ಆರ್‌ಬಿಐ ಮೀಸಲು ಹಣದ ಮೇಲೆ ಮೋದಿ ಕಣ್ಣು?! ಹೆಚ್ಚುವರಿ ಮೊತ್ತ ಕೇಂದ್ರಕ್ಕೆ ವರ್ಗಾವಣೆ ಮಾಡಲಿದೆಯಾ ಆರ್‌ಬಿಐ?! ವರ್ಗಾವಣೆ ಸಂಬಂಧ ಸಮಿತಿ ರಚನೆ ಮಾಡಲು ಆರ್‌ಬಿಐ ನಿರ್ಧಾರ! 1-3 ಟ್ರಿಲಿಯನ್ ಹಣವನ್ನು ಹೆಚ್ಚುವರಿ ಮೊತ್ತ ಎಂದು ಪರಿಗಣಿಸುವ ಸಾಧ್ಯತೆ
ಮುಂಬೈ(ನ.27): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿರುವ ಮೀಸಲು ಹಣದ ಪೈಕಿ, ಹೆಚ್ಚುವರಿ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.
ನ.26 ರಂದು ನಡೆದ ಆರ್‌ಬಿಐ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ವರ್ಗಾವಣೆ ಸಂಬಂಧ ಸಮಿತಿ ರಚನೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಸಮಿತಿ ಎಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ಸಂಗ್ರಹವಾದ ಮೊತ್ತ ಎಂದು ಹೇಳುತ್ತದೆಯೋ ಅಷ್ಟು ಹೆಚ್ಚುವರಿ ಮೀಸಲು ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲಿದೆ.
ಸಮಿತಿಯ ಸದಸ್ಯರ ಬಗ್ಗೆ ಈ ವಾರಾಂತ್ಯದ ವೇಳೆಗೆ ಘೋಷಣೆಯಾಗಲಿದೆ. ಆರ್‌ಬಿಐ ನ ಎಕೆನಾಮಿಕ್ ಕ್ಯಾಪಿಟಲ್ ಫ್ರೇಮ್ ವರ್ಕ್ (ಇಸಿಎಫ್)ಗೆ ಸಂಬಂಧಿಸಿದ ಸಮಿತಿ 1-3 ಟ್ರಿಲಿಯನ್ ನಷ್ಟು ಹಣವನ್ನು ಹೆಚ್ಚುವರಿ ಮೊತ್ತ ಎಂದು ಪರಿಗಣಿಸುವ ಸಾಧ್ಯತೆ ಇದೆ ಎಂದು ಅಂದಾಜಿಲಸಾಗಿದೆ.