ಗರ್ಲ್‌ಫ್ರೆಂಡ್ ಆಗಮಿಸಿದ ರೆಡ್ ಕಾರ್ಪೆಟ್, ಹೂಗುಚ್ಚ, ಅಪ್ಪುಗೆ ಸ್ವಾಗತ ನೋಡಿರುತ್ತೀರಿ. ಇನ್ನು ಉಡುಗೊರೆ ವೇಲೆ ಕಾರು, ರಿಂಗ್ ಸೇರಿದಂತೆ ದುಬಾರಿ ಗಿಫ್ಟ್ ಕೊಟ್ಟಿದ್ದನ್ನೂ ನೋಡೀರಿತ್ತೀರಿ. ಆದರೆ ಇಲ್ಲೊಬ್ಬ ಉದ್ಯಮಿ, ತನ್ನ ಗರ್ಲ್‌ಫ್ರೆಂಡ್‌ಗೆ ಕಂತೆ ಕಂತೆ ನೋಟಿ ಸ್ವಾಗತ ನೀಡಿದ್ದಾನೆ. ಈ ನೋಟಿನ ಮೆಟ್ಟಿಲು ಮೂಲಕ ಗರ್ಲ್‌ಫ್ರೆಂಡ್ ಹೆಲಿಕಾಪ್ಟರ್ ಇಳಿದ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.
ದುಬೈ(ಜೂ.26) ಗರ್ಲ್‌ಪ್ರೆಂಡ್‌ಗೆ ದುಬಾರಿ ಉಡುಗೊರೆ ಹೊಸದೇನಲ್ಲ. ಆದರೆ ಉದ್ಯಮಿಯೊಬ್ಬ ತನ್ನ ಗೆಳತಿಯನ್ನು ಹೆಲಿಕಾಪ್ಟರ್ ಮೂಲಕ ಕರೆಯಿಸಿಕೊಂಡಿದ್ದಾನೆ. ಇಷ್ಟೇ ಅಲ್ಲ ಆಕೆ ಹೆಲಿಕಾಪ್ಟರ್‌ನಿಂದ ಇಳಿದು ಮನೆಗೆ ಆಗಮಿಸಲು ಕಂತೆ ಕಂತೆ ನೋಟಿನ ಮೆಟ್ಟಿಲು ಮಾಡಿದ್ದಾನೆ. ಬಳಿಕ ಗೆಳತಿಯನ್ನು ಈ ನೋಟಿನ ಮೆಟ್ಟಿಲಿನಿಂದ ಕರೆದುಕೊಂಡು ಬಂದ ವಿಡಿಯೋ ನೋಡಿ ಜನ ದಂಗಾಗಿದ್ದಾರೆ. ಸಾವಿರಾರು ಕೋಟಿ ರೂಪಾಯಿ ನೋಟಿನ ಮೇಲಿಂದ ಗೆಳತಿ ನಡೆದುಕೊಂಡು ಬಂದಿದ್ದಾಳೆ. ಈ ಉದ್ಯಮಿ ಐಷಾರಾಮಿತನಕ್ಕೆ ಜನರು ದಂಗಾಗಿದ್ದಾರೆ.
ಬಿಲೇನಿಯರ್ ದುಬೈ ಉದ್ಯಮಿ ಸರ್ಗಿ ಕೊಸೆಂಕೋ ತನ್ನ ಗೆಳತಿಗಾಗಿ ಈ ನೋಟಿನ ಸ್ವಾಗತ ನೀಡಿದ್ದಾನೆ. ಉದ್ಯಮಿ ಸರ್ಗಿ ಹಾಗೂ ಆತನ ಗರ್ಲ್‌ಫ್ರೆಂಡ್ ಪ್ರೀತಿ ಗಾಢವಾಗಿದೆ. ಇದರ ನಡುವೆ ಗರ್ಲ್‌ಫ್ರೆಂಡ್ ಏಕಾಏಕಿಗೆಳೆಯ ನೋಡುವ ಆಸೆಯಾಗಿದೆ. ಫೋನ್ ಮೂಲಕ ತಿಳಿಸಿದ್ದಾಳೆ. ಇಷ್ಟೇ ನೋಡಿ, ಉದ್ಯಮಿ ಗೆಳೆಯ ಆಕೆಯನ್ನು ಮನೆಯಿಂದ ಕರೆದುಕೊಂಡು ಬರಲು ಹೆಲಿಕಾಪ್ಟರ್ ಕಳುಹಿಸಿದ್ದಾನೆ.
undefined
ಮೀನು ಹಿಡಿಯಲು ಹೋದ ದಂಪತಿಗೆ ಜಾಕ್‌ಪಾಟ್, ಗಾಳಕ್ಕೆ ಸಿಕ್ಕ ಬ್ಯಾಗ್‌ನಲ್ಲಿತ್ತು 83 ಲಕ್ಷ ರೂ!
ಗೆಳತಿ ಹೆಲಿಕಾಪ್ಟರ್ ಮೂಲಕ ಆಗಮಿಸಿ ಉದ್ಯಮಿಯ ಹೆಲಿಪ್ಯಾಡ್‌ನಲ್ಲಿ ಇಳಿದಿದ್ದಾಳೆ. ಇತ್ತ ಆಕೆಯನ್ನು ಸ್ವಾಗತಿಸಲು ಖುದ್ದು ಹೆಲಿಕಾಪ್ಟರ್ ಬಳಿ ತೆರಳಿದ ಉದ್ಯಮಿ ಸರ್ಗಿ ಮತ್ತೊಂದು ಅಚ್ಚರಿ ನೀಡಿದ್ದಾನೆ. ಹೆಲಿಕಾಪ್ಟರ್‌ನಿಂದ ಗೆಳತಿಗೆ ಇಳಿಯಲು ಕಂತೆ ಕಂತೆ ನೋಟಿನ ಮೆಟ್ಟಿಲು ಮಾಡಿದ್ದಾನೆ. ಬಳಿಕ ಹೆಲಿಪ್ಯಾಡ್‌ನಿಂದ ಮನೆಯವರೆಗೂ ಕಂತೆ ಕಂತೆ ನೋಟುಗಳನ್ನಿಟ್ಟಿದ್ದಾರೆ. ಈ ನೋಟಿನ ಮೂಲಕ ಗೆಳೆಯತಿಯನ್ನು ಕರೆದುಕೊಂಡು ಬಂದಿದ್ದಾನೆ.
ಗೆಳತಿಯನ್ನು ಹೆಲಿಕಾಪ್ಟರ್‌ನಿಂದ ಕೈಹಿಡಿದು ನೋಟಿನ ಮೂಲಕ ಕರೆತಂದ ಈ ವಿಡಿಯೋ ವೈರಲ್ ಆಗಿದೆ. ಇತ್ತ ಗೆಳತಿ ರಾಣಿಯಂತೆ ನೋಟಿನ ಮೂಲಕ ನಡೆದು ಬಂದಿದ್ದಾಳೆ. ಈ ವಿಡಿಯೋ ನೋಡಿದ ಜನ, ಕಂತೆ ಕಂತೆ ನೋಟು ಬೇಡ, ಪಕ್ಕದಲ್ಲಿ ಹರಡಿರುವ ನೋಟು ಸಾಕು, ಜೀವನ ಕಟ್ಟಿಕೊಳ್ಳುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವರು ಗೆಳತಿಯ ಅದೃಷ್ಠ. ಕೇವಲ ಭೇಟಿಗಾಗಿ ಈ ಪಾಟಿ ದುಡ್ಡು ಚೆಲ್ಲಿದರೆ, ಇನ್ನು ಎಂಗೇಜ್‌ಮೆಂಟ್ ಮದುವೆ ನೋಡಲು ಎರಡು ಕಣ್ಣು ಸಾಲದು ಎಂದು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಕೆಲವರು ಈಗಿನ ಕಾಲದಲ್ಲಿ ಕಣ್ಮುಚ್ಚಿ ನಂಬಲು ಸಾಧ್ಯವಿಲ್ಲ, ನೋಟಿನ ಕಂತೆ ಅಥವಾ ಕಾಗದದ ಕಂತೆ ಎಂದು ಪ್ರಶ್ನಿಸಿದ್ದಾರೆ. ಏನಕ್ಕೂ ಗೆಳತಿ ಎಚ್ಚರವಹಿಸುವುದು ಒಳೀತು ಎಂದು ಸಲಹೆ ನೀಡಿದ್ದಾರೆ.
ಸಾವಿರಾರು ರೂ. ಕ್ರಿಡಿಟ್ ಬಿಲ್ ಪೇ ಮಾಡಿದವನಿಗೆ ಇಷ್ಟು ಕ್ಯಾಶ್ ಬ್ಯಾಕ್ ಸಿಗೋದಾ? ಏನು ಹೇಳ್ಬೇಕು ಇದಕ್ಕೆ?