ಉದ್ಯಮ ಪ್ರಾರಂಭಿಸೋರು ಈ 5 ಟಿಪ್ಸ್ ಪಾಲಿಸಿದ್ರೆ ಯಶಸ್ಸು ಖಚಿತ..

By Suvarna News  |  First Published Oct 10, 2023, 2:28 PM IST

ಸ್ವಂತ ಉದ್ಯಮ ಪ್ರಾರಂಭಿಸೋದು ಇಂದು ಅನೇಕರ ಕನಸಾಗಿದೆ. ಆದರೆ, ಉದ್ಯಮ ಪ್ರಾರಂಭಿಸುವ ಮುನ್ನ ಒಂದಿಷ್ಟು ಸಿದ್ಧತೆಗಳು ಅಗತ್ಯ. ಏಕೆಂದರೆ ಯಾವುದೇ ಜ್ಞಾನ ಹಾಗೂ ಸಿದ್ಧತೆಯಿಲ್ಲದೆ ಉದ್ಯಮಕ್ಕೆ ಕೈಹಾಕಿದರೆ ಸೋಲುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾದ್ರೆ ಹೊಸ ಉದ್ಯಮ ಪ್ರಾರಂಭಿಸೋವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ಇಲ್ಲಿದೆ ಮಾಹಿತಿ. 


Business Desk: ಹಲವರಿಗೆ ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂಬ ಕನಸಿರುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರು ಸ್ವಂತ ಉದ್ಯಮದತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಪರಿಣಾಮ ಸ್ಟಾರ್ಟ್ ಅಪ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ, ಸ್ವಂತ ಉದ್ಯಮ ಪ್ರಾರಂಭಿಸೋದು ಅಷ್ಟು ಸುಲಭದ ಕೆಲಸವೇನೂ ಅಲ್ಲ. ಸಾಕಷ್ಟು ಸವಾಲುಗಳು, ಅಡಚಣೆಗಳು ಎದುರಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಆರ್ಥಿಕ ಸಮಸ್ಯೆಗಳು ಕಾಡಬಹುದು. ಆದರೆ, ಈ ಎಲ್ಲ ರಿಸ್ಕ್ ಗಳನ್ನು ಸಮರ್ಥವಾಗಿ ನಿಭಾಯಿಸುವ ಸಾರ್ಥ್ಯವಿರೋರು ಖಂಡಿತವಾಗಿ ಉದ್ಯಮದಲ್ಲಿ ಯಶಸ್ಸು ಸಾಧಿಸಬಹುದು.  ಸ್ವಂತ ಉದ್ಯಮ ಪ್ರಾರಂಭಿಸುವ ಮೊದಲು ಸಾಕಷ್ಟು ಅಧ್ಯಯನ, ಮಾಹಿತಿ, ಸಂಪನ್ಮೂಲ ಕ್ರೋಢೀಕರಣ  ಎಲ್ಲವೂ ಅಗತ್ಯ. ಸಣ್ಣ ಉದ್ಯಮ ಟ್ರೆಂಡ್ಸ್ ನಡೆಸಿದ ಅಧ್ಯಯನವೊಂದರಲ್ಲಿ ಶೇ.82ರಷ್ಟು ಯಶಸ್ವಿ ಉದ್ಯಮದ ಮಾಲೀಕರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿ ಅಗತ್ಯ ತರಬೇತಿ ಹಾಗೂ ಅನುಭವ ಪಡೆದಿರೋದಾಗಿ ತಿಳಿಸಿದ್ದಾರೆ. ಹಾಗಾದ್ರೆ ಸ್ವಂತ ಉದ್ಯಮ ಪ್ರಾರಂಭಿಸಲು ಆಸಕ್ತಿ ಹೊಂದಿರುವ ಯುವಕರು ಯಾವೆಲ್ಲ ಅಂಶಗಳನ್ನು ಗಮನಿಸೋದು ಅಗತ್ಯ? ಉದ್ಯಮಕ್ಕೆ ಸಂಬಂಧಿಸಿ ಅವರ ಸಿದ್ಧತೆ ಹೇಗಿರಬೇಕು? ಇಲ್ಲಿದೆ ಮಾಹಿತಿ.

1.ಮಾರುಕಟ್ಟೆ ಅವಕಾಶಗಳನ್ನು ಹುಡುಕಿ: ಉದ್ಯಮ ಪ್ರಾರಂಭಿಸುವ ಮೊದಲು ಮಾರುಕಟ್ಟೆ ಅವಕಾಶಗಳ ಬಗ್ಗೆ ಸೂಕ್ತ ಅಧ್ಯಯನ ನಡೆಸೋದು ಅಗತ್ಯ. ಸ್ಟಾರ್ಟ್ ಅಪ್ ಗಳ ವೈಫಲ್ಯಕ್ಕೆ ಬಹುಮುಖ್ಯ ಕಾರಣ ಮಾರುಕಟ್ಟೆ ಅಗತ್ಯಗಳನ್ನು ಸಮರ್ಪಕವಾಗಿ ಅಂದಾಜಿಸದಿರೋದು. ಮಾರುಕಟ್ಟೆ ಅವಕಾಶಗಳನ್ನು ಹೊಸದಾಗಿ ಸೃಷ್ಟಿಬೇಕಿಲ್ಲ. ಆದರೆ, ಅಲ್ಲಿರುವ ಅಂತರವನ್ನು ಪತ್ತೆಹಚ್ಚಿ ಅದನ್ನು ಹೇಗೆ ನಮ್ಮ ವ್ಯಾಪಾರದ ಲಾಭಕ್ಕೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಭಿನ್ನವಾಗಿ ಯೋಚಿಸುವ ಅಗತ್ಯವಿದೆ. 

Tap to resize

Latest Videos

Money Tips:ಆದಷ್ಟು ಬೇಗ ಹಣ ಮಾಡಿ, ಆರ್ಥಿಕ ಸ್ವಾತಂತ್ರ್ಯ ಗಳಿಸಲು ಬಯಸಿದ್ದೀರಾ? ಈ 7 ಟಿಪ್ಸ್ ಫಾಲೋ ಮಾಡಿ..

2.ನಿಮ್ಮ ಗ್ರಾಹಕರನ್ನು ಅರಿತುಕೊಳ್ಳಿ: ಎಲ್ಲರೂ ನಿಮ್ಮ ಗ್ರಾಹಕರಾಗಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಉತ್ಪನ್ನ ಅಥವಾ ಸೇವೆ ಬಳಸುವ ವರ್ಗ, ವಯೋಮಾನದ ಜನರು ಯಾರು ಎಂಬುದನ್ನು ಮೊದಲು ಪತ್ತೆ ಹಚ್ಚಬೇಕು. ಆ ಬಳಿಕ ಅವರ ಅಗತ್ಯ, ಅಭ್ಯಾಸಗಳು ಹಾಗೂ ಉತ್ಪನ್ನ ಅಥವಾ ಸೇವೆಗೆ ಸಂಬಂಧಿಸಿ ಅವರ ವರ್ತನೆಯನ್ನು ಮಾರುಕಟ್ಟೆ ಅಧ್ಯಯನದ ಮೂಲಕ ತಿಳಿಯಬೇಕು. 

3.ಪ್ರಬಲ ನೆಟ್ ವರ್ಕ್ ಬೆಳೆಸಿಕೊಳ್ಳಿ: ನಿಮ್ಮ ಉದ್ಯಮಕ್ಕೆ ಸಂಬಂಧಿಸಿ ಪ್ರಬಲ ನೆಟ್ ವರ್ಕ್ ಬೆಳೆಸಿಕೊಳ್ಳುವುದು ಕೂಡ ಅಗತ್ಯ. ನಿಮ್ಮ ಮಾರ್ಗದರ್ಶಕರಿಂದ ಹಿಡಿದು ನಿಮ್ಮ ಹಿತೈಷಿಗಳ ತನಕ ಯಾರೆಲ್ಲ ಉದ್ಯಮಕ್ಕೆ ಸಂಬಂಧಿಸಿ ನಿಮಗೆ ನೆರವಾಗುತ್ತಾರೋ ಅವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಿ. ಕಾನ್ಫರೆನ್ಸ್, ಸೆಮಿನಾರ್ ಗಳು, ಇಂಟರ್ನಶಿಪ್ ಹಾಗೂ ಕಾಫಿ ಶಾಪ್ ಭೇಟಿ ಹೀಗೆ ಈ ಎಲ್ಲ ಮಾಧ್ಯಮಗಳ ಮೂಲಕ ಉದ್ಯಮದಲ್ಲಿರುವ ಇತರರ ಜೊತೆಗೆ ಕೂಡ ಸಂಪರ್ಕ ಸಾಧಿಸಿ.

4.ತ್ಯಾಗ ಮಾಡಲು ಸಿದ್ಧರಾಗಿ: ರಾತ್ರಿ ಬೆಳಗಾಗೋದರಲ್ಲಿ ಯಾವ ಉದ್ಯಮ ಕೂಡ ಯಶಸ್ಸು ಕಂಡಿಲ್ಲ. ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಇಂದು ದೊಡ್ಡ ಉದ್ಯಮವಾಗಿ ಬೆಳೆದಿರುವ ಸಂಸ್ಥೆಗಳು ಹಿಂದೊಂದು ಸಮಯದಲ್ಲಿ ಸಾಕಷ್ಟು ಸಂಕಷ್ಟ ಹಾಗೂ ಸವಾಲುಗಳನ್ನು ಎದುರಿಸಿದ್ದವು. ಹೀಗಾಗಿ ಬೇಗ ಯಶಸ್ಸು ಸಿಗುತ್ತದೆ ಎಂಬ ನಿರೀಕ್ಷೆಯಿಂದ ಯಾವುದೇ ಉದ್ಯಮ ಪ್ರಾರಂಭಿಸಬೇಡಿ. ಉದ್ಯಮದಲ್ಲಿ ಯಶಸ್ಸು ಸಿಗಬೇಕೆಂದರೆ ಅದಕ್ಕೆ ಸಾಕಷ್ಟು ಸಮಯ ಹಾಗೂ ಪರಿಶ್ರಮದ ಅಗತ್ಯವಿದೆ. ಹಾಗೆಯೇ ಪ್ರಾರಂಭದ ದಿನಗಳಲ್ಲಿ ಕೆಲವೊಂದು ಹಣಕಾಸಿನ ತ್ಯಾಗಗಳನ್ನು ಕೂಡ ಮಾಡಬೇಕಾಗುತ್ತದೆ. ವಾರಾಂತ್ಯದಲ್ಲಿ ಸ್ನೇಹಿತರು ಅಥವಾ ಕುಟುಂಬ ಸದಸ್ಯರ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗದೆ ಇರಬಹುದು. ಆದರೆ, ವಯಸ್ಸಾದ ನಂತರ ಈ ಎಲ್ಲ ಕೆಲಸಗಳನ್ನು ಮಾಡುವ ಬದಲು ಈಗಲೇ ಮಾಡೋದು ಉತ್ತಮ. 

ಹೆಣ್ಣು ಮಗುವಿನ ಭವಿಷ್ಯದ ಸುಭದ್ರತೆಗೆ ಈ 5 ಹೂಡಿಕೆ ಯೋಜನೆಗಳು ಬೆಸ್ಟ್

5.ಮಾರ್ಗದರ್ಶಕರನ್ನು ಹುಡುಕಿ: ಉದ್ಯಮ ನಡೆಸಲು ಅಗತ್ಯವಾದ ಜ್ಞಾನ ಹಾಗೂ ಕೌಶಲ್ಯ ನಿಮಗೆ ಈಗ ಇಲ್ಲದೇ ಇರಬಹುದು. ಹೀಗಾಗಿ ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರೋರ ಮಾರ್ಗದರ್ಶನ ಪಡೆಯೋದು ಉತ್ತಮ. ಇದರಿಂದ ಸರಿಯಾದ ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ. 
 

click me!