ಕಾರಿಗಾಗಿ ಬಡಿದಾಡಿಕೊಂಡ ಟ್ರಂಪ್, ಕ್ಸಿ: ಟ್ರೇಡ್ ವಾರ್ @ಹೈ!

Published : Nov 27, 2018, 04:43 PM IST
ಕಾರಿಗಾಗಿ ಬಡಿದಾಡಿಕೊಂಡ ಟ್ರಂಪ್, ಕ್ಸಿ: ಟ್ರೇಡ್ ವಾರ್ @ಹೈ!

ಸಾರಾಂಶ

ಅಮೆರಿಕ-ಚೀನಾ ನಡುವಿನ ವಾಣಿಜ್ಯ ಸಮರ ತಾರಕಕ್ಕೆ! ಚೀನಾ ಮೇಲೆ ವಕ್ರದೃಷ್ಟಿ ಬೀರಿದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್! ಚೀನಾದಲ್ಲಿ ಕಾರು ಉತ್ಪಾದನೆ ನಿಲ್ಲಿಸುವಂತೆ ಜನರಲ್ ಮೋಟಾರ್ಸ್ ಗೆ ಸೂಚನೆ! ಅಮೆರಿಕ, ಕೆನಡಾದಲ್ಲಿ ಉದ್ಯೋಗ ಕಡಿತಗೊಳಿಸಲು ನಿರ್ಧರಿಸಿದ್ದ ಜನರಲ್ ಮೋಟಾರ್ಸ್! ಚೀನಾದಲ್ಲಿರುವ ಘಟಕ ಸ್ಥಗಿತಗೊಳಿಸಿ ಬಹಿಯೊದಲ್ಲಿ ಘಟಕ ಸ್ಥಾಪಿಸಲು ಟ್ರಂಪ್ ಸೂಚನೆ

ವಾಷಿಂಗ್ಟನ್(ನ.27): ಚೀನಾದಲ್ಲಿ ಕಾರು ಉತ್ಪಾದನೆಯನ್ನು ನಿಲ್ಲಿಸುವಂತೆ ಜನರಲ್ ಮೋಟಾರ್ಸ್ ಕಂಪನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಅಮೆರಿಕ ಮೂಲದ ಆಟೊಮೊಬೈಲ್ ಕಂಪನಿಯಾಗಿರುವ ಜನರಲ್ ಮೋಟಾರ್ಸ್ ಅಮೆರಿಕ ಮತ್ತು ಕೆನಡಾಗಳಲ್ಲಿ ಸುಮಾರು 14 ಸಾವಿರದ 800 ಉದ್ಯೋಗಗಳನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ ಎಂದು ಘೋಷಿಸಿತ್ತು.

ಉದ್ಯೋಗ ಕಡಿತಗೊಳಿಸಿದರೆ 2020ರ ಅಂತ್ಯಕ್ಕೆ ಸುಮಾರು 4.5 ಬಿಲಿಯನ್ ಡಾಲರ್ ಮೊತ್ತವನ್ನು ಉಳಿತಾಯ ಮಾಡಲು ಸಾಧ್ಯವಿದೆ ಎಂದು ಜನರಲ್ ಮೋಟಾರ್ಸ್ ಹೇಳಿದ್ದು, ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಟ್ರಂಪ್ ಹೇಳಿದ್ದಾರೆ ಎನ್ನಲಾಗಿದೆ.

ಕಂಪನಿಯ ಈ ನಿರ್ಧಾರದಿಂದ ಅಮೆರಿಕಾದ ಒಹಿಯೊ ಮತ್ತು ಮಿಚಿಗನ್ ರಾಜ್ಯಗಳ ಜನರ ಉದ್ಯೋಗದ ಮೇಲೆ ತೀವ್ರ ಪರಿಣಾಮ ಬೀರಲಿದೆ.

ಚೀನಾದಲ್ಲಿ ಕಾರು ಉತ್ಪಾದನೆ ನಿಲ್ಲಿಸಿ ಒಹಿಯೊದಲ್ಲಿ ಹೊಸ ಘಟಕ ಸ್ಥಾಪಿಸಿ ಇಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶ ನೀಡಬೇಕೆಂದು ಡೊನಾಲ್ಡ್ ಟ್ರಂಪ್ ಜನರಲ್ ಮೋಟಾರ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇರಿ ಬರ್ರ ಅವರಿಗೆ ತಿಳಿಸಿರುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!