ನಷ್ಟದಲ್ಲಿರುವ ಕ್ರೆಡಿಟ್‌ ಸೂಸಿ ಬ್ಯಾಂಕ್ ಖರೀದಿಗೆ ಯುಬಿಎಸ್‌ ಸಜ್ಜು

By Kannadaprabha NewsFirst Published Mar 20, 2023, 12:45 PM IST
Highlights

ಭಾರಿ ನಷ್ಟದಲ್ಲಿರುವ ಸ್ವಿಜರ್ಲೆಂಡ್‌ನ ಕ್ರೆಡಿಟ್‌ ಸೂಸಿ ಬ್ಯಾಂಕ್‌ ಖರೀದಿಗೆ ಯುಬಿಎಸ್‌ ಸಮೂಹ ಮುಂದಾಗಿದೆ. ಖರೀದಿಗೆ ಷೇರುದಾರರ ಮತ ಕಡ್ಡಾಯ ಎಂಬ ನಿಯಮ ಬದಲಿಸಿ ನೇರ ಖರೀದಿಗೆ ಅವಕಾಶ ಮಾಡಿಕೊಡಲು ಸ್ವಿಜರ್ಲೆಂಡ್‌ ಸರ್ಕಾರ ಯೋಜನೆ ರೂಪಿಸಿದೆ.

ರೋಮ್‌: ಭಾರಿ ನಷ್ಟದಲ್ಲಿರುವ ಸ್ವಿಜರ್ಲೆಂಡ್‌ನ ಕ್ರೆಡಿಟ್‌ ಸೂಸಿ ಬ್ಯಾಂಕ್‌ ಖರೀದಿಗೆ ಯುಬಿಎಸ್‌ ಸಮೂಹ ಮುಂದಾಗಿದೆ. ಖರೀದಿಗೆ ಷೇರುದಾರರ ಮತ ಕಡ್ಡಾಯ ಎಂಬ ನಿಯಮ ಬದಲಿಸಿ ನೇರ ಖರೀದಿಗೆ ಅವಕಾಶ ಮಾಡಿಕೊಡಲು ಸ್ವಿಜರ್ಲೆಂಡ್‌ ಸರ್ಕಾರ ಯೋಜನೆ ರೂಪಿಸಿದೆ.

ಈ ವಿಷಯವನ್ನು ಸ್ವಿಜರ್ಲೆಂಡ್ ಅಧ್ಯಕ್ಷ (President of Switzerland), ಅಲೆನ್ ಬೆಸರ್ಟ್ (Alain Bessert) ಘೋಷಿಸಿದ್ದಾರೆ.  ಆದರೆ ಖರೀದಿ ಮೊತ್ತವನ್ನು ಅವರು ಬಹಿರಂಗಪಡಿಸಿಲ್ಲ. ಕ್ರೆಡಿಟ್ ಸೂಸಿ ಪತನ ಜಾಗತಿಕ ಮತ್ತು ಸ್ವಿಸ್ ಬ್ಯಾಂಕಿಂಗ್ ವಲಯದಲ್ಲಿ ಭಾರಿ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಸ್ವತಃ ಸರ್ಕಾರವೇ ಈ ಒಪ್ಪಂದದ ನೇತೃತ್ವ ವಹಿಸಿತ್ತು ಎನ್ನಲಾಗಿದೆ. 

ವಿಶ್ವದ 8ನೇ ಅತಿ ದೊಡ್ಡ ಬ್ಯಾಂಕ್‌ ಅಮೆರಿಕದ ಸ್ವಿಸ್‌ ಬ್ಯಾಂಕ್‌ ಕೂಡ ಪತನದತ್ತ..?

ಕ್ರೆಡಿಟ್‌ ಸೂಸಿಯ ಷೇರುಗಳು ಶುಕ್ರವಾರ 1.86 ಸ್ವಿಸ್‌ ಫ್ರಾಂಕ್‌ಗೆ ಅಂತ್ಯಗೊಂಡಿದ್ದವು. ಅಂತ್ಯಗೊಂಡ ಷೇರು ಬೆಲೆ ಆಧರಿಸಿ ಖರೀದಿ ಮೌಲ್ಯ ನಿಗದಿಯಾಗಲಿದೆ. ಸ್ವಿಸ್‌ ಸರ್ಕಾರ ಬಾಧ್ಯತೆಗಳ ಮೇಲೆ ಗ್ಯಾರಂಟಿ ನೀಡುವ ಸಾಧ್ಯತೆ ಇದ್ದು, ಈ ಭರವಸೆಯ ಮೇರೆಗೆ ಕ್ರೆಡಿಟ್‌ ಸೂಸಿ ಖರೀದಿಗೆ ಯುಬಿಎಸ್‌ ಸಮ್ಮತಿಸಿದೆ ಎಂದು ವರದಿ ಹೇಳಿದೆ.


 

click me!