
ನವದೆಹಲಿ: ಕಳೆದ ಡಿಸೆಂಬರ್ ತಿಂಗಳಲ್ಲಿ ದೇಶದ ನಿರುದ್ಯೋಗ ಪ್ರಮಾಣವು ಶೇ.8.3ಕ್ಕೆ ಹೆಚ್ಚಳವಾಗಿದೆ. ಇದು ಕಳೆದ 16 ತಿಂಗಳಲ್ಲೇ ಗರಿಷ್ಠ ಪ್ರಮಾಣ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ)ನ ವರದಿ ತಿಳಿಸಿದೆ. ನವೆಂಬರ್ ತಿಂಗಳಲ್ಲಿ ನಿರುದ್ಯೋಗ ಪ್ರಮಾಣವು ಶೇ.8ರಷ್ಟಿತ್ತು. ಇನ್ನು ಇದೇ ಅವಧಿಯಲ್ಲಿ ನಗರದ ನಿರುದ್ಯೋಗ ಪ್ರಮಾಣವು ನವೆಂಬರ್‌ನಲ್ಲಿದ್ದ ಶೇ.8.96ರಿಂದ ಶೇ.10.09ಕ್ಕೆ ಹೆಚ್ಚಳವಾಗಿದೆ. ಗ್ರಾಮೀಣ ಭಾಗದ ನಿರುದ್ಯೋಗ ಪ್ರಮಾಣವು ನವೆಂಬರ್‌ನಲ್ಲಿದ್ದ ಶೇ.7.55ರಿಂದ ಶೇ.7.44ಕ್ಕೆ ಇಳಿಕೆಯಾಗಿದೆ.
ಶೇಕಡವಾರು ಪ್ರಮಾಣದಲ್ಲಿ ನಿರುದ್ಯೋಗ ಪ್ರಮಾಣ ಭಾರೀ ಹೆಚ್ಚಳವಾಗಿದೆ ಎಂದು ಕಂಡು ಬಂದರೂ, ಡಿಸೆಂಬರ್ ತಿಂಗಳಿನಲ್ಲಿ ಕಾರ್ಮಿಕರ (labours) ಭಾಗಿಯಾಗುವಿಕೆ ಪ್ರಮಾಣವು ಆರೋಗ್ಯಪೂರ್ಣವಾದುದು ಎನ್ನಬಹುದಾದ ಶೇ.40.48ಕ್ಕೆ ತಲುಪಿದೆ. ಇದು ಕಳೆದ 12 ತಿಂಗಳ ಗರಿಷ್ಠ ಎಂದು ಸಿಎಂಐಇ ಹೇಳಿದೆ. ಇನ್ನು ಅತ್ಯಂತ ಪ್ರಮುಖವಾಗಿ ಡಿಸೆಂಬರ್ ತಿಂಗಳಿನಲ್ಲಿ ಉದ್ಯೋಗ ಪ್ರಮಾಣವು ಶೇ.37.1ಕ್ಕೆ ಹೆಚ್ಚಳವಾಗಿದೆ. ಇದು ಕೂಡಾ ಇದು 2022ರ ಜನವರಿ ಬಳಿಕ ಅತ್ಯಂತ ಗರಿಷ್ಠ ಎಂದು ಸಿಎಂಐಇ ಹೇಳಿದೆ. ಅತ್ಯಂತ ಹೆಚ್ಚಿನ ನಿರುದ್ಯೋಗ ಪ್ರಮಾಣವು ಹರ್ಯಾಣ (ಶೇ.37.4), ರಾಜಸ್ಥಾನ (ಶೇ.28.5) ಮತ್ತು ರಾಜಸ್ಥಾನ (ಶೇ.20.8)ದಲ್ಲಿ ದಾಖಲಾಗಿದೆ.
ನಿರುದ್ಯೋಗ ಸಮಸ್ಯೆಯೇ? ಈ ರೀತಿ ಮಾಡಿದ್ರೆ ಬಯಸಿದ ಉದ್ಯೋಗ ಪಕ್ಕಾ!
Railway Job Scam: ರೈಲ್ವೇಯಲ್ಲಿ ಕೆಲಸ ಕೊಡಿಸುವುದಾಗಿ 28 ನಿರುದ್ಯೋಗಿ ಯುವಕರಿಗೆ ವಂಚನೆ, 2.5 ಕೋಟಿ ರೂ ಪಂಗನಾಮ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.