ಮೂಲಸೌಕರ್ಯಕ್ಕೆ ಹಣ ಸಂಗ್ರಹಿಸಲು ಬರಲಿದೆ ಜೀರೋ ಕೂಪನ್‌ ಬಾಂಡ್‌!

Published : Feb 02, 2021, 08:45 AM ISTUpdated : Feb 02, 2021, 02:00 PM IST
ಮೂಲಸೌಕರ್ಯಕ್ಕೆ ಹಣ ಸಂಗ್ರಹಿಸಲು ಬರಲಿದೆ ಜೀರೋ ಕೂಪನ್‌ ಬಾಂಡ್‌!

ಸಾರಾಂಶ

ಮೂಲಸೌಕರ್ಯಕ್ಕೆ ಹಣ ಸಂಗ್ರಹಿಸಲು ಬರಲಿದೆ ಜೀರೋ ಕೂಪನ್‌ ಬಾಂಡ್‌| ನಿಮ್ಮ ಹೂಡಿಕೆ ಕೆಲ ವರ್ಷಗಳ ಬಳಿಕ ಲಾಭದ ಜತೆ ವಾಪಸ್‌, ಲಾಭಕ್ಕೆ ತೆರಿಗೆ ವಿನಾಯ್ತಿ

ನವದೆಹಲಿ(ಫೆ.02): ಈ ಬಾರಿ ಬಜೆಟ್‌ನಲ್ಲಿ ಮೂಲಸೌಕರ‍್ಯ ಅಭಿವೃದ್ಧಿಗಾಗಿ ಸಾಕಷ್ಟುಯೋಜನೆಗಳನ್ನು ಘೋಷಿಸಿದ್ದಾರೆ. ಆದರೆ ಅದಕ್ಕಾಗಿ ಅವಶ್ಯಕವಿರುವ ಹಣವನ್ನು ಸಂಗ್ರಹಿಸಲು ಮೊರೆ ಹೋಗಿರುವುದು ಈ ಜೀರೋ ಕೂಪನ್‌ ಬಾಂಡ್‌ನತ್ತ. ಈ ಬಾಂಡ್‌ಗಳು ಅಮೆರಿಕದಲ್ಲಿ ಹೆಚ್ಚು ಪ್ರಚಲಿತ. ಈ ಯೋಜನೆಯಡಿ ಸರ್ಕಾರ ಪಡೆದ ಸಾಲಕ್ಕೆ ನಿರ್ದಿಷ್ಟದರದ ಬಡ್ಡಿಯನ್ನು ಘೋಷಿಸುವುದಿಲ್ಲ.

ಒಂದು ಯೋಜನೆಗೆ ಅವಶ್ಯವಿರುವ ಮೊತ್ತಕ್ಕೆ ಸಮನಾಗಿ ಬಂಡವಾಳವನ್ನು ಸಂಗ್ರಹಿಸುತ್ತಾರೆ. ನಿರ್ದಿಷ್ಟ ಅವಧಿ ನಂತರ ಅದನ್ನು ಅದರ ಲಾಭದ ಜೊತೆಯಲ್ಲಿ ಹಿಂದಿರುಗಿಸುತ್ತಾರೆ ಮತ್ತು ಲಾಭಕ್ಕೆ ತೆರಿಗೆ ವಿನಾಯಿತಿ ನೀಡುತ್ತಾರೆ.

ಉದಾಹರಣೆಗೆ- ಬೆಂಗಳೂರು ಮತ್ತು ಮುಂಬೈ ನಡುವೆ ರಸ್ತೆ ನಿರ್ಮಾಣದ ಯೋಜನೆ ಎಂದುಕೊಳ್ಳೋಣ. ಈ ಯೋಜನೆಗೆ ಸುಮಾರು 5000 ಕೋಟಿ ರು. ಅವಶ್ಯಕತೆ ಇದ್ದರೆ, ನಿರ್ದಿಷ್ಟಮೊತ್ತದ ಅಂದರೆ 1000 ರು. ಮುಖಬೆಲೆಯ ಬಾಂಡ್‌ಗಳನ್ನು ವಿತರಿಸುತ್ತಾರೆ. 5 ವರ್ಷದ ನಂತರ ಟೋಲ್‌ ಮೂಲಕ ಸಂಗ್ರಹಿಸುವ ಒಟ್ಟು ಮೊತ್ತವನ್ನು ಹೂಡಿಕೆದಾರರಿಗೆ ಹಂಚುತ್ತಾರೆ. ಸಾವಿರ ರು. ನ ಬಾಂಡ್‌ಗೆ ನಿಮಗೆ ಸುಮಾರು 300 ರು.ಗಳ ಲಾಭವಾಗುತ್ತದೆ. ಈ ಲಾಭಕ್ಕೆ ತೆರಿಗೆ ಇರುವುದಿಲ್ಲ.

ಇದರಿಂದ ಸರ್ಕಾರಕ್ಕೆ ನಿಗದಿತ ಬಡ್ಡಿ ಕೊಡುವ ಮತ್ತು ಅದಕ್ಕಾಗಿ ಸಂಪನ್ಮೂಲ ಕ್ರೋಡೀಕರಿಸುವ ಜವಾಬ್ದಾರಿ ಇರುವುದಿಲ್ಲ. ಆದರೆ ಬಂಡವಾಳ ಹರಿದು ಬರುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಭಾರತೀಯರು ಮನೆಗಳಲ್ಲಿ ಇಟ್ಟಿರುವ ಚಿನ್ನದ ಮೌಲ್ಯ ಎಷ್ಟು ಗೊತ್ತಾ? ಜಿಡಿಪಿಯನ್ನೇ ಮೀರಿಸಿ ದಾಖಲೆ
887 ಕೋಟಿಯ ಮುಂಬೈ ಮರೀನಾ ಪ್ರಾಜೆಕ್ಟ್‌ಗೆ ಗ್ರೀನ್‌ಸಿಗ್ನಲ್‌ ನೀಡಿದ ಕೇಂದ್ರ ಸರ್ಕಾರ!