ಭಾರತದಲ್ಲಿ ಅತ್ಯಂತ ದುಬಾರಿ ಕಾರಿನ ಮಾಲೀಕ ಅಂಬಾನಿ,ಅದಾನಿ ಅಲ್ಲ; ಈತ ಬೆಂಗಳೂರಿಗ!

By Suvarna NewsFirst Published Jun 26, 2023, 5:49 PM IST
Highlights

ಭಾರತದಲ್ಲಿ ವಿಶ್ವದ ಅತ್ಯಂತ ದುಬಾರಿ ಕಾರು ಹೊಂದಿರುವ ವ್ಯಕ್ತಿ ಯಾರು? ಥಟ್ಟನೆ ಅಂಬಾನಿ, ಅದಾನಿ, ಅದಾರ್ ಪೂನವಾಲ, ಗೌತಮ್ ಸಿಂಘಾನಿಯ ಸೇರಿದಂತೆ ಹಲವು ಹೆಸರಗಳು ನೆನಪಿಗೆ ಬರುತ್ತದೆ. ಆದರೆ ಇದ್ಯಾವುದು ಅಲ್ಲ, ವಿಶ್ವದ ಅತ್ಯಂತ ದುಬಾರಿ ಕಾರು ಹೊಂದಿದ ಭಾರತೀಯ ಬೆಂಗಳೂರಿಗ.

ಬೆಂಗಳೂರು(ಜೂ.26): ಭಾರತದ ಶ್ರೀಮಂತರ ಬಳಿಕ ಐಷಾರಾಮಿ ಕಾರುಗಳ ಸಂಗ್ರವೇ ಇದೆ. ಮುಕೇಶ್ ಅಂಬಾನಿ ಬಳಿ ದುಬಾರಿ ಕಾರುಗಳ ಪಟ್ಟಿಯೇ ಇದೆ. ಗೌತಮ್ ಅದಾನಿ, ಗೌಮ್ ಸಿಂಘಾನಿಯಾ, ಅದಾರ್ ಪೂನಾವಾಲ ಸೇರಿದಂತೆ ಹಲವರ ಬಳಿಕ ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ.ಆದರೆ ಭಾರತದಲ್ಲಿ ಅತ್ಯಂತ ದುಬಾರಿ ಕಾರು ಬಳಸುತ್ತಿರುವ ವ್ಯಕ್ತಿ ಯಾರು? ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ಭಾರತದಲ್ಲಿ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಕಾರು ಹೊಂದಿರುವ ವ್ಯಕ್ತಿ ಬೆಂಗಳೂರಿಗ. ಬ್ರಿಟಿಷ್ ಬಯೋಲಾಜಿಕಲ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿಎಸ್ ರೆಡ್ಡಿ ದುಬಾರಿ ಕಾರು ಹೊಂದಿರುವ ಭಾರತದ ವ್ಯಕ್ತಿ.

ವಿಎಸ್ ರೆಡ್ಡಿ ಬಳಿ ಹಲವು ಐಷಾರಾಮಿ ಕಾರುಗಳಿವೆ. ಆದರೆ ಭಾರತದಲ್ಲಿ ಅತ್ಯಂತ ದುಬಾರಿ ಕಾರುು ಹೊಂದಿರುವ ವ್ಯಕ್ತಿ ಅನ್ನೋ ಪಟ್ಟ ನೀಡಿದ ಕಾರು ಬೆಂಟ್ಲೆ ಮಲ್ಸೇನ್ EWB ಸೆಂಟಿನರಿ ಎಡಿಶನ್. ಬ್ರಿಟಿಷ್ ಕಾರು ಉತ್ಪಾದಕ ಕಂಪನಿ ಬೆಂಟ್ಲೆ ಭಾರತಕ್ಕೆ ಹೊಸದಲ್ಲ. ಮುಂಕೇಶ್ ಅಂಬಾನಿ ಸೇರಿದಂತೆ ಹಲವು ಭಾರತೀಯರ ಬಳಿ ಬೆಂಟ್ಲೆ ಕಾರು ಇವೆ. ಆದರೆ ವಿಎಸ್ ರೆಡ್ಡಿ ಬಳಿರುವ ಬೆಂಟ್ಲೆ ಮಲ್ಸೇನ್ EWB ಸೆಂಟಿನರಿ ಎಡಿಶನ್ ಕಾರಿನ ಬೆಲೆ 14 ಕೋಟಿ ರೂಪಾಯಿ. 

4.10 ಕೋಟಿ ರೂ. ಬೆಲೆಯ ಬೆಂಟಗಾ ಐಷಾರಾಮಿ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಬೆಂಟ್ಲೆ ವಿಶ್ವದ ಅತ್ಯುತ್ತಮ ಐಷಾರಾಮಿ ಕಾರುಗಳಲ್ಲೊಂದು. ಇದು ಅತ್ಯಂತು ದುಬಾರಿ ಕಾರಾಗಿದೆ. ಭಾರತದಲ್ಲಿ ಬೆಂಟ್ಲೆ ಬೆಂಟೆಯಾಗ್ ಸೇರಿದಂತೆ ಹಲವು ಕಾರುಗಳಿವೆ. ಇವುಗಳ ಬೆಲೆ 4 ರಿಂದ 6 ಕೋಟಿ ರೂಪಾಯಿ. ಆದರೆ ವಿಎಸ್ ರೆಡ್ಡಿ ಬಳಿರುವ ಲಿಮಿಟೆಡ್ ಎಡಿಶನ್ ಬೆಂಟ್ಲೆ ಮಲ್ಸೇನ್ EWB ಸೆಂಟಿನರಿ ಎಡಿಶನ್ ಕಾರು ಅತ್ಯಂತ ದುಬಾರಿಯಾಗಿದೆ. 

ಐಷಾರಾಮಿ ಕಾರುಗಳೆಂದರಿ ವಿಎಸ್ ರೆಡ್ಡಿಗೆ ಅಚ್ಚು ಮೆಚ್ಚು. ಬಾಲ್ಯದಲ್ಲೇ ಐಷಾರಾಮಿ ಕಾರುಗಳನ್ನು ಖರೀದಿಸಬೇಕು, ಐಷಾರಾಮಿ ಕಾರಿನಲ್ಲಿ ಓಡಾಡಬೇಕು ಅನ್ನೋ ಹಂಬಲವನ್ನು ವಿಎಸ್ ರೆಡ್ಡಿ ಸಾಕಾರಗೊಳಿಸಿದ್ದಾರೆ. ಎಲ್ಲಾ ಪ್ರತಿಷ್ಠಿತ ಬ್ರ್ಯಾಂಡ್ ಕಾರುಗಳನ್ನು ಖರೀದಿಸಬೇಕು ಅನ್ನೋದು ವಿಎಸ್ ರೆಡ್ಡಿ ಕನಸು. ಈ ಪ್ರಕಾರ ಬಹುತೇಕ ಬ್ರ್ಯಾಂಡ್ ಕಾರುಗಳು ವಿಎಸ್ ರೆಡ್ಡಿ ಬಳಿ ಇವೆ.

ವಿರಾಟ್ ಕೊಹ್ಲಿ ಮನೆ ಸೇರಿತು 4 ಕೋಟಿ ರೂಪಾಯಿ ಕಾರು!

ಕಾರುಗಳಿಗೆ ಬೆಂಟ್ಲೆ ತಾಜ್‌ಮಹಲ್ ಎಂದು ಬಣ್ಣಿಸಿದ್ದಾರೆ. ಪ್ರಯಾಣ, ಇದರಲ್ಲಿರುವ ಅತ್ಯಾಧುನಿಕ ಫೀಚರ್ಸ್ ಸೇರಿದಂತೆ ಸುರಕ್ಷತೆ ಇತರ ಎಲ್ಲಾ ಕಾರುಗಳಿಗಿಂತ ಉತ್ತಮವಾಗಿದೆ ಎಂದು ವಿಎಸ್ ರೆಡ್ಡಿ ಹೇಳಿದ್ದಾರೆ.

ಬೆಂಟ್ಲಿ ಮಸ್ಲೇನ್ EWB ಕಾರು 6.9 ಲೀಟರ್ ಟರ್ಬೋಚಾರ್ಜಡ್ V8 ಪೆಟ್ರೋಲ್ ಎಂಜಿನ್ ಹೊಂದಿದ್ದು, 506 hp ಪವರ್ ಹಾಗೂ  1020 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ . ಬೆಂಗಳೂರಿನ ಎಕ್ಸ್‌ಕ್ಲೂಸೀವ್ ಮೋಟಾರ್ಸ್ ಈ ಕಾರನ್ನು ಆಮದು ಮಾಡಿಕೊಂಡು, ವಿಎಸ್ ರೆಡ್ಡಿಗೆ ಡೆಲಿವರಿ ಮಾಡಿದೆ.

click me!