ಕಾರ್ಮಿಕರಿಗೆ ಗುಡ್ ನ್ಯೂಸ್, ಇಪಿಎಫ್ ಬಡ್ಡಿದರದಲ್ಲಿ ಎಂಥ ಏರಿಕೆ!

By Web DeskFirst Published Apr 27, 2019, 4:42 PM IST
Highlights

ಕಾರ್ಮಿಕರಿಗೆ ಕೇಂದ್ರ ಸರಕಾರ ಶುಭ ಸುದ್ದಿಯೊಂದನ್ನು ನೀಡಿದೆ. ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕರೆ ಕಾರ್ಮಿಕ ವರ್ಗಕ್ಕೆ ದೊಡ್ಡ ಮಟ್ಟದಲ್ಲಿ ಲಾಭವಾಗಲಿದೆ.

ನವದೆಹಲಿ(ಏ.27) 2018-19ರ ಆರ್ಥಿಕ ವರ್ಷದಲ್ಲಿ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲೆ ಶೇ. 8.65ರಷ್ಟು ಬಡ್ಡಿ ನೀಡುವ ಪ್ರಸ್ತಾವನೆಗೆ ಕೇಂದ್ರ ವಿತ್ತ ಸಚಿವಾಲಯ ಒಪ್ಪಿಗೆ ನೀಡಿದೆ.

ಲೆಕ್ಕಾಚಾರಗಳ ಪ್ರಕಾರ 3 ವರ್ಷಗಳಲ್ಲಿ ಬಡ್ಡಿ ಹೆಚ್ಚಳವಾಗುತ್ತಿರುವುದು ಇದೇ ಮೊದಲು.  ೧೦೧೯ ರ ಫೆಬ್ರವರಿಯಲ್ಲಿ, ಇಪಿಎಫ್ಒ ಬಗ್ಗೆ ತೀರ್ಮಾನ ಕೈಗೊಳ್ಳುವ ಟಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ), ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ನೇತೃತ್ವದಲ್ಲಿ ಸಭೆ ಸೇರಿ, 2018-19ರ ವಿತ್ತೀಯ ವರ್ಷದ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 8.65ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

EPFO ಚಂದಾದಾರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಬಂಪರ್!

ಸರಕಾರದ ನಿರ್ಧಾನ ಅನುಷ್ಠಾನಕ್ಕೆ ಬಂದರೆ ಶೇ. 8.8 ಇದ್ದ ಬಡ್ಡಿದರ ಶೇ. 8.65ಕ್ಕೆ ಏರಿಕೆಯಾದಂತೆ ಆಗುತ್ತದೆ. 

 

click me!