ಟ್ರಂಪ್ ಟ್ಯಾರಿಫ್‌ನಿಂದ ಭಾರತಕ್ಕಿಂತ ಅಮೇರಿಕಾ ಕುಟುಂಬಗಳಿಗೇ ಭಾರಿ ಆಘಾತ! ಒಬ್ಬೊಬ್ಬರಿಗೆ ₹4 ಲಕ್ಷ ಹೊರೆ!

Published : Aug 02, 2025, 03:50 PM IST
Donald Trump

ಸಾರಾಂಶ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ತೆರಿಗೆಗಳು ಅಮೆರಿಕನ್ ಕುಟುಂಬಗಳ ಮೇಲೆ ವರ್ಷಕ್ಕೆ ಸುಮಾರು 2,400 ಡಾಲರ್ ಹೆಚ್ಚುವರಿ ವೆಚ್ಚ ಉಂಟುಮಾಡಲಿದೆ ಎಂದು SBI ವರದಿ ಅಂದಾಜಿಸಿದೆ. ಬಡವರಿಗೆ ಹೆಚ್ಚು ಹೊರೆಯಾಗಲಿದ್ದು, ಶ್ರೀಮಂತರಿಗೆ ಕಡಿಮೆ ಆಗಲಿದೆ. ಭಾರತದ ಮೇಲೆಯೂ ಕಡಿಮೆ ಪರಿಣಾಮ ಬೀರಲಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ತೆರಿಗೆಗಳು ಅಮೆರಿಕದ ಕುಟುಂಬಗಳ ಮೇಲೆ ಹೆಚ್ಚಿನ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿ ಅಮೆರಿಕನ್ ಕುಟುಂಬಕ್ಕೆ ವರ್ಷಕ್ಕೆ ಸುಮಾರು 2,400 ಡಾಲರ್ (2 ಲಕ್ಷ ರೂಪಾಯಿ) ಹೆಚ್ಚುವರಿ ವೆಚ್ಚವಾಗಲಿದೆ ಎಂದು SBI ವರದಿ ತಿಳಿಸಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಈ ತೆರಿಗೆಗಳು ಒಂದು ಬೆದರಿಕೆಯಾಗಿದ್ದರೂ, ಅಮೆರಿಕಕ್ಕೆ ಹೋಲಿಸಿದರೆ ಭಾರತದ ಮೇಲೆ ಪರಿಣಾಮ ಕಡಿಮೆ ಇರಲಿದೆ ಎಂದು ವರದಿ ಹೇಳುತ್ತದೆ.

ಬಡವರಿಗೆ ಹೆಚ್ಚು ಹೊರೆ, ಶ್ರೀಮಂತರಿಗೆ ಕಡಿಮೆ ಪರಿಣಾಮ!

SBI ವರದಿಯ ಪ್ರಕಾರ, ಈ ಹೆಚ್ಚುವರಿ ವೆಚ್ಚದ ಹೊರೆ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಕಡಿಮೆ ಆದಾಯದ ಕುಟುಂಬಗಳಿಗೆ ಸುಮಾರು 1,300 ಡಾಲರ್ (1.1 ಲಕ್ಷ ರೂಪಾಯಿ) ಹೆಚ್ಚುವರಿ ವೆಚ್ಚವಾಗಲಿದೆ. ಇದು ಅವರ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೆಚ್ಚಿನ ಆದಾಯದ ಕುಟುಂಬಗಳಿಗೆ 5,000 ಡಾಲರ್ (4.2 ಲಕ್ಷ ರೂಪಾಯಿ) ವರೆಗೆ ಹೆಚ್ಚುವರಿ ವೆಚ್ಚವಾಗಬಹುದು. ಆದರೆ ಅವರ ಆರ್ಥಿಕ ಸ್ಥಿತಿಯ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ.

ಎಲೆಕ್ಟ್ರಾನಿಕ್ಸ್, ವಾಹನಗಳು ಮತ್ತು ಇತರ ಗ್ರಾಹಕ ವಸ್ತುಗಳ ಬೆಲೆಗಳು ಗಗನಕ್ಕೇರಲಿವೆ. ಇದರಿಂದಾಗಿ ಅಮೆರಿಕದಲ್ಲಿ ಹಣದುಬ್ಬರವು ಫೆಡರಲ್ ರಿಸರ್ವ್ ನಿಗದಿಪಡಿಸಿರುವ ಶೇ.2 ರಷ್ಟು ಮಿತಿ ಮೀರಬಹುದು. ಹೆಚ್ಚಿನ ಉತ್ಪಾದನಾ ವೆಚ್ಚ ಮತ್ತು ಗ್ರಾಹಕರ ಬೇಡಿಕೆ ಕುಸಿತದಿಂದಾಗಿ US GDP 40 ರಿಂದ 50 ಬೇಸಿಸ್ ಪಾಯಿಂಟ್ ಕುಸಿಯಬಹುದು. ಇದರಿಂದಾಗಿ ಬೇರೆ ದೇಶಗಳ ಮೇಲೆ ನಾವು ಟ್ಯಾರೀಪ್ ಹೆಚ್ಚಿಗೆ ಮಾಡಿ, ಸಂಕಷ್ಟಕ್ಕೆ ದೂಡಿದ್ದೇವೆ ಎಂದು ಖುಷಿ ಪಡುವುದಕ್ಕೂ ಅಮೇರಿಕಾಗೆ ಸಾಧ್ಯವಾಗುವುದಿಲ್ಲ.

ಭಾರತಕ್ಕೆ ಪರಿಣಾಮ ಕಡಿಮೆ! ಅಮೆರಿಕ ಭಾರತದ ಅತಿದೊಡ್ಡ ರಫ್ತು ಮಾರುಕಟ್ಟೆಗಳಲ್ಲಿ ಒಂದಾಗಿದೆ. 2025 ರ ವೇಳೆಗೆ ಭಾರತದ ಒಟ್ಟು ರಫ್ತಿನ ಶೇ.20 ರಷ್ಟು ಅಮೆರಿಕಕ್ಕೆ ಆಗಲಿದೆ. ಆದರೂ, ಟ್ರಂಪ್ ನೀತಿಗಳು ಭಾರತದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು SBI ವರದಿ ಹೇಳುತ್ತದೆ. ಇದಕ್ಕೆ ಪ್ರಮುಖ ಕಾರಣ ಭಾರತದ ವೈವಿಧ್ಯಮಯ ವ್ಯಾಪಾರ ಜಾಲ. ಭಾರತ ತನ್ನ ರಫ್ತಿನ ಶೇ.53 ರಷ್ಟನ್ನು 10 ದೇಶಗಳಿಗೆ ಮಾಡುತ್ತದೆ. ಇದು ಒಂದೇ ದೇಶದ ಮೇಲೆ ಅತಿಯಾದ ಅವಲಂಬನೆಯನ್ನು ತಪ್ಪಿಸುತ್ತದೆ.

ಹೀಗಾಗಿ, ಟ್ರಂಪ್‌ರ ಈ ಹೊಸ ನೀತಿಗಳು ಎರಡೂ ದೇಶಗಳಿಗೆ ಸವಾಲುಗಳನ್ನು ಒಡ್ಡಿದರೂ, ಭಾರತಕ್ಕಿಂತ ಅಮೆರಿಕದ ಮೇಲೆ ಹೆಚ್ಚಿನ ಆರ್ಥಿಕ ಹೊಡೆತ ಬೀಳಲಿದೆ ಎಂದು SBI ವರದಿ ಸ್ಪಷ್ಟಪಡಿಸುತ್ತದೆ. ದುರ್ಬಲ ಡಾಲರ್, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಕಡಿಮೆ GDP ಬೆಳವಣಿಗೆಯ ಸಾಧ್ಯತೆಗಳು ಅಮೆರಿಕವನ್ನು ದುರ್ಬಲ ಸ್ಥಿತಿಗೆ ತಳ್ಳುತ್ತಿರುವಾಗ, ಜಾಗತಿಕ ಬಿಕ್ಕಟ್ಟನ್ನು ಎದುರಿಸಲು ಭಾರತ ಹೆಚ್ಚು ಸಜ್ಜಾಗಿದೆ ಎಂದು ವರದಿ ಹೇಳುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ