ಮೋದಿ 3.0 ಸರ್ಕಾರದ ಮೊದಲ ಬಜೆಟ್‌ಗೆ ವೇದಿಕೆ ಸಜ್ಜಾಗಿದೆ. ದಾಖಲೆಯ ಏಳನೇ ಬಾರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದ್ದು, ಅಂಥದ್ದೇನೂ ಮಹತ್ವಾಕಾಂಕ್ಷಿ ಯೋಜನೆಯಿಲ್ಲದ ಬಜೆಟ್ ಎಂದೇ ಬಣ್ಣಿಸಲಾಗುತ್ತಿದೆ. ತೆರಿಗೆಯಲ್ಲಿ ಹೆಚ್ಚಿನ ವಿನಾಯಿತಿ ನಿರೀಕ್ಷಿಸುವ ಮಧ್ಯಮ ವರ್ಗದ ಜನರಿಗೆ ಈ ಸಾರಿಯೂ ದಕ್ಕಿದ್ದೇನೂ ಇಲ್ಲ. ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಾಯಿಗೆ ತುಪ್ಪ ಸವರದಂತೆ ಮಾಡಿರುವ ನಿರ್ಮಲಾ, ಮತ್ತೇನೂ ಮಾಡಿಲ್ಲವೆಂದು ಸಂಕಟಪಡುತ್ತಿದ್ದಾರೆ. ಪ್ರಧಾನಿ ಮೋದಿ ಈ ಬಜೆಟ್ ಸರ್ವಶಕ್ತಿ ಬಜೆಟ್ ಎಂದು ಬಣ್ಣಿಸಿದ್ದು, ಭಾರತೀಯರನ್ನು ಅಭಿನಂದಿಸಿದ್ದಾರೆ. ಪ್ರತಿಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಕಾಪಿ ಮಾಡಿದಂತಿದೆ ಎಂದು ಆರೋಪಿಸಿದ್ದು, ಈ ಬಜೆಟ್‌ನಲ್ಲಿ ಹುರುಳಿಲ್ಲವೆಂದಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಬಜೆಟ್ 2024ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

09:16 PM (IST) Jul 23
ಪ್ರಸ್ತುತ 2024-25ನೇ ಸಾಲಿನ ಬಜೆಟ್‌ನಲ್ಲಿ ಕೃಷಿ, ಕೈಗಾರಿಕೆ, ಮೂಲಸೌಕರ್ಯ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದ್ದು, ಇದೊಂದು ದೂರಗಾಮಿ ಬಜೆಟ್ ಆಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕೃಷಿ, ಕೈಗಾರಿಕೆ ಉದ್ಯೋಗಕ್ಕೆ ಒತ್ತು ನೀಡಿದ ದೂರಗಾಮಿ ಬಜೆಟ್; ಸಚಿವ ಹೆಚ್.ಡಿ. ಕುಮಾರಸ್ವಾಮಿ
05:55 PM (IST) Jul 23
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕೊಡುಗೆ ಅಪಾರ. ಇಲ್ಲಿ ಖಾಸಗಿ ವಲಯಕ್ಕೂ ಆದ್ಯತೆ ನೀಡುವ ಸಲುವಾಗಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಹಲವು ಯೋಜನೆಗಳನ್ನು ಘೋಷಿಸಿದ್ದು, ಏನೇನಿವೆ ಇಲ್ಲಿ ನೋಡಿ.
ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
04:25 PM (IST) Jul 23
ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆಗೆ ಶೇ.2.5 ಅನುದಾನ ಹೆಚ್ಚಳ, ಒಟ್ಟು 26,092 ಕೋಟಿ ರೂ.ಮೀಸಲು
ವಿವಿಧ ಇಲಾಖೆಯಡಿಯಲ್ಲಿ ಮಹಿಳೆ, ಬಾಲಕಿಯರ ಪ್ರಗತಿಗೆ ಒಟ್ಟಾರೆ 3 ಲಕ್ಷ ಕೋಟಿ ಅನುದಾನ ಮೀಸಲು
ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲುದಾರಿಕೆ ಕೊಂಡಾಡಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್
ಮಹಿಳಾ ಹಾಸ್ಟೆಲ್ಸ್ ಬೆಂಬಲಿಸುವ ಸಾಮರ್ಥ್ಯ ಉಪ ಯೋಜನೆ, ಸ್ವಾಧಾರ್ ಗೃಹ, ಪ್ರಧಾನ್ ಮಂತ್ರಿ ಮಾತೃ ಯೋಜನೆಗೆ 2.5 ಸಾವಿರ ಕೋಟಿ ಅನುದಾನ
ಸಕ್ಷಮ್ ಅಂಗನವಾಡಿ, ಪೋಷಣ್ 2.0, ಮಿಷನ್ ವಾತ್ಸಲ್ಯ, ಮಿಷನ್ ಶಕ್ತಿ ಸೇರಿ ಪ್ರಮುಖ ಯೋಜನೆಗಳಿಗೆ ಅಗತ್ಯ ಅನುದಾನ
03:03 PM (IST) Jul 23
Union Budget 2024 ಮಂಡನೆಯಾದ ನಂತರ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಇದು ಸರ್ವಶಕ್ತ ಬಜೆಟ್ ಎಂದು ಬಣ್ಣಿಸಿದ್ದು, ದೇಶದ ಜನರನ್ನು ಅಭಿನಂದಿಸಿದ್ದಾರೆ.
ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
01:27 PM (IST) Jul 23
ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ 1.48 ಲಕ್ಷ ಕೋಟಿ ಮೀಸಲಿಟ್ಟಿದ್ದು, ಕೌಶಲ್ಯಾಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗುವುದು.
ದೇಶೀಯ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ವರೆಗೂ ಶಿಕ್ಷಣ ಸಾಲ ನೀಡಲಾಗುವುದು.
ರಾಜ್ಯ ಸರಕಾರ ಹಾಗು ಉದ್ಯಮಗಳೊಂದಿಗೆ ಕೈ ಜೋಡಿಸಿ, ಕೌಶಲ್ಯಾಭಿವೃದ್ಧಿಗೆ ಒತ್ತು
ಐದು ವರ್ಷಗಳಲ್ಲಿ 20 ಲಕ್ಷ ಯುವಕರ ಕೌಶಲ್ಯಾಭಿವೃದ್ಧಿಗೆ ಗುರಿ. ಅಗತ್ಯ ನೆರವು.
ಸಾವಿರ ಐಟಿಐಗಳ ಉನ್ನತೀಕರಣ, ಕೋರ್ಸ್ ಮರು ವಿನ್ಯಾಸ ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ತರಬೇತಿ.
01:07 PM (IST) Jul 23
ಹೊಸ ಆದಾಯ ತೆರಿಗೆ ನೀತಿ ಆಯ್ಕೆ ಮಾಡಿಕೊಂಡವರಿಗೆ ಕೊಂಚ ರಿಲೀಫ್
ಆದಾಯ ತೆರಿಗೆ ಪಾವತಿದಾರರಿಗೆ ತೆರಿಗೆ ಭಾರ ಸ್ವಲ್ಪ ಕಡಿಮೆ
3 ಲಕ್ಷ ರೂ.ವರೆಗೆ ಯಾವುದೇ ತೆರಿಗೆ ಇಲ್ಲ
ಆದಾಯ ತೆರಿಗೆ ಮಿತಿ 2.50 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ
ಸಂಬಳದಾರರಿಗೆ ಬಿಗ್ ರಿಲೀಫ್ ಕೊಟ್ಟ ಕೇಂದ್ರ
01:06 PM (IST) Jul 23
ಬಜೆಟ್ ಬಳಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ
ಸೆನ್ಸೆಕ್ಸ್ 700 ಪಾಯಿಂಟ್ ಕುಸಿತ
ನಿಫ್ಟಿ 225 ಪಾಯಿಂಟ್ ಕುಸಿತ
ಬಜೆಟ್‌ಗೆ ಷೇರು ಮಾರುಕಟ್ಟೆ ನಿರಾಶಾದಾಯ ಪ್ರತಿಕ್ರಿಯೆ
ಹಲವು ಪ್ರಮುಖ ಉದ್ದಿಮೆಗಳ ಷೇರುಗಳ ಕುಸಿತ
01:05 PM (IST) Jul 23
ಯುವ ಸಮುದಾಯಕ್ಕೆ 20 ಲಕ್ಷ ರೂ.ವರೆಗೆ ಸಾಲ ಸಿಗಲಿದೆ. ಈ ಮೊದಲು ಮುದ್ರಾ ಯೋಜನೆಯಡಿ ಗರಿಷ್ಠ 10 ಲಕ್ಷ ರೂ.ವರೆಗೆ ಮಾತ್ರ ಹಣಕಾಸಿನ ನೆರವನ್ನು ನೀಡಲಾಗುತ್ತಿತ್ತು
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
12:45 PM (IST) Jul 23
ಟಿಲಿಕಾಂ ಸಲಕರಣೆಗಳು
ಪ್ಲಾಸ್ಟಿಕ್
12:38 PM (IST) Jul 23
ಯಾವುದು ಅಗ್ಗ?
ಮೊಬೈಲ್ ಫೋನ್ಸ್
ಕ್ಯಾನ್ಸರ್ ಔಷಧಿ
ಸಾಗರ ಆಹಾರ
ಚಿನ್ನ-ಬೆಳ್ಳಿ
ಪ್ಲಾಟಿನಂ
ಸೌರವಿದ್ಯುತ್ ಬಿಡಿ ಭಾಗಗಳು
ಚಪ್ಪಲಿ
12:30 PM (IST) Jul 23
ಪ್ರತಿ ತೆರಿಗೆದಾರರಿಗೆ ವಾರ್ಷಿಕ 17500 ಉಳಿತಾಯ
3 ಲಕ್ಷದವರೆಗೆ ಆದಾಯ ಇರೋರಿಗೆ ಯಾವುದೇ ತೆರಿಗೆ ವಿನಾಯತಿ ಇಲ್ಲ.
ವಿದೇಶಿ ಕಾರ್ಪೋರೇಟ್ ಹೂಡಿಕೆದಾರರಿಗೆ ವಿಧಿಸುತ್ತಿದ್ದ ಏಂಜೆಲ್ ಟ್ಯಾಕ್ಸ್ ಕಡಿತ.
0-3 : nil
3 to 7- 5%
7 to 10- 10%
10 to 12- 15%
12-15- 20%
12:27 PM (IST) Jul 23
ಹೊಸ ತೆರಿಗೆ ಪದ್ಧತಿ ಆರಿಸಿಕೊಳ್ಳುವವರಿಗೆ ಪ್ರೋತ್ಸಾಹ
ಪೆನ್ಷನ್ ಪಡೆಯುವವರಿಗೆ ಅನಕೂಲ
1 ರಿಂದ 3 ಲಕ್ಷದವರಿಗೆ ಆದಾಯ ಪಡೆಯುವವರಿಗೆ ತೆರಿಗೆ ವಿನಾಯತಿ.
12:22 PM (IST) Jul 23
ನೇರ ತೆರಿಗೆ, ಎಕ್ಸೈಸ್ ಹಾಗೂ ವಿವಿಧ ಟ್ರಿಬ್ಯೂನಲ್‌ನಲ್ಲಿ ವಿವಾದವಿದ್ದು, ತೆರಿಗೆ ಪಾವತಿ ಡಿಲೇ ಆಗುತ್ತಿದ್ದರೆ, ಸುಗಮಗೊಳಿಸಲು ವಿವಾದ್ ಸೇ ವಿಶ್ವಾಸ ಸ್ಕೀಂ.
ಆವಿಷ್ಕಾರಕ್ಕೆ ಒತ್ತು ನೀಡಲು ಎಂಜೇಲ್ ಟ್ಯಾಕ್ಸ್ ತೆಗೆದು ಹಾಕಲು ನಿರ್ಧಾರ. ಉದ್ಯಗ ಸೃಷ್ಟಿಸುತ್ತಿರುವ ಕ್ಷೇತ್ರಗಳಿಗೆ ತೆರಿಗೆ ವಿನಾಯಿತು.
ವಜ್ರ ಪಾಲಿಶ್ ಕ್ಷೇತ್ರಕ್ಕೆ ಅಗತ್ಯ ನೆರವು
ವಿದೇಶಿ ಬಂಡವಾಳ ಹೆಚ್ಚಿಸಲು ಅಗತ್ಯ ತೆರಿಗೆ ವಿನಾಯಿತಿ.
12:19 PM (IST) Jul 23
ತೆರಿಗೆ ಪಾವತಿ ಸರಳೀಕರಣ. ತೆರಿಗೆ ಅಸ್ಥಿರತೆ ತಡೆಯಲು ಸೂಕ್ತ ಕ್ರಮ. ಜಿಎಸ್‌ಟಿ ಹಾಗೂ ಕಸ್ಟಮ್ಸ್ ಸುಂಕ ಕಟ್ಟುವುದನ್ನು ಡಿಜಿಟಲೈಸ್ ಮಾಡಲಾಗಿದ್ದು, ಎಲ್ಲ ರೀತಿಯ ತೆರಿಗೆ ಪಾವತಿಯನ್ನು ಇನ್ನೆರಡು ವರ್ಷಗಳಲ್ಲಿ ಪೇಪರ್‌ಲೆಸ್ ಮಾಡಲಾಗುತ್ತದೆ.
12:16 PM (IST) Jul 23
ಎನ್‌ಟಿಪಿಸಿ ಮತ್ತು ಬಿಎಚ್‌ಇಎಲ್ ನಡುವಿನ ಜಂಟಿ ಉದ್ಯಮವು AUSC (ಅಡ್ವಾನ್ಸ್‌ಡ್ ಅಲ್ಟ್ರಾ ಸೂಪರ್‌ಕ್ರಿಟಿಕಲ್) ತಂತ್ರಜ್ಞಾನವನ್ನು ಬಳಸಿಕೊಂಡು 100 MW ವಾಣಿಜ್ಯ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಿದೆ. ದೇಶದಲ್ಲಿ ಸಣ್ಣ ರಿಯಾಕ್ಟರ್‌ಗಳ ಸ್ಥಾಪನೆ, ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಪರಮಾಣು ಶಕ್ತಿಗಾಗಿ ಹೊಸ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಭಾರತವು ಖಾಸಗಿ ವಲಯದೊಂದಿಗೆ ಪಾಲುದಾರಿಕೆ ಹೊಂದಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
12:07 PM (IST) Jul 23
ಎಲ್ಲೆಡೆ ಕ್ಯಾನ್ಸರ್ ಹೆಚ್ಚುತ್ತಿದ್ದು, ರೋಗಕ್ಕೆ ಕೊಡುವ ಔಷಧಿಗೆ ಸುಂಕ ವಿನಾಯಿತು ಕೊಡಲು ಸರಕಾರ ಒತ್ತು:ನಿರ್ಮಲಾ ಸಿತರಾಮನ್.
12:06 PM (IST) Jul 23
ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗುತ್ತಿದ್ದು, ಮಧ್ಯಮ ಹಾಗೂ ಬಡವರ ಮೇಲೆ ಅಪಾರ ಹೊರೆ ಆಗುತ್ತಿರುವ ಜಿಎಸ್‌ಟಿಯನ್ನು ಮತ್ತುಷ್ಟು ಸರಳೀಕರಿಸಲು ಸರಕಾರದ ಆದ್ಯತೆ: ನಿರ್ಮಲಾ.
12:05 PM (IST) Jul 23
ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸಿದೆ. ಮಹಾಬೋಧಿ ದೇವಾಲಯಕ್ಕೆ ಕಾರಿಡಾರ್ ನಿರ್ಮಾಣವನ್ನು ಘೋಷಿಸಲಾಗಿದೆ. ಗಯಾದ ವಿಷ್ಣುಪಾದ ದೇವಸ್ಥಾನಕ್ಕೆ ಕಾರಿಡಾರ್ ನಿರ್ಮಿಸಲಾಗುವುದು. ಇದು ಕಾಶಿ ವಿಶ್ವನಾಥ ಕಾರಿಡಾರ್ ಅಭಿವೃದ್ಧಿಯ ಮಾದರಿಯಲ್ಲಿರಲಿದೆ.
12:05 PM (IST) Jul 23
ಉಚಿತ ಸೌರ ವಿದ್ಯುತ್ ಯೋಜನೆ ಕುರಿತು ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ’ಯನ್ನು ಪ್ರಾರಂಭಿಸಲಾಗಿದೆ. ಇದರ ಅಡಿಯಲ್ಲಿ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗುವುದು. ಇದರಿಂದಾಗಿ 1 ಕೋಟಿ ಕುಟುಂಬಗಳು 300 ಯೂನಿಟ್ಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.
12:04 PM (IST) Jul 23
Union Budget 2024: ಬಿಹಾರದಲ್ಲಿ ಪದೆ ಪದೇ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ತಡೆಯಲು ಅಗತ್ಯ ಕ್ರಮ. ನೇಪಾಳ ಪ್ರವಾಹ ತಡೆಯಲು ಯಾವುದೇ ರೀತಿಯ ಕ್ರಮ ಕೈಗೊಳ್ಳಲು ವಿಫಲವಾಗಿದ್ದು, ಇದಕ್ಕೆ ಕೇಂದ್ರದಿಂದ 11,500 ಕೋಟಿ ನೆರವು. ಬ್ರಹ್ಮಪುತ್ರಾ ಹಾಗೂ ಭಾರತದಿಂದ ಹೊರಗೆ ಹುಟ್ಟುವ ಇದರ ಉಪ ನದಿಗಳಿಂದ ಅಸ್ಸಾಂನಲ್ಲಿಯೂ ಪ್ರತೀ ವರ್ಷವೂ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ. ಇದನ್ನು ತಡೆಯಲು ಅಗತ್ಯ ನೆರವು. ಉತ್ತರಾಖಾಂಡ, ಸಿಕ್ಕಿಂ, ಹಿಮಾಚಲ ಪ್ರದೇಶದಲ್ಲಿ ಪದೆ ಪದೇ ಸಂಭವಿಸುವ ಭೂ ಕುಸಿತ ತಡೆಗೂ ಸೂಕ್ತ ನೆರವು: ನಿರ್ಮಲಾ
12:00 PM (IST) Jul 23
ಐತಿಹಾಸಿಕ ಮಹತ್ವ ಇರುವ ನಳಂದಾ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೇಂದ್ರ ಸರಕಾರ, ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸಲು ಆದತ್ಯೆ ನೀಡುವುದಾಗಿ ನಿತ್ತ ಸಚಿವೆ ಘೋಷಣೆ. ಒಡಿಶಾದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದು, ರಾಜ್ಯದ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೂ ಆದ್ಯತೆ ನೀಡಲು ಯೋಜನೆ.
11:57 AM (IST) Jul 23
ಹಳ್ಳಿಗಳ ರಸ್ತೆ ಅಭಿವೃದದ್ಧಿಗೆ ಗ್ರಾಮ ಸಡಕ್ ಯೋಜನೆಯ 4ನೇ ಹಂತದಡಿಯಲ್ಲಿ ಅನುದಾನ ನಿಗದಿ.
11:51 AM (IST) Jul 23
ನಗರ ಪ್ರದೇಶದಲ್ಲಿ ಇರುವ ಬಡವರಿಗೆ ನೆರವಾಗುವಂತೆ ಹಾಗೂ ಮಧ್ಯಮ ವರ್ಗದವರು ವಸತಿ ಯೋಜನೆಗಳಿಗೆ ಪ್ರಧಾನಿ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಹತ್ತು ಸಾವಿರ ಲಕ್ಷ ಕೋಟಿ ನೆರವು.
11:49 AM (IST) Jul 23
ದೇಶದಲ್ಲಿ 30 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳಿಗೆ ಸಾರಿಗೆ ಆಧಾರಿತ ಅಭಿವೃದ್ಧಿಗೆ ಅಗತ್ಯ ಯೋಜನೆಗಳು ಜಾರಿ.
ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಗೂ ಆದ್ಯತೆ.
11:46 AM (IST) Jul 23
ಕೈಗಾರಿಕಾ ಕಾರ್ಮಿಕರಿಗೆ ಡಾರ್ಮೆಂಟರಿ ರೀತಿಯ ವಸತಿ ಬಾಡಿಗೆ ನೀಡಲು ಪಿಪಿಪಿ ಮಾದರಿಯಲ್ಲಿ ಯೋಜನೆ
11:43 AM (IST) Jul 23
ಭಾರತದ 500 ಟಾಪ್ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಪ್ರೋತ್ಸಾಹ. 5000 ರೂ. ಇಂಟರ್ನ್‌ಶಿಪ್ ಅಲೋಯನ್ಸ್ ಹಾಗೂ 6 ಸಾವಿರ ರೂ. ಏಕ ಕಾಲದ ನೆರವು ಎಲ್ಲಾ ಕ್ಷೇತ್ರಗಳಲ್ಲಿಯೂ ಉದ್ಯೋಗ ಆರಂಭಿಸುವವರಿಗೆ ಸರಕಾರದಿಂದಲೂ ಮೊದಲ ತಿಂಗಳ ಸಂಬಳ.
11:37 AM (IST) Jul 23
ಬಿಹಾರಕ್ಕೆ ಹೊಸ ಏರ್ಪೋರ್ಟ್ & ಮೆಡಿಕಲ್ ಕಾಲೇಜು ಘೋಷಣೆ
ಆಂಧ್ರಪ್ರದೇಶ ಪುನರ್ ನಿರ್ಮಾಣಕ್ಕೆ ಎಲ್ಲ ರೀತಿಯ ಬೆಂಬಲ
ಆಂಧ್ರ ರಾಜಧಾನಿ ಅಮರಾವತಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್
ಹೈದರಾಬಾದ್ ಬೆಂಗಳೂರು ಕಾರಿಡಾರ್ ಘೋಷಿಸಿದ ನಿರ್ಮಲಾ
ಬಿಹಾರಕ್ಕೆ ಹೆದ್ದಾರಿ & ಎಕ್ಸ್ಪ್ರೆಸ್ ರಸ್ತೆ ಯೋಜನೆ ಘೋಷಣೆ
ಈಶಾನ್ಯ ರಾಜ್ಯಗಳಿಗೆ ಪೂರ್ವೋದಯ ಯೋಜನೆ ಘೋಷಣೆ
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮುಂದಿನ 5 ವರ್ಷಕ್ಕೆ ವಿಸ್ತರಣೆ
ಅಮೃತ್ಸರ್ -ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್ ಘೋಷಣೆ
11:37 AM (IST) Jul 23
ಮಹಿಳಾ ಸಾರಥ್ಯದ ಯೋಜನೆಗಳಿಗೆ ಒತ್ತು. ಆದಿವಾಸಿ ಸಮುದಾಯದ ಸಮಾಜೋ ಆರ್ಥಿಕ ಅಭಿವೃದ್ಧಿಗೆ ಆದ್ಯತೆ, ಪೋಸ್ಟ್ ಆಫೀಸ್‌ಗಳಿಗೆ, ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ. ಉತ್ಪಾದನೆ, ಸೇವಾ ಕ್ಷೇತ್ರ, ಎಂಎಸ್‌ಎಂಇ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರ. ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಫಾರ್ ಎಂಎಸ್‌ಎಂಇ (ಥರ್ಡ್ ಪಾರ್ಟಿ ಗ್ಯಾರಂಟಿ ಇಲ್ಲದೇ ಯಂತ್ರೋಪಕರಣಗಳಿಗೆ ಸಾಲ)- ಒಟ್ಟು 100 ಕೋಟಿ ರೂ. ನೀಡಲು ಸರಕಾರದ ಚಿಂತನೆ, ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳಿಂದ ಇಂಟರ್ನಲ್ ಅಸೆಸ್‌ಮೆಂಟ್. 20 ಲಕ್ಷದವರೆಗೂ ಮುದ್ರಾ ಲೋನ್ ನೀಡಲಾಗುತ್ತದೆ.
11:34 AM (IST) Jul 23
ಹೊಸದಾಗಿ ಸಣ್ಣ ಉದ್ಯಮ ಆರಂಭಿಸುವವರಿಗೆ ಪ್ರೋತ್ಸಾಹಿಸಲು ಮುದ್ರಾ ಯೋಜನೆಯಿಂದ ಸಾಲ ಹೆಚ್ಚಳ.
11:32 AM (IST) Jul 23
ಮೋದಿ ನೇತೃತ್ವದಲ್ಲಿ ಮೂರನೇ ಬಾರಿ ಕೇಂದ್ರ ಸರಕಾರ ರಚಿಸಲು ನೆರವಾದ ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಟುಗೆ ನೀಡಿದ ಆಶ್ವಾಸನೆಯಿಂತ ರಾಜಧಾನಿ ಅಭಿವೃದ್ಧಿಪಡಿಸಲು ನಿರ್ಮಲಾ 1500 ಕೋಟಿ ರೂ. ಮೀಸಲಿಡುವುದಾಗಿ ಘೋಷಿಸಿದ್ದಾರೆ.
11:26 AM (IST) Jul 23
ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ.
ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ
11:25 AM (IST) Jul 23
ಎಲ್ಲಾ ಕ್ಷೇತ್ರಗಳಲ್ಲಿಯೂ ಉದ್ಯೋಗ ಆರಂಭಿಸುವವರಿಗೆ ಒಂದು ತಿಂಗಳ ವೇತನ ನೀಡುವುದಾಗಿ ಘೋಷಣೆ.
ಸರಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಂಧ್ರ ಹಾಗೂ ಬಿಹಾರ ಸರಕಾರದ ಮುಖ್ಯಮಂತ್ರಿಗಳಿಗೆ ನೀಡಿದು ವಾಗ್ದಾನದಂತೆ ನಿರ್ಮಲಾ ಬಂಪರ್ ಘೋಷಿಸಿದ್ದಾರೆ.
11:21 AM (IST) Jul 23
ಉತ್ಪಾದನೆ, ಕೃಷಿ ಪ್ರಗತಿಗೆ ಒತ್ತು.
ಉದ್ಯೋಗ ಮತ್ತು ಕೌಶಲ್ಯಭಿವೃದ್ಧಿ
ಮಾನವ ಸಂಪನ್ಮೂಲ ಅಭಿವೃದ್ಧಿ, ಸಾಮಾಜಿಕ ನ್ಯಾಯ
ಉತ್ಪಾದನೆ ಮತ್ತು ಸೇವೆ
ನಗರಾಭಿವೃದ್ಧಿ
ಇಂಧನ ಭದ್ರತೆ
ಮೂಲ ಸೌಕರ್ಯ
ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ಧಿ
ಮುಂದಿನ ತಲೆಮಾರಿ ಸುಧಾರಣೆ
11:16 AM (IST) Jul 23
400 ಜಿಲ್ಲೆಗಳಲ್ಲಿ ಡಜಿಟಲ್ ಬೆಳೆ ಸರ್ವೆ. 1.2 ಲಕ್ಷ ಕೋಟಿ ಕೃಷಿಗಾಗಿ ಮೀಸಲು. ಎಣ್ಣೆ ಬೀಜ ಉತ್ಪಾದನೆಗೆ ಸರಕಾರದ ಒತ್ತು. ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ. ಸೇವೆ, ಮಹಿಳಾ ಅಭಿವೃದ್ಧಿಗೂ ಬಜೆಟ್‌ನಲ್ಲಿ ಒತ್ತು, ಮಹಿಳೆಯರು, ರೈತರು, ಯುವಕ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ.
11:14 AM (IST) Jul 23
ಸಂಶೋಧನೆಗೆ ಸರಕಾರಿದೆ ಹೆಚ್ಚು ಹಣ, ಉತ್ಪಾದನೆ ಹಾಗೂ ರಫ್ತಿಗೆ ಅನುಕೂಲವಾಗುವಂತೆ ಕೃಷಿಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಒತ್ತು. ಉತ್ಪಾದನೆ ಹಾಗೂ ಮಾರುಕಟ್ಟೆಗೆ ಅಗತ್ಯ ಕ್ರಮ.
11:12 AM (IST) Jul 23
ಕೃಷಿಕರು ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಒತ್ತು. ದವಸ ಧಾನ್ಯವನ್ನು ಸಂಗ್ರಹಿಸಲು ಹಾಗೂ ಮಾರುಕಟ್ಟೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ತರಕಾರಿ ಉತ್ಪಾದನೆ ಹೆಚ್ಚಿಸಿ, ಉತ್ಪಾದಕತೆ, ಆಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
11:11 AM (IST) Jul 23
ಮುಂದಿನ ತಲೆಮಾರನ್ನು ಗಮನದಲ್ಲಿಟ್ಟುಕೊಂಡು, ಬಜೆಟ್ ತಯಾರಿಸಲಾಗಿದ್ದು, ಪ್ರಧಾನ್ ಮಂತ್ರಿ ಗರೀಬ್ ಯೋಜನೆ ಬಡವರಿಗೆ ತಲುಪಿಸದ್ದು, ಶಕ್ತಿಶಾಲಿ ಭಾರತದ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ವಿಕಾಸ್ ಭಾರತಕ್ಕಾಗಿ ಸರಕಾರ ಒತ್ತು ನೀಡಿದೆ. ಈ ಬಜೆಟ್ ಮುಖ್ಯವಾಗಿ 9 ಅಂಶಗಳೆಡೆಗೆ ಗಮನ ನೀಡಿದ್ದು, ಕೈಗಾರಿಕೆ, ಕೌಶಾಲ್ಯಭಿವೃದ್ಧಿ ಸೇರಿ ವಿವಿಧೆಡೆ ಸರಕಾರ ಗಮನ ಹರಿಸಲಿದೆ.
11:08 AM (IST) Jul 23
ಭಾರತದಲ್ಲಿ ಹಣದುಬ್ಬರ ನಿರಂತರವಾಗಿ ಕಡಿಮೆಯಾಗಿದ್ದು, ಸ್ಥಿರವಾಗಿದೆ. ಭಾರತದ ಆರ್ಥಿಕತೆಯ ಸುಸ್ಥಿರವಾಗಿಡಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯೊಂದಿಗೆ ಬಜೆಟ್ ಮಂಡಿಸಲು ಆರಂಭಿಸಿದ ವಿತ್ತ ಸಚಿವೆ.
11:04 AM (IST) Jul 23
ಪ್ರಧಾನಿ ನರೇಂದ್ರ ಮೋದಿ 3.0 ಅಮೃತ ಕಾಲದ ಬಜೆಟ್ ಮಂಡನೆಗೆ ಸಾಕ್ಷಿಯಾಗಲು ತಾಂಜೇನಿಯಾ ಸಂಸತ್ ಸದಸ್ಯರು ಸಂಸತ್ತಿನಲ್ಲಿ ಹಾಜರಿದ್ದು, ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸಲು ಆರಂಭಿಸಿದ್ದಾರೆ.
10:42 AM (IST) Jul 23
ವಿಶೇಷ ಸ್ಥಾನಮಾನ ನೀಡಲು ಅಗತ್ಯವಾದ ವ್ಯಾಪ್ತಿಯಲ್ಲಿ ಬಿಹಾರ ಬರುವುದಿಲ್ಲ ಎಂದು 2012ರಲ್ಲಿ ಸರ್ಕಾರ ರಚಿಸಿದ್ದ ಸಮಿತಿಯೊಂದು ವರದಿ ನೀಡಿದೆ. ಹೀಗಾಗಿ ಅಂಥ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ