ಸಿಮ್‌ ಮಾರಿ ಜೀವನ ನಡೆಸ್ತಿದ್ದ ವ್ಯಕ್ತಿಯೀಗ ಟಿವಿ ಸ್ಟಾರ್, ಬರೋಬ್ಬರಿ 80,000 ಕೋಟಿ ಕಂಪೆನಿಯ ಮಾಲೀಕ!

By Vinutha Perla  |  First Published Oct 3, 2023, 2:22 PM IST

ಯಶಸ್ವೀ ವ್ಯಕ್ತಿಗಳಾಗಿ ಜೀವನ ನಡೆಸುತ್ತಿರುವ ನಟರು, ಉದ್ಯಮಿಗಳು ಯಾರೇ ಆಗಿರಲಿ ಅದರಲ್ಲಿ ಹಲವರು ಆ ಸ್ಥಾನಕ್ಕೇರುವ ಮೊದಲು ಜೀವನ ನಡೆಸೋಕೆ ಒದ್ದಾಡಿದ್ದಾರೆ. ಇವರೂ ಅಂಥಾ ವ್ಯಕ್ತಿಗಳಲ್ಲಿ ಒಬ್ಬರು. ಜೀವನ ನಡೆಸೋಕೆ ಸಿಮ್‌ ಮಾರ್ತಿದ್ದ ವ್ಯಕ್ತಿಯೀಗ 80,000 ಕೋಟಿ ಕಂಪೆನಿಯ ಒಡೆಯ. ರಿಯಾಲಿಟಿ ಶೋಗೂ ಎಂಟ್ರಿ ಪಡೆದಿದ್ದಾರೆ. 


ಭಾರತದ ಜನಪ್ರಿಯ ರಿಯಾಲಿಟಿ ಶೋ, 'ಶಾರ್ಕ್ ಟ್ಯಾಂಕ್ ಇಂಡಿಯಾ'ದ ಸೀಸನ್‌-3 ಸದ್ಯದಲ್ಲೇ ಆರಂಭವಾಗಲಿದೆ. ಜನಪ್ರಿಯ ರಿಯಾಲಿಟಿ ಶೋನಲ್ಲಿ ಉದಯೋನ್ಮುಖ ಉದ್ಯಮಿಗಳು ತಮ್ಮ ವ್ಯವಹಾರದ ಯೋಜನೆಗಳನ್ನು ಸಕ್ಸಸ್‌ಫುಲ್‌ ಬಿಸಿನೆಸ್ ಮ್ಯಾನ್‌ಗಳ ಮುಂದೆ ಪ್ರಸ್ತುತ ಪಡಿಸುತ್ತಾರೆ. ಸೀಸನ್ 3 ರಲ್ಲಿ ಐದು ಹಳೆಯ ಶಾರ್ಕ್‌ಗಳ ಜೊತೆಗೆ ಈ ಬಾರಿ ಹೊಸ ಎಂಟ್ರಿಯೂ ಇದೆ. ಅವರೇ ರಿತೇಶ್ ಅಗರ್ವಾಲ್. 29 ವರ್ಷದ ಈ ಉದ್ಯಮಿ ಭಾರತದ ಎರಡನೇ ಅತಿ ಕಿರಿಯ ಬಿಲಿಯನೇರ್.

ಶಾರ್ಕ್ ಟ್ಯಾಂಕ್ ಇಂಡಿಯಾದ ಹೊಸ ಶಾರ್ಕ್ ರಿತೇಶ್ ಅಗರ್ವಾಲ್ ಯಾರು?
29 ವರ್ಷ ವಯಸ್ಸಿನ ರಿತೇಶ್ ಅಗರ್‌ವಾಲ್‌  ಉದ್ಯಮಿಯಾಗಿದ್ದು, ಓಯೋ ರೂಮ್ಸ್ ಸಂಸ್ಥಾಪಕರಾಗಿ ಪ್ರಸಿದ್ಧರಾಗಿದ್ದಾರೆ. 1993ರಲ್ಲಿ ಕಟಕ್‌ನ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಅವರು ಡಿಶಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು (Education) ಮುಗಿಸಿ, ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ತೆರಳಿದರು. ಕಾಲೇಜಿನಲ್ಲಿದ್ದಾಗಲೇ, ರಿತೇಶ್  ಕೇವಲ 18 ವರ್ಷ ವಯಸ್ಸಿನವರಾಗಿದ್ದಾಗ ಒರಾವೆಲ್ ಸ್ಟೇಸ್ ಎಂಬ ಏರ್‌ಬಿಎನ್‌ಬಿ ಎಂಬ ಸ್ಟಾರ್ಟಪ್‌ ಆರಂಭಿಸಿದರು. 

Tap to resize

Latest Videos

ಬಿಲಿಯನೇರ್‌ ಅಂಬಾನಿ ಬಳಿ ದುಡ್ಡೇ ಇಲ್ವಾ, ಬರೋಬ್ಬರಿ 6660 ಕೋಟಿ ರೂ. ಸಾಲದಲ್ಲಿದೆ ಒಡೆತನದ ಸಂಸ್ಥೆ!

2013ರಲ್ಲಿ ಥಿಯೆಲ್ ಫೆಲೋಶಿಪ್‌ನ ವಿಜೇತರಲ್ಲಿ (Winner) ಇದು ಒಂದಾಗಿದೆ, ನಂತರ ಇದನ್ನು ಔಪಚಾರಿಕವಾಗಿ ಓಯೋ ರೂಮ್ಸ್ ಎಂದು ಪ್ರಾರಂಭಿಸಲಾಯಿತು. ಕಂಪನಿಯು ಪ್ರಪಂಚದಾದ್ಯಂತ ಹೋಟೆಲ್‌ಗಳು ಮತ್ತು ಹೋಮ್ ಸ್ಟೇಗಳನ್ನು ಗುತ್ತಿಗೆ ಮತ್ತು ಫ್ರಾಂಚೈಸ್ ಮಾಡುತ್ತದೆ. ಪ್ರಸ್ತುತ 80 ದೇಶಗಳಲ್ಲಿ 800 ನಗರಗಳಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ಕೊಠಡಿಗಳನ್ನು (Rooms) ಹೊಂದಿದೆ.

ರಿತೇಶ್ ಅಗರ್ವಾಲ್ ಒಟ್ಟು ಆಸ್ತಿ ಎಷ್ಟು?
2013ರ ನಂತರ Oyo ತುಂಬಾ ವೇಗವಾಗಿ ಬೆಳೆಯಿತು, ಸೆಪ್ಟೆಂಬರ್ 2018ರಲ್ಲಿ 1 ಬಿಲಿಯನ್ ಹಣವನ್ನು ಸಂಗ್ರಹಿಸಿತು. ಜುಲೈ 2019ರಲ್ಲಿ, ರಿತೇಶ್ ಇತರ ಹೂಡಿಕೆದಾರರಿಂದ 2 ಶತಕೋಟಿ ಮೌಲ್ಯದ ಷೇರುಗಳನ್ನು ಹಿಂತೆಗೆದುಕೊಂಡರು, ಅದು ಕಂಪನಿಯ ಮೌಲ್ಯವನ್ನು 10 ಶತಕೋಟಿಗೆ ಹೆಚ್ಚಿಸಿತು. ಜನವರಿ 2022 ರಲ್ಲಿ, ಕಂಪನಿಯ 500 ಪ್ರಸ್ತುತ ಮತ್ತು ಮಾಜಿ ಉದ್ಯೋಗಿಗಳು (Ex-employees) ಕಂಪನಿಯ 3 ಕೋಟಿ ಷೇರುಗಳನ್ನು 9.6 ಶತಕೋಟಿ ಮೌಲ್ಯದ ಒಪ್ಪಂದದಲ್ಲಿ ಖರೀದಿಸಿದರು. ಎಕನಾಮಿಕ್ ಟೈಮ್ಸ್, ಓಯೋ ಕಂಪನಿಯ ಒಟ್ಟು ಆಸ್ತಿಯು 2021ರಲ್ಲಿ 1 ಶತಕೋಟಿಗಿಂತ ಹೆಚ್ಚಿದೆ ಎಂದು ವರದಿ ಮಾಡಿದೆ. 2022 ರಲ್ಲಿ, ಮನಿ ಮಿಂಟ್ ರಿತೇಶ್ ಅವರ ನಿವ್ವಳ ಮೌಲ್ಯವು ಬರೋಬ್ಬರಿ 16,462 ಕೋಟಿ ಎಂದು ವರದಿ ಮಾಡಿದೆ.

ಮುಂಬೈನ ವಠಾರ ಜೀವನದಿಂದ ದುಬೈಗೆ ಹಾರಿ ಸಾಮ್ರಾಜ್ಯ ಕಟ್ಟಿದ ಭಾರತೀಯ ಸಹೋದರರು, ಈಗ ಏಷ್ಯಾದ ಶ್ರೀಮಂತರು!

ರಿತೇಶ್ ಕಾಲೇಜಿನ ಸಮಯದಲ್ಲಿ ಓಯೋ ಆರಂಭಿಸಿದಾಗ ಈ ಬಗ್ಗೆ ಮನೆಯವರಿಗೆ ತಿಳಿಸಿರಲ್ಲಿಲ್ಲ. ರಿತೇಶ್‌ ತಮ್ಮ ನಿರ್ಧಾರದ ಬಗ್ಗೆ ಪೋಷಕರಿಗೆ ಹೇಳುವ ಧೈರ್ಯ ಮಾಡಲಿಲ್ಲ, ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಬಹುದು ಎಂದು ಹೆದರಿದರು. ಆ ಸಮಯದಲ್ಲಿ, ಉದ್ಯಮಿ ಮನೆಯವರಿಗೆ ಹಣ ಕೇಳದೆ, ಸ್ವತಃ ಹಣ ಸಂಪಾದಿಸಲು ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಲು ಆರಂಭಿಸಿದರು, 2013ರಲ್ಲಿ 80 ಲಕ್ಷ ರೂ. ಥಿಯೆಲ್ ಫೆಲೋಶಿಪ್ ಸಿಕ್ಕಾಗ ಓಯೋ ಸಂಸ್ಥೆಯನ್ನು ಆರಂಭಿಸಲು ಕಾರಣವಾಯಿತು.

click me!