
ನವದೆಹಲಿ(ಫೆ.01): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್ ನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸುತ್ತಿದ್ದಾರೆ.
ಬಜೆಟ್ ಸಂಬಂಧೀ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನು ದೇಶದ ತೆರಿಗೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಘೋಷಿಸಿರುವ ಕೇಂದ್ರ ಸರ್ಕಾರ, ವಾರ್ಷಿಕ 5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ನೀಡಿದೆ. ಇದು ಈ ಹಿಂದೆ 2.50 ಲಕ್ಷ ರೂ.ಇತ್ತು
ಹೌದು, ಇನ್ನು ಮುಂದೆ ವಾರ್ಷಿಕ 5 ಲಕ್ಷ ರೂ. ವರೆಗೆ ಆದಾಯ ಇರುವವರು ತೆರಿಗೆ ವಿನಾಯ್ತಿ ಪಡೆದಿದ್ದಾರೆ. ಅಂದರೆ ಮಾಸಿಕ 41,666 ರೂ. ವೇತನ ಹೊಂದಿರುವವರು ಇನ್ನು ಮುಂದೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಈ ಮೊದಲು 20,833 ರೂ. ಇತ್ತು.
ಇದೇ ವೇಳೆ ಟಿಡಿಎಸ್ ಮಿತಿಯನ್ನೂ ಹೆಚ್ಚಿಸಿರುವ ಕೇಂದ್ರ ಸರ್ಕಾರ 40 ಸಾವಿರ ರೂ.ವರೆಗಿನ ಬಡ್ಡಿಗೆ ಟಿಡಿಎಸ್ ವಿನಾಯ್ತಿ ನೀಡಿದೆ. ಈ ಮುಂಚೆ ಕೇವಲ 10 ಸಾವಿರ ರೂ.ಗೆ ಟಿಡಿಎಸ್ ಕಟ್ಟಬೇಕಿತ್ತು.
ಇಷ್ಟೇ ಅಲ್ಲದೇ ಪಿ.ಎಫ್ ಸೇರಿದಂತೆ ಹಲವು ಉಳಿತಾಯಗಳಿಗೂ ತೆರಿಗೆ ವಿನಾಯ್ತಿ ನೀಡಲಾಗಿದೆ. ಮಧ್ಯಮ ವರ್ಗ ಸೇರಿದಂತೆ ಸುಮಾರು 3 ಕೋಟಿ ಜನರಿಗೆ ತೆರಿಗೆ ಹೊರೆ ಇರುವುದಿಲ್ಲ.
ಜೊತೆಗೆ 2 ಲಕ್ಷದವರೆಗಿನ ಗೃಹ ಸಾಲ ಮತ್ತು ಶಿಕ್ಷಣ ಸಾಲಕ್ಕೂ ತೆರಿಗೆ ಇಲ್ಲ ಎಂದು ಘೋಷಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.