ವಿಜಯ್‌ ಮಲ್ಯ ರೀತಿಯಲ್ಲಿ ಹವಾಯಿಗೆ ಪರಾರಿಯಾದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಮಾಜಿ ಸಿಇಒ!

By Santosh NaikFirst Published Mar 17, 2023, 6:27 PM IST
Highlights

ಭಾರತದಲ್ಲಿ ವಿಜಯ್‌ ಮಲ್ಯ ಬ್ಯಾಂಕ್‌ಗಳಿಗೆ ಟೋಪಿ ಹಾಕಿ ವಿದೇಶಕ್ಕೆ ಪರಾರಿಯಾದರೆ, ಅಮೆರಿಕದಲ್ಲಿ ಇಡೀ ಬ್ಯಾಂಕ್‌ಅನ್ನೇ ದಿವಾಳಿ ಮಾಡಿ ಅದರ ಮಾಜಿ ಸಿಇಒ ಬೇರೆ ದೇಶಕ್ಕೆ ಪರಾರಿಯಾಗಿದ್ದಾರೆ. ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನ ಮಾಜಿ ಸಿಇಒ ಗ್ರೇಗ್‌ ಬೆಕರ್‌, ಪತ್ನಿ ಸಮೇತ ಹವಾಯಿಗೆ ಶಿಫ್ಟ್‌ ಆಗಿದ್ದಾರೆ ಎಂದು ವರದಿಯಾಗಿದೆ.

ನವದೆಹಲಿ (ಮಾ.17): ಮೂರು ದಶಕಗಳ ಕಾಲ ತಂತ್ರಜ್ಞಾನ ಕ್ಷೇತ್ರದ ಬೆನ್ನೆಲುಬಾಗಿ ನಿಂತಿದ್ದ ಅಮೆರಿಕದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ 2023ರ  ಮಾರ್ಚ್‌ 10 ರಂದು ಕುಸಿತ ಕಂಡಿದೆ. ಠೇವಣಿದಾರರು ಹಾಗೂ ಹೂಡಿಕೆದಾರರು ಈ ಬ್ಯಾಂಕ್‌ನ ಮೇಲೆ ಹಾಕಿದ್ದ ಹಣವನ್ನು ಹಿಂತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸ್ಟಾರ್ಟ್‌ಅಪ್‌ಗಳಿಗೆ ಆಧಾರವಾಗಿ ನಿಂತು ಸಾಲ ನೀಡುತ್ತಿದ್ದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ದಿವಾಳಿಯಾದ ಬೆನ್ನಲ್ಲಿಯೇ ಈ ಬ್ಯಾಂಕ್‌ನ ಮಾಜಿ ಸಿಇಒ ಹವಾಯಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತಾಗಿ ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ. ವರದಿಯ ಪ್ರಕಾರ, ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನ ಮಾಜಿ ಸಿಇಒ ಗ್ರೇಕ್‌ ಬೆಕರ್‌ ಹಾಗೂ ಆತನ ಪತ್ನಿ ಮರ್ಲಿನ್‌ ಬಿಟುಸ್ಟಾ ಹವಾಯಿಯ ಮೌಯಿಯಲ್ಲಿರುವ 29 ಕೋಟಿ ರೂಪಾಯಿ ಟೌನ್‌ಹೌಸ್‌ಗೆ ಶಿಫ್ಟ್‌ ಆಗಿದ್ದಾರೆ ಎಂದು ವರದಿಯಾಗಿದೆ. ಭಾರತದಲ್ಲಿ ವಿಜಯ್‌ ಮಲ್ಯ ಬ್ಯಾಂಕ್‌ಗಳಿಗೆ ಟೋಪಿ ಹಾಕಿ ಪರಾರಿಯಾಗಿದ್ದರೆ, ಅಮೆರಿಕದಲ್ಲಿ ಇಡೀ ಬ್ಯಾಂಕ್‌ಅನ್ನೇ ದಿವಾಳಿ ಮಾಡಿ ಬ್ಯಾಂಕ್‌ನ ಮಾಜಿ ಅಧಿಕಾರಿ ಪಲಾಯನಗೈದಿದ್ದಾರೆ. ದಂಪತಿಗಳು ಸೋಮವಾರ ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣಕ್ಕೆ ಚಾಲಕ ಚಾಲಿನ ಲೈಮೋ ರೈಡ್ ಮಾಡಿಕೊಂಡು ಬಂದಿದ್ದರು. ಹವಾಯಿಗೆ ಪ್ರಥಮ ದರ್ಜೆ ಟಿಕೆಟ್‌ಗಳನ್ನು ಮಾಡಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮಾಜಿ ಸಿಇಒ, ಲಹೈನಾ ಮೂಲಕ ಅಡ್ಡಾಡುತ್ತಿರುವಾಗ ಸ್ಪೋರ್ಟ್ಸ್‌ ಶಾರ್ಟ್ಸ್‌ ಮತ್ತು ಫ್ಲಿಪ್-ಫ್ಲಾಪ್‌ಗಳನ್ನು ಧರಿಸಿದ್ದರು ಎನ್ನುವುದು ಫೋಟೋಗಳಿಂದ ಬಹಿರಂಗವಾಗಿದೆ.

ಫೆಡರಲ್ ನಿಯಂತ್ರಕರು ಎಸ್‌ವಿಬಿಯನ್ನು ಮುಚ್ಚುವ ಎರಡು ವಾರಗಳ ಮೊದಲು ಬೆಕರ್‌, ಸಾಮಾನ್ಯ ಸ್ಟಾಕ್‌ಅನ್ನು $3,578,652.31 ಮೊತ್ತಕ್ಕೆ ಮಾರಾಟ ಮಾಡಿದ ಬಳಿಕ ತನಿಖೆಯನ್ನು ಎದುರಿಸುತ್ತಿದ್ದಾರೆ. ಬೆಕರ್‌ ಮೂರು ದಶಕಗಳ ಹಿಂದೆ 1993 ರಲ್ಲಿ ಲೋನ್‌ ಆಫೀಸರ್‌ ಆಗಿ ಸಿಲಿಕಾನ್ ವ್ಯಾಲಿ ಬ್ಯಾಂಕ್‌ಗೆ ಸೇರಿದ್ದರು.  ಎಸ್‌ವಿಬಿಯ ವೆಬ್‌ಸೈಟ್ ಪ್ರಕಾರ, ಬೆಕರ್ ಅವರು ನಾವೀನ್ಯತೆ ವಲಯದಲ್ಲಿ ಸೇವೆ ಸಲ್ಲಿಸುವ ನಾಲ್ಕು ಪ್ರಾಥಮಿಕ ವ್ಯವಹಾರಗಳನ್ನು ಸೇರಿಸಲು ಕಂಪನಿಯ ವಿಸ್ತರಣೆಗೆ ಕಾರಣರಾದರು. ಜಾಗತಿಕ ವಾಣಿಜ್ಯ ಬ್ಯಾಂಕಿಂಗ್, ಸಾಹಸೋದ್ಯಮ ಬಂಡವಾಳ ಮತ್ತು ಕ್ರೆಡಿಟ್ ಹೂಡಿಕೆ, ಖಾಸಗಿ ಬ್ಯಾಂಕಿಂಗ್ ಮತ್ತು ಸಂಪತ್ತು ನಿರ್ವಹಣೆ ಮತ್ತು ಹೂಡಿಕೆ ಬ್ಯಾಂಕಿಂಗ್‌ ಅನ್ನು ಪರಿಚಯಿಸಿದ್ದರು.

282 ಲಕ್ಷ ಕೋಟಿ ವಿತ್‌ಡ್ರಾ, 48 ಗಂಟೆಗಳಲ್ಲೇ ಬಂದ್‌ ಆದ ಅಮೆರಿಕದ 2ನೇ ಅತಿದೊಡ್ಡ ಬ್ಯಾಂಕ್‌!

1983ರಲ್ಲಿ ಸ್ಥಾಪನೆಯಾದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌, ಅಮೆರಿಕದ 16ನೇ ಅತೀದೊಡ್ಡ ಬ್ಯಾಂಕ್‌ ಎನಿಸಿದೆ. ಕುಸಿಯುವ ಮೊದಲು, ಇದು ಅಮೆರಿಕದಲ್ಲಿ ಸುಮಾರು ಅರ್ಧದಷ್ಟು ವೆಂಚರ್‌ ಕ್ಯಾಪಿಟಲಿಸ್ಟ್‌ ತಂತ್ರಜ್ಞಾನ ಕಂಪನಿಗಳಿಗೆ ಹಣಕಾಸು ಬೆಂಬಲದ ನೆರವಿ ನೀಡುತ್ತಿತ್ತು.

ಅಮೆರಿಕದ ಬ್ಯಾಂಕ್‌ ಪತನದಿಂದ 1 ಲಕ್ಷ ಉದ್ಯೋಗ ನಷ್ಟ..? ಭಾರತದ ಸ್ಟಾರ್ಟಪ್‌ಗಳ ನೆರವಿಗೆ ಸಜ್ಜಾದ ಕೆಂದ್ರ ಸರ್ಕಾರ

ಮಾರ್ಚ್ 10 ರಂದು, ಅಮೆರಿಕದ ಫೆಡರಲ್‌ ನಿಯಂತ್ರಕರು ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB) ಅನ್ನು ಮುಚ್ಚಯವ ನಿರ್ಧಾರ ಮಾಡಿದ್ದಲ್ಲದೆ, ಅದರ ಠೇವಣಿಗಳ ನಿಯಂತ್ರಣವನ್ನು ತೆಗೆದುಕೊಂಡರು, ಇದು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ಅತಿದೊಡ್ಡ ಚಿಲ್ಲರೆ ಬ್ಯಾಂಕಿಂಗ್ ವೈಫಲ್ಯ ಎನಿಸಿಕೊಂಡಿದೆ.  ಬ್ಯಾಂಕ್‌ ದಿವಾಳಿಯಾದ ಬಳಿಕ ಸುಮಾರು $175 ಶತಕೋಟಿ ಗ್ರಾಹಕ ಠೇವಣಿಗಳು ಈಗ ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (FDIC) ನಿಯಂತ್ರಣದಲ್ಲಿವೆ. ಎಫ್‌ಡಿಐಸಿ ನ್ಯಾಷನಲ್ ಬ್ಯಾಂಕ್ ಆಫ್ ಸಾಂಟಾ ಕ್ಲಾರಾ ಹೆಸರಿನಲ್ಲಿ  ಹೊಸ ಬ್ಯಾಂಕ್ ಅನ್ನು ರಚಿಸಿದೆ. ಇದು ಈಗ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಎಲ್ಲಾ ಸ್ವತ್ತುಗಳನ್ನು ಹೊಂದಿರುತ್ತದೆ. 48 ಗಂಟೆಗಳ ನಾಟಕೀಯ ಬೆಳವಣಿಗೆಯ ಬಳಿಕ ಈ ಕ್ರಮ ಬಂದಿದೆ. ಠೇವಣಿ ಹಿಂತೆಗೆದುಕೊಳ್ಳಲು ಬ್ಯಾಂಕ್‌ಗೆ ದಾಂಗುಡಿ ಇರಿಸಿದ್ದರಿಂದ ಬ್ಯಾಂಕ್‌ನ ಷೇರು ಮೌಲ್ಯ ಕೂಡ ಕುಸಿದಿತ್ತು.

click me!