ಏನ್ ಆಟಾ ಆಡ್ತೀರಾ?: ಟ್ರಂಪ್ ಮೇಲೆ ಮೋದಿ ಕೂಗಾಡಿದ್ರಾ?

Published : Nov 02, 2018, 11:34 AM IST
ಏನ್ ಆಟಾ ಆಡ್ತೀರಾ?: ಟ್ರಂಪ್ ಮೇಲೆ ಮೋದಿ ಕೂಗಾಡಿದ್ರಾ?

ಸಾರಾಂಶ

ಭಾರತದ 50ಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ತೆರಿಗೆ ವಿನಾಯ್ತಿ ರದ್ದು! ಅಮೆರಿಕದ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಭಾರತ! ಡೋನಾಲ್ಡ್ ಟ್ರಂಪ್, ನರೇಂದ್ರ ಮೋದಿ ನಡುವೆ ಮಾತುಕತೆ! ಅಮೆರಿಕದ ನಿರ್ಧಾರ ಪ್ರಶ್ನಿಸಿದ ಪ್ರಧಾನಿ ನರೇಂದ್ರ ಮೋದಿ! ಮಾತುಕತೆ ಮುಂದುವರೆದಿದೆ ಎಂದ ಶ್ವೇತ ಭವನ! ಭಾರತ ನಮಗೆ ಅತ್ಯಂತ ಆಪ್ತ ರಾಷ್ಟ್ರ ಎಂದ ಡೋನಾಲ್ಡ್ ಟ್ರಂಪ್! ಭಾರತದ ಉದ್ಯಮ ಕ್ಷೇತ್ರದ ಪಾಲಿಗೆ ಇನ್ನೂ ಉಳಿದಿದೆ ಆಶಾವಾದ  

ವಾಷಿಂಗ್ಟನ್(ನ.2): ಭಾರತದಿಂದ ರಫ್ತಾಗುವ 50ಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ತೆರಿಗೆ ವಿನಾಯ್ತಿ ರದ್ದು ಮಾಡಿ ಅಮೆರಿಕ ಆಘಾತ ಕೊಟ್ಟ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ಮಾತುಕತೆ ನಡೆದಿದೆ.

ಎರಡೂ ದೇಶಗಳ ನಡುವಿನ ವ್ಯಾಪಾರ ವಿಷಯಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದು, ಇದರಿಂದ ಭಾರತದ ಉದ್ಯಮ ಕ್ಷೇತ್ರದ ಪಾಲಿಗೆ ಇನ್ನೂ ಆಶಾವಾದ ಉಳಿದುಕೊಂಡಿದೆ.

ಅತಿ ಉನ್ನತ ಮೌಲ್ಯ ನೀಡುವ ದೇಶಗಳಲ್ಲಿ ಭಾರತ ನಮಗೆ ಮುಖ್ಯವಾದುದು ಎಂದಿರುವ ಶ್ವೇತ ಭವನದ ಮುಖ್ಯ ಆರ್ಥಿಕ ಸಲಹೆಗಾರ ಲಾರ್ರಿ ಕುಡ್ಲೊ ನಮ್ಮ ಅಧ್ಯಕ್ಷರು ಭಾರತದ ಪ್ರಧಾನಿ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನೂ ಮಾತುಕತೆ ಹಂತದಲ್ಲಿದ್ದೇವೆ ಎಂದು  ಸುದ್ದಿಗಾರರಿಗೆ ತಿಳಿಸಿದರು.

ಇನ್ನು ಈ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಸುರೇಶ್ ಪ್ರಭು, ದ್ವಿಪಕ್ಷೀಯ ವಾಣಿಜ್ಯ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಭಾರತ ಮತ್ತು ಅಮೆರಿಕ ಮಾತುಕತೆ ನಡೆಸುತ್ತಿವೆ. ಸಂಧಾನ ಮಾತುಕತೆ ಮುಂದುವರಿದಿದೆ ಎಂದು ಹೇಳಿದ್ದರು. 

ಭಾರತದ ಕೆಲವು ಸ್ಟೀಲ್ ಮತ್ತು ಅಲ್ಯೂಮಿನಿಯಂ ಉತ್ಪನ್ನಗಳಿಗೆ ಅಧಿಕ ತೆರಿಗೆ ಹೇರುವುದರಿಂದ ವಿನಾಯ್ತಿ ನೀಡುವಂತೆ, ಕೆಲವು ಸ್ಥಳೀಯ ವಸ್ತುಗಳಿಗೆ ಸಾಮಾನ್ಯ ಆದ್ಯತೆ ವ್ಯವಸ್ಥೆ(ಜಿಎಸ್ ಪಿ)ಯಡಿ ವಿನಾಯ್ತಿ ನೀಡುವಂತೆ, ಭಾರತದ ಕೃಷಿ, ಆಟೊಮೊಬೈಲ್, ಆಟೋ ಉಪಕರಣಗಳು ಮತ್ತು ಎಂಜಿನಿಯರಿಂಗ್ ಉತ್ಪನ್ನಗಳಿಗೆ ಅಮೆರಿಕಾದಲ್ಲಿ ವಿಶಾಲ ಮಾರುಕಟ್ಟೆ ಒದಗಿಸಿಕೊಡುವಂತೆ ಭಾರತ ಒತ್ತಾಯಿಸುತ್ತಿದೆ.

ಕಳೆದ ಆರ್ಥಿಕ ಸಾಲಿನಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತು ಆದ ವಸ್ತುಗಳ ಮೌಲ್ಯ 47.9 ಶತಕೋಟಿ ಡಾಲರ್ ಆಗಿದ್ದು, ಅಮೆರಿಕದಿಂದ ಆಮದು ಆದ ವಸ್ತುಗಳು 26.7 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ