ಬಕೆಟ್ ಹಿಡಿಯೋರ್ಗು ಬರುತ್ತೆ ಕಾಲ ಅನ್ನೋದು ಇದಕ್ಕೆ. ಇಂಟರ್ ನೆಟ್ ನಲ್ಲಿ ದುಬಾರಿ ವಸ್ತುಗಳನ್ನು ನೋಡುವ ಆ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಬಹಳ ಜನರಿಗಿದೆ. ಇತ್ತೀಚೆಗೆ ಅಮೇಜಾನ್ ವೆಬ್ ಸೈಟ್ ನಲ್ಲಿ ವ್ಯಕ್ತಿಯೊಬ್ಬರು ಹೀಗೆ ಸರ್ಚ್ ಮಾಡುತ್ತಿದ್ದಾಗ ಪ್ಲಾಸ್ಟಿಕ್ ಬಕೆಟ್ ಹಾಗೂ ಪ್ಲಾಸ್ಟಿಕ್ ಮಗ್ ಅಮೇಜಾನ್ ನಲ್ಲಿ ಕಂಡಿವೆ. ಇವುಗಳು ಅಮೇಜಾನ್ ನಲ್ಲಿ ಸೇಲ್ ಗಿರೋದು ದೊಡ್ಡ ವಿಚಾರವಲ್ಲ ಅವುಗಳ ರೇಟ್ ಕಂಡು ಜನರು ಹೌಹಾರಿದ್ದಾರೆ.
ಬೆಂಗಳೂರು (ಮೇ.25): ಅಮೇಜಾನ್ ನಲ್ಲಿ (Amazon) ಮಾರಾಟಕ್ಕೆ ಇರುವ ಹಾಗೂ ಈಗಾಗಲೇ ಸೋಲ್ಡ್ ಔಟ್ ಆಗಿರುವ ಬಕೆಟ್ ನ ( bucket ) ಫೋಟೋ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ. ಈ ಬಕೆಟ್ ನ ಫೋಟೋ ಕಂಡು ಬಳಕೆದಾರರು ಅಚ್ಚರಿ ವ್ಯಕ್ತಪಡಿಸಲು ಕಾರಣ, ಅದಕ್ಕೆ ನಿಗದಿಯಾಗಿರುವ ಬೆಲೆ.
"ಪ್ಲಾಸ್ಟಿಕ್ ಬಕೆಟ್ ಫಾರ್ ಹೋಮ್ ಅಂಡ್ ಬಾತ್‌ರೂಮ್ ಸೆಟ್ ಆಫ್ 1" ಎಂಬ ಶೀರ್ಷಿಕೆಯ ಐಟಂ ಅನ್ನು ಇ-ಕಾಮರ್ಸ್ ವೆಬ್‌ಸೈಟ್ ( e-commerce website ) ಅಮೇಜಾನ್ ನಲ್ಲಿ ದಾಖಲೆಯ ₹ 25,999 ಗೆ ಮಾರಾಟ ಮಾಡಲಾಗುತ್ತಿದೆ. ಇದು ಇನ್ನೂ ವಿಚಿತ್ರವಾದ ಸಂಗತಿಯೆಂದರೆ, ಈ ಬಕೆಟ್ ನ ಮೂಲ ಬೆಲೆ 35, 990 ರೂಪಾಯಿ. ಗ್ರಾಹಕರಿಗೆ ಶೇ. 28ರ ರಿಯಾಯಿತಿಯಲ್ಲಿ 25,999 ರೂಪಾಯಿಗೆ ಸಿಗುತ್ತಿದೆ. ಇನ್ನೂ ಅಚ್ಚರಿಯ ವಿಚಾರವೆಂದರೆ, ಈ ಬಕೆಟ್ ನೀವು ಬುಕ್ ಮಾಡಿದರೆ ಸಿಗೋದಿಲ್ಲ. ಸಾಕಷ್ಟು ಬೇಡಿಕೆಯಿರುವ ಈ ಬಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ!
ಈ ಫೋಟೋವನ್ನು @vivekraju93 ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡದ್ದು, "ಅಮೆಜಾನ್‌ನಲ್ಲಿ ಇದನ್ನು ಈಗ ತಾನೆ ನೋಡಿದೆ ಮತ್ತು ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ' ಎಂದು ಬರೆದುಕೊಂಡಿದ್ದಾರೆ. ಇನ್ನು @shubhi1011 ಎನ್ನುವ ಟ್ವಿಟರ್ ಬಳಕೆದಾರರು, ಚಿತ್ರವನ್ನು ಹಂಚಿಕೊಂಡಿದ್ದು, "ಅಚ್ಚರಿಯ ಸಂಗತಿ ಏನೆಂದರೆ, ಕೇವಲ 1 ಬಕೆಟ್ ಮಾತ್ರವೇ ಸ್ಟಾಕ್ ನಲ್ಲಿ ಇದೆ ಎನ್ನುವುದು' ಎಂದು ಬರೆದಿದ್ದಾರೆ.
Just found this on Amazon and I don't know what to do pic.twitter.com/hvxTqGYzC4
— Vivek Raju (@vivekraju93)
ಆನ್‌ಲೈನ್ ಶಾಪಿಂಗ್‌ನಲ್ಲಿ ಬೆಲೆ ಏರಿಳಿತಗಳು ಮತ್ತು ಏರಿಕೆಗಳು ನಿಯಮಿತವಾಗಿರುತ್ತದೆ. ಆದರೆ ಕೆಲವು ಬೆಲೆ ಪಟ್ಟಿಗಳು ಕೆಲವೊಮ್ಮೆ ಅತಿರೇಕ ಎನಿಸುತ್ತಿರುತ್ತದೆ. ಬಕೆಟ್‌ನ ಸ್ಕ್ರೀನ್‌ಶಾಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ, ಕೆಲವು ನೆಟಿಜನ್‌ಗಳು ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಹೇಳಿದ್ದರೆ, ಇನ್ನೂ ಕೆಲವರು EMI ನಲ್ಲಿ ಬಕೆಟ್ ಕೂಡ ಲಭ್ಯವಾಗುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕೆಲವು ದಿನಗಳ ಹಿಂದೆ ತೆಂಗಿನ ಚಿಪ್ಪಿಗೆ ಸಾವಿರಾರು ರೂಪಾಯಿ ನಿಗದಿ ಮಾಡಿದ್ದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಈಗ ಪ್ಲಾಸ್ಟಿಕ್ ಬಕೆಟ್ ಗೆ 26 ಸಾವಿರ ಎನ್ನುವುದು ಲೇವಡಿಗೆ ಕಾರಣವಾಗಿದೆ.ಇನ್ನೂ ಕೆಲವು ನೆಟಿಜನ್ಸ್ ಗಳು ತಾವು ನೋಡುವ ವೇಳೆ ಈ ಉತ್ಪನ್ನ ಔಟ್ ಆಫ್ ಸ್ಟಾಕ್ ಆಗಿದೆ ಎಂದೂ ಬರೆದುಕೊಂಡಿದ್ದಾರೆ. ಉತ್ಪನ್ನದ ಬೆಲೆಯನ್ನು ಈಗ ಪುಟದಿಂದ ತೆಗೆದುಹಾಕಲಾಗಿದೆ. ಆದರೆ ನೆಟಿಜನ್‌ಗಳು ಟ್ವಿಟರ್‌ನಲ್ಲಿ ಅದಕ್ಕೆ 'ವಿಮರ್ಶೆ'ಗಳನ್ನು ಬಿಟ್ಟಿದ್ದಾರೆ.
Tata Neu ಅಮೇಜಾನ್, ಜಿಯೋ, ಪೇಟಿಎಂಗೆ ಸೆಡ್ಡು, ಏ.7ಕ್ಕೆ ಟಾಟಾ Neu ಆ್ಯಪ್ ಬಿಡುಗಡೆ!
ಇ-ಕಾಮರ್ಸ್ ವೆಬ್‌ಸೈಟ್‌ಗಳ ಪ್ಲಾಟ್‌ಫಾರ್ಮ್‌ನಲ್ಲಿ ಪಟ್ಟಿ ಮಾಡಲಾಗಿತುವ ಇದೇ ರೀತಿಯ ಮತ್ತೊಂದು ಉತ್ಪನ್ನವೆಂದರೆ 2 ಬಾತ್‌ರೂಮ್ ಮಗ್‌ಗಳ ಒಟ್ಟಾರೆ ಬೆಲೆ ₹ 9,914. ಈ ಮಗ್‌ಗಳ ಮೂಲ ಬೆಲೆ ₹ 22,080 ಆಗಿದ್ದು, ಶೇಕಡಾ 55 ರ ರಿಯಾಯಿತಿಯೊಂದಿಗೆ ಅಂದಾಜು 10 ಸಾವಿರಕ್ಕೆ ಮಗ್ ಸಿಗಲಿದೆ.
ಅಮೇಜಾನ್‌ನಲ್ಲಿ ಕವರ್ ಆರ್ಡರ್ ಮಾಡಿದ್ರೆ ಜೊತೆಗೆ ಸಿಕ್ತು ಪಾಸ್‌ಪೋರ್ಟ್
ಕೆಲವೇ ದಿನಗಳ ಹಿಂದೆ, ಐಷಾರಾಮಿ ಫ್ಯಾಷನ್ ಲೇಬಲ್ ಗುಸ್ಸಿ ( Gucci ) ಮತ್ತು ಕ್ರೀಡಾ ದೈತ್ಯ ಅಡಿಡಾಸ್ ( Adidas ) ಚೀನಾದಲ್ಲಿ ( China ) ಇತ್ತೀಚಿನ ಸಹಯೋಗಕ್ಕಾಗಿ ಟೀಕೆಗಳ ಸುರಿಮಳೆಗೆ ಒಳಗಾಯಿತು, ಸನ್ ಅಂಬ್ರೆಲ್ಲಾ ಎನ್ನುವ ಉತ್ಪನ್ನವನ್ನು ತಾವು ತಯಾರಿಸಿರುವುದಾಗಿ ಹೇಳಿದ್ದು ಲೇವಡಿಗೆ ಕಾರಣವಾಗಿತ್ತು. ಛತ್ರಿ ಎಂದು ಕರೆಯಲ್ಪಡುವ ಈ ಉತ್ಪನ್ನ ಮಳೆ ನೀರನ್ನು ತಡೆಯುವುದಿಲ್ಲ, ಅದಲ್ಲದೆ, ಅದಕ್ಕೆ 1.27 ಲಕ್ಷ ರೂಪಾಯಿ ಎನ್ನುವ ಕಾರಣಕ್ಕಾಗಿ ಎರಡೂ ಕಂಪನಿಗಳನ್ನು ಟ್ರೋಲ್ ಮಾಡಲಾಗಿತ್ತು.