ಉಜ್ವಲಾ: ಇನ್ನೂ ಒಂದು ಕೋಟಿ ಜನರಿಗೆ ಉಚಿತ ಗ್ಯಾಸ್!

By Kannadaprabha News  |  First Published Feb 2, 2021, 12:05 PM IST

ಉಜ್ವಲಾ ಯೋಜನೆಗೆ ಇನ್ನೂ 1 ಕೋಟಿ ಫಲಾನುಭವಿಗಳು| ಬಡ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡುವ ಯೋಜನೆ ಇದು


ನವದೆಹಲಿ(ಜ.02): ಬಡ ಕುಟುಂಬಗಳಿಗೆ ಉಚಿತ ಗ್ಯಾಸ್‌ ಸಂಪರ್ಕ ಕಲ್ಪಿಸುವ ‘ಪ್ರಧಾನ ಮಂತ್ರಿ ಉಜ್ವಲಾ ಯೋಜನೆ’ಯನ್ನು ಇನ್ನೂ 1 ಕೋಟಿ ಕುಟುಂಬಗಳಿಗೆ ವಿಸ್ತರಿಸುವ ಮಹತ್ವದ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ.

ಈಗಾಗಲೇ 8 ಕೋಟಿ ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಅಡುಗೆ ಮಾಡಲು ಸ್ವಚ್ಛ ಇಂಧನ ಬಳಸುವಂತಾಗಲು ಇನ್ನೂ 1 ಕೋಟಿ ಬಿಪಿಎಲ್‌ (ಬಡತನ ರೇಖೆಗಿಂತ ಕೆಳಗಿನ) ಕುಟುಂಬಗಳಿಗೆ 1 ಕೋಟಿ ಉಚಿತ ಗ್ಯಾಸ್‌ ಸಂಪರ್ಕವನ್ನು ಉಜ್ವಲಾ ಯೋಜನೆಯಡಿ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

Tap to resize

Latest Videos

undefined

ಅಂದಹಾಗೆ ಈ ಯೋಜನೆಯಡಿ ಗ್ಯಾಸ್‌ ಸಂಪರ್ಕ ಮಾತ್ರ ಉಚಿತ. ಅಂದರೆ ಸಂಪರ್ಕ ಪಡೆಯುವ ಶುಲ್ಕ ಇಲ್ಲ. ನಂತರದ ಗ್ಯಾಸ್‌ ರೀಫಿಲ್‌ಗೆ ಮಾರುಕಟ್ಟೆದರದಲ್ಲಿ ದರ ನೀಡಲೇಬೇಕು.

100 ಜಿಲ್ಲೆಗೆ ಗ್ಯಾಸ್‌ ಜಾಲ:

ನಗರ ಅನಿಲ ವಿತರಣಾ ಜಾಲಕ್ಕೆ ಮುಂದಿನ 100 ವರ್ಷದಲ್ಲಿ ಇನ್ನೂ 100 ಜಿಲ್ಲೆಗಳನ್ನು ಸೇರಿಸಲು ನಿರ್ಧರಿಸಲಾಗಿದೆ.

click me!