ಟ್ರಕ್ ಡಿಪ್ಪರ್‌ಗೂ, ಕಾಂಡೋಮ್‌ಗೂ ಎಲ್ಲಿಯ ಸಂಬಂಧ? ಈ ಆ್ಯಡ್ ಕ್ಲಿಕ್ಕಾಗಿದ್ದು ಹೇಗೆ?

By Suvarna News  |  First Published Nov 17, 2023, 12:58 PM IST

ಟ್ರಕ್ ಎಲ್ಲಿ, ಕಾಂಡೋಮ್ ಎಲ್ಲಿ? ಒಂದಕ್ಕೊಂದು ಸಂಬಂಧವಿಲ್ಲ. ಆದ್ರೆ ಈ ಎರಡೂ ಕಂಪನಿಗಳು ಒಂದೇ ಸಂದೇಶದ ಮೂಲಕ ಜನರ ಗಮನ ಸೆಳೆದಿವೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಕೆಲಸ ಮಾಡಿವೆ. 
 


ವಾಹನದ ಮೇಲೆ ಬರೆದಿರುವ ಶಬ್ಧವಾಗ್ಲಿ ಅಥವಾ ಬೇರೆ ಯಾವುದೋ ಸಂದೇಶವಾಗ್ಲಿ ಕೆಲವೊಂದು ಆಕರ್ಷಕವಾಗಿರುತ್ತದೆ. ಇವರ ಆಲೋಚನೆಗೆ ಮೆಚ್ಚಬೇಕು ಎನ್ನುವ ಮಾತು ನಮ್ಮ ಬಾಯಿಂದ ಹೊರಗೆ ಬರುತ್ತದೆ. ಈ ಐಡಿಯಾ ಅವರಿಗೆ ಹೇಗೆ ಬಂತು ಎನ್ನುವ ಪ್ರಶ್ನೆ ಕೂಡ ಉದ್ಭವಿಸುತ್ತದೆ. ಇನ್ನು ಕೆಲವೊಂದು ಸಂದೇಶ ತುಂಬಾ ಸರಳವಾಗಿರುತ್ತದೆ. ಸಾಮಾನ್ಯ ವ್ಯಕ್ತಿ, ಮಕ್ಕಳು ಕೂಡ ಅದನ್ನು ಅರ್ಥ ಮಾಡಿಕೊಳ್ಳುವಂತಿರುತ್ತದೆ. ಆದ್ರೆ ಈ ಸರಳ ಪದಗಳ ಹಿನ್ನಲೆ ಕೂಡ ಕುತೂಹಲದಿಂದ ಕೂಡಿರುತ್ತವೆ. ನಾವು ಇಷ್ಟೆಲ್ಲ ಏಕೆ ಹೇಳ್ತಿದ್ದೇವೆ ಅಂದ್ರೆ ನೀವು ಲಾರಿ ಹಿಂದೆ ಬರೆದಿರುವ ʻರಾತ್ರಿಯಲ್ಲಿ ಡಿಪ್ಪರ್ ಗಳನ್ನು ಬಳಸಿʼ  ಎನ್ನುವ ಸಂದೇಶವನ್ನು ನೋಡಿರ್ತೀರಿ. ಇದಕ್ಕೂ ಒಂದು ಹಿನ್ನೆಲೆ ಇದೆ. ಅದೇನು ಅಂತಾ ನಾವು ಹೇಳ್ತೇವೆ.

ರಾತ್ರಿ (Night) ಯಲ್ಲಿ ಡಿಪ್ಪರ್ (Dipper) ಬಳಸಿ ಇದು ಅತ್ಯಂತ ಸರಳ ಸಂದೇಶ. ಟ್ರಕ್ (Truck) ಹಿಂದೆ ಸರಳ ಮತ್ತು ಸ್ಪಷ್ಟವಾಗಿ ಬರೆದಿರಲಾಗುತ್ತದೆ. ಟ್ರಕ್ ಚಾಲಕರು ರಾತ್ರಿಯಲ್ಲಿ ತಮ್ಮ ವಾಹನಗಳ ಹೆಡ್‌ಲೈಟ್‌ಗಳ ಕೆಳಗೆ ಡಿಪ್ಪರ್‌ಗಳನ್ನು ಬಳಸಲು ಈ ಸಂದೇಶ ಉತ್ತೇಜಿಸುತ್ತದೆ. ಆದರೆ ಈ ಸಂದೇಶವನ್ನು ಕಾಂಡೋಮ್‌ಗಳ ಜಾಹೀರಾತಿಗೆ ಬಳಸಲಾಗ್ತಿತ್ತು ಅಂದ್ರೆ ನೀವು ನಂಬ್ಲೇಬೇಕು. 

Tap to resize

Latest Videos

ಇಶಾ ಅಂಬಾನಿ ಇರುವಾಗ್ಲೇ ಮುಕೇಶ್ ಅಂಬಾನಿಯ 1.41 ಲಕ್ಷ ಕೋಟಿ ಕಂಪೆನಿಗೆ ಹೊಸ ಉತ್ತರಾಧಿಕಾರಿ

ಕಾಂಡೋಮ್ ಜಾಹೀರಾತಿಗೆ ಬಳಸಲಾಗಿತ್ತು : ಇದು 1990 ರ ದಶಕದ ಕಥೆ. ಆ ಸಮಯದಲ್ಲಿ ಕಾಂಡೋಮ್ ಬಳಕೆ ಭಾರತದಲ್ಲಿ ಇನ್ನೂ ಸರಿಯಾಗಿ ಜಾರಿಗೆ ಬಂದಿರಲಿಲ್ಲ. ಕಾಂಡೋಮ್ ಬಗ್ಗೆ ಜನರು ಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಅವರಿರಲಿಲ್ಲ. ಜನರಿಗೆ ಕಾಂಡೋಮ್ ಬಗ್ಗೆ ಸರಿಯಾದ ಮಾಹಿತಿ ನೀಡುವುದು, ಅದನ್ನು ಬಳಸಲು ಜನರಿಗೆ ಪ್ರೋತ್ಸಾಹ ನೀಡುವುದು ಬಹಳ ಮುಖ್ಯವಾಗಿತ್ತು. ಲಾಭರಹಿತ ಸಂಸ್ಥೆಯೊಂದು ಕಾಂಡೋಮ್ ಜಾಹೀರಾತು ಅಭಿಯಾನವನ್ನು ಪ್ರಾರಂಭಿಸಿತು. ಕಾಂಡೋಮ್‌ಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸುವುದು ಈ ಅಭಿಯಾನದ ಉದ್ದೇಶವಾಗಿತ್ತು. 

ಅಮೆರಿಕದ ಉನ್ನತ ಹುದ್ದೆ ತ್ಯಜಿಸಿ ಕುಟುಂಬದ ಸೀರೆ ಉದ್ಯಮ ಮುನ್ನಡೆಸುತ್ತಿರುವ ಲಾವಣ್ಯ ನಲ್ಲಿಆದಾಯ ಎಷ್ಟು ಗೊತ್ತಾ?

ಜಾಹೀರಾತಿನಲ್ಲಿ  ಟ್ರಕ್ ಚಿತ್ರವನ್ನು ತೋರಿಸಲಾಗಿತ್ತು. ಟ್ರಕ್ಕಿನ ಹಿಂಭಾಗದಲ್ಲಿ ರಾತ್ರಿಯಲ್ಲಿ ಡಿಪ್ಪರ್ ಬಳಸಿ ಎಂದು ಬರೆಯಲಾಗಿತ್ತು. ಆದರೆ ಈ ಬಾರಿ  ಡಿಪ್ಪರ್ ಪದದ ಅರ್ಥ ಕಾಂಡೋಮ್ ಎಂದಾಗಿತ್ತು. ಕಾಂಡೋಮ್ ಬಳಕೆ ಮಾಡುವುದು ರಾತ್ರಿಯಲ್ಲಿ ಡಿಪ್ಪರ್ ಬಳಸಿದಂತೆ. ಇದು ನಿಮ್ಮ ಹಾಗೂ ನಿಮ್ಮ ಸಂಗಾತಿಯ ಸುರಕ್ಷತೆಗೆ ಒಳ್ಳೆಯದು ಎನ್ನುವ ಸಂದೇಶವನ್ನು ರವಾನೆ ಮಾಡಿತ್ತು. ಈ ಡಿಪ್ಪರ್ ಜಾಹೀರಾತು ಯಶಸ್ವಿಯಾಯ್ತು. ಭಾರತದಲ್ಲಿ ಜನರು ಕಾಂಡೋಮ್ ಮಹತ್ವವನ್ನು ಅರಿಯಲು ಶುರು ಮಾಡಿದ್ರು. ಸುರಕ್ಷಿತ ಲೈಂಗಿಕತೆಗೆ ಕಾಂಡೋಮ್ ಅಗತ್ಯ ಎಂಬುದನ್ನು ಅವರು ತಿಳಿದುಕೊಳ್ಳಲು ಆರಂಭಿಸಿದ್ರು. ಕಾಂಡೋಮ್ ಬಗ್ಗೆ ಆಸಕ್ತಿ ಹೆಚ್ಚಾಯ್ತು. ಭಾರತದಲ್ಲಿ ನಿಧಾನವಾಗಿ ಕಾಂಡೋಮ್ ಬಳಕೆದಾರರ ಸಂಖ್ಯೆ ಹೆಚ್ಚಾಗಲು ಶುರುವಾಯ್ತು. 

ಕಾಂಡೋಮ್ ಜಾಹೀರಾತು ಬಳಸಿಕೊಂಡ ವಾಹನ ಕಂಪನಿ : ಒಂದ್ಕಡೆ ಡಿಪ್ಪರ್ ಜಾಹೀರಾತು ಜನರ ಮೇಲೆ ಪ್ರಭಾವ ಬೀರಿದ್ರೆ ಇನ್ನೊಂದು ಕಡೆ ಇದೇ ಜಾಹೀರಾತು ವಾಹನ ಕಂಪನಿಯೊಂದನ್ನು ಆಕರ್ಷಿಸಿತ್ತು. ಅದು ಬೇರೆ ಯಾವುದೋ ಅಲ್ಲ, ಟಾಟಾ ಮೋಟಾರ್ಸ್. ಟಾಟಾ ಮೋಟರ್ಸ್ ಈ ಜಾಹೀರಾತಿನ ಅರ್ಥವನ್ನು ತನ್ನ ಅನುಕೂಲಕ್ಕೆ ಬದಲಿಸಿಕೊಂಡಿದ್ದಲ್ಲದೆ ಟ್ರಕ್ ಗಳಿಗೆ ಹೊಸ ಸುರಕ್ಷತಾ ಸಂದೇಶವನ್ನು ಅಳವಡಿಸಲು ಈ ಸಂದೇಶವನ್ನು ಬಳಸಿಕೊಂಡಿತು. ಅಲ್ಲಿಂದ ಟಾಟಾ ಮೋಟಾರ್ಸ್ ತನ್ನ ಟ್ರಕ್‌ಗಳ ಹಿಂಭಾಗದಲ್ಲಿ  ರಾತ್ರಿಯಲ್ಲಿ ಡಿಪ್ಪರ್ ಬಳಸಿ ಎಂದು ಬರೆಯಲು ಶುರು ಮಾಡಿತು. ಸಂದೇಶವು ರಾತ್ರಿಯಲ್ಲಿ ತಮ್ಮ ವಾಹನಗಳ ಹೆಡ್‌ಲೈಟ್‌ಗಳ ಅಡಿಯಲ್ಲಿ ಡಿಪ್ಪರ್‌ಗಳನ್ನು ಬಳಸಲು  ವಾಹನ ಸವಾರರನ್ನು ಪ್ರೋತ್ಸಾಹಿಸುತ್ತದೆ. 

ಈ ಎರಡೂ ಕಂಪನಿಗಳು ಒಂದೇ ಸಂದೇಶವನ್ನು ತಮ್ಮ ತಮ್ಮ ಅನುಕೂಲಕ್ಕೆ ಬಳಸಿಕೊಂಡಿವೆ. ಇದ್ರಿಂದ ಸುರಕ್ಷಿತ ವಾಹನ ಚಲಾವಣೆ ಹಾಗೂ ಸುರಕ್ಷಿತ ಲೈಂಗಿಕ ಜೀವನಕ್ಕೆ ಪ್ರಯೋಜನವಾಗಿದೆ. 
 

click me!