ತರಕಾರಿ – ಹಣ್ಣಿನ ಸಿಪ್ಪೆ ತೆಗೆದು ಅದನ್ನು ಕಸಕ್ಕೆ ಹಾಕ್ತೇವೆ. ಆದ್ರೆ ಅದರಿಂದಲೂ ಸಾಕಷ್ಟು ಪ್ರಯೋಜನವಿದೆ. ಸಿಪ್ಪೆ ಮಾರಾಟ ಮಾಡಿ ಹಣ ಸಂಪಾದನೆ ಮಾಡೋದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಈಗಿನ ದಿನಗಳಲ್ಲಿ ಹಳೆ ವಸ್ತು (Old thing) ಗಳಿಂದ ಹಿಡಿದು ಹರಿದ ವಸ್ತುಗಳವರೆಗೆ ಎಲ್ಲದಕ್ಕೂ ಬೇಡಿಕೆ ಇದೆ. ಅದನ್ನು ನೀವು ಹೇಗೆ ಕ್ರಿಯಾತ್ಮಕವಾಗಿ ಬಳಸ್ತೀರಿ ಹಾಗೂ ಅದ್ರ ಮಾರ್ಕೆಟಿಂಗ್ ಹೇಗೆ ಮಾಡ್ತೀರಿ ಎಂಬುದು ಮುಖ್ಯವಾಗುತ್ತದೆ. ಪ್ರತಿಯೊಬ್ಬರೂ, ಪ್ರತಿ ದಿನ ಅಡುಗೆ ಮಾಡ್ತಾರೆ. ಅದಕ್ಕೆ ತರಕಾರಿ ಬಳಸ್ತಾರೆ. ಅನೇಕ ತರಕಾರಿ ಹಾಗೂ ಹಣ್ಣಿನ ಸಿಪ್ಪೆಗಳನ್ನು ತಿನ್ನೋಕೆ ಸಾಧ್ಯವಿಲ್ಲ. ಹಾಗಾಗಿ ಸಿಪ್ಪೆ ತೆಗೆದು ಅದನ್ನು ಕಸಕ್ಕೆ ಎಸೆಯುತ್ತೇವೆ. ಪ್ರತಿ ದಿನ ನಾನಾ ತರಕಾರಿ ಸಿಪ್ಪೆ ಕಸದ ಬುಟ್ಟಿ ಸೇರುತ್ತೆ. ದೊಡ್ಡ ಪ್ರಮಾಣದಲ್ಲಿ ಪ್ರತಿ ದಿನ ಅಡುಗೆ ಮಾಡುವವರ ಮನೆಯಲ್ಲಿ ಕಸ ಸೇರುವ ತರಕಾರಿ ಸಿಪ್ಪೆ ಪ್ರಮಾಣ ಕೂಡ ಹೆಚ್ಚಿರುತ್ತದೆ. ಇಷ್ಟೊಂದು ಹಣ ನೀಡಿ ಮನೆಗೆ ತಂದ ತರಕಾರಿ ಸಿಪ್ಪೆ, ಪ್ರಯೋಜನಕ್ಕೆ ಬರ್ತಿಲ್ಲ ಎಂದಾಗ ಬೇಸರವಾಗುತ್ತದೆ. ಆದ್ರೆ ಇನ್ಮುಂದೆ ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ನೀವು ಕಸ ಅಂತ ಎಸೆಯಲು ಮುಂದಾಗಿರುವ ಈ ಸಿಪ್ಪೆಯಿಂದೇ ಹಣ ಗಳಿಸಬಹುದು. ತರಕಾರಿ ಸಿಪ್ಪೆ (vegetable peel)ಯನ್ನು ಕಸಕ್ಕೆ ಹಾಕುವ ಮೊದಲು ಇದನ್ನೊಮ್ಮೆ ಓದಿ.
ತರಕಾರಿ – ಹಣ್ಣಿನ ಸಿಪ್ಪೆಯನ್ನು ನಿಮ್ಮ ಗಳಿಕೆ ಮೂಲ ಮಾಡ್ಕೊಳ್ಳಿ : ನೀವು ತರಕಾರಿ ಹಾಗೂ ಹಣ್ಣಿನ ಸಿಪ್ಪೆಯನ್ನೇ ಬಂಡವಾಳ ಮಾಡ್ಕೊಂಡು ಹಣ ಸಂಪಾದನೆ ಮಾಡ್ಬಹುದು. ತರಕಾರಿ ಹಾಗೂ ಹಣ್ಣಿನ ಸಿಪ್ಪೆಯಿಂದ ಏನು ಮಾಡೋಕೆ ಸಾಧ್ಯ? ತಿನ್ನೋಕೆ ಬರಲ್ಲ, ಎಸೆಯೋಕೆ ಆಗಲ್ಲ ಎನ್ನುವವರು ಈ ಕೆಲ ಟ್ರಿಕ್ಸ್ ಫಾಲೋ ಮಾಡಿ. ಇದ್ರಿಂದ ನಿಧಾನವಾಗಿ ಹಣಗಳಿಕೆ ಶುರು ಮಾಡಿ.
ಇನ್ನು ಎಟಿಎಂನಲ್ಲೇ ಪಿಎಫ್‌ಹಣ ಹಿಂಪಡೆಯಿರಿ: ಜೂನ್‌ನಿಂದ ಹೊಸ ಸೌಲಭ್ಯ ಜಾರಿ
• ತರಕಾರಿ ಸಿಪ್ಪೆ ಹಾಗೂ ಹಣ್ಣಿನ ಸಿಪ್ಪೆಯನ್ನು ನೀವು ಆಹಾರ ಪದಾರ್ಥಕ್ಕೆ ಬಳಕೆ ಮಾಡ್ಬಹುದು. ಸೂಪ್, ಕರಿ,ಗ್ರೇವಿ ಸೇರಿದಂತೆ ಕೆಲ ಆಹಾರ ಪದಾರ್ಥವನ್ನು ಮಾಡಿ ನೀವು ಅದನ್ನು ಮಾರಾಟ ಮಾಡಬಹುದು. ಆಲೂಗಡ್ಡೆ ಸಿಪ್ಪೆಗೆ ಮಸಾಲೆ ಹಾಕಿ, ಅದನ್ನು ಡ್ರೈ ಮಾಡಿ ಅದನ್ನು ಮಾರಾಟ ಮಾಡಲಾಗ್ತಿದೆ. ಮಾರುಕಟ್ಟೆಯಲ್ಲಿ ಅದಕ್ಕೆ ವಿಪರೀತ ಬೇಡಿಕೆ ಇದೆ. ಹಾಗೆಯೇ ಕೆಲ ತರಕಾರಿ ಸಿಪ್ಪೆ ಸೂಪ್, ಮಾರುಕಟ್ಟೆಯಲ್ಲಿ ಫೇಮಸ್ ಆಗಿದೆ.
• ನೀವು ತೆಂಗಿನಕಾಯಿ ಸಿಪ್ಪೆ ಮತ್ತು ಬಾಳೆ ಹಣ್ಣಿನ ಸಿಪ್ಪೆಯಿಂದ ಕೋಕೊಪಿಟ್ ತಯಾರಿಸಿ ಅದನ್ನು ಮಾರಾಟ ಮಾಡಬಹುದು. ಅಮೆಜಾನ್ (amazon) ನಂತಹ ವೆಬ್ಸೈಟ್ ನಲ್ಲಿ ಇದು ಹೆಚ್ಚಿನ ಬೆಲೆಗೆ ಮಾರಾಟವಾಗ್ತಿದೆ.
• ತರಕಾರಿ ಹಾಗೂ ಹಣ್ಣಿನ ಸಿಪ್ಪೆಯಿಂದ ಸೋಪ್, ಶಾಂಪೂ ಹಾಗೂ ಕೆಲ ಬ್ಯೂಟಿ ಪ್ರಾಡೆಕ್ಟ್ ತಯಾರಿಸುವವರಿದ್ದಾರೆ. ನೀವು ಇದನ್ನು ತಯಾರಿಸಿ ಮಾರಾಟ ಮಾಡಬಹು ದು. ಇಲ್ಲವೆ ನಿಮ್ಮ ಸುತ್ತಮುತ್ತ ಇದನ್ನು ತಯಾರಿಸುವ ವ್ಯಕ್ತಿ ಅಥವಾ ಕಂಪನಿಗೆ ನೀವು ಸಿಪ್ಪೆ ಮಾರಾಟ ಮಾಡಬಹುದು. ಸೌಂದರ್ಯ ವರ್ಧಕ ತಯಾರಿಕೆಗೆ ಆಲೂಗಡ್ಡೆ ಸಿಪ್ಪೆ, ದಾಳಿಂಬೆ ಸಿಪ್ಪೆ, ಟೊಮೊಟೊ ಸಿಪ್ಪೆ ಹಾಗೂ ಬೀಟ್ರೂಟ್ ಸಿಪ್ಪೆಯನ್ನು ಬಳಸಲಾಗುತ್ತದೆ.
ಈ 5 ಬ್ಯುಸಿನೆಸ್ ಐಡಿಯಾಗಳಿಂದ ನೀವು ಮಲಗಿದಾಗಲೂ ಹಣ ಗಳಿಸಬಹುದು, ಟ್ರೈ ಮಾಡಿ!
• ನೀವು ಉತ್ತಮ ಗುಣಮಟ್ಟದ ಗೊಬ್ಬರವನ್ನು ತಯಾರಿಸಿ ಕೂಡ ಮಾರಾಟ ಮಾಡಬಹುದು. ತರಕಾರಿ ಹಾಗೂ ಹಣ್ಣಿನ ಸಿಪ್ಪೆ ಜೊತೆ ಮನೆಯಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಕೂಡ ನೀವು ಈ ಗೊಬ್ಬರ (fertilizer) ತಯಾರಿಕೆಗೆ ಬಳಸಬಹುದು.
• ಯಾವುದೇ ಉತ್ಪನ್ನ ತಯಾರಿಸುವ ಮುನ್ನ ನೀವು ಸರಿಯಾದ ತರಬೇತಿ ಪಡೆದಿದ್ದರೆ ಒಳ್ಳೆಯದು. ಸೂಕ್ತ ತರಬೇತಿ ನಂತ್ರ ನೀವು ಮನೆಯಲ್ಲಿಯೇ ಸಿಪ್ಪೆಗಳಿಂದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಆನ್ಲೈನ್ ಇಲ್ಲವೆ ಆಫ್ ಲೈನ್ನಲ್ಲಿ ನೀವು ಇದನ್ನು ಮಾರಾಟ ಮಾಡಬೇಕು.