ಈ ಸಲದ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಧ್ಯಮ ವರ್ಗದ ಜನರಿಗೆ ತೆರಿಗೆ ಕಟ್ಟುವಲ್ಲಿ ಸ್ವಲ್ಪ ವಿನಾಯಿತಿ ನೀಡಿದ್ದು, 12 ಲಕ್ಷ ರೂ. ಆದಾಯದವರೆಗೆ ತೆರಿಗೆ ವಿನಾಯತಿ ಘೋಷಿಸಿ ಶ್ರೀ ಸಾಮಾನ್ಯನ ನೆರವಿಗೆ ಧಾವಿಸಿದ್ದಾರೆ. ಯಾರು ಎಷ್ಟು ತೆರಿಗೆ ಜೊತೆ ಸೇವಿಂಗ್ಸ್ ಮಾಡಬಹುದು ಎನ್ನಲು ಇಲ್ಲಿದೆ ಲೆಕ್ಕಚಾರ, ಹೊಸ ಆದಾಯ ತೆರಿಗೆ ಉಳಿತಾಯದಂತೆ 12 ಲಕ್ಷದರೆಗೆ ಆದಾಯ ಇರೋರು ತೆರಿಗೆ ವಿನಾಯಿತಿ ಹೊಂದಿರುತ್ತಾರೆ. ಅಲ್ಲದೇ ವಿವಿಧ ಟ್ಯಾಕ್ಸ್ ಸ್ಲ್ಯಾಬ್ ಘೋಷಿಸಿದ್ದು, ಹಲವು ಆದಾಯ ಸ್ತರದವರು ಬೇರೆ ಬೇರೆ ಮಿತಿಯಲ್ಲಿ ಬರೋದ್ರಿಂದ ಕಡಿಮೆ ಆದಾಯ ಇರೋರಿಗೆ ಈ ಟ್ಯಾಕ್ಸ್ ಹೆಚ್ಚಿನ ಲಾಭ ತರಲಿದೆ ಎಂಬ ಲೆಕ್ಚಚಾರ ಇದೆ. ಅಲ್ಲದೇ ಗುಜರಾತ್ ಹಾಗೂ ಬಿಹಾರಕ್ಕೆ ವಿಶೇಷ ಕೊಡುಗೆ ಘೋಷಿಸಿದ ಮೋದಿ ಸರಕಾರ, ಕೃಷಿ, ಶಿಕ್ಷಣ ಕ್ಷೇತ್ರಗಳಿಗೂ ಹೆಚ್ಚಿನ ಒತ್ತು ನೀಡಿದ್ದಾರೆ.

04:31 PM (IST) Feb 01
ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಕೇಂದ್ರ ಬಜೆಟ್‌ನಲ್ಲಿ ₹7564 ಕೋಟಿ ಮೀಸಲು. ಬೆಂಗಳೂರಿನ ಸಬರ್ಬನ್ ರೈಲ್ವೆಗೆ ₹350 ಕೋಟಿ ಮೀಸಲು, ಕವಚ್ 4ಓ ಯೋಜನೆ ಜಾರಿ.
Budget 2025: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹಿಂದಿನ ಬಜೆಟ್‌ಗಿಂತ 5 ಕೋಟಿ ಹೆಚ್ಚು ನೀಡಿದ ನಿರ್ಮಲಾ!
02:21 PM (IST) Feb 01
ನಿರ್ಮಲಾ ಸೀತಾರಾಮನ್ 2025-26ರ ಸಾಲಿನ ಬಜೆಟ್ ಮಂಡಿಸಿದ್ದಾರೆ. ಮಹತ್ವದ ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಕಲ ಘೋಷಣೆ ಮಾಡಿದ್ದಾರೆ. ಈ ಬಾರಿಯ ಬಜೆಟ್ ಮಂಡನೆ ಬಳಿಕ 3 ಪ್ರಮುಖ ಬದಲಾವಣೆಗಳು ಆಗಲಿದೆ. ಏನಿದು?
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
01:51 PM (IST) Feb 01
ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಸಲುವಾಗಿ ಮೊದಲಿಂದಲೂ ಸ್ಟಾರ್ಟ್ ಅಪ್‌ಗಳಿಗೆ ಆದ್ಯತೆ ನೀಡುತ್ತಿರುವ ಮೋದಿ ಸರಕಾರ, ಈ ಬಾರಿಯ 10 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಹೇಳಿದೆ.
01:25 PM (IST) Feb 01
ಗೃಹ ಸಚಿವ ಅಮಿತ್ ಶಾ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್‌ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಮಧ್ಯಮ ವರ್ಗದವರಿಗೇ ಮಣೆ ಹಾಕುತ್ತಾರೆಂದು ಹೇಳಿದ್ದಾರೆ.
01:10 PM (IST) Feb 01
ಹೆಚ್ಚು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ರಾಷ್ಟ್ರೀಯ ಉತ್ಪದನಾ ಮಿಷನ್ ಸ್ಫಾಪಿಸಲು ಮುಂದಾಗಿದ್ದು, ಇದರಿಂದ ಸಣ್ಣ ಮತ್ತು ಅತೀ ಸೂಕ್ಷ್ಮ ಉದ್ಯಮಗಳಿಗೆ ನೆರವಾಗಲಿದೆ.
12:47 PM (IST) Feb 01
ಕೇಂದ್ರ ಸರ್ಕಾರದ ಜಲ್‌ಜೀವನ್ ಮಿಷನ್ ಯೋಜನೆಯನ್ನು 2028ರವರೆಗೆ ವಿಸ್ತರಿಸಲಾಗುವುದು. ರಾಜ್ಯಗಳಿಗೆ ಮೂಲಸೌಕರ್ಯಕ್ಕಾಗಿ 1.5 ಲಕ್ಷ ಕೋಟಿ ರೂ.ಗಳ ಬಡ್ಡಿರಹಿತ ಸಾಲ ಒದಗಿಸಲಾಗುವುದು. ನಗರಗಳ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ.ಗಳ ನಗರ ಸವಾಲು ನಿಧಿ ಸ್ಥಾಪನೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
12:41 PM (IST) Feb 01
ಕೃಷಿ ಶಿಕ್ಷಣ ಸೇರಿ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಿ ಬಜೆಟ್ ಮಂಡಿಸಿರುವ ನಿರ್ಮಲಾ ಸೀತರಾಮನ್ ಬಜೆಟ್ ಹೈಲೈಟ್ಸ್ ಇಲ್ಲಿವೆ.
12:35 PM (IST) Feb 01
ನಿಮ್ಮ ಇನ್ ಕಂ ಎಷ್ಟಿದ್ದರೆ ಎಷ್ಟು ತೆರಿಗೆ ಕಟ್ಟಬೇಕು?
12:25 PM (IST) Feb 01
12 ಲಕ್ಷ ಆದಾಯ ಇರೋರಿಗೆ ಯಾವುದೇ ಆದಾಯ ತೆರಿಗೆ ಕಟ್ಟೋದು ಬೇಡ. ಯಾರು, ಎಷ್ಟು ಟ್ಯಾಕ್ಸ್ ಕಟ್ಟಬೇಕು?
12:21 PM (IST) Feb 01
ಹೊಸ ತೆರಿಗೆ ಆರಿಸಿಕೊಳ್ಳೋರಿಗೆ ಸಿಹಿ ಸುದ್ದಿ ನೀಡಿದ ನಿರ್ಮಲಾ ಸೀತರಾಮನ್
ತೆರಿಗೆ ಮಿತಿ ಹೇಗಿದೆ?
12:17 PM (IST) Feb 01
ತೆರಿಗೆ ಹೊಸ ಸ್ಲ್ಯಾಬ್ ಜಾರಿಗೆ. 12 ಲಕ್ಷದವರೆಗೆ ಆದಾಯದವರೆಗೆ ತೆರಿಗೆ ಕಟ್ಟುವ ಅಗತ್ಯವಿಲ್ಲ. ಎಲ್ಲ ವರ್ಗದ ವೇತನ ಪಡೆಯುವವರೆಗೂ ತೆರಿಗೆ ಸ್ಲ್ಯಾಬಲ್ಲಿ ಬದಲಾವಣೆ. 12 ರಿಂದ 16 ಲಕ್ಷದವರೆಗೆ ಶೇ.15 ತೆರಿಗೆ.
12:09 PM (IST) Feb 01
ಹಿರಿಯ ನಾಗರಿಕರಿಗೆ 1 ಲಕ್ಷದವರೆಗೂ ಟಿಡಿಸಿ ಮಿತಿ ಹೆಚ್ಚಳ. ಆದಾಯ ತೆರಿಗೆ ಕಾಯ್ದೆಯ ಅರ್ಧದಷ್ಟು ಬದಲಾವಣೆಗೆ ನಿರ್ಧಾರ. ಮುಂದಿನ ವಾರ ಹೊಸ ಕಾಯ್ದೆ ಮಂಡನೆ. ಟಿಸಿಎಸ್ ಮಿತಿ 50 ಸಾವಿರದಿಂದ 1 ಲಕ್ಷ ರೂ.ಗೆ ಹೆಚ್ಚಳ. ಮಧ್ಯಮ ವರ್ಗಕ್ಕೆ ಅನುಕೂರವಾಗುಂತೆ ಟ್ಯಾಕ್ಸ್ ಹೇರಲು ನಿರ್ಧರಿಸುವುದಾಗಿ ನಿರ್ಮಲಾ ಘೋಷಣೆ. 90 ಲಕ್ಷ ತೆರಿಗೆದಾರರು ಸ್ವಯಂ ತೆರಿಗೆ ಕಟ್ಟಿದ್ದಾರೆ. ಬಾಡಿಗೆ ತೆರಿಗೆ ವಿನಾಯಿತಿ 2.4 ಲಕ್ಷದಿಂದ 6 ಲಕ್ಷಕ್ಕೇರಿಕೆ.
12:06 PM (IST) Feb 01
ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ, ಅಲ್ಲಿಯ ಸೌಂದರ್ಯದ ಬಗ್ಗೆ ಜಗತ್ತಿಗೆ ಸಾರಿದ ಬಳಿಕ, ಈ ಸಾರಿಯೂ ಬಜೆಟ್‌ನಲ್ಲಿ ನಿರ್ಮಲಾ ಸೀತರಾಮನ್ ಸಮುದ್ರ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿಲು ನಿರ್ಧರಿಸಿದ್ದಲ್ಲದೆ, ಸಮುದ್ರ ಆಹಾರಗಳ ರಫ್ತಿಗೂ ಒತ್ತು ನೀಡುವುದಾಗಿ ಘೋಷಿಸಿದ್ದಾರೆ.
12:03 PM (IST) Feb 01
ಮೊಬೈಲ್ ಫೋನ್ ಅಗ್ಗ, ಎಲ್‌ಇಡಿ ಟಿವಿ ಬೆಲೆ ಇಳಿಕೆ. ದೇಸಿ ಉತ್ಪಾದನೆ ಹೆಚ್ಚಿಸಲು ಆದತ್ಯತೆ ಇವಿ ವಾಹನಗಳ ಬೆಲೆಯೂ ಇಳಿಕೆ ಸಾಧ್ಯತೆ. ಮೊಬೈಲ್ ಬ್ಯಾಟರಿ ಉತ್ಪಾದನೆಗೆ ಆದ್ಯತೆ. ಮಧ್ಯಮ ವರ್ಗದವರಿಗೆ ನೆರವಾಗುವಂತೆ ಆದಯ ತೆರಿಗೆಯಲ್ಲಿ ಬದಲಾವಣೆಗೆ ಶಿಫಾರಸು. ಜನರಿಗೆ ಅರ್ಥವಾಗುವಂತೆ ತೆರಿಗೆ ಕಾಯ್ದೆ ಜಾರಿಗೆ ಆದ್ಯತೆ.
12:00 PM (IST) Feb 01
ಭಾರತದಲ್ಲಿ ಸುಮಾರು 7.5 ಕೋಟಿ ಮಂದಿಗೆ ಮಧ್ಯಮ ವರ್ಗದ ಕೈಗಾರಿಗಳು ಉದ್ಯೋಗ ನೀಡಿವೆ. ಇವರಿಗೆ ನೆರವಾಗಲು ಸಣ್ಣ ಹಾಗೂ ಅತೀ ಸೂಕ್ಷ್ಮಿ ಉದ್ಯಮಗಳಿಗೆ ಸಾಲ ನೀಡಲು ಅವಕಾಶ. 5 ಕೋಟಿ ರೂ.ನಿಂದ 10 ಕೋಟಿ ರೂ.ವರೆಗೆ ಉದ್ಯಮ ಆರಂಭಿಸಲು ಸಾಲ. ಅಲ್ಲದೇ ಅವಧಿ ಸಾಲ ಸುಮಾರು 20 ಕೋಟಿ ರೂ. ನೀಡಲು ಅವಕಾಶ. ಅಲ್ಲದೇ ಮೊದಲ ಬಾರಿಗೆ ಉದ್ಯಮ ಆರಂಭಿಸುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೆ 2 ಕೋಟಿ ರೂ. ಸಾಲ ನೀಡುವುದಾಗಿ ಘೋಷಿಸಿದ ನಿರ್ಮಲಾ ಸೀತರಾಮನ್.
11:56 AM (IST) Feb 01
ಆಮದು ಸುಂಕ ಸರಳೀಕರಣಗೊಳಿಸಿದ ಕೇಂದ್ರ ಸರಕಾರ, ಔಷಧ. 15 ಹಂತಗಳ ಪೈಕಿ 7 ಹಂತಗಳ ಆಮದು ಸುಂಕ ರದ್ದು. ಆರು ಅತ್ಯಾವಶ್ಯಕ ಔಷಧಗಳ ಮೇಲಿನ ಆಮದು ಸುಂಕ ರದ್ದು, ಕ್ಯಾನ್ಸರ್ ಸೇರಿ ಹಲವು ಗಂಭೀರ ಕಾಯಿಲೆಗಳ ಆಮದು ಸುಂಕಕ್ಕೂ ಕಡಿವಾಣ. ಹೊದ ಸಾರಿಯಂತೆ ಈ ವರ್ಷವೂ ಕ್ಯಾನ್ಸರ್ ಔಷಧದ ಕಡೆ ಹೆಚ್ಚಿನ ಗಮನ ಹರಿಸಿ ಕೇಂದ್ರ ಸರಕಾರ. ಕಚ್ಚಾ ವಸ್ತುಗಳ ಮೇಲಿನ ಆಂದು ಸುಂಕವೂ ಕಡಿತ.
11:52 AM (IST) Feb 01
ಕೃಷಿಕರಿಗೆ ನಿರ್ಮಲಾ ಹಲವು ಘೋಷಣೆಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದು, ಕೃಷಿಕರ ಅಭಿವೃದ್ಧಿಗೆ ಸರಕಾರ ಬದ್ಧರಾಗಿರುವುದಾಗಿ ಹೇಳಿದ್ದಾರೆ.
11:50 AM (IST) Feb 01
ಮೀನುಗಾರಿಗೆ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿರುವ ವಿತ್ತ ಸಚಿವೆ ನಿರ್ಮಲಾ, ಜಾಗತಿಕ ಮಟ್ಟದಲ್ಲಿ ಮೀನು ಉತ್ಫಾದನೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಸಮುದ್ರ ಆಹಾರ ಉತ್ಪಾದನೆಗೆ 60 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಘೋಷಣೆ.
11:46 AM (IST) Feb 01
1961ರ ಆದಾಯ ತೆರಿಗೆ ರದ್ದುಗೊಳಿಸಿ, ಮುಂದಿನ ವಾರ ಹೊಸ ಆದಾಯ ತೆರಿಗೆ ಕಾಯ್ದೆ ಮಂಡಿಸುವುದಾಗಿ ಘೋಷಿಸಿದ ನಿರ್ಮಲಾ ಸೀತರಾಮನ್. ಮಧ್ಯಮ ವರ್ಗದ ಆದಾಯ ತೆರಿಗೆ ಮಿತಿಗೆ ಸಂಬಂಧಿಸಿದಂತೆ ಮತ್ತಷ್ಟು ನರೀಕ್ಷೆಗಳ ಮಹಾಪೂರ. ಹೊಸ ಕಾಯ್ದೆ ಹೇಗಿರಬಹುದೆಂಬ ಹೆಚ್ಚಿದ ನಿರೀಕ್ಷೆ.
11:44 AM (IST) Feb 01
ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಆದ್ಯತೆ ನೀಡಲಾಗಿದ್ದು, ಪ್ರಧಾನಮಂತ್ರಿ ಧನಧಾನ್ಯ ಯೋಜನೆ ಘೋಷಣೆಯಾಗಿದೆ. ದ್ವಿದಳ ಧಾನ್ಯಗಳ ಸ್ವಾವಲಂಬನೆಗೆ ಒತ್ತು ನೀಡಲಾಗುವುದು. ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪನೆಯಾಗಲಿದೆ.
ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
11:43 AM (IST) Feb 01
ಗೊಂಬೆ ಉತ್ತಾದನೆಗೆ ಹೆಚ್ಚು ಒತ್ತು ನೀಡುವುದಾಗಿ ಘೋಷಿಸಿರುವ ನಿರ್ಮಲಾ ಸೀತರಾಮನ್, ಇದಕ್ಕಾಗೆ ರಾಷ್ಟ್ರೀಯ ಕ್ರೀಯಾ ಯೋಜನೆ ಮಾಡುವುದಾಗಿ ಹೇಳಿದ್ದಾರೆ. ಜಾಗತಿಕವಾಗಿ ಭಾರತದ ಗೊಂಬೆಗಳಿಗೆ ಹೆಚ್ಚಿನ ಮಾನ್ಯತೆ ಸಿಗುವಂತೆ ಮಾಡಲು ಯೋಜನೆ.
11:38 AM (IST) Feb 01
ಎನ್‌ಡಿಎ ಪಾರ್ಟನರ್ ಬಿಹಾರದ ಪಾಟ್ನಾ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಹಾಗೂ ಲಕ್ನೋ, ಗುಜರಾತ್‌ಗೂ ವಿಶೇಷ ಒತ್ತು. ಬಿಹಾರದಲ್ಲಿ ಗ್ರೀನ್ ಫೀಲ್ಡ್ ಏರ್‌ಪೋರ್ಟ್. ಯುವಕರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಿ, ಅವರ ಆತ್ಮ ವಿಶ್ವಾಸ ಹೆಚ್ಚಿಸಲು ಹೆಚ್ಚಿನ ಆದ್ಯತೆ.
11:35 AM (IST) Feb 01
ನಗರ ಪ್ರದೇಶದಲ್ಲಿ ಮತ್ತು ಮೂಲ ಸೌಕರ್ಯ ಹೆಚ್ಚಿಸಿ, ಅಭಿವೃದ್ಧಿಗೆ ಗಮನ ನೀಡಲು ವಿಶೇಷ ಅನುದಾನ. ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ವಿಶೇಷ ನೆರವು. ರಾಜ್ಯ ಸರಕಾರದ ಯೋಜನೆಗಳಿಗೆ ಕೇಂದ್ರ ಸರಕಾರದ ಪ್ರೋತ್ಸಾಹ ದನ. 2033ಕ್ಕೆ ಮೇಡ್ ಇನ್ ರಿಯಾಕ್ಟರ್ ಹೊಂದುವ ಗುರಿ. ಪ್ರಾದೇಶಿಕ ಸಂಪರ್ಕಕ್ಕೆ ಉಡಾನ್ ಯೋಜನೆ ಜಾರಿ. ಎಲ್ಲೆಡೆ ಹೆಲಿಕಾಪ್ಟರ್ ಹಾಗೂ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಒತ್ತು. ಪ್ರತಿ ಮನೆಗೂ ನೀರಿನ ಸೌಲಭ್ಯ. ಹಡಗು ಒಡೆಯುವ ಹಾಗೂ ಕಟ್ಟುವ ಯೋಜನೆಗೆ ವಿಶೇಷ ಅನುದಾನ.
11:31 AM (IST) Feb 01
ಬೀದಿ ಬದಿ ವ್ಯಾಪರಿಗಳಿಗೆ ಯುಪಿಐ ಲಿಂಕ್ ಆಗಿರೋ ಕ್ರೆಡಿಟ್ ಕಾರ್ಡ್. ಇದರಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು, ಬ್ಯುಸಿನೆಸ್ ವಿಸ್ತರಿಸಲು ನೆರವು. ಸಾಮಾನ್ಯರ ಬದುಕು ಬಂಗಾರಗೊಳಿಸಲು ಅವಕಾಶ. ಎಲ್ಲೆಲ್ಲೋ ಬಡ್ಡಿ ಪಡೆದು, ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಲು ಸರಕಾರದ ನೆರವು.
11:25 AM (IST) Feb 01
ಕೃಷಿ ಜೊತೆ ಶಿಕ್ಷಣಕ್ಕೆ ಒತ್ತು ನೀಡುವುದಾಗಿ ಘೋಷಿಸಿರುವ ನಿರ್ಮಲಾ, ಸರ್ಕಾರಿ ಶಾಲೆಗಳಿಗೆ ಇಂಟರ್ನೆಟ್ ಸೌಲಭ್ಯ ನೀಡುವುದಾಗಿ ಘೋಷಣೆ. ತಾವರೆ ಬೀಜ ಸಂಸ್ಕರಣೆಗ ಮಖಾನಾ ಬೋರ್ಡ್ ಬಿಹಾರದಲ್ಲಿ ಸ್ಥಾಪನೆ. ಸಣ್ಣ ಉದ್ಯಮಗಳಿಗೆ 20 ಸಾವಿರ ಕೋಟಿ ರೂ. ಅನುದಾನ. ಹೆಚ್ಚುವರು 5 ಸಾವಿರ ವಿದ್ಯಾರ್ಥಿಗಳಿಗೆ ಐಐಟಿಯಲ್ಲಿ ಓದಲು ಅವಕಾಶ್. ಮೆಡಿಕಲ್ ಸೀಟ್ ಹೆಚ್ಚಳ. ಕಿಸಾನ್ ಕಾರ್ಡ್ ಮಿತಿ 3 ರಿಂದ 5 ಲಕ್ಷ ರೂ.ಗೆ ಹೆಚ್ಚಳ.
11:23 AM (IST) Feb 01
ಧಾನ್ಯ ಉತ್ಪನ್ನಕ್ಕೆ ಒತ್ತು ತಾವರೆ ಬೀಡ ಉತ್ಫಾದನೆ ಹೆಚ್ಚಿಸಲು ಅಗತ್ಯ ಪ್ರೋತ್ಸಾಹ.
11:08 AM (IST) Feb 01
ಯುವಕರು, ಕೃಷಿಕರ ಜೀವನದ ಪ್ರಗತಿಗೆ ಸರಕಾರದಿಂದ ಬೆಂಬಲ. ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡನೆ ಆರಂಭಿಸುತ್ತಿದ್ದಂತೆ ಸಂಸತ್ತಿನಿಂದ ಹೊರ ನಡೆದ ವಿಪಕ್ಷ ನಾಯಕರು.
11:04 AM (IST) Feb 01
ಮೋದಿಯ ಪ್ರಗತಿ ಮಂತ್ರ ವಿಕಸಿತ ಮಂತ್ರವನ್ನು ನೆನಪಿಸಿಕೊಳ್ಳುತ್ತಾ ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್. ಬಡತವನ್ನು ನಿರ್ಮೂಲನೆಗೊಳಿಸಿ, ಜೀವನಶೈಲಿಯ ಗುಣಮಟ್ಟು, ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿ, ಮಹಿಳಾ, ಮಕ್ಕಳ ಕಲ್ಯಾಣ ಸೇರಿ ಹಲವು ಆಯಾಮಗಳ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗುತ್ತಿದೆ ಎಂದ ವಿತ್ತ ಸಚಿವೆ.
11:01 AM (IST) Feb 01
2025ರ ಬಜೆಟ್‌ಗೂ ಮುನ್ನ ಭಾರತದ ಬಜೆಟ್‌ನ ಇತಿಹಾಸವನ್ನು ನೋಡೋಣ, ಭಾರತದ ಭವಿಷ್ಯದ ನಿರೀಕ್ಷೆಗಳಿಗೆ ಅಡಿಪಾಯ ಹಾಕಿದವರು ಯಾರು ಅನ್ನೋದರ ವಿವರ ಇಲ್ಲಿದೆ.
ಫುಲ್ ಡೀಟೈಲ್ಸ್ ಇಲ್ಲಿದೆ
11:00 AM (IST) Feb 01
10:25 AM (IST) Feb 01
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೊಸರು-ಸಕ್ಕರೆ ತಿನ್ನಿಸುವ ಮೂಲಕ ಶುಭ ಕೋರಿದರು.
10:12 AM (IST) Feb 01
ಇಂದು ಬಜೆಟ್ ಮಂಡನೆಯಾಗಲಿದ್ದು, ಅದು ಎಲ್ಲಾ ವರ್ಗಕ್ಕೂ ಸೇರಿರುತ್ತದೆ ಎಂದು ರಾಜನಾಥ್ ಸಿಂಗ್ (Defence Minister Rajnath Singh) ಹೇಳಿದ್ದಾರೆ.
09:59 AM (IST) Feb 01
09:43 AM (IST) Feb 01
ರಾಷ್ಟ್ರಪತಿ ಭವನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.
09:23 AM (IST) Feb 01
09:14 AM (IST) Feb 01
ವಿತ್ತ ಸಚಿವಾಲಯದಿಂದ ರಾಷ್ಟ್ರಪತಿ ಭವನಕ್ಕೆ ಹೊರಟ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
08:58 AM (IST) Feb 01
ಕೇಂದ್ರ ಬಜೆಟ್‌ಗೂ ಮುನ್ನ ನಾರ್ತ್ ಬ್ಲಾಕ್‌ಗೆ ಆಗಮಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
08:42 AM (IST) Feb 01
07:56 AM (IST) Feb 01
ಕೇಂದ್ರ ಬಜೆಟ್‌ನ ಎಲ್ಲಾ ಅಪ್‌ಡೇಟ್‌ಗಳನ್ನು ನೀವು ಈ ಲಿಂಕ್‌ನಲ್ಲಿ ನೋಡಬಹುದು...
07:50 AM (IST) Feb 01