
ನವದೆಹಲಿ[ಫೆ.12]: ಶತಾಬ್ದಿ ರೈಲುಗಳಿಗೆ ಪರ್ಯಾಯ ಎಂದೇ ಪರಿಗಣಿತ, ದೇಶದ ಅತಿವೇಗದ ರೈಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಫೆ.15ರಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಆದರೆ ಶತಾಬ್ದಿಗೆ ಹೋಲಿಸಿದೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್ ದರ ದುಬಾರಿಯಾಗಿರಲಿದೆ.
ಟ್ರೈನ್-18 ರೈಲಿನಲ್ಲಿ ದೆಹಲಿಯಿಂದ ವಾರಾಣಸಿಗೆ ಎಸಿ ಚೇರ್ ಕಾರ್‌ನಲ್ಲಿ 1,850 ರು. ಶುಲ್ಕ ನಿಗದಿ ಮಾಡಿದ್ದರೆ, ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ 3,520 ರು. ದರ ನಿಗದಿ ಮಾಡಲಾಗಿದೆ. ಪ್ರಯಾಣದ ವೇಳೆಯ ಊಟೋಪಚಾರ ಸೇವೆ ಪಡೆಯುವುದು ಕಡ್ಡಾಯ.
ಇನ್ನು ವಾರಾಣಸಿಯಿಂದ ಮರಳಿ ದೆಹಲಿಗೆ ಬರುವ ಶುಲ್ಕ ಕಾರ್ ಚೇರ್ ಟಿಕೆಟ್ ದರ ರು. 1,795, ಎಕ್ಸಿಕ್ಯೂಟಿವ್ ಕ್ಲಾಸ್ ದರ 3,470 ರು. ಆಗಿರಲಿದೆ. ಎರಡು ಬದಿಯಲ್ಲಿ ಕ್ರಮಿಸಿದರೆ ಸ್ವಲ್ಪಮಟ್ಟಿಗೆ ಕಡಿಮೆ ಆಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.