ಯುಎಸ್-ಚೀನಾ ಕಿತ್ತಾಟ: ಮರೆಯಲ್ಲಿ ನಗುತ್ತಿರುವ ಮೋದಿ!

Published : Aug 10, 2018, 12:54 PM IST
ಯುಎಸ್-ಚೀನಾ ಕಿತ್ತಾಟ: ಮರೆಯಲ್ಲಿ ನಗುತ್ತಿರುವ ಮೋದಿ!

ಸಾರಾಂಶ

ಅಮೆರಿಕ-ಚೀನಾ ವಾಣಿಜ್ಯ ಸಮರ! ಭಾರತಕ್ಕೆ ಅಗ್ಗದ ತೈಲ ಸಿಗಲು ಅವಕಾಶ! ಚೀನಾದಿಂದ ಅಮೆರಿಕದ ತೈಲ ಆಮದು ಕಡಿತ! ಭಾರತಕ್ಕೆ ಹೆಚ್ಚಿನ ತೈಲ ರಫ್ತು ಮಾಡಲು ಯುಎಸ್ ಚಿಂತನೆ! ಇನ್ಮುಂದೆ ಭಾರತಕ್ಕೆ ಅಗ್ಗದ ದರದಲ್ಲಿ ತೈಲ ಸಿಗಲಿದೆ  

ನವದೆಹಲಿ(ಆ.10): ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ತೀವ್ರಗೊಂಡಿದ್ದು, ಇದರ ಪರಿಣಾಮ ಭಾರತಕ್ಕೆ ಅಗ್ಗದ ದರದಲ್ಲಿ ತೈಲ ಪಡೆಯಲು ಹಾದಿ ಸುಗಮವಾಗಿದೆ. 

ಚೀನಾ ಇದುವರೆಗೆ ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುವ ಏಷ್ಯಾದ ರಾಷ್ಟ್ರವಾಗಿತ್ತು. ಆದರೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾದ ತೈಲ ಕಂಪನಿ ಇದೀಗ ಅಮೆರಿಕದಿಂದ ತೈಲ ಆಮದನ್ನು ಸ್ಥಗಿತಗೊಳಿಸಿದೆ.

ಅಮೆರಿಕದಿಂದ ಕಚ್ಚಾ ತೈಲ ಆಮದು ಮೇಲೆ ಆಮದು ಸುಂಕವನ್ನು ಹೇರಲು ಚೀನಾ ಸರಕಾರ ನಿರ್ಧರಿಸಿದೆ.  ಈ ನಡುವೆ ಭಾರತವು ಅಮೆರಿಕದಿಂದ 99.4 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಆಮದಿಗೆ ಆಗಸ್ಟ್‌ ತಿಂಗಳಿನಲ್ಲಿ ಒಪ್ಪಂದ ಮಾಡಿಕೊಂಡಿತ್ತು.

ಇದೀಗ ಅಮೆರಿಕದ ಜತೆ ತೈಲ ದರ ನಿಗದಿಗೆ ಸಂಬಂಧಿಸಿ ಚೌಕಾಶಿ ಮಾಡಲು ಭಾರತಕ್ಕೆ ಹಾದಿ ಸುಗಮವಾಗಿದೆ. ಹೀಗಾಗಿ ಕಡಿಮೆ ಬೆಲೆಗೆ ಅಮೆರಿಕದ ತೈಲ ಪಡೆಯಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಚೀನಾ ತನ್ನ ಬಾಗಿಲು ಬಂದ್‌ ಮಾಡುತ್ತಿರುವುದರಿಂದ ಈಗ ಏಷ್ಯಾದಲ್ಲಿ ದಕ್ಷಿಣ ಕೊರಿಯಾ ಹೊರತುಪಡಿಸಿದರೆ ಭಾರತವೇ ಅಮೆರಿಕಕ್ಕೆ ದೊಡ್ಡ ಗ್ರಾಹಕ ರಾಷ್ಟ್ರವಾಗಿದೆ. ಹೀಗಾಗಿ ಚೌಕಾಶಿ ಮಾಡಲು ಬಲ ಬಂದಿದೆ ಎನ್ನಲಾಗುತ್ತಿದೆ. ತೈಲ ದರ ಅಗ್ಗವಾದಷ್ಟೂ ಭಾರತಕ್ಕೆ ಅನುಕೂಲಕರವಾಗಲಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ
ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!