಂಬಾನಿ ಸಹೋದರ ಏಷ್ಯಾದ ಶ್ರಿಮಂತ ಮುಕೇಶ್ ಅಂಬಾನಿ ತಮ್ಮನ ಬಗ್ಗೆ ಮಾತನಾಡಿದ್ದಾರೆ. ಅನಿಲ್ ಸರಳ ಆಸೆಗಳಿರುವ ಸರಳ ಮನುಷ್ಯ, ಒಂದು ಸಣ್ಣ ಕಾರಿನ ಮಾಲೀಕ ಎಂಬ ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ನಷ್ಟದಲ್ಲಿರುವ ಅನಿಲ್ ಅಂಬಾನಿ ಮೇಲೆ ಒಂದಾದ ಮೇಲೆ ಒಂದು ಅಸ್ತ್ರಗಳು ಪ್ರಯೋಗ ಆಗುತ್ತಿವೆ. ಸಾಲ ಪಡೆದುಕೊಂಡ ಕಾರಣಕ್ಕೆ ಕಾನೂನು ಕ್ರಮ ಎದುರಿಸಲೇಬೇಕಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.