10 ಸಾವಿರಕ್ಕಿಂತಲೂ ಕಡಿಮೆ ಬಂಡವಾಳದಲ್ಲಿ ಶುರು ಮಾಡಬಹುದು ಈ ಬ್ಯುಸಿನೆಸ್

By Suvarna News  |  First Published Sep 14, 2022, 2:55 PM IST

ಬ್ಯುಸಿನೆಸ್ ನಲ್ಲಿ ಲಾಭ, ನಷ್ಟ ಸಾಮಾನ್ಯ. ಆದ್ರೆ ನಷ್ಟವೇ ಹೆಚ್ಚಾದ್ರೆ ವ್ಯಾಪಾರ ಮಾಡಿ ಪ್ರಯೋಜನವಿಲ್ಲ. ಹಾಗಾಗಿ ಜನರು ದೊಡ್ಡ ಮಟ್ಟದ ಹೂಡಿಕೆಗೆ ಹೆದರ್ತಾರೆ. ಬ್ಯುಸಿನೆಸ್ ಮಾಡುವ ಮನಸ್ಸಿದೆ ಎನ್ನುವವರು ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡಿ, ಹಣ ಗಳಿಸುವ ವ್ಯವಹಾರ ಹುಡುಕಿಕೊಳ್ಳಬೇಕು.
 


ಸ್ವಂತ ಬ್ಯುಸಿನೆಸ್ ಶುರು ಮಾಡ್ಬೇಕೆಂಬ ಆಸೆ ಅನೇಕರಿಗಿರುತ್ತೆ. ಆದ್ರೆ ಹೂಡಿಕೆ ಅಥವಾ ಯೋಜನೆ ಮಾಡೋದ್ರಲ್ಲಿ ಜನರು ಫೇಲ್ ಆಗ್ತಾರೆ. ಸರಿಯಾದ ಬ್ಯುಸಿನೆಸ್ ಆಯ್ಕೆ ಮಾಡಿಕೊಳ್ಳದೆ ಜನರು ಬ್ಯುಸಿನೆಸ್ ನಲ್ಲಿ ನಷ್ಟ ಅನುಭವಿಸ್ತಾರೆ. ತುಂಬಾ ಹೂಡಿಕೆ ಮಾಡಿ ಕೈಸುಟ್ಟುಕೊಂಡ್ರೆ ಎಂಬ ಭಯಕ್ಕೆ ಬ್ಯುಸಿನೆಸ್ ಗೆ ಕೈ ಹಾಕದ ಅನೇಕರಿದ್ದಾರೆ. ಕಡಿಮೆ ಹೂಡಿಕೆಯಲ್ಲಿ ಮನೆಯಲ್ಲಿ ಕುಳಿತು ಮಾಡಬಹುದಾದ ಅನೇಕ ಬ್ಯುಸಿನೆಸ್ ಗಳಿವೆ. ಅದಕ್ಕೆ ಹೆಚ್ಚಿನ ಬಂಡವಾಳ ಬೇಕಾಗಿಲ್ಲ ಹಾಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕಡಿಮೆ ಬಜೆಟ್ ನಲ್ಲಿ ನೀವು ಮಾಡಬಹುದಾದ ಅರೆಕಾಲಿಕ ಬ್ಯುಸಿನೆಸ್ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.

ಸಣ್ಣ ಬ್ಯುಸಿನೆಸ್ (Business) ಐಡಿಯಾ :
ಮಿನರಲ್ (Mineral) ವಾಟರ್ ಸಪ್ಲೈ :
ಮಿನರಲ್ ವಾಟರ್ ಸಪ್ಲೈ ಬ್ಯುಸಿನೆಸ್ ಮಾಡಲು ಬಯಸಿದ್ರೆ ನೀವು ಆರಾಮವಾಗಿ ಇದನ್ನು ಶುರು ಮಾಡಬಹುದು. ನೀವು 10 ಸಾವಿರ ರೂಪಾಯಿಗಿಂತ ಕಡಿಮೆ ಹೂಡಿಕೆನ (Investment) ಮಾಡಿ ಇದನ್ನು ಶುರು ಮಾಡಬಹುದು. ಇದಕ್ಕೆ ಹೆಚ್ಚು ಜನರ ಅಗತ್ಯವಿಲ್ಲ. ಕೇವಲ ಇಬ್ಬರನ್ನು ಇಟ್ಟುಕೊಂಡು ನೀವು ಈ ವ್ಯವಹಾರ ಶುರು ಮಾಡಬಹುದು. ನಿಮ್ಮ ಮನೆ ಸುತ್ತಮುತ್ತಲ ಪ್ರದೇಶದಲ್ಲಿಯೇ ನೀವು ಈ ವ್ಯವಹಾರ ಮಾಡಬಹುದು.

Tap to resize

Latest Videos

ಮೊಬೈಲ್ (Mobile) ರಿಪೇರಿ ಬ್ಯುಸಿನೆಸ್ : ಮೊಬೈಲ್ ಗೆ ಈಗ ಬೇಡಿಕೆಯಿದೆ. ಹಾಗೆ ಮೊಬೈಲ್ ರಿಪೇರಿಗೂ ಬೇಡಿಕೆಯಿದೆ. ಮೊಬೈಲ್ ರಿಪೇರಿ ಬಗ್ಗೆ ಜ್ಞಾನ ಇರುವವರು ಇದನ್ನು ಶುರು ಮಾಡಬಹುದು. ಒಂದ್ವೇಳೆ ಮೊಬೈಲ್ ಬ್ಯುಸಿನೆಸ್ ಶುರು ಮಾಡ್ತಿರಿ ಎಂದಾದ್ರೆ ನೀವು ಮೊಬೈಲ್ ರಿಪೇರಿ ಕೋರ್ಸ್ ಕೂಡ ಮಾಡಬಹುದು. ಕೇವಲ ಮೂರು ತಿಂಗಳ ಕೋರ್ಸ್ ಮಾಡಿ ನಂತ್ರ ನೀವು ರಿಪೇರಿ ಶಾಪ್ ತೆರೆಯಬಹುದು. ನಿಮ್ಮ ಮನೆಯಲ್ಲಿಯೇ ನೀವು ಈ ವ್ಯವಹಾರವನ್ನು ಶುರು ಮಾಡಬಹುದು.

ಮಕ್ಕಳ ಡಾನ್ಸ್ (Dance) ಕ್ಲಾಸ್ : ಕೊರೊನಾ ನಂತ್ರ ಮತ್ತೆ ಮಕ್ಕಳು ಮನೆಯಿಂದ ಹೊರಗೆ ಬರ್ತಿದ್ದಾರೆ. ಮಕ್ಕಳನ್ನು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಲು ಪಾಲಕರು ಮುಂದಾಗುತ್ತಿದ್ದಾರೆ. ನಿಮಗೆ ನೃತ್ಯದಲ್ಲಿ ಆಸಕ್ತಿಯಿದ್ದು, ನೃತ್ಯ ಕಲಿಸುವ ಕಲೆ ಗೊತ್ತಿದ್ದರೆ ನೀವು ನಿಮ್ಮ ಮನೆಯಲ್ಲಿಯೇ ಮಕ್ಕಳಿಗೆ ನೃತ್ಯ ಕಲಿಸಲು ಶುರು ಮಾಡಬಹುದು.  

ನಿಮಗೆ ಗೊತ್ತಿಲ್ಲದೇ ಅದು, ಇದು ಅಂಥ ಸರ್ವಿಸ್ ಚಾರ್ಜ್ ಹಾಕುತ್ತೆ ಬ್ಯಾಂಕ್, ಇರಲಿ ಗಮನ

ಯೋಗ ತರಬೇತಿ (Yoga Training) : ಯೋಗಕ್ಕೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗ್ತಿದೆ. ಯೋಗ ತರಬೇತುದಾರರಿಗೂ ಬೇಡಿಕೆ ಹೆಚ್ಚಾಗ್ತಿದೆ. ನೀವು ಯೋಗ ಕಲಿತಿದ್ದರೆ ಅಥವಾ ಯೋಗದ ಬಗ್ಗೆ ನಿಮಗೆ ಜ್ಞಾನವಿದ್ದರೆ ನೀವು ಕೂಡ ಯೋಗ ಶಿಕ್ಷಕರಾಗಿ ಕೆಲಸ ಮಾಡಬಹುದು. ಮನೆಯಲ್ಲಿಯೇ ವೃದ್ಧರು,ಮಕ್ಕಳು ಅಥವಾ ಮಹಿಳೆಯರಿಗೆ ಯೋಗ ಕಲಿಸುವ ಮೂಲಕ ನೀವು ತಕ್ಕ ಮಟ್ಟಿಗೆ ಗಳಿಕೆ ಶುರು ಮಾಡಬಹುದು. ಆಸನಗಳು ಮಾತ್ರವಲ್ಲ ಪ್ರಾಣಾಯಾಮ ಮತ್ತು ಧ್ಯಾನಕ್ಕೂ (Meditation) ಮಹತ್ವವಿದ್ದು, ನೀವು ಇವೆರಡನ್ನೇ ಕಲಿಸಬಹುದು. 

Personal Finance : ಕಡಿಮೆ ಕ್ರೆಡಿಟ್ ಸ್ಕೋರ್ ಇದ್ರೆ ಇಷ್ಟೆಲ್ಲಾ ಕಷ್ಟ, ನಷ್ಟನಾ?

ಬ್ರೇಕ್ ಫಾಸ್ಟ್ ಶಾಪ್ : ಎಲ್ಲ ಕಾಲದಲ್ಲೂ ಅತಿ ಹೆಚ್ಚು ಬೇಡಿಕೆಯಿರುವ ಹಾಗೂ ಎಂದೂ ಬೇಡಿಕೆ ಕಡಿಮೆಯಾಗದ ಬ್ಯುಸಿನೆಸ್ ಇದು. ಕೆಲಸದ ಒತ್ತಡದಲ್ಲಿ ಅನೇಕರಿಗೆ ಮನೆಯಲ್ಲಿ ತಿಂಡಿ ತಯಾರಿಸಲು ಸಮಯ ಸಿಗುವುದಿಲ್ಲ. ಮನೆಯಿಂದ ಹೊರಗಿದ್ದು ಕೆಲಸ ಮಾಡುವ ಬಹುತೇಕರು ಬೆಳಗಿನ ತಿಂಡಿಗೆ ಬ್ರೇಕ್ ಫಾಸ್ಟ್ ಶಾಪ್ ಆಶ್ರಯಿಸುತ್ತಾರೆ. ನೀವು ರುಚಿ ರುಚಿಯಾಗಿ ಅಡುಗೆ ಮಾಡ್ತಿದ್ದರೆ, ಅಡುಗೆಯಲ್ಲಿ ಆಸಕ್ತಿಯಿದ್ದರೆ ಬ್ರೇಕ್ ಫಾಸ್ಟ್ ಶಾಪ್ ತೆಗೆಯಬಹುದು. ಬೆಳಿಗ್ಗೆ ಸ್ವಲ್ಪ ಸಮಯ ಮಾತ್ರ ಈ ಬ್ಯುಸಿನೆಸ್ ಮಾಡಿ ನೀವು ಹಣ ಗಳಿಸಬಹುದು. ಇದು ಪಾರ್ಟ್ ಟೈಂ ವ್ಯಾಪಾರವಾಗಿದೆ. ಉಳಿದ ಸಮಯ ನಿಮಗೆ ಫ್ರೀ ಆಗಿ ಸಿಗುವ ಕಾರಣ ನೀವು ಬೇರೆ ಕೆಲಸಗಳನ್ನು ಮಾಡಬಹುದು. 
 

click me!