
ನವದೆಹಲಿ (ಫೆಬ್ರವರಿ 1 , 2023): ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದೇ ರೀತಿ, ಕೇಂದ್ರ ಬಜೆಟ್ 2023 - 24 ರಲ್ಲಿ ಸಹ ರೈತರಿಗೆ ಬಂಪರ್ ಕೊಡುಗೆಗಳನ್ನು ಘೋಷಿಸಲಾಗಿದೆ. ಕೃಷಿ ವ್ಯವಹಾರಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2023 ರ ಬಜೆಟ್‌ನಲ್ಲಿ ಕೃಷಿ ವೇಗವರ್ಧಕ ನಿಧಿಯನ್ನು ಘೋಷಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ, ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ವೆಚ್ಚ-ಪರಿಣಾಮಕಾರಿ ಪರಿಹಾರಗಳನ್ನು ಜಾರಿಗೆ ತರಲು ಈ ಕೇಂದ್ರ ಬಜೆಟ್ ಪ್ರಯತ್ನಿಸುತ್ತದೆ.
ಕೇಂದ್ರ ಸರ್ಕಾರವು (Central Government) ಸಣ್ಣ ಮತ್ತು ಅತಿ ಸಣ್ಣ ರೈತರ ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ ಮಾದರಿಗಳನ್ನು ಸ್ಥಾಪಿಸಿದೆ ಮತ್ತು ಸುಮಾರು 63 ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು ಡಿಜಿಟಲ್ ಮಾಡಲು ಸಾಧ್ಯವಾಯಿತು ಎಂದು ಬುಧವಾರದ ಬಜೆಟ್ ಭಾಷಣದ (Budget Speech) ವೇಳೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ.
ಇದನ್ನು ಓದಿ: ಟೆಕ್ ಉದ್ಯಮಕ್ಕೆ ಈ ಬಾರಿಯ ಮೋದಿ ಲೆಕ್ಕಾಚಾರದಲ್ಲಿ ಏನೆಲ್ಲ ಇದೆ ನೋಡಿ..?
2023ರ ಬಜೆಟ್‌ನಿಂದ ರೈತರಿಗಾಗುವ ದೊಡ್ಡ ಲಾಭಗಳು..!
ಇದನ್ನೂ ಓದಿ: Union Budget 2023: ಮದ್ಯಮ ವರ್ಗದ ಬಯಕೆ ಈಡೇರಿಸಿದ ನಿರ್ಮಲಾ, 7 ಲಕ್ಷ ರೂ.ಆದಾಯಕ್ಕೆ ತೆರಿಗೆ ಇಲ್ಲ
ಇದನ್ನೂ ಓದಿ: Budget 2023: ಒಂದು ಜಿಲ್ಲೆ, ಒಂದು ಉತ್ಪನ್ನ; ಪ್ರವಾಸೋದ್ಯಮಕ್ಕೆ ಸರ್ಕಾರದ ಚೈತನ್ಯ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.