ಯುಪಿಐ ಪಾವತಿ ಅಪ್ಲಿಕೇಷನ್ ಬಳಸುತ್ತಿದ್ದೀರಾ? ಹಾಗಾದ್ರೆ ಮರೆಯದೆ ಈ 5 ಟಿಪ್ಸ್ ಫಾಲೋ ಮಾಡಿ

By Suvarna News  |  First Published Feb 27, 2023, 11:00 AM IST

ಇಂದು ಯುಪಿಐ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಯುಪಿಐ ಹಣಕಾಸು ವಹಿವಾಟನ್ನು ಅತ್ಯಂತ ಸುಲಭ ಹಾಗೂ ಸರಳವಾಗಿಸಿದೆ ಅನ್ನೋದು ನಿಜ. ಆದರೆ, ಯುಪಿಐ ಪಾವತಿ ಸಂದರ್ಭದಲ್ಲಿ ಸಾಕಷ್ಟು ಸುರಕ್ಷಿತ ಕ್ರಮಗಳನ್ನು ಅನುಸರಿಸೋದು ಕೂಡ ಅಷ್ಟೇ ಮುಖ್ಯ. ಏಕೆಂದ್ರೆ ಇಂದು ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ವಂಚಕರು ಖಾತೆಗೆ ಕನ್ನ ಹಾಕಲು ಹೊಸ ಮಾರ್ಗಗಳನ್ನು ಅನುಸರಿಸುತ್ತಲಿರುತ್ತಾರೆ. ಹೀಗಾಗಿ ಎಚ್ಚರಿಕೆ ವಹಿಸೋದು ಅಗತ್ಯ. 
 


Business Desk: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಪಾವತಿಗೆ ಯುಪಿಐ ಬಳಕೆಯಲ್ಲಿ ಗಣನೀಯ ಏರಿಕೆಯಾಗಿದೆ. ಭಾರತದಲ್ಲಿ ಯುಪಿಐ ಸೃಷ್ಟಿಸಿರುವ ಕ್ರಾಂತಿ ಅನ್ಯರಾಷ್ಟ್ರಗಳನ್ನು ಕೂಡ ಪ್ರಭಾವಿಸಿದೆ. ಅಷ್ಟೇ ಅಲ್ಲ, ಕೆಲವು ರಾಷ್ಟ್ರಗಳು ಭಾರತದ ಯುಪಿಐ ಮಾದರಿಯನ್ನು ಅಳವಡಿಸಿಕೊಳ್ಳಲು ಕೂಡ ಮುಂದಾಗಿವೆ. ಇನ್ನು ಯುಪಿಐ ಬಳಕೆ ಹೆಚ್ಚಿದ ಹಿನ್ನೆಲೆಯಲ್ಲಿ ಡೆಬಿಟ್ ಕಾರ್ಡ್ ಬಳಕೆ ತಗ್ಗಿದೆ. ಇದು ಡೆಬಿಟ್ ಕಾರ್ಡ್ ಸಂಸ್ಥೆಗಳಿಗೆ ತಲೆನೋವು ಕೂಡ ತಂದಿದೆ. ಆದ್ರೆ, ಯುಪಿಐ ಪಾವತಿ ಹಣ ವರ್ಗಾವಣೆಯನ್ನು ಎಷ್ಟು ಸುಲಭವಾಗಿಸಿದೆಯೋ ಅಷ್ಟೇ ಅಪಾಯವನ್ನು ಕೂಡ ಹೊಂದಿದೆ. ಅಂದ್ರೆ ಆನ್ ಲೈನ್ ವಹಿವಾಟು ಸಂದರ್ಭದಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದ್ರೂ ಲಕ್ಷಾಂತರ ರೂಪಾಯಿ ಕಳೆದುಕೊಳ್ಳಬೇಕಾಗಿ ಬರಬಹುದು. ಯುಪಿಐ ಆನ್ ಲೈನ್ ವಂಚಕರಿಗೆ ಬಹುದೊಡ್ಡ ಟಾರ್ಗೆಟ್ ಕೂಡ ಆಗಿದೆ. ಯುಪಿಐ ಬಳಕೆದಾರರು ಸ್ವಲ್ಪ ಎಚ್ಚರಿಕೆ ತಪ್ಪಿದರೂ ಆನ್ ಲೈನ್ ವಂಚಕರು ಕೆಲವೇ ಸೆಕೆಂಡ್ ಗಳಲ್ಲಿ ಲಕ್ಷಾಂತರ ರೂಪಾಯಿ ಎಗರಿಸಬಲ್ಲರು. ಇದಕ್ಕಾಗಿ ಅವರು ಹೊಸ ವಿಧನಗಳನ್ನು ಹುಡುಕುತ್ತಲೇ ಇರುತ್ತಾರೆ. ಹೀಗಿರುವಾಗ ಯುಪಿಐ ಬಳಕೆ ವೇಳೆ ಎಚ್ಚರಿಕೆ ವಹಿಸೋದು ಅಗತ್ಯ. ಹಾಗಾದ್ರೆ ಆನ್ ಲೈನ್ ಪಾವತಿ ಸಂದರ್ಭದಲ್ಲಿ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ.

ಸ್ಕ್ರೀನ್ ಲಾಕ್
ನಿಮ್ಮ ಮೊಬೈಲ್ ಅಥವಾ ಲ್ಯಾಪ್ ಟ್ಯಾಪ್ ಗೆ ಪ್ರಬಲವಾದ ಸ್ಕ್ರೀನ್ ಲಾಕ್ , ಪಾಸ್ ವರ್ಡ್ ಹಾಗೂ ಪಿನ್ ಅಳವಡಿಸಿ. ಇದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹಾಗೆಯೇ ನೆನಪಿಟ್ಟುಕೊಳ್ಳಲು ಬರೆದಿಡಬೇಡಿ. ಇದ್ರಿಂದ ನಿಮ್ಮ ವೈಯಕ್ತಿಕ ಮಾಹಿತಿ, ಹಣಕಾಸಿನ ಮಾಹಿತಿ ಹಾಗೂ ಅರ್ಜಿಗಳನ್ನು ವಂಚಕರಿಂದ ಸುರಕ್ಷಿತವಾಗಿಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ಹೆಸರು, ಜನ್ಮದಿನಾಂಕ, ಮೊಬೈಲ್ ಸಂಖ್ಯೆ ಮುಂತಾದ ಸರಳ ಪಾಸ್ ವರ್ಡ್ ಬಳಸಬೇಡಿ. 

Tap to resize

Latest Videos

ಎಲ್ಐಸಿ ಈ ಪಾಲಿಸಿಯಲ್ಲಿ 5ಲಕ್ಷ ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 50ಲಕ್ಷ ರೂ. ರಿಟರ್ನ್ಸ್!

ಪಿನ್ ಹಂಚಿಕೊಳ್ಳಬೇಡಿ
ಯಾವುದೇ ಕಾರಣಕ್ಕೂ ಯಾರೊಂದಿಗೂ ನಿಮ್ಮ ಯುಪಿಐ ಪಿನ್ ಹಂಚಿಕೊಳ್ಳಬೇಡಿ. ಒಂದು ವೇಳೆ ಯಾರಿಗಾದ್ರೂ ನಿಮ್ಮ ಪಿನ್ ತಿಳಿದರೆ ತಕ್ಷಣ ಅದನ್ನು ಬದಲಾಯಿಸಿ. ನಿಮ್ಮ ಪಿನ್ ತಿಳಿದಿರುವ ವ್ಯಕ್ತಿ ಸುಲಭವಾಗಿ ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಮಾಡಬಹುದು.

ಎಸ್ಎಂಎಸ್, ಕರೆಗಳ ಬಗ್ಗೆ ಎಚ್ಚರ
ಇತ್ತೀಚಿನ ದಿನಗಳಲ್ಲಿ ವಂಚಕರು ಕರೆ, ಎಸ್ ಎಂಎಸ್ ಹಾಗೂ ಇ-ಮೇಲ್ ಮೂಲಕ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನೀವು ಅಪರಿಚಿತರು ಕರೆ ಮಾಡಿ ನಿಮ್ಮ ಯುಪಿಐ ವಹಿವಾಟಿಗೆ ಅಥವಾ ಡಿಜಿಟಲ್ ಪಾವತಿಗೆ ಸಂಬಂಧಿಸಿದ ಮಾಹಿತಿಗಳನ್ನು ಕೇಳಿದರೆ ಹಂಚಿಕೊಳ್ಳಬೇಡಿ. ಯಾವ ಬ್ಯಾಂಕ್ ಅಥವಾ ಸಂಸ್ಥೆ ಕೂಡ ನಿಮ್ಮಿಂದ ಈ ಮಾಹಿತಿ ಕೇಳುವುದಿಲ್ಲ. ಇನ್ನು ಎಸ್ ಎಂಎಸ್ ಅಥವಾ ಇ-ಮೇಲ್ ಜೊತೆಗೆ ಲಿಂಕ್ ಕಳುಹಿಸಿ ಅದನ್ನು ಕ್ಲಿಕಿಸುವಂತೆ ಕೋರಬಹುದು. ಇಂಥ ಲಿಂಕ್ ಗಳನ್ನು ಯಾವುದೇ ಕಾರಣಕ್ಕೂ ತೆರೆಯಬೇಡಿ. ಈ ಲಿಂಕ್ ಗಳನ್ನು ಬಳಸಿ ನಿಮ್ಮ ಖಾತೆಗೆ ವಂಚಕರು ಕನ್ನ ಹಾಕುತ್ತಾರೆ ಎಚ್ಚರ.

ಎಫ್ ಡಿ ಮೇಲಿನ ಬಡ್ಡಿಗೆ ಎಷ್ಟು ಟಿಡಿಎಸ್ ಕಡಿತವಾಗುತ್ತೆ?ಇಲ್ಲಿದೆ ಮಾಹಿತಿ

ಯುಪಿಐ ಅಪ್ಲಿಕೇಷನ್ ಅಪ್ಡೇಟ್ ಮಾಡಿ
ಯುಪಿಐ ಬಳಸುವಾಗ ಯಾವಾಗಲೂ ಹೊಸ ವರ್ಷನ್ ಬಳಸಿ. ಏಕೆಂದ್ರೆ ಹೊಸ ವರ್ಷನ್ ಗಳು ಅಪ್ಡೇಟ್ ಆಗಿರುವ ಸುರಕ್ಷಿತ ವಿಧಾನಗಳನ್ನು ಹೊಂದಿರುತ್ತವೆ. ಇವುಗಳನ್ನು ಬಳಸಿ ನೀವು ನಿಮ್ಮ ಖಾತೆಯನ್ನು ಆನ್ ಲೈನ್ ವಂಚಕರಿಂದ ಕಾಪಾಡಿಕೊಳ್ಳಬಹುದು. ಹಾಗೆಯೇ ನಿಮ್ಮ ಫೋನ್ ನಲ್ಲಿ ಅನೇಕ ಪಾವತಿ ಅಪ್ಲಿಕೇಷನ್ ಗಳನ್ನು ಬಳಸಬೇಡಿ. ಹಾಗೆಯೇ ಮೊಬೈಲ್  ಪಾವತಿ ಅಪ್ಲಿಕೇಷನ್ ಬಳಸುವ ಮುನ್ನ ಅದರ ನೈಜ್ಯತೆ ಪರಿಶೀಲಿಸಿ ಆ ಬಳಿಕ ಡೌನ್ ಲೋಡ್ ಮಾಡಿ. 


 

click me!