ಗದಗ ಮಾರುಕಟ್ಟೆಗೆ ತರಕಾರಿ ಬೆಲೆ ಏಕಾ ಏಕಿ ಏರಿಕೆ. ಕೆಜಿಗೆ 40 ರೂಪಾಯಿ ಇದ್ದ ಜವಾರಿ ಮೆಣಸಿನಕಾಯಿ 120 ರೂಪಾಯಿ. ಕಟ್ ಕೊತ್ತಂಬರಿಗೆ 50 ರೂಪಾರಿ. ತರಕಾರಿ ರೇಟ್ ಕೇಳಿ ಜನರು ಅರ್ಧ ತರಕಾರಿ ಕೊಳ್ಳುವ ನಿರ್ಧಾರ ಮಾಡ್ತಿದಾರೆ.
ವರದಿ: ಗಿರೀಶ್ ಕಮ್ಮಾರ , ಏಷ್ಯಾನೆಟ್ ಸುವರ್ಣನ್ಯೂಸ್
ಗದಗ (ಮೇ.25): ಗದಗ (Gadag) ಮಾರುಕಟ್ಟೆಗೆ ( Market ) ತರಕಾರಿ (Vegetable) ಸಪ್ಲೈ ಕಡಿಮೆಯಾಗಿರೋದ್ರಿಂದ ಏಕಾ ಏಕಿ ತರಕಾರಿ ಬೆಲೆ ಜಂಪ್ ಆಗಿದೆ. ಬೆಲೆ ಏರಿಕೆಯಿಂದಾಗಿ ಜನ ಕಂಗಾಲಾಗಿದ್ದು ತರಕಾರಿ ಖರೀದಿಗೆ ಜನರೇ ಬರ್ತಿಲ್ಲ. ಇದ್ರಿಂದಾಗಿ ವ್ಯಾಪಾರ ಡಲ್ ಆಗಿದೆ. ಬೇಸಿಗೆ ಸಂದರ್ಭದಲ್ಲಿ ಬೆಳಗಾವಿಯಿಂದ ತರಕಾರಿ ಬರುತ್ತೆ. ಆದ್ರೆ, ಈ ಬಾರಿಯ ಮಳೆಯಿಂದಾಗಿ ಸರಿಯಾದ ಪ್ರಮಾಣದಲ್ಲಿ ಸಪ್ಲೈ ಆಗ್ತಿಲ್ಲ. ಬೇಡಿಕೆ ಹೆಚ್ಚಿರೋದ್ರಿಂದ ತರಕಾರಿ ರೇಟ್ ಕೂಡ ಡಬಲ್ ಆಗಿದೆ ಅಂತಾ ವ್ಯಾಪಾರಸ್ಥರು ಹೇಳಿಕೊಳ್ತಿದ್ದಾರೆ. ಈ ಹಿಂದೆ 5/10 ರೂಪಾಯಿ ಗೆ ಮಾತಾಟ ವಾಗ್ತಿದ್ದ ಕೊತ್ತಂಬರಿ ಸೊಪ್ಪು 50 ರೂಪಾಯಿಗೆ ಮಾರಾಟವಾಗ್ತಿದೆ. ಟೊಮ್ಯಾಟೋ ನೂರರ ಗಡಿ ತಾಟಿ, 120 ಆಗಿದೆ. ಹೀಗಾಗಿ ವ್ಯಾಪಾರವೂ ಸರಿಯಾಗಿ ಆಗ್ತಿಲ್ಲ. ಈ ಹಿಂದೆ ಕೆಜಿ ಕೊಳ್ತಿದ್ದವರು ಅರ್ಥ ಕೆಜಿ ಖರೀದಿ ಮಾಡ್ತಿದ್ದಾರೆ ಇದ್ರಿಂದ ವ್ಯಾಪಾರ ಅಷ್ಟಕಷ್ಟೆ ಅಂತಾ ತರಕಾರಿ ವ್ಯಾಪಾರಸ್ಥರು ಅಳಲು ತೋಡಿಕೊಂಡ್ರೆ, ಏಕಾ ಏಕಿ ಬೆಲೆ ಏರಿಕೆಯಿಂದ ಜೇಬಿಗೆ ಬರೆ ಬಿದ್ದಿದೆ ಅಂತಾ ಜನ ಹೇಳ್ತಿದ್ದಾರೆ.
undefined
ಮದ್ವೆ, ಕಾರ್ಯಕ್ರಮ ಖರೀದಿಯಿಂದ್ಲೆ ವ್ಯಾಪಾರ
ಈರುಳ್ಳಿ, ಆಲೂಗಡ್ಡೆ ಕೆಜಿಗೆ 20/30 ರೂಪಾಯಿ ಇದೆ. ಜನ ಹೆಚ್ಚಾಗಿ ಕಡಿಮೆ ರೇಟ್ ಇರೋ ತರಕಾರಿಯನ್ನೇ ಖರೀದಿ ಮಾಡ್ತಿದಾರೆ.. ಆದ್ರೆ ಮದ್ವೆ ಕಾರ್ಯಕ್ರಮಕ್ಕೆ ಅನಿವಾರ್ಯ ಆಗಿರೋದ್ರಿಂದ ರೇಟ್ ಏನೇ ಇದ್ರೂ ತರಕಾರಿ ಖರೀದಿಯಾಗ್ತಿದೆಯಂತೆ.. ಕಾರ್ಯಕ್ರಮಕ್ಕೆ ಅಂತಾ ಖರೀದಿ ಮಾಡೋದಕ್ಕೆ ಬರುವವರಿಂದಲೇ ಎರಡು ಕಾಸು ನೋಡ್ತಿದಿವಿ ಅಂತಾ ಏಷ್ಯ ನೆಟ್ ಸುವರ್ಣ ನ್ಯೂಸ್ ಎದ್ರು ತರಕಾರಿ ವ್ಯಾಪಾರಸ್ಥ ಜಾಕೀರ್ ಹೇಳಿಕೊಂಡ್ರು.
CHITRADURGA; ಟೊಮ್ಯಾಟೊ ಬೆಲೆ ಗಗನಕ್ಕೇರಿದ್ರೂ ರೈತನಿಗೆ ತಪ್ಪದ ಸಂಕಷ್ಟ
ತರಕಾರಿ ಕೇಟ್ ಕೇಳಿ ಹೋಟೆಲ್ ಮಾಲೀಕರ ಪರದಾಟ..!
ಕಳೆದ 10 ದಿನದಿಂದ ಮಾರುಕಟ್ಟೆಗೆ ಸರಿಯಾದ ಪ್ರಮಾಣದಲ್ಲಿ ತರಕಾರಿ ಬರ್ತಿಲ್ಲ.. ಆದ್ರೆ ಹೋಟೆಲ್ ಉದ್ಯಮ ನಂಬ್ಕೊಂಡಿರೋರು ತರಕಾರಿ ಖರೀದಿ ಮಾಡ್ದೆ ಇರೋದಕ್ಕೆ ಆಗಲ್ಲ.. ಹೀಗಾಗಿ ಮೊದ್ಲೆಲ್ಲ 10 ಕೆಜಿ ತರಕಾರಿ ಖರೀದಿ ಮಾಡ್ತಿದ್ದವರು ಈಗ 5 ಕೆಜಿಗೆ ಇಳಿಸಿಕೊಂಡಿದಾರೆ.. ತರಕಾರಿ ಬೆಲೆ ಏರಿಕೆ ಅಂತಾ ಫುಡ್ ಐಟಂಗಳ ರೇಟ್ ಜಾಸ್ತಿ ಮಾಡಿದ್ರೆ ಗ್ರಾಹಕರು ಬರಲ್ಲ. ಮ್ಯಾನೇಜ್ ಮಾಡ್ಬೇಕು. ಹೀಗಾಗಿ ಅರ್ಧ ತರಕಾರಿ ಅಷ್ಟೆ ಖರೀದಿ ಮಾಡ್ತಿದಿವಿ ಅಂತಾ ಹೋಟೆಲ್ ವ್ಯಾಪಾರಿ ಕೃಷ್ಣ ಹೇಳಿಕೊಂಡಿದ್ರು..
ಒದ್ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇತ್ತೀಚೆಗೆ ಪೆಟ್ರೋಲ್ ಬೆಲೆ ಕೊಂಚ ಮಟ್ಟಿಕೆ ಕಡಿಮೆಯಾಗಿದೆ.. ಆದ್ರೆ, ಅಗತ್ಯ ವಸ್ತುಗಳ ಬೆಲೆ ಅಷ್ಟಾಗಿ ಕಡಿಮೆಯಾಗಿಲ್ಲ.. ಈ ಮಧ್ಯೆ ತರಕಾರಿ ಬೆಲೆ ಏರಿಕೆಯಾಗಿರೋದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ತರಕಾರಿ ಹಿಂದಿನ ರೇಟ್ ಈಗ
ಕೊತ್ತಂಬರಿ ಸೊಪ್ಪು ₹5/6 ₹50
ಟೊಮ್ಯಾಟೊ ₹50. ₹120
ಹೀರೇಕಾಯಿ ₹40/59 ₹80
ನಿಂಬೆಹಣ್ಣು ₹2. ₹5
ಮೆಣಸಿನಕಾಯಿ ₹40. ₹120
ಮೆಂತೆ ಸೊಪ್ಪು ₹10. ₹40
BBMP Election ಬೆನ್ನಲ್ಲೇ 10 ಕೋಟಿ ವೆಚ್ಚದಲ್ಲಿ ಹೊಸ ಕೌನ್ಸಿಲ್ ಸಭಾಂಗಣ
ಗದಗ ಬೆಟಗೇರಿ ನಗರಸಭೆ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ: ಬೀದಿ ವ್ಯಾಪಾರಿಗಳ ಕಾನೂನು ಪಾಲಿಸದ ನಗರಸಭೆ ಅಧಿಕಾರಿಗಳನ್ನ ಅಮಾನತ್ತು ಮಾಡ್ಬೇಕು ಅಂತಾ ಆಗ್ರಹಿಸಿ ಗದಗ ಬೆಟಗೇರಿ ಸಗರಸಭೆ ಕಚೇರಿಗೆ ಮುತ್ತಿಗೆ ಹಾಕಿದ ಬೀದಿ ಬದಿ ವ್ಯಾಪಾರಸ್ಥ ಸಂಘಟನೆಗಳು ಪ್ರತಿಭಟನೆ ನಡೆಸಿದ್ವು.
ಗದಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ವಿವಿಧೋದ್ದೇಶಗಳ ಸಂಘ, ಕರ್ನಾಟಕ ರಾಜ್ಯ ರಸ್ತೆ ವ್ಯಾಪಾರಿಗಳ ಮಹಾಮಂಡಳಿ ಶಹರ ಘಟಕದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ನೂರುರಾತು ವ್ಯಾಪಾರಸ್ಥರು ಭಾಗಿಯಾಗಿದ್ರು.. ನಗರದ ಮಹಾತ್ಮಾ ಗಾಂಧಿ ವೇತ್ತದಿಂದ ಆರಂಭವಾದ ಪ್ರತಿಭಟನೆಯಲ್ಲಿ ತಳ್ಳು ಗಾಡಿ ಸಮೇತ ವ್ಯಾಪಾರಸ್ಥರು ಆಗಮಿಸಿ ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.. ನಗರಸಭೆ ವರೆಗೆ ಪ್ರತಿಭಟನೆ ನಡೀತು . ನಗರಸಭೆ ಕಚೇರಿ ಸಮೀಪಿಸುತ್ತಿದ್ದಂತೆ ಪೊಲೀಸರು ಪ್ರತಿಭಟನಾ ನಿರತರನ್ನ ತಡೆಯಲು ಪ್ರಯತ್ನಿಸಿದ್ರು. ಆದ್ರೆ, ಕೆಲ ನಿಮಿಷಗಳನ್ನ ಪ್ರತಿಭಟನಾ ನಿರತರು ಆವರಣ ಹೊಕ್ಕು ಪ್ರತಿಭಟನೆ ನಡೆಸಿದ್ರು..
ಕಚೇರಿ ಆವರಣದಲ್ಲಿ ಖಾಲಿ ತಳ್ಳುವ ಗಾಡಿಯಲ್ಲಿ ನಗರಸಭೆ ಕಮಿಷನರ್ ರಮೇಶ್ ಸುಣಗಾರ್, ಸಮುದಾಯ ಸಂಘಟನಾ ಅಧಿಕಾರಿ ವಿಜಯ ಲಕ್ಷ್ಮೀಹಿರೇಮಠ ಅವರ ಪ್ರತಿಕೃತಿ ಇಟ್ಟು ಆಕ್ರೋಶ ಹೊರಹಾಕಿದ್ರು.
ಬೀದಿ ಬದಿ ವ್ಯಾಪಾರಿಗಳ ಅಧಿನಿಯಮ2014 ಪಾಲನೆಯಲ್ಲಿ ಲೋಪವಾಗಿದೆ.. ಬೀದಿ ಬದಿ ವ್ಯಾಪಾರಿಗಳ ಕರ ಸಂಗ್ರಹ ಟೆಂಡರ್ ಕರೆಯುವಾಗ ಸಮಿತಿ ಗಮನಕ್ಕೆ ತಂದಿಲ್ಲ.. ಅಲ್ದೆ, ನಾನೂನು ಬಾಹಿರವಾಗಿ ವ್ಯಾಪಾರಿಗಳಿಂದ ಹಣ ಸಂಗ್ರಹ ಮಾಡಲಾಗುತ್ತಿದೆ ಅನ್ನೋ ಆರೋಪವು ಇದೆ.. ಬೀದಿ ವ್ಯಾಪಾರಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ 2015/16 ನೇ ಸಾಲಿನಲ್ಲಿ 21ಲಕ್ಷ ರೂಪಾಯಿ ಹಣ ಸರ್ಕಾರ ಬಿಡುಗಡೆ ಮಾಡಿತ್ತು.. ಆದ್ರೆ ಬಳಕೆಯಾಗದ ಹಿನ್ನೆಲೆ ವಾಪಾಸ್ ಆಗಿದೆ.. ಸ್ಟ್ರೀಟ್ ಫಾಸ್ಟ್ ಫುಡ್ ವ್ಯಾಪಾರಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಮಾರ್ಚ್ 2022 ರಲ್ಲಿ ಸರ್ಕಾರ ಹಣ ನೀಡಿತ್ತು.. ಬಳಕೆಯಾಗದ ಹಿನ್ನೆಲೆ ಈ ಹಣವೂ ವಾಪಾಸ್ ಹೋಗಿದೆ.. ಬೀದಿ ಬದಿ ವ್ಯಾಪಾರಿಗಳ ಸ್ವಸಹಾಯ ಗುಂಪುಗಳನ್ನ ಮಾಡಬೇಕೆಂಬ ನಿಯಮ ಇದೆ.. ಆದ್ರೂ ಅಧಿಕಾರಿಗಳು ಮಾಡಿಲ್ಲ.. ಬೀದಿ ಬದಿ ವ್ಯಾಪಾರಿಗಳ ಸಮಿತಿ ರಚನೆ ಮಾಡುವಲ್ಲೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿವೆ ಅಂತಾ ಬೀದಿ ಬದಿ ವ್ಯಾಪಾರಿಗಳ ಸಂಘಟನೆಯ ಪಾಷಾ ಸಾಬ್ ಆರೋಪಿಸಿದ್ದಾರೆ..
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರಸಭೆ ಕಮಿಷನರ್ ರಮೇಶ್ ಸುಣಗಾರ, ಕಾನೂನು ಉಲ್ಲಂಘನೆಯಾಗಿಲ್ಲ.. ಹೊಸ ನಿಯಮ ಅಳವಡಿಸಲು ಸಮಯ ಬೇಕು.. ಬೀದಿ ಬದ ವ್ಯಾಪಾರಿಗಳಿಗೆ ಪ್ರತ್ಯೇಕ ಫಂಡ್ ಇರಿಸಬೇಕು ಅನ್ನೋ ಬೇಡಿಕೆ ಅವರದ್ದು, ವರದಿ ಕೇಳಿದ್ದೇನೆ ಅಧಿಕಾರಿಗಳು ಇವತ್ತು ಬಂದಿಲ್ಲ.. ಅವರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ..
ಒಡ್ನಲ್ಲಿ ನಗರಸಭೆ ಕಚೇರಿ ಆವರಣ ಇಂದು ರಣಾಂಗಣವಾಗಿತ್ತು.. ಕೂಡ್ಲೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಿತಿ ರಚಿಸ್ಬೇಕು.. ಇಲ್ಲವಾದಲ್ಲಿ ಸೂಕ್ತ ಸಮಜಾಯಿಷಿ ನೀಡ್ಬೇಕು.. ಇಲ್ಲವಾದಲ್ಲಿ ಬೀದಿ ಬದಿ ವ್ಯಾಪಾರಿಗಳ ಹೋರಾಟ ಮತ್ತಷ್ಟು ತೀವ್ರಗೊಳಸ್ತೇವೆ ಅನ್ನೋ ಸಂದೇಶವನ್ನೂ ಸಂಘಟನೆ ನೀಡಿವೆ.