ಕೇವಲ 2 ಪ್ರಾಪರ್ಟಿಗಳೊಂದಿಗೆ ಸ್ಥಾಪನೆಯಾದ ಒಬೆರಾಯ್ ಗ್ರೂಪ್ ಈಗ 7 ದೇಶಗಳಲ್ಲಿ ಅಸ್ತಿತ್ವದಲ್ಲಿದೆ. ಕೇವಲ 2 ಪ್ರಾಪರ್ಟಿಗಳೊಂದಿಗೆ ಸ್ಥಾಪನೆಯಾದ ಒಬೆರಾಯ್ ಗ್ರೂಪ್ ಈಗ 7 ದೇಶಗಳಲ್ಲಿ ಅಸ್ತಿತ್ವದಲ್ಲಿದೆ. ಇದಕ್ಕೆ ಕಾರಣವಾದ ಪೃಥ್ವಿ ರಾಜ್ ಸಿಂಗ್ ಒಬೆರಾಯ್ ಮೃತಪಟ್ಟಿದ್ದಾರೆ.
ದೆಹಲಿ (ನವೆಂಬರ್ 14, 2023): ಪ್ರತಿಷ್ಠಿತ ಹೋಟೆಲ್ ಚೈನ್ ದಿ ಒಬೆರಾಯ್ ಗ್ರೂಪ್ ಕಂಪನಿಯ ಮಾಲೀಕ ಪೃಥ್ವಿ ರಾಜ್ ಸಿಂಗ್ ಒಬೆರಾಯ್ ನಿಧನರಾಗಿದ್ದಾರೆ. ಅವರಿಗೆ 94 ವರ್ಷವಾಗಿದ್ದು, ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಒಬೆರಾಯ್ ಗ್ರೂಪ್ ಸುದೀರ್ಘ ಇತಿಹಾಸವನ್ನು ಹೊಂದಿರುವ ದೇಶದ ಅತ್ಯಂತ ಪ್ರಸಿದ್ಧ ಮತ್ತು ಪ್ರತಿಷ್ಠಿತ ಹಾಸ್ಪಿಟಾಲಿಟಿ ಚೈನ್‌ಗಳಲ್ಲಿ ಒಂದಾಗಿದೆ. 1934 ರಲ್ಲಿ ರಾಯ್ ಬಹದ್ದೂರ್ ಮೋಹನ್ ಸಿಂಗ್ ಒಬೆರಾಯ್ ಗ್ರೂಪ್ ಅನ್ನು ಸ್ಥಾಪಿಸಿದರು.
ಅಂದು ಕೇವಲ 2 ಪ್ರಾಪರ್ಟಿಗಳೊಂದಿಗೆ ಸ್ಥಾಪನೆಯಾದ ಒಬೆರಾಯ್ ಗ್ರೂಪ್ ಈಗ 7 ದೇಶಗಳಲ್ಲಿ ಅಸ್ತಿತ್ವದಲ್ಲಿದೆ. ಒಬೆರಾಯ್ ಗ್ರೂಪ್‌ನ ವಿಸ್ತರಣೆ ಮತ್ತು ಅದರ ಯಶಸ್ಸು ಹೆಚ್ಚಾಗಿ ಮೋಹನ್ ಸಿಂಗ್ ಒಬೆರಾಯ್ ಪುತ್ರರಲ್ಲಿ ಒಬ್ಬರಾದ ಪೃಥ್ವಿ ರಾಜ್ ಸಿಂಗ್ ಒಬೆರಾಯ್ (PRS ಒಬೆರಾಯ್) ಅವರಿಗೆ ಸಲ್ಲುತ್ತದೆ. ಅವರು 94 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಇವರ ಕಾಲದಲ್ಲಿ ದಿ ಒಬೆರಾಯ್ ಗ್ರೂಪ್ ಅತ್ಯಂತ ಯಶಸ್ವಿಯಾಗಿದೆ.
ಇದನ್ನು ಓದಿ: ಹೋಟೆಲ್ ಉದ್ಯಮಕ್ಕೂ ಕಾಲಿಟ್ಟ ಅಂಬಾನಿ: ಟಾಟಾದ ತಾಜ್ ಹೋಟೆಲ್‌ಗೆ ಟಕ್ಕರ್ ಕೊಡಲು ರಿಲಯನ್ಸ್ ಮಾಸ್ಟರ್ ಪ್ಲ್ಯಾನ್!
PRS ಒಬೆರಾಯ್ ಅನೇಕರಿಗೆ ಸ್ಫೂರ್ತಿಯಾಗಿದ್ದರು. ಫೋರ್ಬ್ಸ್ ಪ್ರಕಾರ, ಅವರ ನಿವ್ವಳ ಮೌಲ್ಯ ಸುಮಾರು 3,829 ಕೋಟಿ ರೂ. ಎಂದು ತಿಳಿದುಬಂದಿದೆ. ಒಬೆರಾಯ್ ಅವರ ತಂದೆ ಮತ್ತು ದಿ ಒಬೆರಾಯ್ ಸಮೂಹದ ಸಂಸ್ಥಾಪಕರು ನಿಧನರಾದ ನಂತರ 2002 ರಲ್ಲಿ ಗುಂಪಿನ ಪೋಷಕ ಕಂಪನಿ EIH ಲಿಮಿಟೆಡ್‌ನ ಅಧ್ಯಕ್ಷರಾಗಿದ್ದರು ಪಿಆರ್‌ಎಸ್ ಒಬೆರಾಯ್.
ಭಾರತ, ಯುನೈಟೆಡ್ ಕಿಂಗ್‌ಡಮ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಪಿಆರ್‌ಎಸ್ ಒಬೆರಾಯ್ ಶಿಕ್ಷಣ ಪಡೆದಿದ್ದಾರೆ. ಅಲ್ಲದೆ, ಇವರು ಪ್ರಮುಖ ನಗರಗಳಲ್ಲಿ ಹಲವಾರು ಐಷಾರಾಮಿ ಹೋಟೆಲ್‌ಗಳನ್ನು ತೆರೆಯುವುದರೊಂದಿಗೆ ಅಂತಾರಾಷ್ಟ್ರೀಯ ಐಷಾರಾಮಿ ಪ್ರಯಾಣಿಕರ ನಕ್ಷೆಯಲ್ಲಿ ಒಬೆರಾಯ್ ಹೋಟೆಲ್‌ಗಳನ್ನು ಇರಿಸುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐಷಾರಾಮಿ ಒಬೆರಾಯ್ ಹೋಟೆಲ್ ಹಿಂದಿದೆ ಹೋರಾಟದ ಕಥೆ; ಸೋಲನ್ನೇ ಮೆಟ್ಟಿಲಾಗಿಸಿಕೊಂಡ ಮೋಹನ್ ಸಿಂಗ್ ರಾಯ್
ಅವರು 1967 ರಲ್ಲಿ ಒಬೆರಾಯ್ ಸೆಂಟರ್ ಆಫ್ ಲರ್ನಿಂಗ್ ಅಂಡ್ ಡೆವಲಪ್‌ಮೆಂಟ್ ಅನ್ನು ನವದೆಹಲಿಯಲ್ಲಿ ಸ್ಥಾಪಿಸಿದರು. ಒಬೆರಾಯ್ ಸೆಂಟರ್ ಆಫ್ ಲರ್ನಿಂಗ್ ಅಂಡ್ ಡೆವಲಪ್‌ಮೆಂಟ್ ಅನ್ನು ಏಷ್ಯಾದಲ್ಲಿಯೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
PRS ಒಬೆರಾಯ್ 2013 ರವರೆಗೆ EIH ಲಿಮಿಟೆಡ್‌ನ CEO ಆಗಿದ್ದರು ಮತ್ತು ಅವರ ನಂತರ ಅವರ ಮಗ ವಿಕ್ರಮ್ ಒಬೆರಾಯ್ ಅಧಿಕಾರ ವಹಿಸಿಕೊಂಡರು. "ಬಿಕಿ" ಎಂದು ಜನಪ್ರಿಯವಾಗಿ ಕರೆಯಲ್ಪಡುವ ಒಬೆರಾಯ್ ಅವರಿಗೆ 2008 ರಲ್ಲಿ ಭಾರತ ಸರ್ಕಾರದಿಂದ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣವನ್ನು ನೀಡಲಾಯಿತು.
EIH ಲಿಮಿಟೆಡ್‌ನ ಹೊರತಾಗಿ, ಒಬೆರಾಯ್ ಜೆಟ್ ಏರ್‌ವೇಸ್‌ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು. ಅವರು ಜಾಗತಿಕ ಆತಿಥ್ಯದಲ್ಲಿ 100 ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. PRS ಒಬೆರಾಯ್ EIH ಲಿಮಿಟೆಡ್‌ನ ಅಧ್ಯಕ್ಷ ಮತ್ತು ನಿರ್ದೇಶಕರಾಗಿ ತಮ್ಮ ಸ್ಥಾನವನ್ನು 3ನೇ ಮೇ 2022 ರಿಂದ ತ್ಯಜಿಸಲು ನಿರ್ಧರಿಸಿದರು.