ಇದು ಹಿರಿಯ ನಾಗರಿಕರ ಕೊಡುಗೆ: ಅಷ್ಟಿಲ್ಲದೇ ಭಾರತ ಕಟ್ಟಿದ್ದಾರಾ?

Published : Dec 07, 2018, 03:39 PM IST
ಇದು ಹಿರಿಯ ನಾಗರಿಕರ ಕೊಡುಗೆ: ಅಷ್ಟಿಲ್ಲದೇ ಭಾರತ ಕಟ್ಟಿದ್ದಾರಾ?

ಸಾರಾಂಶ

ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರೈಲ್ವೆ ಇಲಾಖೆಗೆ ಹಿರಿಯ ನಾಗರಿಕರ ಅಭಯ| ಇಲಾಖೆಯ ಸಮಸ್ಯೆಗೆ ಸ್ಪಂದಿಸಿ ಸಬ್ಸಿಡಿ ಬೇಡ ಎಂದ ಹಿರಿಯರು| ಸಬ್ಸಿಡಿ ಬಿಟ್ಟುಕೊಟ್ಟ 32 ಲಕ್ಷಕ್ಕೂ ಹೆಚ್ಚಿನ ಹಿರಿಯ ನಾಗರಿಕರು| ಇಲಾಖೆಗೆ ಬರೋಬ್ಬರಿ 55.12 ಕೋಟಿ ರೂ. ಉಳಿತಾಯ| ಇಲಾಖೆಯ 'ಗಿವ್ ಅಪ್' ಯೋಜನೆಗೆ ಉತ್ತಮ ಸ್ಪಂದನೆ|

ನವದೆಹಲಿ(ಡಿ.07): ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರೈಲ್ವೆ ಇಲಾಖೆಯ ಸಮಸ್ಯೆಗೆ ಸ್ಪಂದಿಸಿ ಹಿರಿಯ ನಾಗರಿಕರು ತಮ್ಮ ಸಬ್ಸಿಡಿಯನ್ನು ಬಿಟ್ಟುಕೊಡುತ್ತಿದ್ದಾರೆ. ಸುಮಾರು 32 ಲಕ್ಷಕ್ಕೂ ಹೆಚ್ಚಿನ ಹಿರಿಯ ನಾಗರಿಕರು 2017 ರ ಜುಲೈ ನಿಂದ ಈ ವರ್ಷದ ಜೂನ್ ವರೆಗೆ ದರ ವಿನಾಯ್ತಿಯನ್ನು ಬಿಟ್ಟುಕೊಟ್ಟಿದ್ದಾರೆ. 

ಈ ಹಿನ್ನೆಲೆಯಲ್ಲಿ ನಷ್ಟದಲ್ಲಿದ್ದ ರೈಲ್ವೇ ಇಲಾಖೆಗೆ ಬರೋಬ್ಬರಿ 55.12 ಕೋಟಿ ರೂ. ಉಳಿತಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರ್ಥಿಕವಾಗಿ ಸದೃಢವಾಗಿರುವ ಹಿರಿಯ ನಾಗರಿಕರು ಸಬ್ಸಿಡಿ ಬಿಟ್ಟರೆ ಇಲಾಖೆಗೆ ಅನುಕೂಲವಾಗಲಿದೆ ಎಂದು ಇಲಾಖೆ ಈ ಹಿಂದೆ ಮನವಿ ಮಾಡಿತ್ತು.

ಇದಕ್ಕಾಗಿ ಕಳೆದ ವರ್ಷ ಜುಲೈ 22 ರಂದು 'ಗಿವ್ ಅಪ್' ಯೋಜನೆಯನ್ನು ಕೂಡ ಇಲಾಖೆ ಜಾರಿಗೊಳಿತ್ತು. ಆನ್‌ಲನ್ ನಲ್ಲಿ ಟಿಕೆಟ್ ಕಾಯ್ದಿರಿಸುವವರಿಗಾಗಿ ಶೇ.100 ರಷ್ಟು ದರ ವಿನಾಯ್ತಿ, ಶೇ.50 ರಷ್ಟು ದರ ವಿನಾಯ್ತಿಯೇ ವಿನಾಯ್ತಿಯೇ ಬೇಡ ಎಂಬ ಮೂರು ಆಯ್ಕೆಗಳನ್ನು ನೀಡಲಾಗಿತ್ತು.

ಈ ಸಂಬಂಧ ಆರ್‌ಟಿಐ ನಿಂದ ಪಡೆಯಲಾದ ಮಾಹಿತಿಯ ಪ್ರಕಾರ, ಈ ವರೆಗೆ ಒಟ್ಟು 32.12 ಲಕ್ಷ ಹಿರಿಯ ನಾಗರಿಕರು ದರ ವಿನಾಯ್ತಿಯನ್ನು ಬಿಟ್ಟುಕೊಟ್ಟಿದ್ದು, ಇಲಾಖೆಗೆ 55.12 ಕೋಟಿ ರೂ. ಉಳಿಸಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!