ಡಿನ್ನರ್ ಡೇಟ್‌ಗೆ ಬಿಲ್‌ಗೇಟ್ಸ್ ರಣ್ಬೀರ್‌ ಕಪೂರ್‌ ಮಧ್ಯೆ ನೀತಾ ಅಂಬಾನಿ ಆಯ್ಕೆ ಮಾಡಿದ್ದು ಯಾರನ್ನಾ?

Published : Feb 20, 2025, 03:50 PM ISTUpdated : Apr 17, 2025, 03:55 PM IST
ಡಿನ್ನರ್ ಡೇಟ್‌ಗೆ ಬಿಲ್‌ಗೇಟ್ಸ್ ರಣ್ಬೀರ್‌ ಕಪೂರ್‌ ಮಧ್ಯೆ ನೀತಾ ಅಂಬಾನಿ ಆಯ್ಕೆ ಮಾಡಿದ್ದು ಯಾರನ್ನಾ?

ಸಾರಾಂಶ

ಹಾರ್ವರ್ಡ್ ಇಂಡಿಯನ್ ಕಾನ್ಫರೆನ್ಸ್‌ನಲ್ಲಿ ನೀತಾ ಅಂಬಾನಿ ಭಾಗವಹಿಸಿದ್ದು, ರಾಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಬಾಲಿವುಡ್ ನಟರ ಬಗ್ಗೆ ಕೇಳಿದ ಪ್ರಶ್ನೆಗೆ ನೀತಾ ಅಂಬಾನಿ ಉತ್ತರಿಸಿದ್ದು, ಆ ವಿಡಿಯೋ ವೈರಲ್ ಆಗಿದೆ.

ಹಾರ್ವರ್ಡ್‌ ಇಂಡಿಯನ್ ಕಾನ್ಫರೆನ್ಸ್‌ 2025ರಲ್ಲಿ ಭಾಗವಹಿಸಿದ ನಂತರ ನೀತಾ ಅಂಬಾನಿ  ಸುದ್ದಿಯಲ್ಲಿದ್ದಾರೆ. ಕಳೆದ ವಾರಾಂತ್ಯದಲ್ಲಿ ನಡೆದ ಈ ಹಾರ್ವರ್ಡ್‌ ಇಂಡಿಯಾ ಕಾನ್ಫರೆನ್ಸ್‌ನ ವೀಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ರಿಲಯನ್ಸ್ ಫೌಂಡೇಶನ್‌ನ ಮುಖ್ಯಸ್ಥೆಯಾಗಿರುವ ನೀತಾ ಅಂಬಾನಿ ಅವರಿಗೆ ಈ ಕಾನ್ಫರೆನ್ಸ್‌ನಲ್ಲಿ ತಮಾಷೆಯಿಂದ ತುಂಬಿದ ರಾಪಿಡ್ ಫೈರ್ ಪ್ರಶ್ನೆಗಳನ್ನು ಕೇಳಲಾಗಿತ್ತು. ಅಲ್ಲಿ ಅವರಿಗೆ ಕೆಲವು ಬಾಲಿವುಡ್‌ಗೆ ಸಂಬಂಧಿಸಿದ ಪ್ರಶ್ನೆಗೆಳನ್ನು ಕೇಳಲಾಗಿತ್ತು. ಇದೇ ವೇಳೆ ನೀತಾ ಅಂಬಾನಿ ಅವರ ಇಷ್ಟದ ಹೀರೋ ಯಾರು ಎಂಬುದು ಕೂಡ ತಿಳಿಯಿತು
ಜೊತೆಗೆ ಆತ ತಮಗೆಷ್ಟು ಇಷ್ಟ ಎಂಬುದನ್ನು ನೀತಾ ಹೇಳಿಕೊಂಡರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ರೆಡಿಟ್‌ನಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು, ಒಂದು ವಿಡಿಯೋದಲ್ಲಿ ನೀತಾ ಅಂಬಾನಿಗೆ ರಾಪಿಡ್ ಫೈರ್ ಪ್ರಶ್ನೆಗಳಲ್ಲಿ ನೀತಾಗೆ ಹಾಲಿವುಡ್ ಹಾಗೂ ಬಾಲಿವುಡ್ ನಡುವೆ ಒಂದನ್ನು ಆಯ್ಕೆ ಮಾಡುವಂತೆ ಕೇಳುತ್ತಾರೆ. ಇಲ್ಲಿ ಬಾಲಿವುಡ್‌ ಆಯ್ಕೆ ಮಾಡಿಕೊಂಡ ನೀತಾಗೆ ನಂತರ ಹಿಂದಿ ಸಿನಿಮಾಗಳಲ್ಲಿ ಇಷ್ಟದ ನಟ ಯಾರು ಎಂದು ಕೇಳಿದರು. ಈ ವೇಳೆ ಅವರು ಅಮಿತಾಭ್ ಬಚ್ಚನ್ ಎಂದು ಹೇಳಿದರು. ನಂತರ ರಣ್‌ಬೀರ್ ಕಪೂರ್ ಹಾಗೂ ರಣ್ವೀರ್ ಕಪೂರ್ ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವಂತೆ ಸೂಚಿಸಿದಾಗ ರಣ್ಬೀರ್‌ ಎಂದ ನೀತಾ ಅದಕ್ಕೆ ಕಾರಣವನ್ನು ನೀಡಿದರು. ರಣ್ಬೀರ್ ಏಕೆಂದರೆ ಇದರಿಂದ ನನ್ನ ಪುತ್ರ ಆಕಾಶ್ ಫುಲ್ ಖುಷಿಯಾಗುತ್ತಾನೆ ಏಕೆಂದರೆ ಆತ ಆಕಾಶ್‌ನ ಬೆಸ್ಟ್ ಫ್ರೆಂಡ್ ಎಂದು ನೀತಾ ಉತ್ತರಿಸಿದ್ದಾರೆ.

ನಂತರ ಸಂದರ್ಶಕರು ನೀವು ರಾತ್ರಿ ಡಿನ್ನರ್‌ ಯಾರ ಜೊತೆ ಹೋಗಲು ಇಷ್ಟಪಡುವಿರಿ ಎಂದು ಕೇಳಿ ರಣ್ಬೀರ್ ಹಾಗೂ ಬಿಲ್‌ಗೇಟ್ಸ್ ಹೆಸರಿನ ಆಯ್ಕೆ ನೀಡಿದ್ದಾರೆ. ಈ ವೇಳೆ ನೀತಾ ಅಂಬಾನಿ ಸ್ವಲ್ಪ ಯೋಚಿಸಿ ಮಾಜಿ ಮೈಕ್ರೋಸಾಫ್ಟ್ ಸಿಇಒ ಬಿಲ್‌ಗೇಟ್ಸ್‌ ಬದಲು ಬಾಲಿವುಡ್ ನಟ ರಣ್ಬೀರ್ ಕಪೂರ್ ಅವರನ್ನೇ ಆಯ್ಕೆ ಮಾಡಿದ್ದಾರೆ. ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಲ್ ಗೇಟ್ಸ್‌ ಬದಲು ರಣಬೀರ್‌ರನ್ನು ಆಯ್ಕೆ ಮಾಡುವುದು ಈಗಿನ ಭಾರತೀಯ ಮನಸ್ಥಿತಿಗೆ ಸರಿ ಹೊಂದುತ್ತದೆ. ಅದು ಅತಿಯಾದ ದೇಶಭಕ್ತಿ. ಜೊತೆಗೆ, ರಣ್ಬೀರ್ ಅವರ ಮಗನ ಆತ್ಮೀಯ ಸ್ನೇಹಿತ, ಆದ್ದರಿಂದ 'ಬೇಟಾ ಭಿ ರಾಜಿ ಔರ್ ದೇಶ್ ವಾಲೇ ಭಿ ರಾಜಿ' (ಮಗನಿಗೂ ಸಮಾಧಾನ ದೇಶಕ್ಕೂ ಸಮಾಧಾನ) ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಹೊಸ ವರ್ಷದ ಆಫರ್‌ ನಲ್ಲಿ ಟಿವಿ, ಮೊಬೈಲ್ ಖರೀದಿಸಲು ಫ್ಲಾನ್ ಮಾಡಿದ್ರೆ ನಿಮಗಿದು ಶಾಕಿಂಗ್ ಸುದ್ದಿ!
2026ರಲ್ಲಿ ಚಿನ್ನದ ಬೆಲೆ ತೀವ್ರ ಏರಿಳಿತ, ಕಾರಣ ಬಿಚ್ಚಿಟ್ಟು ಹೂಡಿಕೆದಾರರಿಗೆ ಎಚ್ಚರಿಕೆ ಕೊಟ್ಟ ಪ್ರಮುಖ ಸಂಸ್ಥೆ!