ನೋಟ್ ಬ್ಯಾನ್‌ಗೆ US ಸರ್ಟಿಫಿಕೆಟ್: ಎಕಾನಮಿ ಡೌನ್ 2 ಪರ್ಸೆಂಟ್!

By Web DeskFirst Published Dec 19, 2018, 12:43 PM IST
Highlights

ನೋಟ್ ಬ್ಯಾನ್ ಕುರಿತು ಅಂತೆ ಕಂತೆಗಳ ವರದಿಗಳು| ನೋಟ್ ಬ್ಯಾನ್ ಕುರಿತು ಅಮೆರಿಕದ ಸಂಸ್ಥೆಯೊಂದರ ವರದಿ| ಅಮೆರಿಕದ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್|  ‘ನೋಟ್ ಬ್ಯಾನ್‌ನಿಂದ ಭಾರತದ ಆರ್ಥಿಕತೆಗೆ ಶೇ. 2ರಷ್ಟು ಪೆಟ್ಟು’| ‘ಜಿಡಿಪಿ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ’   

ವಾಷಿಂಗ್ಟನ್(ಡಿ.19): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೋಟ್ ಬ್ಯಾನ್‌ಗೆ ಸಾಕಷ್ಟು ಪರ ವಿರೋಧ ಚರ್ಚೆಗಳು ಇಂದಿಗೂ ನಡೆಯುತ್ತಿವೆ.

ಅಪನಗದೀಕರಣ ಭಾರತದ ಆರ್ಥಿಕತೆ ಮೇಲೆ ನಡೆಸಿದ ಗದಾಪ್ರಹಾರ ಎಂದು ವಿರೋಧಿಗಳು ಹೇಳಿದರೆ, ಅಲ್ಲ ಅದು ಕಪ್ಪುಕುಳಗಳ ಮೇಲೆ ನಡೆಸಿದ ಗದಾಪ್ರಹಾರ ಎಂದು ನೋಟ್ ಬ್ಯಾನ್ ಪರ ಇರುವವರು ವಾದ ಮಂಡಿಸುತ್ತಿದ್ದಾರೆ.

ಈ ಮಧ್ಯೆ ಪ್ರಧಾನಿ ಮೋದಿ ಅವರ ನೋಟ್ ಬ್ಯಾನ್ ನಿರ್ಧಾರದ ಕುರಿತು, ಅಮೆರಿಕದ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್ ವರದಿ ಮಂಡಿಸಿದೆ.

ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್ ಪ್ರಕಾರ ನೋಟ್ ಬ್ಯಾನ್ ಬಳಿಕ ಭಾರತದ ಆರ್ಥಿಕತೆ ಶೇ. 2 ರಷ್ಟು ಕುಸಿತ ಕಂಡಿದ್ದು, ಇದು ಜಿಡಿಪಿ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತ ಡಿಜಿಟಲ್ ಪೇಮೆಂಟ್‌ನತ್ತ ಮುನ್ನುಗ್ಗುತ್ತಿರುವುದು ಹೌದಾದರೂ, ಇಂದಿಗೂ  ಭಾರತದ ಅರ್ಥ ವ್ಯವಸ್ಥೆಯಲ್ಲಿ ಹಣ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ವರಿದಿ ತಿಳಿಸಿದೆ.

click me!