ಮಹಾಕಾಲ ಪ್ರಸಾದಕ್ಕೆ ಅವಮಾನ..! ಹೃತಿಕ್ ರೋಷನ್ Zomato ಜಾಹೀರಾತು ಹಿಂಪಡೆಯಲು ಆಗ್ರಹ

By BK Ashwin  |  First Published Aug 21, 2022, 3:39 PM IST

ಜೊಮ್ಯಾಟೋ ಜಾಹೀರಾತಿನ ವಿರುದ್ಧ ಉಜ್ಜಯಿನಿಯ ಮಹಾಕಾಲ ದೇವಾಲಯದ ಅರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದು, ಅದನ್ನು ಹಿಂಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ. ಈ ಸಂಬಂಧ ಟ್ವಿಟ್ಟರ್‌ನಲ್ಲೂ ಆಕ್ರೋಶ ಕೇಳಿಬರುತ್ತಿದೆ. 


ಉಜ್ಜಯಿನಿಯ ಮಹಾಕಾಲ ದೇವಸ್ಥಾನದ ಇಬ್ಬರು ಅರ್ಚಕರು ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಜಾಹೀರಾತನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದರು ನಂತರ, ಟ್ವಿಟ್ಟರ್‌ನಲ್ಲೂ ಈ ಜಾಹೀರಾತಿಗೆ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆ ‘’Boycott Zomato’’ ಎಂಬ ಹ್ಯಾಶ್‌ಟ್ಯಾಗ್‌ ಭಾನುವಾರ ಟ್ರೆಂಡಿಂಗ್ ಆಗಲು ಪ್ರಾರಂಭಿಸಿದೆ. ಈ ಜಾಹೀರಾತಿನಲ್ಲಿ ನಟ ಹೃತಿಕ್‌ ರೋಷನ್‌  'ಮಹಾಕಾಲ್'ನಿಂದ ‘ಥಾಲಿ’ ಯನ್ನು ಆರ್ಡರ್ ಮಾಡಿದ್ದಾರೆ ಎಂದು ತೋರಿಸಲಾಗಿದೆ. ಈ ಜಾಹೀರಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಉಜ್ಜಯಿನಿ ಮಹಾಕಾಲ ದೇವಾಲಯದ ಅರ್ಚಕರು, ತಮ್ಮ ಪ್ರಸಾದವನ್ನು ಭಕ್ತರಿಗೆ ಉಚಿತವಾಗಿ ಪ್ಲೇಟ್ (ಥಾಲಿ) ನಲ್ಲಿ ನೀಡಲಾಗುತ್ತದೆ ಮತ್ತು ಇದು ಆಹಾರ ವಿತರಣಾ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದಾದ ವಿಷಯವಲ್ಲ ಎಂದು ಹೇಳಿದರು.

ಹಾಗೂ, ಜೊಮ್ಯಾಟೋ ಕೂಡಲೇ ಜಾಹೀರಾತನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ದೇವಸ್ಥಾನದ ಅರ್ಚಕರಾದ ಮಹೇಶ್ ಮತ್ತು ಆಶಿಶ್ ಹೇಳಿದ್ದಾರೆ. ಅಲ್ಲದೆ, ಅವರು ಮಹಾಕಾಲ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಉಜ್ಜಯಿನಿ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಅವರನ್ನು ಸಂಪರ್ಕಿಸಿದರು ಮತ್ತು ಕಂಪನಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಆಶಿಶ್ ಸಿಂಗ್, ದೇವಸ್ಥಾನವು ಉಚಿತ ಊಟವನ್ನು `ಪ್ರಸಾದ' ಎಂದು ನೀಡುತ್ತದೆ ಮತ್ತು ಅದನ್ನು ಮಾರಾಟ ಮಾಡುವುದಿಲ್ಲ. ಈ ಹಿನ್ನೆಲೆ ಈ ಜಾಹೀರಾತು ದಾರಿ ತಪ್ಪಿಸುವಂತದ್ದಾಗಿದೆ ಎಂದಿದ್ದಾರೆ.

Tap to resize

Latest Videos

ಅಶ್ಲೀಲ ರಾಧಾ - ಕೃಷ್ಣ ಪೇಂಟಿಂಗ್ ಮಾರಾಟ..! ಅಮೆಜಾನ್‌ ಬಹಿಷ್ಕಾರಕ್ಕೆ ನೆಟ್ಟಿಗರ ಅಗ್ರಹ


In an ad, says “Thaali khane ka man tha, Mahakal se mangaa liya"

Mahakal is no servant who delivers food to those who demand it, He is a God who's worshipped.

Could insult a God of another religion with the same courage? pic.twitter.com/7yC3qxi3iX

— HinduJagrutiOrg (@HinduJagrutiOrg)

'ಮನ್ ಕಿಯಾ, ಜೊಮ್ಯಾಟೋ ಕಿಯಾ' ಎಂಬ ಶೀರ್ಷಿಕೆಯ ಜಾಹೀರಾತಿನಲ್ಲಿ, ಹೃತಿಕ್ ರೋಷನ್ 'ಥಾಲಿ' ಹೊಂದಲು ಬಯಸಿದ್ದೇನೆ ಎಂದು ಹೇಳುತ್ತಾರೆ. ಹಾಗೂ, ತಾನು ಉಜ್ಜಯಿನಿಯಲ್ಲಿರುವುದರಿಂದ, ಮಹಾಕಾಲ್‌ನಿಂದ ಥಾಲಿಯನ್ನು ಆರ್ಡರ್ ಮಾಡಿದೆ ಎಂದು ಹೇಳುತ್ತಾರೆ. ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಅಥವಾ ಮಹಾಕಾಲ್ ಶಿವನ ದೇವಾಲಯವು ಹನ್ನೆರಡು `ಜ್ಯೋತಿರ್ಲಿಂಗ'ಗಳಲ್ಲಿ ಒಂದಾಗಿದೆ.

ಈ ಹಿನ್ನೆಲೆ "'ಮಹಾಕಾಲ್ ಸೇ ಮಂಗಾ ಲಿಯಾ..', ಹೊಸ ಜೊಮ್ಯಾಟೋ ಜಾಹೀರಾತು ಮಹಾಕಾಳೇಶ್ವರ ದೇವಸ್ಥಾನವನ್ನು ಆಹಾರ ವಿತರಣೆಗೆ ಜೋಡಿಸುವ ವಿವಾದವನ್ನು ಹುಟ್ಟುಹಾಕಿದೆ. ಅಲ್ಲದೆ, ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ಜಾಹೀರಾತನ್ನು ಪೂಜಾರಿ ಖಂಡಿಸಿದ್ದಾರೆ. @zomato ಪದೇ ಪದೇ ಹಿಂದೂಗಳನ್ನು ಅವಮಾನಿಸುತ್ತಿದೆ," ಎಂದು ಹಿಂದೂ ಜನಜಾಗೃತಿ ಸಮಿತಿಯ ಮುಖಂಡರೊಬ್ಬರು ಹೇಳಿದ್ದಾರೆ. "ಮಹಾಕಲ್ ಆಹಾರ ಬೇಡುವವರಿಗೆ ಆಹಾರ ನೀಡುವ ಸೇವಕನಲ್ಲ, ಅವನು ಪೂಜಿಸುವ ದೇವರು. @zomato ಅದೇ ಧೈರ್ಯದಿಂದ ಬೇರೆ ಧರ್ಮದ ದೇವರನ್ನು ಅವಮಾನಿಸಬಹುದೇ?" ಎಂದು ಹಿಂದೂ ಜನಜಾಗೃತಿ ಸಮಿತಿ ಟ್ವೀಟ್ ಮಾಡಿದೆ.

AI-ಚಾಲಿತ ಜಾಹೀರಾತು
ಬಾಲಿವುಡ್‌ ನಟ ಹೃತಿಕ್ ರೋಷನ್ ಅವರನ್ನು ಒಳಗೊಂಡಿರುವ Zomato ಜಾಹೀರಾತು AI ಚಾಲಿತ ಜಾಹೀರಾತಾಗಿದ್ದು, ಅದು ವೀಕ್ಷಕರ ಸ್ಥಳವನ್ನು ಬಳಸಿಕೊಳ್ಳುತ್ತದೆ ಮತ್ತು ಜಾಹೀರಾತನ್ನು ಸ್ಥಳೀಕರಿಸುತ್ತದೆ. ಹಾಗಾಗಿ, ಹೃತಿಕ್ ರೋಷನ್ ಮಹಾಕಾಲ್‌ಗೆ 'ಥಾಲಿ' ಆರ್ಡರ್ ಮಾಡಿರುವ ಜಾಹೀರಾತನ್ನು ಉಜ್ಜಯಿನಿಯ ಜನರು ಮಾತ್ರ ನೋಡಬಹುದು. ಸ್ಥಳ ಬದಲಾದಂತೆ ಭಕ್ಷ್ಯವು ಬದಲಾಗುತ್ತದೆ. ಆದ್ದರಿಂದ ಅದೇ ಜಾಹೀರಾತಿನ ಇತರ ಹಲವು ಆವೃತ್ತಿಗಳಲ್ಲಿ, ಹೃತಿಕ್ ರೋಷನ್ ಕೆಲವು ಇತರ ಭಕ್ಷ್ಯಗಳನ್ನು - ಹೆಚ್ಚಾಗಿ ಆ ಸ್ಥಳದ ವಿಶೇಷತೆ - ಸ್ಥಳದ ಪ್ರಸಿದ್ಧ ರೆಸ್ಟೋರೆಂಟ್‌ಗಳಿಂದ ಆರ್ಡರ್ ಮಾಡುವುದನ್ನು ಕಾಣಬಹುದು. ಇನ್ನು, ಉಜ್ಜಯಿನಿಯಲ್ಲಿ ಮಹಾಕಾಲ್ ಹೆಸರಿನ ರೆಸ್ಟೋರೆಂಟ್‌ಗಳಿವೆ.

Zomato ಪ್ರತಿಕ್ರಿಯೆ ಏನು..?
ಟ್ವಿಟ್ಟರ್‌ನಲ್ಲಿ ‘’Boycott Zomato’’ ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗುತ್ತಿದ್ದಂತೆ ಈ ಜಾಹೀರಾತಿನ ಬಗ್ಗೆ ಜೊಮ್ಯಾಟೋ ಸ್ಪಷ್ಟನೆ ನೀಡಿದೆ. ಜಾಹೀರಾತಿನಲ್ಲಿ ಉಲ್ಲೇಖಿಸಿರುವುದು ನಿಜಕ್ಕೂ ರೆಸ್ಟೋರೆಂಟ್‌ನ ಹೆಸರೇ ಹೊರತು ದೇವಸ್ಥಾನವಲ್ಲ ಎಂದು ಅನ್‌ಲೈನ್‌ ಫುಡ್‌ ಡೆಲಿವರಿ ಕಂಪನಿ ಸ್ಪಷ್ಟಪಡಿಸಿದೆ. "ನಾವು ಉಜ್ಜಯಿನಿಯ ಜನರ ಭಾವನೆಗಳನ್ನು ಆಳವಾಗಿ ಗೌರವಿಸುತ್ತೇವೆ ಮತ್ತು ಪ್ರಶ್ನೆಯಲ್ಲಿರುವ ಜಾಹೀರಾತು ಇನ್ನು ಮುಂದೆ ಚಾಲ್ತಿಯಲ್ಲಿಲ್ಲ. ನಾವು ನಮ್ಮ ಪ್ರಾಮಾಣಿಕ ಕ್ಷಮೆಯಾಚಿಸುತ್ತೇವೆ, ಏಕೆಂದರೆ ಇಲ್ಲಿ ಉದ್ದೇಶವು ಯಾರ ನಂಬಿಕೆಗಳು ಮತ್ತು ಭಾವನೆಗಳನ್ನು ಎಂದಿಗೂ ನೋಯಿಸುವುದಿಲ್ಲ" ಎಂದು ಜೊಮ್ಯಾಟೋ ಟ್ವೀಟ್‌ ಮೂಲಕ ಹೇಳಿಕೊಂಡಿದೆ. 

click me!