ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ ಕಟ್ಟಿದ್ದು ಹ್ಯುಬ್ಲೋಟ್ ವಾಚ್, ಇದರ ಬೆಲೆ ಎಷ್ಟು ಗೊತ್ತಾ?

Published : Jun 09, 2025, 08:23 PM IST
Vijay mallya

ಸಾರಾಂಶ

ಉದ್ಯಮಿ ವಿಜಯ್ ಮಲ್ಯ ಆಸ್ತಿಗಳೆಲ್ಲವು ಮುಟ್ಟುಗೋಲಾಗಿದೆ.  ವಿದೇಶಗಳಲ್ಲಿರುವ ಉದ್ಯಮಗಳಿಂದ ಕೋರ್ಟ್, ಕೇಸ್ ನಡೆಸುತ್ತಿದ್ದಾರೆ. ಆದರೆ ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ ಕಟ್ಟಿದ ವಾಚ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಕಾರಣ ಇದು ಲಿಮಿಟೆಡ್ ಎಡಿಶನ್ ಹ್ಯುಬ್ಲೋಟ್ ವಾಚ್, ಇದರ ಬೆಲೆ ಎಷ್ಟು ಗೊತ್ತಾ?

ನವದೆಹಲಿ(ಜೂ.09) ರಾಜ್ ಶಮಾನಿ ಯೂಟ್ಯೂಬರ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಉದ್ಯಮಿ ವಿಜಯ್ ಮಲ್ಯ ಭಾರದದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಮಲ್ಯ ಹೊಸ ಲೋಕವೊಂದನ್ನು ತೆರೆದಿಟ್ಟಿದ್ದಾರೆ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾರತ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ಸದ್ಯ ಲಂಡನ್‌ನಲ್ಲಿ ಕಾನೂನು ಹೋರಾಟ ಮಾಡುತ್ತಿದ್ದಾರೆ. ಇತ್ತ ಭಾರತ ಸರ್ಕಾರ ಮಲ್ಯ ಗಡೀಪಾರು ಮಾಡಲು ಹೋರಾಟ ನಡೆಸುತ್ತಿದೆ. ಬರೋಬ್ಬರಿ 9 ವರ್ಷಗಳ ಬಳಿಕ ವಿಜಯ್ ಮಲ್ಯ ಇದೇ ಮೊದಲ ಬಾರಿಗೆ ಹೀರೋ ದಿಂದ ಝೀರೋ ಆದ ಕತೆಯನ್ನು ಪಾಡ್‌ಕಾಸ್ಟ್ ಮೂಲಕ ವಿವರಿಸಿದ್ದಾರೆ. ಇದೀಗ ವಿಜಯ್ ಮಲ್ಯ ಮೇಲಿದ್ದ ಹಲವರ ಅಭಿಪ್ರಾಯಗಳು ಬದಲಾಗಿದೆ. ವಿಶೇಷ ಅಂದರೆ ಈ ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ ಧರಿಸಿದ್ದು ಲಿಮಿಟೆಡ್ ಎಡಿಶನ್ ಹ್ಯೂಬ್ಲೋಟ್ ಕಿಂಗ್ ಪವರ್ ಎಫ್1 ಇಂಡಿಯಾ ವಾಚ್.

ಹ್ಯುಬ್ಲೋಟ್ ಬಿಡುಗಡೆ ಮಾಡಿದ ಸ್ಪೆಷಲ್ ಎಡಿಶನ್ ವಾಚ್

ಹ್ಯುಬ್ಲೋಟ್ ವಿಶ್ವದ ಅತ್ಯಂತ ದುಬಾರಿ ವಾಚ್ ಬ್ರ್ಯಾಂಡ್. ಇದು ಬಿಡುಗಡೆ ಮಾಡಿದ ಲಿಮಿಟೆಡ್ ಎಡಿಶನ್ ವಾಚ್ ಪೈಕಿ ಹ್ಯುಬ್ಲೋಟ್ ಕಿಂಗ್ ಪವರ್ ಎಫ್1 ಇಂಡಿಯಾ ವಾಚ್. ಈ ವಾಚ ಎಡಿಶನ್‌ಗೂ ವಿಜಯ್ ಮಲ್ಯಗೂ ಸಂಬಂಧವಿದೆ. ಭಾರತಕ್ಕೆ ಫಾರ್ಮುಲಾ ಸ್ಪೋರ್ಟ್ ತಂದಿದ್ದೆ ವಿಜಯ್ ಮಲ್ಯ. ಇಷ್ಟೇ ಅಲ್ಲ ಕಿರೀಟ ಮುಡಿಗೇರಿಸಿಕೊಂಡ ಕೀರ್ತಿ ಕೂಡ ವಿಜಯ್ ಮಲ್ಯಗಿದೆ. ಈ ವೇಳೆ ಹ್ಯುಬ್ಲೋಟ್ ಕಿಂಗ್ ಪವರ್ ಎಫ್1 ಇಂಡಿಯಾ ವಾಚ್ ಬಿಡುಗಡೆ ಮಾಡಿದೆ. ಇದು ನೇರವಾಗಿ ಭಾರತ ಹಾಗೂ ಎಫ್1 ಮೋಟಾರ್‌ಸ್ಪೋರ್ಟ್ ಗೆಲುವಿನ ಸಂಭ್ರಮ ಆಚರಿಸಲು ಬಿಡುಗಡೆ ಮಾಡಿದ ಸ್ಪೆಷಲ್ ಎಡಿಶನ್ ವಾಚ್.

ಮಲ್ಯ ಧರಿಸಿದ್ದ ವಾಚ್ ಬೆಲೆ ಬರೋಬ್ಬರಿ 40 ಲಕ್ಷ ರೂಪಾಯಿ

ವಿಜಯ್ ಮಲ್ಯ ಪಾಡ್‌ಕಾಸ್ಟ್ ವೇಳೆ ಧರಿಸಿದ್ದ ವಾಚ್ ಹ್ಯೂಬ್ಲೋಟ್ ಕಿಂಗ್ ಪವರ್ ಎಫ್1 ಇಂಡಿಯಾ. ಇದರ ಬೆಲೆ 40.66 ಲಕ್ಷ ರೂಪಾಯಿ. ಇದರಲ್ಲಿ ಎಫ್1, ಭಾರತದ ತ್ರಿವರ್ಣ ಧ್ವಜದ ಬಣ್ಣ, ಇಂಡಿಯಾ ಎಂದು ಬರೆಯಲಾಗಿದೆ. ಈ ವಾಚ್‌ನ ಕೇಸ್ 18 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ. ಕೇವಲ 200 ವಾಚ್ ತಯಾರಿಸಲಾಗಿತ್ತು. ಸದ್ಯ ಈ ಲಿಮಿಟೆಡ್ ಎಡಿಶನ್ ವಾಚ್ ಲಭ್ಯವಿಲ್ಲ. ಇದರ ಬೆಲೆ ಹ್ಯುಬ್ಲೋಟ್ ವೆಬ್‌ಸೈಟ್ 47,400 ಅಮೆರಿಕನ್ ಡಾಲರ್ ಎಂದು ಉಲ್ಲೇಖಿಸಿದೆ. ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 40,66,000 ರೂಪಾಯಿ.

ವಿಜಯ್ ಮಲ್ಯ ಲ್ಯಾವಿಶ್ ಲೈಫ್ ಸ್ಟೈಲ್‌ಗೆ ಹೆಸರುವಾಸಿ. ಭಾರತದಲ್ಲಿರುವಾಗ ಪಾರ್ಟಿ ಸೇರಿದಂತೆ ಐಷಾರಾಮಿ ಜೀವನ ಕಳೆದ ವಿಜಯ್ ಮಲ್ಯ ಇದೀಗ ಸಾಲದ ಸುಳಿ, ವಂಚನೆ ಪ್ರಕರಣದಲ್ಲಿ ಸಿಲುಕಿ ಎಲ್ಲವನ್ನು ಕಳೆದುಕೊಂಡಿದ್ದಾರೆ. ಸದ್ಯ ವಿಜಯ್ ಮಲ್ಯ ವಿದೇಶದಲ್ಲಿ ಕೆಲಸ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಬರುತ್ತಿರುವ ಆದಾಯದ ಬಹುಪಾಲು ವಿಜಯ್ ಮಲ್ಯ ಕೋರ್ಟ್, ಲಾಯರ್ ವೆಚ್ಚ ಭರಿಸಲು ವೆಚ್ಚವಾಗುತ್ತಿದೆ.

ರಾಜಕೀಯ ಚದುರಂಗದಾಟಕ್ಕೆ ಬಲಿಯಾದ್ರಾ ವಿಜಯ್ ಮಲ್ಯ

ಭಾರತದಲ್ಲಿ ಬ್ಯಾಂಕ್ ವಂಚನೆ, ಭ್ರಷ್ಟಾಚಾರ ಸೇರಿದಂತೆ ಕೋಟಿ ಕೋಟಿ ರೂಪಾಯಿ ವಂಚನೆ ಮಾಡಿದ ಹಲವರು ಯಾವುದೇ ಅಡ್ಡಿ ಆತಂಕವಿಲ್ಲದೆ ಓಡಾಡುತ್ತಿದ್ದಾರೆ. ಆದರೆ ವಿಜಯ್ ಮಲ್ಯ ಮಾತ್ರ ಟಾರ್ಗೆಟ್ ಆಗಿದ್ದು ಯಾಕೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಸುರಿಮಳೆ ವ್ಯಕ್ತವಾಗುತ್ತಿದೆ. ಇದರ ನಡುವೆ ತನಗೆ ಭರವಸೆ ನೀಡಿದರೆ ಭಾರತಕ್ಕೆ ಮರಳುವ ಬಗ್ಗೆ ಚಿಂತಿಸಲಾಗುತ್ತದೆ ಎಂದಿದ್ದಾರೆ. ವಿಜಯ್ ಮಲ್ಯ ಮಾತುಗಳು ಇದೀಗ ಭಾರಿ ಚರ್ಚೆಯಾಗುತ್ತಿದೆ. ಭಾರತದ ವ್ಯವಸ್ಥೆ, ಮಲ್ಯ ಮಾತಿನ ಸತ್ಯಾಸತ್ಯತೆ ಕುರಿತು ಪರಾಮರ್ಶೆ ನಡೆಯುತ್ತಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!