ಬರೋಬ್ಬರಿ 13 ರೂ. ಇಳಿದ ಪೆಟ್ರೋಲ್: ಲೆಕ್ಕಕ್ಕೇ ಇಲ್ಲ ಫ್ಯುಯೆಲ್!

By Web DeskFirst Published Dec 8, 2018, 3:29 PM IST
Highlights

ಮತ್ತೆ ಇಳಿಕೆಯತ್ತ ಮುಖ ಮಾಡಿದ ಪೆಟ್ರೋಲ್, ಡೀಸೆಲ್ ದರ| ದೇಶದ ಮಹಾನಗರಗಳಲ್ಲಿ ಗಮನಾರ್ಹ ಇಳಿಕೆ ಕಂಡ ತೈಲದರ| ಕೇವಲ 20 ದಿನದಲ್ಲಿ ಬರೋಬ್ಬರಿ 13 ರೂ. ಇಳಿಕೆ| ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಆಶಾಭಾವನೆ

ನವದೆಹಲಿ(ಡಿ.08): ತೈಲೋತ್ಪನ್ನಗಳ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ 20 ದಿನಗಳಿಂದ ಪೆಟ್ರೋಲ್ ದರದಲ್ಲಿ ಬರೋಬ್ಬರಿ 13 ರೂ. ಇಳಿಕೆಯಾಗಿದೆ.

ಇಂದು ಮತ್ತೆ ಪೆಟ್ರೋಲ್, ಡೀಸೆಲ್ ದರಗಳು ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 40 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 41 ಪೈಸೆಯಷ್ಟು ಇಳಿಕೆ ಕಂಡು ಬಂದಿದೆ.  ಈ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ಇಲ್ಲಿಯವರೆಗೂ ಪೆಟ್ರೋಲ್ ದರದಲ್ಲಿ 13 ರೂ. ಇಳಿಕೆಯಾದಂತಾಗಿದೆ. 

ರಾಷ್ಟ್ರ ರಾಜಧಾನಿ ನವದೆಹಲಿ-

ಪೆಟ್ರೋಲ್ ದರ: 71.32 ರೂ.

ಡೀಸೆಲ್ ದರ: 65.55 ರೂ.

ವಾಣಿಜ್ಯ ರಾಜಧಾನಿ ಮುಂಬೈ-

ಪೆಟ್ರೋಲ್ ದರ: 76.50  ರೂ.

ಡೀಸೆಲ್ ದರ: 68.59  ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-

ಪೆಟ್ರೋಲ್ ದರ: 72.97 ರೂ.

ಡೀಸೆಲ್ ದರ: 67.03 ರೂ.

ತಮಿಳುನಾಡು ರಾಜಧಾನಿ ಚೆನ್ನೈ-

ಪೆಟ್ರೋಲ್ ದರ: 73.57 ರೂ.

ಡೀಸೆಲ್ ದರ: 68.93 ರೂ.

ರಾಜ್ಯ ರಾಜಧಾನಿ ಬೆಂಗಳೂರು-

ಪೆಟ್ರೋಲ್ ದರ: 71.46 ರೂ.

ಡೀಸೆಲ್ ದರ: 65.88 ರೂ.


ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿಯುತ್ತಿರುವುದರ ಪರಿಣಾಮ ದೇಶದೆಲ್ಲೆಡೆ ಇಂಧನ ದರದಲ್ಲಿ ಗಣನೀಯ ಇಳಿಕೆಯಾಗಿದೆ. ಕಳೆದ ಅಕ್ಟೋಬರ್‌ನಿಂದ ಇಲ್ಲಿಯವರೆಗೂ ಕಚ್ಚಾ ತೈಲ ಬೆಲೆ ಶೇ.30ರಷ್ಟು ಕಡಿಮೆಯಾಗಿದೆ.

click me!