ಸರ್ಟಿಫಿಕೇಟ್ ಆಫ್ ಕವರೇಜ್ (ಸಿಒಸಿ) ಬಗ್ಗೆ ವಿದೇಶಕ್ಕೆ ತೆರಳುತ್ತಿರುವ ಉದ್ಯೋಗಿಗಳು ಮಾಹಿತಿ ಹೊಂದಿರೋದು ಅಗತ್ಯ. ಸಿಒಸಿಯಿಂದ ವಿದೇಶದಲ್ಲಿ ಸಾಮಾಜಿಕ ಭದ್ರತೆ ಯೋಜನೆಗೆ ಕೊಡುಗೆ ನೀಡುವುದರಿಂದ ವಿನಾಯ್ತಿ ಪಡೆಯಲು ಸಾಧ್ಯವಿದೆ. ಹಾಗಾದ್ರೆ ಸಿಒಸಿ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ.
Business Desk:ಕೆಲಸಕ್ಕಾಗಿ ನೀವು ವಿದೇಶಕ್ಕೆ ತೆರಳುತ್ತಿದ್ದರೆ, ಸರ್ಟಿಫಿಕೇಟ್ ಆಫ್ ಕವರೇಜ್ (ಸಿಒಸಿ) ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಇದು ನಮ್ಮ ಸಾಮಾಜಿಕ ಭದ್ರತೆ ಯೋಜನೆ ಹಾಗೂ ವಿಮಾ ಕವರೇಜ್ ಬಗ್ಗೆ ತಿಳಿಸುತ್ತದೆ. ವಿದೇಶಕ್ಕೆ ಕೆಲಸಕ್ಕಾಗಿ ತೆರಳುತ್ತಿರುವ ಭಾರತೀಯ ಉದ್ಯೋಗಿಗಳು ಭಾರತದಲ್ಲಿ ಪಿಂಚಣಿ ಯೋಜನೆಗೆ ಕೊಡುಗೆ ನೀಡುತ್ತಿದ್ದರೆ ಇಪಿಎಫ್ ಒ ನಿಂದ ಸರ್ಟಿಫಿಕೇಟ್ ಆಫ್ ಕವರೇಜ್ ಪಡೆಯಬಹುದು. ಈ ಸರ್ಟಿಫಿಕೇಟ್ ಹೊಂದಿರುವ ಕೆಲಸಗಾರರು ಆ ರಾಷ್ಟ್ರದಲ್ಲಿ ಸಾಮಾಜಿಕ ಭದ್ರತೆ ಯೋಜನೆಗೆ ಕೊಡುಗೆ ನೀಡುವುದರಿಂದ ವಿನಾಯ್ತಿ ಪಡೆಯುತ್ತಾರೆ. ಬೇರೆ ರಾಷ್ಟ್ರಗಳಲ್ಲಿ ಕೂಡ ಅಲ್ಲಿನ ಕಾನೂನಿಗೆ ಅನುಗುಣವಾಗಿ ನೀವು ಸಾಮಾಜಿಕ ಭದ್ರತೆ ನಿಧಿಗೆ ಕೊಡುಗೆ ನೀಡಬೇಕಾಗುತ್ತದೆ. ಸರ್ಟಿಫಿಕೇಟ್ ಆಫ್ ಕವರೇಜ್ ಗೆ ನೀವು ಆನ್ ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ 'ಅಂತಾರಾಷ್ಟ್ರೀಯ ಉದ್ಯೋಗಿಗಳ ಪೋರ್ಟಲ್' ನಲ್ಲಿ ಇದಕ್ಕಾಗಿಯೇ ಅವಕಾಶ ಕಲ್ಪಿಸಿದೆ. ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇಪಿಎಫ್ಒ ಈ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದೆ. ಈ ಹಿಂದಿನಂತೆ ಕಾಗದ ಪತ್ರಗಳ ವ್ಯವಹಾರವಿಲ್ಲದೆ ಆನ್ ಲೈನ್ ನಲ್ಲೇ ಸುಲಭವಾಗಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಆನ್ ಲೈನ್ ನಲ್ಲಿ ಸಿಒಸಿ ಪಡೆಯೋದು ಹೇಗೆ?
*ಮೊದಲಿಗೆ ‘International Workers Portal’ಭೇಟಿ ನೀಡಿ. ಆ ಬಳಿಕ ‘Application for CoC’ಆಯ್ಕೆ ಮಾಡಿ.
*ಯುಎಎನ್ ಹಾಗೂ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ. ಆ ಬಳಿಕ ಸದಸ್ಯತ್ವ ಐಡಿ ಆಯ್ಕೆ ಮಾಡಿ.
*ಆ ಬಳಿಕ ದಾಖಲೆಗಳ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಹಾಗೂ ಸ್ಕ್ಯಾನ್ ಮಾಡಿರುವ ಪಾಸ್ ಪೋರ್ಟ್ ಪ್ರತಿಯನ್ನು ಅಪ್ಲೋಡ್ ಮಾಡಿ.
undefined
ಜ.1ರಿಂದ ಹೊಸ ವಿಮಾ ನಿಯಮ ಜಾರಿ; ವಿಮೆ ಖರೀದಿಗೆ ಕೆವೈಸಿ ಕಡ್ಡಾಯ
*ನಿಮ್ಮ ಅರ್ಜಿ ಐಡಬ್ಲ್ಯು ಪೋರ್ಟಲ್ ನಲ್ಲಿ ಉದ್ಯೋಗದಾತರ ಪರಿಶೀಲನೆ ಹಾಗೂ ದೃಢೀಕರಣಕ್ಕೆ ಹೋಗಲಿದೆ.
*ಆ ಬಳಿಕ ದೃಢೀಕರಿಸಿದ ಹಾಗೂ ಅಟೆಸ್ಟ್ ಆಗಿರುವ ಅರ್ಜಿಯನ್ನು ಸಂಬಂಧಪಟ್ಟ ಇಪಿಎಫ್ ಒ ಪ್ರಾದೇಶಿಕ ಕಚೇರಿಗೆ ಅನುಮೋದನೆಗೆ ಕಳುಹಿಸಬೇಕು.
*ಅನುಮೋದನೆ ಸಿಕ್ಕ ಬಳಿಕ ಉದ್ಯೋಗದಾತರು ಅಂತಾರಾಷ್ಟ್ರೀಯ ಕಾರ್ಮಿಕರ ಪೋರ್ಟಲ್ ನಿಂದ ಸಿಒಸಿ ಡೌನ್ ಲೋಡ್ ಮಾಡಬಹುದು.
2023ರಲ್ಲಿ ಈ ನಾಲ್ಕು ಬ್ಯಾಂಕುಗಳ ವಿಶೇಷ ಎಫ್ ಡಿ ಯೋಜನೆ ಸ್ಥಗಿತ
ನಿವೃತ್ತಿ ವಯಸ್ಸು ಹೆಚ್ಚಳ
ಭಾರತದಲ್ಲಿ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು (Retirement age)ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಸಲಹೆ ನೀಡಿದೆ. 2047ರ ವೇಳೆಗೆ ಭಾರತದಲ್ಲಿ ಹಿರಿಯ ನಾಗರಿಕರ (Senior Citizen) ಸಂಖ್ಯೆ ಹೆಚ್ಚಲಿದೆ. 60 ವರ್ಷ ಮೇಲ್ಪಟ್ಟವರ ಸಂಖ್ಯೆ ಸುಮಾರು 14 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು ಇಪಿಎಫ್ಒ (EPFO) ಮೇಲೆ ಹೆಚ್ಚಿನ ಒತ್ತಡ ಹೇರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಿವೃತ್ತಿ ವಯಸ್ಸು ಹೆಚ್ಚಿಸುವಂತೆ ಇಪಿಎಫ್ಒ ತನ್ನ 'ವಿಷನ್ 2047 ಡಾಕ್ಯುಮೆಂಟ್'ನಲ್ಲಿ ಸಲಹೆ ನೀಡಿದೆ. 2047ರ ಸಮಯದಲ್ಲಿ ಹೆಚ್ಚಿನ ಜನ ನಿವೃತ್ತಿ ಹೊಂದುವುದರಿಂದ ಇಪಿಎಫ್ಒ ಅವರೆಲ್ಲರಿಗೂ ಪಿಂಚಣಿ (Pension) ಹಣ ನೀಡೋದು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ನಿವೃತ್ತಿ ವಯಸ್ಸನ್ನು ಹೆಚ್ಚು ಮಾಡಿದ್ರೆ ಪಿಂಚಣಿ ಸಂಸ್ಥೆಗಳ ಮೇಲಿನ ಒತ್ತಡ ತಗ್ಗುತ್ತದೆ ಎಂಬುದು ಇಪಿಎಫ್ಒ ಅಭಿಪ್ರಾಯ. 'ಇತರ ದೇಶಗಳ ಅನುಭವಗಳನ್ನು ಅಧ್ಯಯನ ಮಾಡಿ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಸಲಹೆ ನೀಡಲಾಗಿದೆ. ಇದ್ರಿಂದ ಪಿಂಚಣಿ ವ್ಯವಸ್ಥೆ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ' ಎಂದು ಇಪಿಎಫ್ಒ ಡಾಕ್ಯುಮೆಂಟ್ ನಲ್ಲಿ ತಿಳಿಸಿದೆ. ಪ್ರಸ್ತುತ ಇಪಿಎಫ್ಒ (EPFO) ಸುಮಾರು 6 ಕೋಟಿ ಚಂದಾದಾರರನ್ನು ಹೊಂದಿದೆ.