Budget 2021: ಆತ್ಮನಿರ್ಭರ್ ಸ್ವಸ್ಥ ಭಾರತ ಯೋಜನೆ ಆರಂಭ: ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?

By Suvarna News  |  First Published Feb 1, 2021, 12:00 PM IST

ಆರೋಗ್ಯ ಸೇವೆಗಳ ಮೇಲಿನ ಹೂಡಿಕೆ ದೊಡ್ಡಮಟ್ಟದಲ್ಲಿ ಹೆಚ್ಚಳ| 'ಪ್ರಧಾನಿ ಆತ್ಮನಿರ್ಭರ್ ಸ್ವಸ್ಥ ಭಾರತ ಯೋಜನೆ' ಘೋಷಣೆ| ಈ ಘೋಷಣೆಗೆ 64,184 ಕೋಟಿ. ರೂ. ಅನುದಾನ| ಒಟ್ಟಾರೆಯಾಗಿ ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?


ನವದೆಹಲಿ(ಫೆ.01): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ನೇ ವರ್ಷದ ಬಜರೆಟ್ ಭಾಷಣ ಆರಂಭಿಸಿದ್ದಾರೆ. ಕೊರೋನಾ ಮಹಾಮಾರಿಯಿಂದ ಬಳಲುತ್ತಿರುವ ದೇಶಕ್ಕೆ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್ ಭಾಷಣ ಆರಂಭಿಸಿದ ನಿರ್ಮಲಾ ಸೀತಾರಾಮನ್ ಈ ಬಜೆಟ್‌ನ ಮೊದಲ ಭಾಗವೇ ಆರೋಗ್ಯ ಕ್ಷೇತ್ರ ಎಂದಿದ್ದಾರೆ. ನಾವು ಆರೋಗ್ಯ, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಹೀಗಾಗಿ ಈ ವರ್ಷ ಬಜೆಟ್ 94 ಸಾವಿರ ಕೋಟಿಯಿಂದ 2.38 ಲಕ್ಷ  ಕೋಟಿಗೇರಿಸಲಾಗಿದೆ. ಇದನ್ನು ಹೊರತುಪಡಿಸಿ 64,180 ಕೋಟಿ ರೂ. ಬಜೆಟ್ ಜೊತೆ 'ಪ್ರಧಾನಿ ಆತ್ಮನಿರ್ಭರ್ ಸ್ವಸ್ಥ ಭಾರತ ಯೋಜನೆ' ಘೋಷಣೆ ಮಾಡಿದ್ದಾರೆ. 

"

Tap to resize

Latest Videos

undefined

ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?

* ಆರೋಗ್ಯ ಕ್ಷೇತ್ರದ ಅನುದಾನ 94 ಸಾವಿರ ಕೋಟಿಯಿಂದ 2.38 ಲಕ್ಷ  ಕೋಟಿಗೇರಿಕೆ

* ಕೊರೋನಾ ಲಸಿಕೆಗೆ 35 ಸಾವಿರ ಕೋಟಿ ಮೀಸಲು,  ಅವಶ್ಯಕತೆ ಬಿದ್ದರೆ ಇನ್ನೂ ಹೆಚ್ಚಿನ ಹಣ ಮೀಸಲು 

* 64,180 ಕೋಟಿ ರೂ. ಬಜೆಟ್ ಜೊತೆ 'ಪ್ರಧಾನಿ ಆತ್ಮನಿರ್ಭರ್ ಸ್ವಸ್ಥ ಭಾರತ ಯೋಜನೆ' ಘೋಷಣೆ 

* ಈ ಯೋಜನೆಯಡಿ ಆರೋಗ್ಯ ಮೂಲಭೂತ ಸೌಕರ್ಯಸುಧಾರಣೆಗೆ ಬಳಕೆ. 

* 5 ಹೊಸ ರೋಗ ನಿಯಂತ್ರಣ ಕೇಂದ್ರಗಳ ನಿರ್ಮಾಣ

* 11 ರಾಜ್ಯಗಳಲ್ಲಿ 17 ಸಾವಿರ ಗ್ರಾಮೀಣ ಆರೋಗ್ಯ ಕೇಂದ್ರಗಳ ಸ್ಥಾಪನೆ

* 602 ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

* 5 ಹೊಸ ರೋಗ ನಿಯಂತ್ರಣ ಕೇಂದ್ರಗಳ ನಿರ್ಮಾಣ

* 15 ತುರ್ತು ಶಸ್ತ್ರ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ

* ಶುದ್ಧ ಕುಡಿಯುವ ನೀರು ಪೂರೈಸಲು ವಿಶೇಷ 'ಜಲಜೀವನ್ ಮಿಷನ್' ಯೋಜನೆ

* 2.86 ಕೋಟಿ ನಗರದ ಮನೆಗಳಿಗೆ ಹೊಸದಾಗಿ ನಲ್ಲಿ ಜೋಡಣೆ

* 500 ನಗರಗಳು ಅಮೃತ ನಗರಗಳೆಂದು ಘೋಷಣೆ

* ಆರೋಗ್ಯ ಕ್ಷೇತ್ರ ಬಜೆಟ್‌ನ್ನು ಶೇ. 137ರಷ್ಟು ಏರಿಸಲಾಗಿದೆ.

click me!