ಸುಂದರ್ ಪಿಚೈ, ಸತ್ಯ ನಾಡೆಲ್ಲಗಿಂತ ಶ್ರೀಮಂತ, ಯಾರಿದು ಭಾರತೀಯ ಮೂಲದ ಜಯ್ ಚೌಧರಿ?

Published : Jul 10, 2025, 06:36 PM IST
Jay Chaudhry

ಸಾರಾಂಶ

ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಗಿಂತ ಶ್ರೀಮಂತ ಉದ್ಯಮಿ, ಅಮೆರಿಕದಲ್ಲಿರುವ ಟಾಪ್ 10 ಶ್ರೀಮಂತರ ವಲಸಿಗರ ಪೈಕಿ ಚೌಧರಿ ಸ್ಥಾನ ಪಡೆದಿದ್ದಾರೆ.

ನ್ಯೂಯಾರ್ಕ್ (ಜು.10) ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಸೇರಿದಂತೆ ಅಮೆರಿಕದ ಹಲವು ಶ್ರೀಮಂತರನ್ನು ಭಾರತೀಯ ಮೂಲದ ಅಮೆರಿಕನ್ ಜಯ್ ಚೌಧರಿ ಹಿಂದಿಕ್ಕಿದ್ದಾರೆ. ಆದರೆ ಜಯ್ ಚೌಧರಿ ಹೆಸರು ಇತರ ಶ್ರೀಮಂತರಂತೆ, ಉದ್ಯಮಿಗಳಂತೆ, ಸಿಇಒಗಳಂತೆ ಮುಂಚೂಣಿಯಲ್ಲಿ ಇಲ್ಲ. ಆದರೆ ಜಯ್ ಚೌಧರಿ ಆಸ್ತಿ ಬರೋಬ್ಬರಿ 17.9 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ 1.49 ಲಕ್ಷ ಕೋಟಿ ರೂಪಾಯಿ. ಪಿಚೈ ಹಾಗೂ ಸತ್ಯ ನಾಡೆಲ್ಲಾ ಸೇರಿದಂತೆ ಇತರ ಶ್ರೀಮಂತ ಸಿಇಒ, ಉದ್ಯಮಿಗಳಿಗೆ ಹೋಲಿಸಿದರೆ ಜಯ್ ಚೌಧರಿ ಆಸ್ತಿ ಭಾರಿ ಮುಂದಿದೆ.

ಯಾರಿದು ಜಯ್ ಚೌಧರಿ?

ಭಾರತೀಯ ಮೂಲದ ಜಯ್ ಚೌಧರಿ ಅಮೆರಿಕದಲ್ಲಿ Zscaler ಎಂಬ ಸೈಬರ್ ಸೆಕ್ಯೂರಿಟಿ ಕಂಪನಿಯ ಸಿಇಒ. 65 ವರ್ಷದ ಜಯ್ ಚೌಧರಿ ಭಾರತದಿಂದ ಅಮರಿಕಗೆ ಕೆಲಸಕ್ಕಾಗಿ ವಲಸೆ ಹೋಗಿ ಉದ್ಯಮ ಸಾಮ್ರಾಜ್ಯ ಕಟ್ಟಿದ ಉದ್ಯಮಿ. Zscaler ಅಮೆರಿಕದ ಮುಂಚೂಣಿಯ ಸೈಬರ್ ಸೆಕ್ಯೂರಿಟಿ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಭಾರತದಲ್ಲಿ ಶಿಕ್ಷಣ, ಅಮೆರಿಕದಲ್ಲಿ ಉದ್ಯಮ

1960ರಲ್ಲಿ ಭಾರತದ ಹಿಮಾಲಯ ಕಣಿವೆ ತಪ್ಪಲಿನ ಸಣ್ಣ ಗ್ರಾಮದಲ್ಲಿ ಹುಟ್ಟಿದ ಜಯ್ ಚೌಧರಿ, ಎಲ್ಲರಂತೆ ಬಾಲ್ಯವನ್ನು ಕಳೆದಿದ್ದಾರೆ. ರಸ್ತೆ ಇಲ್ಲ, ವಿದ್ಯುತ್ ಸಂಪರ್ಕವಿಲ್ಲ, ಆರ್ಥಿಕ ಪರಿಸ್ಥಿತಿ ನೆಟ್ಟಗಿಲ್ಲ, ಹೀಗೆ ಹಲವು ಅಡೆ ತಡೆಗಳ ನಡುವೆ ಪ್ರಾಥಮಿಕ, ಪೌಢ ಶಿಕ್ಷಣ ಪೂರೈಸಿದ್ದ ಜಯ್ ಚೌಧರಿ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದ್ದರು. ಉನ್ನತ ಶಿಕ್ಷಣಕ್ಕಾಗಿ ಅಮೆರಿಕಗೆ ತೆರಳಿದ ಜಯ್ ಜೌಧರಿ ಬಳಿಕ ಇತಿಹಾಸ ಸೃಷ್ಟಿಸಿದರು.

1980ರಲ್ಲಿ ಅಮೆರಿಕಗೆ ತೆರಳಿದ ಜಯ್ ಚೌಧರಿ, ಮಾಸ್ಟರ್ ಆಫ್ ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ಎಂಜಿನೀಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಿನಿಸಿನ್ನಟಿ ಯನಿವರ್ಸಿಟಿ ಹಾಗೂ ಹಾರ್ವರ್ಡ್ ಬ್ಯೂಸಿನೆಸ್ ಸ್ಕೂಲ್‌ನ್ಲೂ ಪದವಿ ಪಡೆದಿದ್ದಾರೆ. ಬಳಿಕ ಹಲಲವು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಉನ್ನತ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

2008ರಲ್ಲಿ Zscaler ಸೈಬರ್ ಸೆಕ್ಯೂರಿಟಿ ಸಂಸ್ಥೆ ಕಟ್ಟಿದ ಚೌಧರಿ

2008ರಲ್ಲಿ ಜಯ್ ಚೌಧರಿ Zscaler ಅನ್ನೋ ಸೈಬರ್ ಸೆಕ್ಯೂರಿಟಿ ಸಂಸ್ಥೆ ಹುಟ್ಟು ಹಾಕಿದರು. 2008ರ ವೇಳೆ ಕಂಪ್ಯೂಟರ್ ಇಡೀ ವ್ಯಾಪಿಸಿತ್ತು. ಅಮೆರಿಕದಲ್ಲಿ ಡಿಜಿಟಲ್ ಕ್ರಾಂತಿ ಆಗಿತ್ತು. ಹೀಗಾಗಿ ಸೈಬರ್ ಸಕ್ಯೂರಿಟಿ ಅಗತ್ಯತೆ ಅರಿತು ಸಂಸ್ಥೆ ಹುಟ್ಟು ಹಾಕಿದರು. ಇದೀಗ Zscaler ಕಂಪನಿಯ ಶೇಕಡಾ 40 ರಷ್ಟು ಪಾಲು ಜಯ್ ಚೌಧರಿ ಹಾಗೂ ಅವರ ಕುಟುಂಬದ ಬಳಿ ಇದೆ. ಇದಕ್ಕೂ ಮೊದಲು ಜಯ್ ಚೌಧರಿ ಹಾಗೂ ಪತ್ನಿ ಜ್ಯೋತಿ ಹಲವು ಟೆಕ್ ಕಂಪನಿಗಳನ್ನು ಆರಂಭಿಸಿದ್ದರು. ಸೆಕ್ಯೂರ್ ಐಟಿ, ಕೋರ್ ಹಾರ್ಬರ್, ಸಿಫರ್ ಟ್ರಸ್ಟ್, ಏರ್ ಡಿಫೆನ್ಸ್ ಸೇರಿದಂತೆ ಹಲವು ಟೆಕ್ ವೆಂಚರ್ ಆರಂಭಿಸಿದ್ದರು. 2008ರ ಬಳಿಕ ಈ ಎಲ್ಲಾ ಕಂಪನಿಗಳನ್ನು Zscaler ಅಡಿಯಲ್ಲಿ ತರಲಾಯಿತು.

2025ರ ಪ್ರಕಾರ ಜಯ್ ಚೌಧರಿ ಆಸ್ತಿ

2025ರ ಪ್ರಕಾರ ಜಯ್ ಚೌಧರಿ ಆಸ್ತಿ 1.49 ಲಕ್ಷ ಕೋಟಿ ರೂಪಾಯಿ. ಅಮೆರಿಕಗೆ ವಲಸೆ ಹೋಗಿ ಉದ್ಯಮ ಸಾಮ್ರಾಜ್ಯ, ಕಂಪನಿ ಸಿಇಒ ಸೇರಿದಂತೆ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಾ ಶ್ರೀಮಂತರಾಗಿರುವ ಪೈಕಿ ಜಯ್ ಚೌಧರಿ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!