
ಮನೆಯ ಕಬೋರ್ಡ್ ತುಂಬ ಬಟ್ಟೆ ಇದೆ, ಆದ್ರೆ ಯಾವ್ದು ಪ್ರಯೋಜನಕ್ಕಿಲ್ಲ. ಹೊಸ ಬಟ್ಟೆ ಖರೀದಿ ಮಾಡಿದ್ರೆ ಇಡೋಕೆ ಜಾಗವಿಲ್ಲ. ಈ ಹಳೆ ಬಟ್ಟೆ ಏನು ಮಾಡ್ಬೇಕು ಅನ್ನೋದು ಬಹುತೇಕರ ದೊಡ್ಡ ಪ್ರಶ್ನೆ. ಬಳಸಿದ ಬಟ್ಟೆಯನ್ನು ಎಲ್ಲಿ ಹಾಕ್ಬೇಕು? ಅದಕ್ಕೆ ಉತ್ತರ ಇಲ್ಲಿದೆ.
ಬೆಂಗಳೂರಿ (Bangalore)ನಲ್ಲಿ ನಿಮ್ಮ ಹಳೆ ಬಟ್ಟೆಗೂ ಬೆಲೆ ಇದೆ. ನೀವು ಹಳೆ ಬಟ್ಟೆಗಳನ್ನು ಮಾರಾಟ ಮಾಡಿ ಹಣ ಗಳಿಸ್ಬಹುದು. ನಿಮ್ಮ ಬಟ್ಟೆಗೆ ಹಣ ನೀಡಿ ಕೊಂಡೊಯ್ಯುವ ಸ್ಟಾರ್ಟ್ ಅಪ್ ಒಂದಿದೆ. ನೋಕಸಾ ಹೆಸರಿನ ಸ್ಟಾರ್ಟ್ ಅಪ್ ಕಂಪನಿಗೆ ನೀವು ನಿಮ್ಮ ಬಟ್ಟೆಯನ್ನು ಮಾರಾಟ ಮಾಡ್ಬಹುದು. ಹಾಸ್ಟೆಲ್ ಸ್ನೇಹಿತರಾದ ಪ್ರಸಾದ್ ಲಿಂಗ್ವಾರ್ ಮತ್ತು ನಚಿಕೇತ್ ಆಚಾರ್ಯ ಈ ಉದ್ಯಮ ಶುರು ಮಾಡಿದ್ದಾರೆ. 2024ರಿಂದಲೇ ನೋಕಸ ಕಂಪನಿ ಕೆಲ್ಸ ಮಾಡ್ತಿದೆ. ನವೆಂಬರ್ 2025 ರಲ್ಲಿ ಮನೆ-ಮನೆ ತ್ಯಾಜ್ಯ ಸಂಗ್ರಹ ಕೆಲ್ಸವನ್ನು ಕಂಪನಿ ಅಧಿಕೃತವಾಗಿ ಶುರು ಮಾಡಿತ್ತು.
ನೋಕಸ (NoKasa) ಜನರಿಗೆ ಎರಡು ಆಯ್ಕೆಗಳನ್ನು ನೀಡುತ್ತದೆ. ನೀವು ನಿಮ್ಮ ಹಳೆ ಬಟ್ಟೆಯನ್ನು ಮಾರಾಟ ಮಾಡ್ಬಹುದು ಇಲ್ಲ ದಾನದ ರೂಪದಲ್ಲಿ ನೀಡ್ಬಹುದು. ನಾವು ಪ್ರತಿ ಕಿಲೋಗ್ರಾಂಗೆ 20 ರೂಪಾಯಿಯನ್ನು ಕಂಪನಿ ಪಾವತಿಸುತ್ತೆ. ನೀವು ಮಾರಾಟ ಮಾಡ್ತಿದ್ದರೆ, ಕಂಪನಿಗೆ ಶುಲ್ಕದ ರೂಪದಲ್ಲಿ 50 ರೂಪಾಯಿ ನೀಡ್ಬೇಕು. ಅದೇ ನೀವು ಬಟ್ಟೆ ದಾನ ಮಾಡ್ತಿದ್ದರೆ ಕಂಪನಿ ಯಾವುದೇ ಶುಲ್ಕ ವಿಧಿಸೋದಿಲ್ಲ.
ಮೇ 2025 ರಿಂದ, 20 ಟನ್ಗಳಿಗಿಂತ ಹೆಚ್ಚು ಬಟ್ಟೆಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಸರಿಸುಮಾರು 15 ಟನ್ಗಳನ್ನು ಮರುಬಳಕೆ ಮಾಡಲಾಗಿದೆ. ಆದರೆ ಉಳಿದ ಬಟ್ಟೆಗಳನ್ನು ಅಪ್ಸೈಕ್ಲಿಂಗ್, ಮರುಬಳಕೆ ಅಥವಾ ಡೌನ್ಸೈಕ್ಲಿಂಗ್ನಂತಹ ಹೆಚ್ಚಿನ ಸಂಸ್ಕರಣೆಗಾಗಿ ಕಳುಹಿಸಲಾಗಿದೆ. ಅಪ್ವಾಲ್ಯೂಡ್ ಮತ್ತು ಗ್ರೀನ್ ವರ್ಮ್ಸ್ನಂತಹ ಬ್ರ್ಯಾಂಡ್ಗಳೊಂದಿಗೆ ಸಹ ಪಾಲುದಾರಿಕೆ ಹೊಂದಿದೆ. ಇದು ಜವಳಿ ತ್ಯಾಜ್ಯದಿಂದ ಚೀಲಗಳು ಮತ್ತು ಮನೆ ಅಲಂಕಾರಿಕ ವಸ್ತುಗಳಂತಹ ಉಪಯುಕ್ತ ವಸ್ತುಗಳನ್ನು ತಯಾರಿಸುತ್ತದೆ. ಬಳಕೆದಾರರು ತಮ್ಮ ಬಟ್ಟೆಗಳನ್ನು ಮಾರಾಟ ಮಾಡಿ ಬಂದ ಹಣವನ್ನು ನೋಕಸ ಅಪ್ಲಿಕೇಶನ್ನಲ್ಲಿ ಲೀಸ್ಟ್ ಮಾಡಲಾದ ಈ ಮರುಬಳಕೆಯ ಉತ್ಪನ್ನಗಳನ್ನು ಖರೀದಿಸಲು ಬಳಸಬಹುದು.
ಬಟ್ಟೆಗಳು ಕಗ್ಗದಾಸಪುರದಲ್ಲಿರುವ ಗೋದಾಮಿಗೆ ಬಂದ ನಂತರ, ಅವುಗಳನ್ನು ಗುಣಮಟ್ಟ ಮತ್ತು ಲಿಂಗದ ಆಧಾರದ ಮೇಲೆ ಬೇರ್ಪಡಿಸಲಾಗುತ್ತದೆ. ಗ್ರೇಡ್ ಎ ಮತ್ತು ಬಿ ಬಟ್ಟೆಗಳನ್ನು ಮರುಮಾರಾಟಕ್ಕೆ ಕಳುಹಿಸಲಾಗುತ್ತದೆ. ಆದರೆ ಗ್ರೇಡ್ ಸಿ ಬಟ್ಟೆಗಳನ್ನು ಮರುಬಳಕೆಗೆ ಕಳುಹಿಸಲಾಗುತ್ತದೆ. ಅಪ್ಸೈಕ್ಲಿಂಗ್, ಮರುಬಳಕೆ ಅಥವಾ ಡೌನ್ಸೈಕ್ಲಿಂಗ್ ಸೇರಿದಂತೆ ಹೆಚ್ಚಿನ ಪ್ರಕ್ರಿಯೆಗೆ ಈ ಬಟ್ಟೆಗಳನ್ನು ಕಳುಹಿಸಲು ಸಹಾಯ ಮಾಡುವ ಸ್ಥಳೀಯ ಮರುಬಳಕೆದಾರರೊಂದಿಗೆ ಕಂಪನಿ ಕೈಜೋಡಿಸಿದೆ.
ಗ್ರಾಮೀಣ ಭಾಗದ ಮಹಿಳೆಯರಿಂದ ಕಮಾಲ್! ಹಿತ್ತಲಿನಿಂದಲೇ ತಿಂಗಳಿಗೆ 25 ಸಾವಿರ ಸಂಪಾದನೆ
ಕಂಪನಿ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ಪ್ಲಾನ್ ಮಾಡ್ತಿದೆ. ಬಟ್ಟೆಗಳನ್ನು ತೊಳೆಯುವ, ಇಸ್ತ್ರಿ ಮಾಡುವ, ಬಣ್ಣ , ರಿಪೇರಿ ಸೇರಿದಂತೆ ಅನೇಕ ಕೆಲ್ಸಗಳನ್ನು ಮಾಡುವ ಪ್ಲಾನ್ ಇದೆ. ಪ್ರಸ್ತುತ, ಆಫ್ಲೈನ್ ಮಾರ್ಕೆಟ್ ನಲ್ಲಿ ಬಟ್ಟೆ ಮಾರಾಟವಾಗ್ತಿದೆ. ಶೀಘ್ರವೇ ಆನ್ಲೈನ್ ಮಾರಾಟ ಮಳಿಗೆ ಶುರು ಮಾಡಿ, ಕಡಿಮೆ ಬೆಲೆಗೆ ಜನರು ಬಟ್ಟೆ ಖರೀದಿಗೆ ಸಹಾಯ ಮಾಡುವ ಪ್ಲಾನ್ ಕಂಪನಿಗಿದೆ. ಜನರ ನಿಜವಾದ ಸಮಸ್ಯೆ ಅರಿತು ಮಾರ್ಕೆಟ್ ಗೆ ಬಂದ ಈ ಕಂಪನಿಗೆ ಉತ್ತಮ ರೆಸ್ಪಾನ್ಸ್ ಸಿಗ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.